ಯಲ್ಲಾಪುರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಮಾಜಿ NWKSRTC ಅಧ್ಯಕ್ಷ ವಿ.ಎಸ್. ಪಾಟೀಲ್ “ಕೈ” ಪಡೆ ಸೇರುವ ಮುಹೂರ್ತ ಫಿಕ್ಸ್ ಆಗಿದೆ. ನೆವೆಂಬರ್ 4 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲೇ ಕಮಲ ತೊರೆದು “ಕೈ” ಹಿಡಿಯಲಿದ್ದಾರೆ ಪಾಟೀಲರು. ಅಂದಹಾಗೆ, ಇವತ್ತು ಬೆಂಗಳೂರಿನಲ್ಲಿ ಇಂತಹದ್ದೊಂದು ತೀರ್ಮಾನ ಹೊರಬಿದ್ದಿದೆ. ಡಿಕೆಶಿ ಭೇಟಿ..! ಅಸಲು, ಹಲವು ತಿಂಗಳುಗಳಿಂದಲೇ ಬಿಜೆಪಿ ಜೊತೆಗಿನ ಸಂಬಂಧ ಕಳೆದುಕೊಂಡಿದ್ದ ವಿಎಸ್ಪಿ, ಬಹುತೇಕ ಕಾಂಗ್ರೆಸ್ಸಿನ ಪಡಸಾಲೆಯಲ್ಲಿ ಒಂದು ಹೆಜ್ಜೆ ಇಟ್ಟಾಗಿತ್ತು. ಆದ್ರೆ, ಕಾಂಗ್ರೆಸ್ ನ ಭಾರತ್ ಜೋಡೋ ಕಾರ್ಯಕ್ರಮದಲ್ಲಿ...
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: BIG BREAKING
ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ
ಮುಂಡಗೋಡ ತಾಲೂಕಿನ ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿದೆ. ಅಂದಹಾಗೆ, ಸಹದೇವಪ್ಪ ನಡಗೇರಿಯವರು ತಾಲೂಕಿನ ಹಿರಿಯ ಜನಪದ ಕಲಾವಿದರಾಗಿದ್ದು, ವಿಶೇಷ ಶೈಲಿಯ ಜನಪದ ಗೀತೆಗಳನ್ನು ಹಾಡುತ್ತ ಜನಮನ ಗೆದ್ದಿದ್ದಾರೆ. ಸದ್ಯ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸ್ತಿರೋ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ತಾಲೂಕಿನ ಜನರ ಹರ್ಷಕ್ಕೆ ಕಾರಣವಾಗಿದೆ. ಪಬ್ಲಿಕ್...
ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ, ನವೆಂಬರ್ ಅಂತ್ಯಕ್ಕೆ ಬಿಡುಗಡೆ..!
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ನವೆಂಬರ್ ಅಂತ್ಯದ ವೇಳೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಚಿಂತನೆ ನಡೆಸಿದೆ. ಬುಧವಾರ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜೊತೆಗೆ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ಸಿಎಲ್ಪಿ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. “ಎ” ಕೆಟೆಗರಿ ಸಭೆಯಲ್ಲಿ ನವೆಂಬರ್ ಅಂತ್ಯದ ವೇಳೆಗೆ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕಾಂಗ್ರೆಸ್ ಚುನಾವಣಾ...
ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ, ಸವದತ್ತಿಯಲ್ಲಿ ಮಡುಗಟ್ಟಿದ ಮೌನ
ಬೆಳಗಾವಿ: ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ(56) ವಿಧಿವಶರಾಗಿದ್ದಾರೆ. ಹೀಗಾಗಿ, ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿರುವ ಆನಂದ ಮಾಮನಿ ನಿವಾಸದಲ್ಲಿ ಮೌನ ಮಡುಗಟ್ಟಿದೆ. ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸವದತ್ತಿಯ ನಿವಾಸಕ್ಕೆ ಆಗಮಿಸಲಿರುವ ಆನಂದ ಮಾಮನಿ ಪಾರ್ಥಿವ ಶರೀರ, ಮನೆಯಲ್ಲಿ ಒಂದು ಗಂಟೆ ಕಾಲ ಪೂಜೆ ಹಾಗೂ ಕುಟುಂಬಸ್ಥರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ತಾಲೂಕು ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಮಧ್ಯಾಹ್ನ 3...
ಚಿಗಳ್ಳಿ ಪ್ರೌಢಶಾಲೆಯ ಕಂಪೌಂಡ್ ರಾತ್ರೋ ರಾತ್ರಿ ಕೆಡವಿ ಹಾಕಿದ ದುಷ್ಟರು, ಅಯ್ಯೋ, ಜ್ಞಾನದೇಗುಲದ ಮೇಲೆ ಇದೇಂಥಾ ವಿಕೃತಿ..?
ಮುಂಡಗೋಡ ತಾಲೂಕಿನಲ್ಲಿ ಕಾನೂನಿನ ಭಯವೇ ಹೊರಟು ಹೋಯ್ತಾ..? ಅಥವಾ ಆನೆ ನಡೆದದ್ದೇ ದಾರಿ ಅನ್ನುವ ಹುಂಬತನವಾ..? ಅಥವಾ ಬಂಢತನವಾ..? ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ರಾತ್ರೋ ರಾತ್ರಿ ಸಾರ್ಕಾರದ ಆಸ್ತಿಯೊಂದನ್ನ ಅನಾಮತ್ತಾಗಿ ಕೆಡವಿ ಹಾಕಲಾಗಿದೆ. ಚಿಗಳ್ಳಿಯ ದಿ. ದೇವಕಿ ಚಾಯಪ್ಪ ಕಲಾಲ್ ಸರ್ಕಾರಿ ಪ್ರೌಢಶಾಲೆಯ ಕಂಪೌಂಡ್ ನೆಲಸಮ ಮಾಡಿದ್ದಾರೆ ಕಿಡಿಗೇಡಿಗಳು..! ಆದ್ರೆ, ಯಾರು ಅಂದ್ರೆ ಯಾರೂ ಈ ಬಗ್ಗೆ ಮಾತಾಡ್ತಿಲ್ಲ.. ಇಡೀ ತಾಲೂಕಾಡಳಿತವೇ ಮೌನವಹಿಸಿದೆ.. ಈ ಕ್ಷಣದವರೆಗೂ ಯಾವೊಬ್ಬ ಅಧಿಕಾರಿಗಳೂ ತುಟಿ ಬಿಚ್ಚಿಲ್ಲ. ಇತಿಹಾಸವಿದೆ..! ಅಂದಹಾಗೆ, ಚಿಗಳ್ಳಿಯ ಸರ್ಕಾರಿ...
ಮುಂಡಗೋಡ ಪಿಎಸ್ಐ ಬಸಣ್ಣನ ಎತ್ತಂಗಡಿಗೆ ಪ್ಲ್ಯಾನ್ ರೆಡಿ, ಠಾಣೆಯ ಅಂಗಳದಲ್ಲಿ ಬ್ರೋಕರುಗಳ ಮಸಲತ್ತು ನಿಜಾನಾ..?
ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರ ಎತ್ತಂಗಡಿಗೆ ಅದೊಂದು ಪಡೆ ಸನ್ನದ್ಧವಾಗಿದೆಯಂತೆ. ಅಂತಹದ್ದೊಂದು ರೂಮರ್ರು ತಾಲೂಕಿನ ತುಂಬ ಎದ್ದಿದೆ. ತಮ್ಮ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸ್ತಿಲ್ಲ, ನಮಗೆ ಕಿಮ್ಮತ್ತು ಕೊಡ್ತಿಲ್ಲ ಅಂತಾ ಅದೊಂದು ಟೀಂ ಅದ್ಯಾರ್ಯಾರದ್ದೋ ಕಿವಿ ಕಚ್ಚಿ ಹೆಂಗಾದ್ರೂ ಸರಿ ಪಿಎಸ್ಐರನ್ನ ಇಲ್ಲಿಂದ ಎತ್ತಂಗಡಿ ಮಾಡಿಸಬೇಕು ಅನ್ನೋ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ದಕ್ಷ ಯುವ ಪಡೆ..! ಅಂದಹಾಗೆ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಇವತ್ತಿಗೂ ದಕ್ಷ ಯುವ ಪಡೆ ಇದೆ. ಅದ್ಯಾವನೇ ನಾಗರಿಕ ತನ್ನ ಅಳಲು ತೋಡಿಕೊಳ್ಳಲು ಠಾಣೆಯ ಮೆಟ್ಟಿಲು ಹತ್ತಿದ್ರೆ...
ಕಬ್ಬಿಗೆ 5,500 ರೂ. ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆದಿದ್ದ ಅಹೋರಾತ್ರಿ ಧರಣಿ ವಾಪಸ್..!
ಬೆಳಗಾವಿ: ಕಬ್ಬಿಗೆ ಸಮರ್ಪಕ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಬೆಳಗಾವಿ ಡಿಸಿ ಕಚೇರಿ ಎದುರು ನಡೆಯುತ್ತಿದ್ದ ಧರಣಿ ವಾಪಸ್ ಪಡೆದಿದ್ದಾರೆ ರೈತರು. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ನಿನ್ನೆ ತಡರಾತ್ರಿ ವಾಪಸ್ ಪಡೆದಿದ್ದಾರೆ. ಬೆಳಗಾವಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದ ರೈತರು, ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಮನವೊಲಿಸಿದ ಬಳಿಕ ವಾಪಸ್ಬ ಪಡೆದಿದ್ದಾರೆ. ಮುಖ್ಯಮಂತ್ರಿ ಮತ್ತು ಸಕ್ಕರೆ ಸಚಿವರ ನೇತೃತ್ವದಲ್ಲಿ, ಬೆಂಗಳೂರಿನಲ್ಲಿ ಇದೇ ತಿಂಗಳು 15 ರಂದು ಕಬ್ಬಿನ ದರ ನಿಗದಿಗಾಗಿ ಸಭೆ...
ಕಾತೂರಿನಿಂದ ಹಾನಗಲ್ ಅಡ್ಡೆಗೆ ಸಾಗಿಸಿದ್ದ ಕಟ್ಟಿಗೆ ಕೇಸ್ ತನಿಖೆ ಏನಾಯ್ತು..? ಅಷ್ಟಕ್ಕೂ, ಆ ಕಟ್ಟಿಗೆ ಕಾತೂರಿನ ಆ ಫಾರೆಸ್ಟರನದ್ದಾ..?
ಮುಂಡಗೋಡ: ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯ ಅಧಿಕಾರಿಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ಅಲ್ಲಿನ ಹಲವು ಸಂಗತಿಗಳು ಬಗೆದಷ್ಟು ಹೊರಬೀಳುತ್ತಿವೆ. ಅಸಲು, ಕಾತೂರು ಅರಣ್ಯ ಇಲಾಖೆಯಲ್ಲೇ ಕಾರ್ಯ ನಿರ್ವಹಿಸ್ತಿರೋ ಅವನೊಬ್ಬ ಅಧಿಕಾರಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆ ಅನಾಮತ್ತಾಗಿ ಸೀಜ್ ಆಗಿದೆ. ಅಂದಹಾಗೆ ಇದು ಇವತ್ತಿನ ಮಾತಲ್ಲ. ಸರಿಸುಮಾರು ಕಳೆದ ಎಪ್ರೀಲ್ ಕೊನೆಯ ವಾರದಲ್ಲಿ ನಡೆದಿದ್ದ ಘಟನೆ ಈಗ ಅಕ್ಷರಶಃ ಕೊನೆಯ ಮೊಳೆ ಬೀಳುವ ಹಂತದಲ್ಲಿದೆಯಂತೆ. ಅಷ್ಟಕ್ಕೂ ನಡೆದದ್ದೇನು..? ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆಗೆ...
ಕಾತೂರು ಅರಣ್ಯದ ಆ ಪ್ರದೇಶದಲ್ಲಿ ಸಿಕ್ಕಿದ್ದು 12 ಬುಡುಚಿಗಳಂತೆ..! ಎಲ್ಲದಕ್ಕೂ FIR ಆಗಿದೆಯಂತೆ, ಹಾಗಿದ್ರೆ ಈ ಪ್ರಶ್ನೆಗಳಿಗೆ ಉತ್ತರಿಸೋರ್ಯಾರು RFO ಸಾಹೇಬ್ರೆ..?
ಮುಂಡಗೋಡ: ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಮರಗಳ ಮಾರಣಹೋಮದ ಸುದ್ದಿ ಪಬ್ಲಿಕ್ ಫಸ್ಟ್ ನಲ್ಲಿ ಬಿತ್ತರಿಸಿದ್ದೇ ತಡ, ಕಾತೂರಿನ RFO ಸಾಹೇಬ್ರು ಉರಿದುಬಿದ್ದಿದ್ದಾರಂತೆ. ಅದೇಲ್ಲ ಬುಡುಚಿಗಳು ಹಳೆಯವು, ಅದರ ಮೇಲೆ ಈಗಾಗಲೇ ಕೇಸು ದಾಖಲಿಸಲಾಗಿದೆ ಅಂತೇಲ್ಲ ಬುಸುಗುಟ್ಟಿದ್ದಾರಂತೆ. ಆದ್ರೆ, ಒಂದು ಮಾತ್ರ ಅರ್ಥವಾಗ್ತಿಲ್ಲ. ಈ ಅರಣ್ಯ ಇಲಾಖೆಯ ಅಧಿಕಾರಿಗಳು ಕೇವಲ ಎಫ್ ಐ ಆರ್ ಗಷ್ಟೇ ಸೀಮಿತವಾಗಿಬಿಟ್ರಾ..? ಅಥವಾ ಅರಣ್ಯದಲ್ಲಿ ರಕ್ಷಣೆಯ ಜವಾಬ್ದಾರಿಯನ್ನೇ ಮರೆತ್ರಾ..? ಈ ಪ್ರಶ್ನೆ ಸದ್ಯ ಪರಿಸರ ಪ್ರಿಯರಿಗೆ ಕಾಡ್ತಿದೆ. 12 FIR ಆಗಿದೆಯಂತೆ..! ನಂಗೆ...
ಕಾತೂರು ಅರಣ್ಯದಲ್ಲಿ ಮರಗಳ ಮಾರಣಹೋಮ, ಕಾಡಲ್ಲಿ ಕಂಡದ್ದು ಸಾಲು ಮರಗಳ ಹೆಣ..! ಅಸಲು, ಅಧಿಕಾರಿಗಳೇ ಇಲ್ಲಿ ಅಕ್ರಮ ದಂಧೆಗೆ ಇಳಿದು ಬಿಟ್ರಾ..?
ಮುಂಡಗೋಡ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಗೊತ್ತಿಲ್ಲ. ಇಲ್ಲಿನ ಅರಣ್ಯ ಸಂಪತ್ತು ಹಾಡಹಗಲೇ ಲೂಟಿಯಾಗ್ತಿದೆ. ಅದ್ರಲ್ಲೂ ಕಾತೂರ ಭಾಗದಲ್ಲಿ ನಿತ್ಯವೂ ನೂರಾರು ಮರಗಳು ಉಸಿರು ಚೆಲ್ಲುತ್ತಿವೆ. ಅಸಲು, ಇದೇಲ್ಲ ಖುದ್ದು ಅರಣ್ಯ ಇಲಾಖೆಯ ಕೆಲ ಬ್ರಷ್ಟ ಕಾರಬಾರಿಗಳ ನೆರಳಲ್ಲೇ ನಡೀತಿದೆ ಅನ್ನೋದು ಬಹುದೊಡ್ಡ ದುರಂತ. ಸಾಲು ಸಾಲು ಮಾರಣಹೋಮ..! ನಿಜ ಅಂದ್ರೆ ಕಾತೂರು ಅರಣ್ಯ ವ್ಯಾಪ್ತಿಯ ಹಲವು ಕಡೆಗಳಲ್ಲಿ ಹಾಡಹಗಲೇ ಅಮೂಲ್ಯ ಅರಣ್ಯ ಸಂಪತ್ತು ಕೊಳ್ಳೆ ಹೊಡೆಯಲಾಗ್ತಿದೆ. ಕೋಡಂಬಿ...









