Home BIG BREAKING

Category: BIG BREAKING

Post
ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ, ಕೇಳೋಕೆ ಹೋದ್ರೆ ಕೆಟ್ಟದಾಗಿ ಬೈತಾರೆ, ಮುಂಡಗೋಡ MG ಗಾರ್ಮೆಂಟ್ಸ್ ಮಾಲೀಕರ ವಿರುದ್ಧ FIR ದಾಖಲಿಸಿದ ಮಹಿಳಾ ಕಾರ್ಮಿಕರು..!

ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ, ಕೇಳೋಕೆ ಹೋದ್ರೆ ಕೆಟ್ಟದಾಗಿ ಬೈತಾರೆ, ಮುಂಡಗೋಡ MG ಗಾರ್ಮೆಂಟ್ಸ್ ಮಾಲೀಕರ ವಿರುದ್ಧ FIR ದಾಖಲಿಸಿದ ಮಹಿಳಾ ಕಾರ್ಮಿಕರು..!

ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದ ಮೇಲ್ಬಾಗದಲ್ಲಿರೋ ಎಂಜಿ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಮಾಲೀಕರ ಮೇಲೆ ಮಹಿಳಾ ಕಾರ್ಮಿಕರು ಮುಗಿ ಬಿದ್ದಿದ್ದಾರೆ. ತಾವು ನಿತ್ಯವೂ ಕೆಲಸ ಮಾಡಿ ಉಪವಾಸ ಬೀಳುವಂತ ಪರಿಸ್ಥಿತಿ ಬಂದೊದಗಿದೆ. ನಮಗೆ ಸಂಬಳವನ್ನೇ ನೀಡಿಲ್ಲ ಅಂತಾ ಆಕ್ರೋಶಗೊಂಡಿದ್ದಾರೆ. ಸಂಬಳ ಕೇಳಿದ್ರೆ ಅವಾಚ್ಯವಾಗಿ ನಿಂದಿಸ್ತಿರೋ ಮಾಲೀಕರು, ವ್ಯವಸ್ಥಾಪಕರು ಸೇರಿ ಮೂವರ ವಿರುದ್ಧ ಮುಂಡಗೋಡ ಠಾಣೆಯಲ್ಲಿ ಗಾರ್ಮೆಂಟ್ಸ್ ಮಹಿಳೆಯರು ದೂರು ದಾಖಲಿಸಿದ್ದಾರೆ‌. 3ತಿಂಗಳಿಂದ ಸಂಬಳವಿಲ್ಲ..! ಅಂದಹಾಗೆ, ಗಾರ್ಮೆಂಟಿನಲ್ಲಿ ಕೆಲಸ ಮಾಡ್ತಿದ್ದ ಸುಮಾರು ಮೂವತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು, ತಮಗೆ...

Post
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಮಳಗಿ ಸಮೀಪ ಗಾಂಜಾ ಮಾರುತ್ತಿದ್ದವ ಅಂದರ್..!

ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಮಳಗಿ ಸಮೀಪ ಗಾಂಜಾ ಮಾರುತ್ತಿದ್ದವ ಅಂದರ್..!

ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಓರ್ವ ಆರೋಪಿಯನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಮಳಗಿ ಸಮೀಪದ ದಾಸನಕೊಪ್ಪ ರಸ್ತೆಯಲ್ಲಿ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಬರೋಬ್ಬರಿ 2kg ಗಾಂಜಾ..! ಅಂದಹಾಗೆ, ಪಕ್ಕಾ ಮಾಹಿತಿಗಳ ಆಧಾರದಲ್ಲಿ ಅಕ್ರಮಿಗಳ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾನಗಲ್ ತಾಲೂಕಿನ ತಿಳವಳ್ಳಿಯ ಸಲ್ಮಾನಖಾನ್ ಗೌನಖಾನ್ ಆಲೂರು (24), ಎಂಬುವವನೇ ಗಾಂಜಾ ಕೇಸಿನ ಆರೋಪಿಯಾಗಿದ್ದು, ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಇವನಿಂದ ಬರೋಬ್ಬರಿ 2kg...

Post
ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನ ಹತ್ಯೆ ಕೇಸಿಗೆ ಟ್ವಿಸ್ಟ್, ಕಟ್ಟಡದ ವಾಚಮನ್ ನೇಣಿಗೆ ಶರಣು..!

ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನ ಹತ್ಯೆ ಕೇಸಿಗೆ ಟ್ವಿಸ್ಟ್, ಕಟ್ಟಡದ ವಾಚಮನ್ ನೇಣಿಗೆ ಶರಣು..!

ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನ ಭೀಕರ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕಟ್ಟಡದಲ್ಲಿ ವಾಚಮನ್ ಆಗಿದ್ದ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಸಪ್ಪ ಡಂಬರ(68)ಆತ್ಮಹತ್ಯೆ ಮಾಡಿಕೊಂಡ ವಾಚಮನ್ ಆಗಿದ್ದಾನೆ. ನಿನ್ನೆಯಷ್ಟೇ ಹುಬ್ಬಳ್ಳಿಯ ಸಿಲ್ವರ್ ಟೌನ್ ಕಟ್ಟಡದಲ್ಲಿ ಮುಂಡಗೋಡ ತಾಲೂಕಿನ ಮರಗಡಿಯ ಮೌಲಾಲಿ ಎಂಬುವ ಯುವಕನ ಬರ್ಬರ ಹತ್ಯೆಯಾಗಿತ್ತು. ಈ ಹತ್ಯೆಯ ಹಿಂದೆ ವಾಚಮನ್ ಕೈವಾಡವಿದೆ ಅಂತಾ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿದ್ದರು. ಸದ್ಯ ಕಟ್ಟಡದಲ್ಲಿ ವಾಚಮನ್ ಆಗಿದ್ದ ಪರಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಲೆ ಪ್ರಕರಣದಲ್ಲಿ...

Post
ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನ ಭಯಾನಕ ಮರ್ಡರ್..!

ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನ ಭಯಾನಕ ಮರ್ಡರ್..!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮುಂಡಗೋಡ ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ್ದಾರೆ ದುಷ್ಕರ್ಮಿಗಳು. ಗಾರೆ ಕೆಲಸಕ್ಕೆಂದು ಹುಬ್ಬಳ್ಳಿಗೆ ಹೋಗಿದ್ದ ಮೌಲಾಲಿ ಎಂಬುವ ಯುವಕನ್ನು ಕೊಂದು ಹಾಕಿದ್ದಾರೆ. ಹುಬ್ಬಳ್ಳಿಯ ಸಿಲ್ವರ್ ಟೌನ್ ನಲ್ಲಿ ಘಟನೆ ನಡೆದಿದ್ದು ಮುಂಡಗೋಡ ತಾಲೂಕಿನ ಮರಗಡಿ ಗ್ರಾಮದ ನಿವಾಸಿ ಮೌಲಾಲಿ ಕೊಲೆಯಾಗಿದ್ದಾನೆ. ಹೊಟ್ಟೆಪಾಡಿಗೆಂದು ಹುಬ್ಬಳ್ಳಿಗೆ ಗೌಂಡಿ ಕೆಲಸಕ್ಕೆಂದು ಹೋಗಿದ್ದ ಎನ್ನಲಾಗಿದೆ. ಮೌಲಾಲಿಯನ್ನು ನಿರ್ಮಾಣ ಹಂತದಲ್ಲಿರುವ ಮನೆಯ ಮುಂಭಾಗದಲ್ಲಿಯೇ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಗೋಕುಲ್ ರೋಡ್ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ....

Post
ಹುನಗುಂದ ಗ್ರಾಮಸಭೆಯಲ್ಲಿ ಕೋಲಾಹಲ, ಅಸಂಬದ್ಧ ಉತ್ತರಿಸಿದ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗೆ ಹಿಗ್ಗಾ ಮುಗ್ಗಾ ತರಾಟೆ..!

ಹುನಗುಂದ ಗ್ರಾಮಸಭೆಯಲ್ಲಿ ಕೋಲಾಹಲ, ಅಸಂಬದ್ಧ ಉತ್ತರಿಸಿದ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗೆ ಹಿಗ್ಗಾ ಮುಗ್ಗಾ ತರಾಟೆ..!

  ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಇಂದು ಮಂಗಳವಾರ ಗ್ರಾಮ ಸಭೆ ಆಯೋಜಿಸಲಾಗಿತ್ತು. ವಿಠ್ಠಲ ರುಕುಮಾಯಿ ಮಂದಿರದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಬಹುತೇಕ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಸಂಬದ್ಧ ಉತ್ತರಗಳಿಂದ ಭಾರೀ ಕೋಲಾಹಲಕ್ಕೆ ಕಾರಣವಾಯ್ತು. ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಯನ್ನು ಗ್ರಾಮಸ್ಥರು ಹಿಗ್ಗಾ ಮುಗ್ಗಾ ಜಾಡಿಸಿದ್ರು. ಅದು 75 ಲಕ್ಷದ ಕಾಮಗಾರಿ..! ಅಸಲು, ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ ಜಲಾಶಯದ ಕಾಲುವೆ ಕಾಮಗಾರಿಯಲ್ಲಿ ಭಾರೀ ಅವ್ಯವಹಾರದ ಆರೋಪ ಕೇಳಿ ಬಂದಿದೆ‌. ಜಲಾಶಯದ...

Post
ಚೌಡಳ್ಳಿ ಸೊಸೈಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಬಿಜೆಪಿಗೆ ಭಾರೀ ಮುಖಭಂಗ..!

ಚೌಡಳ್ಳಿ ಸೊಸೈಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಬಿಜೆಪಿಗೆ ಭಾರೀ ಮುಖಭಂಗ..!

ಮುಂಡಗೋಡ: ತಾಲೂಕಿನ ಚೌಡಳ್ಳಿ ಸೊಸೈಟಿಯಲ್ಲಿ ಬಿಜೆಪಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ನಿಚ್ಚಳ ಬಹುಮತವಿದ್ದರೂ ಬಿಜೆಪಿಗೆ ಅಧಿಕಾರ ಅಕ್ಷರಶಃ ಕೈತಪ್ಪಿದೆ‌. ಬದಲಾಗಿ, ಕಾಂಗ್ರೆಸ್ ಬೆಂಬಲಿತರು ಸೊಸೈಟಿಯಲ್ಲಿ ಜಯದ ಝಂಡಾ ಹಾರಿಸಿದ್ದಾರೆ. ಇದ್ರೊಂದಿಗೆ ಇಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಆದಂತಾಗಿದೆ. ಅಂದಹಾಗೆ, ಚೌಡಳ್ಳಿ ಸೊಸೈಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಧರ್ಮಣ್ಣ ಬಸಪ್ಪ ಅರೆಗೊಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ, ಬಿಜೆಪಿಯ ರಾಜವ್ವ ದೇವಿಂದ್ರಪ್ಪ ಹಾನಗಲ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 13 ಸದಸ್ಯ ಬಲದ ಚೌಡಳ್ಳಿ  ಸೊಸೈಟಿಯಲ್ಲಿ ಕೇವಲ 7 ಸದಸ್ಯರ ಅಧ್ಯಕ್ಷರ...

Post
ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ವ್ಯಕ್ತಿಯ ಭೀಕರ ಹತ್ಯೆ..! ಕಳ್ಳತನಕ್ಕೆ ಬಂದವನು ಮಾಜಿ ಸೈನಿಕನಿಂದ ಹೆಣವಾದ್ನಾ..?

ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ವ್ಯಕ್ತಿಯ ಭೀಕರ ಹತ್ಯೆ..! ಕಳ್ಳತನಕ್ಕೆ ಬಂದವನು ಮಾಜಿ ಸೈನಿಕನಿಂದ ಹೆಣವಾದ್ನಾ..?

 ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 4 ರಲ್ಲಿ ಭೀಕರ ಹತ್ಯೆಯಾಗಿದೆ. ಟಿಬೇಟಿಯನ್ ಮಾಜಿ ಸೈನಿಕನೊಬ್ಬ 36 ವರ್ಷದ ಯುವಕನನ್ನು ಹತ್ಯೆ ಮಾಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ನಟ್ಟ ನಡುರಾತ್ರಿಯಲ್ಲಿ ನಡೆದಿರೋ ಘಟನೆಯಲ್ಲಿ ಆರೋಪಿಯೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಟಿಬೇಟಿಯನ್ ಕ್ಯಾಂಪ್ ನಂಬರ್ 4 ರ Jamyang Dakpa @ Lobsang S/o Tenzin Yeshi(35) ಎಂಬುವವನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಇನ್ನು ಅದೇ ಕ್ಯಾಂಪಿನ ವಾಸಿ Gonpo Choedak S/o Thinley (50) ಎಂಬುವನೇ...

Post
ನಂದಿಕಟ್ಟಾ, ಬಸಾಪುರ, ಅಗಡಿ ಆಸುಪಾಸು ಚಿರತೆ ಪ್ರತ್ಯಕ್ಷ, ಹೆಜ್ಜೆ ಗುರುತುಗಳು ಪತ್ತೆ, ಮರಿಯೊಂದಿಗೆ ಓಡಾಡುತ್ತಿದೆಯಾ ಚಿರತೆ..?

ನಂದಿಕಟ್ಟಾ, ಬಸಾಪುರ, ಅಗಡಿ ಆಸುಪಾಸು ಚಿರತೆ ಪ್ರತ್ಯಕ್ಷ, ಹೆಜ್ಜೆ ಗುರುತುಗಳು ಪತ್ತೆ, ಮರಿಯೊಂದಿಗೆ ಓಡಾಡುತ್ತಿದೆಯಾ ಚಿರತೆ..?

ಮುಂಡಗೋಡ ತಾಲೂಕಿನ ಬಸಾಪುರ, ನಂದಿಕಟ್ಟಾ, ಅಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಮರಿಯೊಂದಿಗೆ ತಾಯಿ ಚಿರತೆ ಇಲ್ಲಿ ಓಡಾಡುತ್ತಿದೆ ಅನ್ನೋದು ಕನ್ಫರ್ಮ್ ಆಗಿದೆ. ಹಾಗಂತ ಅರಣ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ. ಬಸಾಪುರದ ಕಾಂಡಚಿನ ಗದ್ದೆಗಳಲ್ಲಿ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಸಾರ್ವಜನಿಕರಿಗೆ ಅರಣ್ಯ ಇಲಾಖೆಯಿಂದ ಎಚ್ಚರಿಕೆಯ ಸಂದೇಶಗಳನ್ನು ಡಂಗುರದ ಮೂಲಕ ರವಾನಿಸಲಾಗುತ್ತಿದೆ. ನಾಯಿ ಕೊಂಡೊಯ್ದ ಚಿರತೆ..! ಅಂದಹಾಗೆ, ಕಳೆದ ನಾಲ್ಕೈದು ದಿನಗಳ ಹಿಂದೆ ಬಸಾಪುರ ಸಮೀಪದ ಕಾಡಂಚಿನ ಗದ್ದೆಯಲ್ಲಿ ಗೋವಿನಜೋಳ ಕಾಯಲು...

Post
ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ಪ್ರಕರಣ: ಮೂವರ ಜೀವಂತ ದಹನ, ಇನ್ನೂ ಹಲವರು ಸಾವು ಶಂಕೆ..!

ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ಪ್ರಕರಣ: ಮೂವರ ಜೀವಂತ ದಹನ, ಇನ್ನೂ ಹಲವರು ಸಾವು ಶಂಕೆ..!

 ಹಾವೇರಿ : ನಗರಕ್ಕೆ ಸಮೀಪದ ಅಲದಕಟ್ಟಿ ಗ್ರಾಮದಲ್ಲಿನ ಪಟಾಕಿ ದಾಸ್ತಾನು ಮಾಡಿದ್ದ ಗೋದಾಮಿಗೆ ಬೆಂಕಿ ತಗಲಿ ಭಾರೀ ಅನಾಹುತ ಸಂಭವಿಸಿದೆ. ಈ ವೇಳೆ ಮೂರು ಅಮೂಲ್ಯ ಜೀವಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. ಈಗ್ಗೆ ಕೆಲವೇ ಹೊತ್ತಿನಲ್ಲಿ ಸಂಜೆ 5 ಗಂಟೆ ವೇಳೆಗೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಪರಿಶೀಲಿಸುವ ವೇಳೆ ಶೆಟರ್‍ಸ್ ಬಳಿ ಮೂವರ ಶವ ಕಂಡು ಬಂದಿವೆ. ಗೋದಾಮಿನಲ್ಲಿ ರ್‍ಯಾಕ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು. ಅದರ ಒಳಗೆ ಇನ್ನು...

Post
ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ, ನಾವು ಅಂದುಕೊಂಡಂಗಿಲ್ಲ ಲೆಕ್ಕ..! ಅಸಲೀಯತ್ತು ಬೇರೆಯದ್ದೇ ಇದೆ..!

ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ, ನಾವು ಅಂದುಕೊಂಡಂಗಿಲ್ಲ ಲೆಕ್ಕ..! ಅಸಲೀಯತ್ತು ಬೇರೆಯದ್ದೇ ಇದೆ..!

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರೋದು ಬಹುತೇಕ ಪಕ್ಕಾ ಎನ್ನುವಂತಾಗಿದೆ. ಆದ್ರೆ, ಈಗಲೇ ಸೇರ್ತಾರಾ ಅಥವಾ ಲೇಟಾಗತ್ತಾ ಅನ್ನೊ ಹಲವು ಪ್ರಶ್ನೆಗಳು ಇಡೀ ಕ್ಷೇತ್ರದಾದ್ಯಂತ ಚರ್ಚೆಗೆ ಕಾರಣವಾಗಿವೆ. ಅಸಲು, ಅದೇನೇ ಚರ್ಚೆ ನಡೆದ್ರೂ, ಅದೇನೇ ಊಹಾಪೋಹಗಳು ಜಾರಿಯಲ್ಲಿದ್ರೂ, ಹೆಬ್ಬಾರ್ ಸಾಹೇಬ್ರು ಮಾತ್ರ ಡೋಂಟ್ ಕೇರ್ ಅನ್ನೊ ಮನಸ್ಥಿತಿಯಲ್ಲಿದ್ದಾರೆ. ಯಾಕಂದ್ರೆ, ಅವ್ರ ಆಂತರಿಕ ಲೆಕ್ಕಾಚಾರಗಳೇ ಬೇರೆಯದ್ದಿದೆ. ಭಾಗಾಕಾರ, ಗುಣಾಕಾರಗಳೇ ಬೇರೆ..! ಅಂದಹಾಗೆ, ಸದ್ಯ ಹರಡಾಡ್ತಿರೋ ಕಾಂಗ್ರೆಸ್ ಸೇರೋ ಬಣ್ಣ ಬಣ್ಣದ ರೂಮರ್ರುಗಳಿಗೆ...