Home BIG BREAKING

Category: BIG BREAKING

Post
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!

ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!

Accident News; ಮುಂಡಗೋಡ ಹುಬ್ಬಳ್ಳಿ ರಸ್ತೆಯ, ವಡಗಟ್ಟಾ ಸಮೀಪದ ತಡಸ ತಾಯವ್ವನ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಹಲವರಿಗೆ ಗಾಯವಾಗಿರೋ ಘಟನೆ ನಡೆದಿದೆ‌. ಇನ್ನಷ್ಟು ಮಾಹಿತಿ ಬರಬೇಕಿದೆ.. ಅಪಡೇಟ್ ಮಾಡಲಾಗುವುದು.

Post
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!

ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!

Heavy rains forecast; ಬೆಂಗಳೂರು: ಕರಾವಳಿ ಹಾಗೂ ಉತ್ತ-ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್‌ 27, 28 ಹಾಗೂ 29 ರಂದು ಗುಡುಗಿನಿಂದ ಕೂಡಿದ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಅಕ್ಟೋಬರ್‌ 26 ರಂದು ಉತ್ತರ ಕನ್ನಡದಲ್ಲಿ ಮಾತ್ರ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ. ಅಕ್ಟೋಬರ್ 27 ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಅತಿ ಭಾರಿ ಮಳೆಯ ಆರೆಂಜ್ ಅಲರ್ಟ್ ನೀಡಲಾಗಿದೆ. , ಚಿಕ್ಕಮಗಳೂರು, ದಾವಣಗೆರೆ ಹಾಗೂ ಶಿವಮೊಗ್ಗ...

Post
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!

KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!

KDCC ELECTION; ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ KDCC ಬ್ಯಾಂಕ್ ಚುನಾವಣೆಯಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಟೀಂ ಗೆ ನಿರಾಸೆಯಾಗಿದೆ. ಶಾಸಕ ಹಾಗೂ ಹಾಲಿ KDCC ಅಧ್ಯಕ್ಷ ಶಿವರಾಮ್ ಹೆಬ್ಬಾರರ ಬಣ ಸಧ್ಯಕ್ಕೆ ಸ್ಪಷ್ಟ ಮುನ್ನಡೆ ಸಾಧಿಸಿದಂತಾಗಿದೆ. ಅಂದಹಾಗೆ, ಕೆಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಒಟ್ಟು 16 ನಿರ್ದೇಶಕ ಸ್ಥಾನಗಳಿಗೆ ನಡೆದ ಸ್ಪರ್ಧೆಯಲ್ಲಿ, ಈವರೆಗೆ ಏಳು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಉಳಿದ ಕ್ಷೇತ್ರಗಳ ಮತ ಎಣಿಕೆ ಕುರಿತ ವಿಚಾರ ಕೋರ್ಟಿನಲ್ಲಿದೆ....

Post
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!

ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!

ಖ್ಯಾತ ಹಾಸ್ಯನಟ, ಕಲಿಯುಗದ ಕುಡುಕ ಖ್ಯಾತಿಯ, ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ವೃತ್ತಿ ರಂಗಭೂಮಿ, ಚಲನಚಿತ್ರ ಹಾಗೂ ಬಿಗ್ ಬಾಸ್ ಸೇರಿದಂತೆ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮನೆ ಮಾತಾಗಿದ್ದ ಕಲಿಯುಗದ ಕುಡುಕ ಎಂದೇ ಪ್ರಖ್ಯಾತರಾಗಿರುವ ರಾಜು ತಾಳಿಕೋಟೆಯವರು ಇಂದು ಮಣಿಪಾಲದಲ್ಲಿ ಸಂಜೆ ನಾಲ್ಕು ಗಂಟೆಗೆ ನಿಧನರಾಗಿದ್ದಾರೆ. ಶೂಟಿಂಗ್ ಗೆ ಬಂದಿದ್ದ ಸಮಯದಲ್ಲಿ ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡೊತ್ತು, ಹೀಗಾಗಿ ತಕ್ಷಣವೇ ಅವರನ್ನು ಹತ್ತಿರದ ಮಣಿಪಾಲಿಗೆ ಕರೆದುಕೊಂಡು ಹೋಗಿ, ಆಸ್ಪತ್ರೆಗೆ ಧಾಖಲು ಮಾಡಲಾಗಿತ್ತು....

Post
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬುರಾವ್ ಲಾಡನವರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರವಿಗೌಡ್ರಿಗೆ “ಅನಾಯಾಸ” ಪಟ್ಟ..! ಅಸಲು, ಮುಂಡಗೋಡಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಬೆಂಬಲಿತರು, ಬಿಜೆಪಿಯನ್ನು ಧೂಳಿಪಟ ಮಾಡಿದ್ದರು. ಹೀಗಾಗಿ, ಬಹುತೇಕ ಅಧ್ಯಕ್ಷರಾಗಿ ಹಿರಿಯ ದುರೀಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲರಿಗೆ ಅಧ್ಯಕ್ಷ ಪಟ್ಟ ಬಹುತೇಕ ಫಿಕ್ಸ್ ಆದಂತಾಗಿತ್ತು. ಅಲ್ದೆ,...

Post
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಅವಿರೋಧ ಆಯ್ಕೆ..? ಎರಡನೇ ಬಾರಿಗೆ ಪಟ್ಟಕ್ಕೇರ್ತಾರಾ ಗೌಡ್ರು..?

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಅವಿರೋಧ ಆಯ್ಕೆ..? ಎರಡನೇ ಬಾರಿಗೆ ಪಟ್ಟಕ್ಕೇರ್ತಾರಾ ಗೌಡ್ರು..?

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬಣ್ಣ ಲಾಡನವರ್ ಅವಿರೋಧವಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾದಂತಾಗಿದೆ. ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ನೇತೃತ್ವದಲ್ಲಿ ಸೇರಿದ್ದ ನೂತನ ಸದಸ್ಯರ ಸಭೆಯಲ್ಲಿ, ಅಧ್ಯಕ್ಷರನ್ನಾಗಿ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರನ್ನಾಗಿ ಬಾಬಣ್ಣ ಲಾಡನವರ್ ರನ್ನು ಅವಿರೋಧವಾಗಿ ಆಯ್ಕೆ...

Post
ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಯಿಂದ ರಮೇಶ್ ಅಂಬಿಗೇರಗೆ ಕೋಕ್..! ಪರಶುರಾಮ್ ಅಟ್ಟಣಗಿ ನೂತನ ಸಮನ್ವಯಾಧಿಕಾರಿ, DDPI ಆದೇಶ..!

ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಯಿಂದ ರಮೇಶ್ ಅಂಬಿಗೇರಗೆ ಕೋಕ್..! ಪರಶುರಾಮ್ ಅಟ್ಟಣಗಿ ನೂತನ ಸಮನ್ವಯಾಧಿಕಾರಿ, DDPI ಆದೇಶ..!

Education Department: ಮುಂಡಗೋಡ: ಕಾತೂರಿನ ಪ್ರೌಢ ಶಾಲೆಯಲ್ಲಿ ಕ್ರೀಡಾ ಸಾಮಗ್ರಿ ಸೇರಿದಂತೆ ವಿವಿಧ ಅನುದಾನವನ್ನು ಸಮರ್ಪಕವಾಗಿ ನಿರ್ವಹಿಸದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಪ್ರಬಾರ ಹುದ್ದೆಯಲ್ಲಿದ್ದ  ಸನ್ಮಾನ್ಯ ಶ್ರೀ ರಮೇಶ್ ಅಂಬಿಗೇರ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಿ ಕಾತೂರಿನ ಸಹ ಶಿಕ್ಷಕ ಪರಶುರಾಮ ಅಟ್ಟಣಗಿ ಅವರನ್ನು ಆ ಹುದ್ದೆಗೆ ನೇಮಿಸಿ ಶಿರಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಹಿಂದೆಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಹುದ್ದೆಯಲ್ಲಿದ್ದ ಜಿ.ಎನ್ ನಾಯ್ಕ ಅವರು ನಿವೃತ್ತಿ ಆಗಿದ್ದರಿಂದ...

Post
ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಯಲ್ಲಾಲಿಂಗ್ ಕುನ್ನೂರು, ಮಹಾಂತೇಶ್ ವಾಲ್ಮೀಕಿ ವರ್ಗಾವಣೆ ಕ್ಯಾನ್ಸಲ್..!

ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಯಲ್ಲಾಲಿಂಗ್ ಕುನ್ನೂರು, ಮಹಾಂತೇಶ್ ವಾಲ್ಮೀಕಿ ವರ್ಗಾವಣೆ ಕ್ಯಾನ್ಸಲ್..!

Police Transfer News; ಮುಂಡಗೋಡಿಗೆ PSI ಆಗಿ ವರ್ಗಾವಣೆಗೊಂಡಿದ್ದ ಮಹಾಂತೇಶ್ ವಾಲ್ಮೀಕಿಯವರ ವರ್ಗಾವಣೆ ಆದೇಶ ಕೊನೆಗೂ ರದ್ದಾಗಿದೆ. ಈಗ ಹೊಸ ಆದೇಶದ ಪ್ರಕಾರ ಯಲ್ಲಾಲಿಂಗ್ ಕುನ್ನೂರ್ ಮುಂಡಗೋಡಿಗೆ ಮತ್ತೊಮ್ಮೆ PSI ಆಗಿ ಬರಲಿದ್ದಾರೆ. ಸೋಮವಾರವಷ್ಟೇ ಮುಂಡಗೋಡಿಗೆ ನೂತನ PSI ಆಗಿ ಮಹಾಂತೇಶ್ ವಾಲ್ಮೀಕಿ ಎಂಬುವವರು, ಚಿತ್ತಾಕುಲ ಪೊಲೀಸ್ ಠಾಣೆಯಿಂದ ವರ್ಗವಾಗಿದ್ದ ಆದೇಶ ಹೊರಬಿದ್ದಿತ್ತು. ಆದ್ರೆ, ಅದಾದ ಎರಡೇ ದಿನದಲ್ಲಿ ಮತ್ತೆ ಆದೇಶ ಬದಲಾಗಿದೆ. ಇದೀಗ ಈ ಮೊದಲು ಇಲ್ಲೇ ಕೆಲಸ ಮಾಡಿ ಹೋಗಿದ್ದ ಯಲ್ಲಾಲಿಂಗ ಕುನ್ನೂರು ಮತ್ತೊಮ್ಮೆ...

Post
PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?

PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?

Police Transfer News; ಮುಂಡಗೋಡಿಗೆ PSI ಆಗಿ ಮಹಾಂತೇಶ್ ವಾಲ್ಮೀಕಿ ವರ್ಗಾವಣೆಗೊಂಡಿದ್ದಾರೆ. ಎಲ್ಲವೂ ಸರಿಯಾಗಿದ್ದಿದ್ದರೆ ಇಷ್ಟೊತ್ತಿಗಾಗಲೇ ಅಂದ್ರೆ ನಿನ್ನೆ ಮಂಗಳವಾರವೇ ಅವ್ರು ಮುಂಡಗೋಡಿಗೆ ಬಂದು ಅಧಿಕಾರ ಸ್ವೀಕರಿಸಬೇಕಾಗಿತ್ತು ಆದ್ರೆ, ಮಹಾಂತೇಶ್ ವಾಲ್ಮೀಕಿಯವರಿಗೆ ಇಲ್ಲಿಗೆ ಬರದಂತೆ ತಡೆಯಲು ಕಾಣದ ಕೈಗಳ ತಂಡವೊಂದು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ ಅ‌ನ್ನೋ ರೂಮರ್ರು ಇಡೀ ತಾಲೂಕಾಧ್ಯಂತ ಹರಿದಾಡ್ತಿದೆ‌. ಅದೇನೋ ಗೊತ್ತಿಲ್ಲ, ಸದ್ಯ ಕೇಳಿ ಬರ್ತಿರೋ ರೋಚಕ ಮಾಹಿತಿ ಆಧಾರದಲ್ಲಿ ಹೇಳೋದಾದ್ರೆ ಮತ್ತದೇ ಹಳಬರೊಬ್ರು ಮುಂಡಗೋಡಿನಲ್ಲಿ ಮತ್ತೊಮ್ಮೆ ಪ್ರತಿಷ್ಟಾಪನೆಗೊಳ್ಳಲು ಹರಸಾಹಸ ಪಡ್ತಿದಾರಂತೆ, ಹೀಗಾಗಿನೇ ಆ...

Post
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!

ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!

Bhimatheera Murder News; ವಿಜಯಪುರದ ಭೀಮಾತೀರದಲ್ಲಿ ಗುಂಡಿನ ಸದ್ದು ಮತ್ತೆ ರಕ್ತ ಹರಿಸಿದೆ. ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಫೈರಿಂಗ್ ಆಗಿದ್ದು, ರೌಡಿ ಶೀಟರ್ ಭೀಮನಗೌಡ ಬಿರಾದಾರ್ ಎಂಬುವ ಗ್ರಾಪಂ ಅಧ್ಯಕ್ಷನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಭೀಮಾತೀರದ ಮಹಾದೇವ ಬೈರಗೊಂಡನ ಪರಮಾಪ್ತ ಹಾಗೂ ಬಲಗೈ ಬಂಟನಾಗಿದ್ದ ಭೀಮನಗೌಡ, ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್ ನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಆಗಮಿಸಿದ್ದ, ಇದೇ ವೇಳೆ ಮೂರರಿಂದ ನಾಲ್ಕು ಜನ ಮುಸುಕುಧಾರಿಗಳು ಏಕಾಏಕಿ ದಾಳಿ ಮಾಡಿ, ಕಟಿಂಗ್ ಮಾಡುವವನ...