ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ನಡೆಯಬಾರದ ಭಾರಿ ಘಟನೆಯೊಂದು ನಡೆದುಹೋಗಿದೆ. ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ ಪಾಪಿಗಳು. ಇಡೀ ಗ್ರಾಮವೇ ಈ ಘಟನೆಯಿಂದ ಅಕ್ಷರಶಃ ಥರಗುಟ್ಟಿ ಹೋಗಿದೆ. ಪ್ರಕಾಶ ಓಲೇಕಾರ (48) ಹತ್ಯೆಯಾದ ದುರ್ದೈವಿಯಾಗಿದ್ದಾನೆ. ಬೇರೆಯವರ ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ, ಬಸವರಾಜನ ಮನೆಗೆ ಹೋದಾಗ ಹತ್ತಕ್ಕೂ ಅಧಿಕ ಜನರಿಂದ ಹತ್ಯೆ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ, ಗಾಯಾಳುಗಳಿಗೆ ಹಾನಗಲ್...
Top Stories
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿನ ಇಬ್ಬರ ಬಂಧನ..!
ಜನ-ಧನ್ ಅಕೌಂಟ್ಗೆ ಮರು ಕೆವೈಸಿ : ಸೆ.30ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದೆ RBI, ಅಪ್ಡೇಟ್ ಮಾಡುವುದು ಹೇಗೆ..?
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಬಂಕಾಪುರ್ ರಸ್ತೆ ಹೆಬ್ಬಾರ ನಗರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ..!
ತುಮಕೂರಲ್ಲಿ 20 ನವಿಲುಗಳ ಧಾರುಣ ಸಾವು..!
ಮೈಸೂರು ದಸರಾ ಜಂಬೂ ಸವಾರಿ: ಗಜಪಡೆಯ 14 ಆನೆಗಳ ಸಂಪೂರ್ಣ ಮಾಹಿತಿ ಹೀಗಿದೆ..!
ಆ.8 ರಿಂದ 14ರ ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಸಪ್ತರಥೋತ್ಸವ..!
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತಲೆಗೆ ರಾಡ್ನಿಂದ ಹೊಡೆದು ಮಹಿಳೆಯ ಕೊಲೆ..!
ಆರ್ಬಿಐ ರೆಪೋ ದರ ಶೇ.5.5ರಲ್ಲಿ ಸ್ಥಿರ; ನಿಮ್ಮ ಲೋನ್ EMI ಹೊರೆ ಇಳಿಸಲು ಈ ವಿಧಾನ ಅನುಸರಿಸಿ..!
ಚಿನ್ನದ ಬೆಲೆ ಸತತ ಏರಿಕೆ: ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?
ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿ,ಇಂದೂರಿನ ದಂಪತಿ ಸೇರಿ ಮೂವರಿಗೆ ಗಾಯ..!
ಜಿ.ಪಂ ಸಿಇಒ ದಿಲೀಷ್ ರಿಂದ ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಜೆಜೆಎಮ್ ಕಾಮಗಾರಿ ಪರಿಶೀಲನೆ..!
ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!
ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!
ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!
ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!
Category: BIG BREAKING
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ಹುಬ್ಬಳ್ಳಿಯಲ್ಲಿ ನಡೆದಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿ 9 ಜನ ಗಂಭೀರವಾಗಿದ್ದ ಪ್ರಕರಣದಲ್ಲಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಾಲಾಧಾರಿಗಳು ಸಾವು ಕಂಡಿದ್ದಾರೆ. ನಿಜನಿಂಗಪ್ಪ ಮಲ್ಲಪ್ಪ ಬೇಪೂರು (58), ಸಂಜಯ ಪ್ರಕಾಶ್ ಸವದತ್ತಿ (17) ಸಾವು ಕಂಡಿರೋ ಅಯ್ಯಪ್ಪ ಮಾಲಾಧಾರಿಗಳು. ಹುಬ್ಬಳ್ಳಿಯ ಅಚ್ಚವನ ಕಾಲೋನಿಯ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಹಿಂದೆ ಸಿಲಿಂಡರ್ ಸೋರಿಕೆ ಯಾಗಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡಿದ್ದ...
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಶಿಗ್ಗಾವಿ ತಾಲೂಕಿನ ತಡಸ ಕ್ರಾಸ್ ಬಳಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ಕಾರುಗಳ ನಡುವೆ ನಡೆದ ಮುಖಾಮುಕಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ನಾಲ್ವರು ಭಯಾನಕ ಸಾವು ಕಂಡಿದ್ದಾರೆ. ಹಾವೇರಿ-ಧಾರವಾಡ ಗಡಿಯ ಸಮೀಪ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬಿಳಿ ಮಹೀಂದ್ರಾ ಎಕ್ಸ್ಯುವಿ 700 ವಾಹನವು ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆಂಪು ಬಣ್ಣದ ಟಾಟಾ ಆಲ್ಕ್ರೋಜ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕೆಂಪು ವಾಹನದಲ್ಲಿ 10-12 ವರ್ಷದ ಒಂದು ಮಗು ಸೇರಿದಂತೆ 4...
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಮುಂಡಗೋಡ: ತಾಲೂಕಿನ ಬೆಡಸಗಾಂವ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಮುಗಿದಿದೆ. ಇನ್ನೇನು ಚುನಾವಣೆಯ ಮತ ಎಣಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಹೀಗಿರೋವಾಗಲೇ ಧಾರವಾಡ ಹೈಕೋರ್ಟ್ ಪೀಠ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ತಡೆಯಾಜ್ಞೆ ನೀಡಿದೆ. ಏನಾಯ್ತು..? ಅಂದಹಾಗೆ, ಈಗ ತಾಲೂಕಿನೆಲ್ಲೆಡೆ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಚುನಾವಣೆ ನಡೀತಿದೆ. ಇಡೀ ತಾಲೂಕಿನಲ್ಲಿ ಈ ಚುನಾವಣೆ ಅನ್ನೋದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಈ ಕಾರಣಕ್ಕಾಗಿ, ಹೇಗಾದ್ರೂ ಸರಿ ಅಧಿಕಾರದ ಚುಕ್ಕಾಣಿ ನಮ್ಮ...
ಸಿಂಗನಳ್ಳಿಯಲ್ಲಿ ಅಡಿಕೆ ಕಳ್ಳರ ಹಾವಳಿ, ಮನೆಯ ಪಕ್ಕದಲ್ಲೇ ಒಣ ಹಾಕಿದ್ದ ಅಡಿಕೆ ಕದ್ದೊಯ್ದ ಕಳ್ಳರು..!
ಮುಂಡಗೋಡ ತಾಲೂಕಿನ ಶಿಂಗನಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಅಡಿಕೆ ಕಳ್ಳರು ಕರಾಮತ್ತು ತೋರಿಸಿದ್ದಾರೆ. ಮನೆಯ ಅಂಗಳದಲ್ಲಿ ರಾಶಿ ಮಾಡಿದ್ದ ಸುಮಾರು 8 ಕ್ವಿಂಟಾಲ್ ಅಡಿಕೆಯನ್ನು ಅನಾಮತ್ತಾಗಿ ಕದ್ದೊಯ್ದಿದ್ದಾರೆ. ಹಾಗೆ ಕದ್ದು ಒಯ್ದಿರೋ ಅಡಿಕೆಯ ಅಂದಾಜು ಮೌಲ್ಯ ಏನಿಲ್ಲವೆಂದ್ರೂ ಮೂರೂವರೇ ಲಕ್ಷಕ್ಕೂ ಹೆಚ್ಚು. ಹೀಗಾಗಿ , ಈ ಭಾಗದ ಜನ ಕಂಗಾಲಾಗಿದ್ದಾರೆ. ಅಂದಹಾಗೆ, ಸಿಂಗನಳ್ಳಿಯ ರೈತ ಪ್ರಭು ಪಾಟೀಲ್ ಎಂಬುವವರ ಅಡಿಕೆ ಕಳ್ಳತನವಾಗಿದೆ. ಇವರ ಮನೆ ಪಕ್ಕದಲ್ಲೇ ಕಣ ಮಾಡಿ ಅಡಿಕೆ ಒಣಗಲು ಇಡಲಾಗಿತ್ತು. ಇದನ್ನು ಗಮನಿಸಿರೋ ಅಡಿಕೆ ಕಳ್ಳರು...
ಹುನಗುಂದದಲ್ಲಿ ಎರಡು ಮನೆಗಳಲ್ಲಿ ನುಗ್ಗಿದ ಕಳ್ಳರು, ಒಂದು ಮನೆಯಲ್ಲಿ ಕಳ್ಳತನ, ಮತ್ತೊಂದು ಮನೆಯಲ್ಲಿ ವಿಫಲ ಯತ್ನ..!
ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಮನೆ ಕಳ್ಳತನವಾಗಿದೆ. ಇಲ್ಲಿನ ದೇಶಪಾಂಡೆ ನಗರದಲ್ಲಿ ಎರಡು ಮನೆಗಳಿಗೆ ಕಳ್ಳರು ನುಗ್ಗಿದ್ದು ಒಂದು ಮನೆಯಿಂದ 25 ಸಾವಿರ ನಗದು ಹಾಗೂ ಅರ್ದ ತೊಲೆ ಚಿನ್ನ ಎಗರಿಸಿಕೊಂಡು ಹೋಗಿದ್ದಾರೆ. ಮತ್ತೊಂದು ಮನೆಯ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಅಂದಹಾಗೆ, ಹುನಗುಂದದ ದೇವಕ್ಕ ಹನ್ಮಂತಪ್ಪ ವಡ್ಡರ ಎಂಬುವವರ ಮನೆಗೆ ನುಗ್ಗಿರೋ ಕಳ್ಳರು 25ಸಾವಿರ ಹಣ, ಹಾಗೂ ಅರ್ಧ ತೊಲೆ ಚಿನ್ನ ಕದ್ದೊಯ್ದಿದ್ದಾರೆ. ಹಾಗೆಯೇ, ಅದೇ ಮನೆಯ ಹತ್ತಿರದ ಹಸನ್ ಸಾಬ್ ನಬಿಸಾಬ್ ಮೊರಬ ಎಂಬುವವರ ಮನೆಗೆ...
ಚಿಗಳ್ಳಿ ಭಾಗದಲ್ಲಿ ಬಿಜೆಪಿಗೆ ಠಕ್ಕರ್ ಕೊಟ್ಟ ಕಾಂಗ್ರೆಸ್, ಹಲವು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!
ಮುಂಡಗೋಡ ತಾಲೂಕಿನ ಚಿಗಳ್ಳಿ ಭಾಗದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್ ಕೊಟ್ಟಿದೆ. ಚಿಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನಿಂದ “ಅಪರೇಶನ್ ಹಸ್ತ” ನಡೆದು ಹೋಗಿದೆ ಪರಿಣಾಮ ಹಲವು ಬಿಜೆಪಿಗರು ಅನಾಯಾಸವಾಗಿ “ಕೈ” ವಶವಾಗಿದ್ದಾರೆ. ಚಿಗಳ್ಳಿಯ ಸಹಕಾರಿ ಧುರೀಣ, ಬಿಜೆಪಿ ಮುಖಂಡ ಅಶೋಕ ಶಿರ್ಮಾಪುರ, ಮಹಾದೇವ ಬಯಲವಾಡ, ಚಂದ್ರು ಅಜ್ಜಳ್ಳಿ, ಸಂಪತ್ ಕೆಮೋಜ್ಜಿ, ರಾಮಚಂದ್ರ ನಿಂಬಾಯಿ, ನಾಮದೇವ ಜಾಧವ, ನಾಗಣ್ಣ ಹಂಚಿನಮನಿ, ಬಾಬುರಾಯ್ ಆಲದಕಟ್ಟಿ ಸೇರಿದಂತೆ ಹಲವರು, ಕಾಂಗ್ರೆಸ್...
ಮುರುಡೇಶ್ವರ ಪ್ರವಾಸಕ್ಕೆ ತೆರಳಿದ್ದ 7 ವಿದ್ಯಾರ್ಥಿಗಳು ನೀರುಪಾಲು, ಮೂವರ ರಕ್ಷಣೆ, ಓರ್ವ ವಿದ್ಯಾರ್ಥಿ ಸಾವು..!
ಮುರುಡೇಶ್ವರ : ಸಮುದ್ರದಲ್ಲಿ ಈಜಲು ತೆರಳಿದ ಕೋಲಾರ ಮೂಲದ ಮೂವರು ಪ್ರವಾಸಿ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಓರ್ವ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ. ಶ್ರಾವಂತಿ (15) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಇನ್ನು ಮೂವರು ವಿಧ್ಯಾರ್ಥಿಗಳ ರಕ್ಷಣೆ ಮಾಡಲಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೀಕ್ಷಾ, ಲಾವಣ್ಯ, ಲಿಪಿಕಾ ನಾಪತ್ತೆಯಾದ ವಿದ್ಯಾರ್ಥಿಗಳಾಗಿದ್ದಾರೆ. ಕೋಲಾರದ ಮುಳಬಾಗಿಲು ಮೂಲದ 54 ವಿದ್ಯಾರ್ಥಿಗಳು ಮುರುಡೇಶ್ವರ ಪ್ರವಾಸಕ್ಕೆ ಆಗಮಿಸಿದ್ದರು. ಸಂಜೆ ವೇಳೆ ಈಜುವಾಗ ಘಟನೆ ನಡೆದಿದೆ. ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ...
ಚಿಗಳ್ಳಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಗೋಸಾವಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆ, ಅಷ್ಟಕ್ಕೂ, ಆ ತಾಯಿ ಗೋಳೋ ಅಂತ ಕಣ್ಣೀರು ಹಾಕಿದ್ಯಾಕೆ..?
ಮುಂಡಗೋಡ ತಾಲೂಕಿನಲ್ಲಿ ಒಳಗೊಳಗೇ ಒಂದಿಷ್ಟು ರಾಜಕೀಯ ಮೇಲಾಟಗಳು ಜಾರಿಯಲ್ಲಿವೆ. ದಿಢೀರ್ ಎಂಬಂತೆ ಚಿಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾ ಕಲ್ಮೇಶ್ ಗೋಸಾವಿ ಗೋಳೋ ಅಂತಾ ಕಣ್ಣೀರು ಹಾಕ್ತಾ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಬಿಜೆಪಿ ಮುಖಂಡ ಎಲ್ಟಿ ಪಾಟೀಲರ ನಿವಾಸದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಮಂಜುನಾಥ ಪಾಟೀಲರ ಸಮ್ಮುಖದಲ್ಲಿ ಕಮಲ ಮುಡಿದಿದ್ದಾರೆ. ಹೀಗಾಗಿ, ಚಿಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಈಗ ಅಧ್ಯಕ್ಷರ ಬದಲಾವಣೆಯ ಗುಮ್ಮ ಬಹುತೇಕ ತಣ್ಣಗಾಗುವ ಲಕ್ಷಣಗಳಿವೆ. ಅಸಲು, 13 ಸದಸ್ಯ ಬಲದ ಚಿಗಳ್ಳಿ ಗ್ರಾಮ ಪಂಚಾಯತಿಯಲ್ಲಿ...
ಶಿಗ್ಗಾವಿಯಲ್ಲಿ ಭರ್ಜರಿ ಜಯ ಸಿಕ್ಕ ಹಿನ್ನೆಲೆ, ಸವಣೂರಿಗೆ ಇಂದು ಸಿಎಂ ಸಿದ್ದರಾಮಯ್ಯ..! ಕ್ಷೇತ್ರಕ್ಕೆ ವಿಶೇಷ ಗಿಫ್ಟ್ ಕೊಡ್ತಾರಾ ಸಿಎಂ..?
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ಇವತ್ತು ಸವಣೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಸವಣೂರಿನ ತಾಲೂಕಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರೋ ಬೃಹತ್ ಅಭಿನಂದನಾ ಸಮಾರಂಭಸಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಬಹುಶಃ, ಶಿಗ್ಗಾವಿ ಕ್ಷೇತ್ರಕ್ಕಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಗಿಫ್ಟ್ ಕೊಡ್ತಾರಾ..? ಅನ್ನೋ ಭರವಸೆ ಯಲ್ಲಿದ್ದಾರೆ ಜನ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರು ಪಟ್ಟಣಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಗ್ಗಾವಿ ಕ್ಷೇತ್ರದ ಜನತೆ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ ಹಿನ್ನೆಲೆಯಲ್ಲಿ, ಕೃತಜ್ಞತೆ ಸಲ್ಲಿಸಲಿದ್ದಾರೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ...