ಹುಬ್ಬಳ್ಳಿಯ ಸೈಕ್ಲಿಸ್ಟ್ ಒಬ್ಬರು ಸೈಕ್ಲಿಂಗ್ ಮಾಡುವಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶಿಗ್ಗಾಂವ ಸಮೀಪ ನಡೆದಿದೆ. ಬಸವಗೌಡ ಶಂಕರಗೌಡ ಶಿವಳ್ಳಿ (35) ಮೃತರಾಗಿದ್ದು, ಬಿವ್ಹಿಬಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಅಲ್ಲದೇ ಹಲವಾರು ವರ್ಷಗಳಿಂದ ಸೈಕ್ಲಿಸ್ಟ್ ಆಗಿದ್ದು, ವಿವಿಧ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಇಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಯೋಜಿಸಿದ್ದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಶಿಗ್ಗಾಂವ ಬಳಿ ಏಕಾಏಕಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ******************* ಜಾಹೀರಾತು
Top Stories
ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!
ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!
ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!
ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!
‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ..!
ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?
ಇಸ್ರೋ-ನಾಸಾ ಜಂಟಿ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ..!
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!
ಕಾತೂರು ಪ್ರೌಢಶಾಲೆಯಲ್ಲಿ ಆ “ಹುಡುಗ”ನ ಭಯಕ್ಕೆ, ತರಗತಿಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿಗಳು..! ದೈರ್ಯ ತುಂಬಿದ ಪಿಐ ರಂಗನಾಥ್..!
ಚಿಗಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ರಹೀಮಾಬಿ ಮಕ್ತೇಸರ್, ಉಪಾಧ್ಯಕ್ಷರಾಗಿ ರತ್ನವ್ವ ಅವಿರೋಧ ಆಯ್ಕೆ..!
ಇಸ್ಪೀಟು ಅಡ್ಡೆಯ ಮೇಲೆ ಭರ್ಜರಿ ದಾಳಿ ಕೇಸ್..! ಮುಂಡಗೋಡ ಪೊಲೀಸ್ರಿಗೆ ಬಂದಿತ್ತು ಅದೊಂದು ಪೋನ್ ಕಾಲ್, ಬೆನ್ನತ್ತಿ ಹೋದವರದ್ದೇ ರೋಚ”ಕತೆ”..!
ಶಿರಸಿ ಬಳಿ ಹೋಂ ಸ್ಟೇಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಬಂಧನ, ಬಂಧಿತರು ಯಾರ್ಯಾರು ಗೊತ್ತಾ..? ವಿವರ ಇಲ್ಲಿದೆ ನೋಡಿ..!
ವಾಯುಭಾರ ಕುಸಿತ ಹಿನ್ನೆಲೆ; ಜು.29 ರವರೆಗೆ ಅತೀ ಭಾರೀ ಮಳೆ ಮುನ್ಸೂಚನೆ..!
ಶಿರಸಿ ಡಿವೈಎಸ್ಪಿ ನೇತೃತ್ವದಲ್ಲಿ ಭರ್ಜರಿ ದಾಳಿ, ಇಸ್ಪೀಟು ಆಟದಲ್ಲಿ ತೊಡಗಿದ್ದ 19 ಜನರ ಬಂಧನ, ಸಿಕ್ಕ ಹಣವೆಷ್ಟು..? ಹಾವೇರಿ ವೈದ್ಯನ ರೆಸಾರ್ಟಿನಲ್ಲಿ ದಂಧೆ..!?
ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ..!
ಅರಣ್ಯದಲ್ಲಿ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚನೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ..!
ಕೋರ್ಟ್ ಆವರಣದಲ್ಲೇ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾಪಿ ಪತಿ..!
ಉತ್ತರ ಕನ್ನಡ; ಗುಡ್ಡ ಕುಸಿತ, ಕಡಲುಕೊರೆತ ತಡೆಗೆ 800 ಕೋಟಿ ಅನುದಾನ- ಸಚಿವ ಕೃಷ್ಣ ಬೈರೇಗೌಡ
Category: ಹುಬ್ಬಳ್ಳಿ ಧಾರವಾಡ
ಕಲಘಟಗಿಯಲ್ಲಿ 2 ಕಿಮೀ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ, ಸಂತೋಷ ಲಾಡ್ ನೇತೃತ್ವ..!
ಕಲಘಟಗಿ: ಕೋವಿಡ್ ಆತಂಕದ ನಡುವೆಯೇ ಕಲಘಟಗಿಯಲ್ಲಿ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು. ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ 2 ಕಿಮೀ ಉದ್ದದ 9 ಅಡಿ ಅಗಲ ಇರುವ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು. ಮೆರವಣಿಗೆ ವೇಳೆ ಸಾವಿರಾರು ಜನರಿಂದ ರಾಷ್ಟ್ರಭಕ್ತಿಯ ಘೋಷಣೆಗಳು ಮೊಳಗಿದವು. ದೇಶಭಕ್ತಿಯ ಗೀತೆಗಳ ಮೂಲಕ, ಘೋಷಣೆ ಗಳ ಮೂಲಕ ವಿಶೇಷ ರಾಷ್ಟ್ರಧ್ವಜದ ಮೆರವಣಿಗೆ ನಡೆಸಲಾಯಿತು.
ಬೈಕ್ ಅಪಘಾತ: ಕುಬಿಹಾಳ ಗ್ರಾಮ ಪಂಚಾಯತ ಪಿಡಿಓ ಸಾವು..!
ಹುಬ್ಬಳ್ಳಿ: ಬೈಕ್ – ಕಾರ್ ನಡುವೆ ಮುಖಾ-ಮುಖಿಯಾಗಿ ಪಿಡಿಓ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರೂರ ಬ್ರಿಡ್ಜ್ ಬಳಿ ನಡೆದಿದೆ. ಕುಂದಗೋಳ ತಾಲೂಕಿನ ಸಂಶಿ ನಿವಾಸಿಯಾದ ಪ್ರಭುಗೌಡ ಬಸನಗೌಡ ತೇಂಬದಮನಿ ಮೃತ ಪಿಡಿಓ ಆಗಿದ್ದಾರೆ. ಕುಬಿಹಾಳ ಗ್ರಾಮ ಪಂಚಾಯತಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಇವತ್ತು ಸಂಜೆ ಕೆಲಸ ಮುಗಿಸಿ ಊರ ಕಡೆ ಹೋಗುವಾಗ ಎದುರಿಗೆ ಬಂದ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಎಸ್ ಡಿ ಎಂ ಆಸ್ಪತ್ರೆಗೆ ಸಾಗಿಸುವ ಮಧ್ಯೆ...
ಟೂರ್ ಪ್ಲಾನ್ ಬದಲು, ನೇರವಾಗಿ ಉತ್ತರ ಕನ್ನಡಕ್ಕೆ ಬರಬೇಕಿದ್ದ ಸಿಎಂ ಹೋಗಿದ್ದೇಲ್ಲಿಗೆ..?
ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಿದ್ದಾರೆ. ಈಗಾಗಲೇ ಹುಬ್ಬಳ್ಳಿಗೆ ನೂತನ ಸಿಎಂ ಆಗಮನವಾಗಿದ್ದು ಹುಬ್ಬಳ್ಳಿಯ ಭೇಟಿಗಾಗಿ ಬೊಮ್ಮಾಯಿ ಟೂರ್ ಪ್ಲಾನ್ ಬದಲಾಯಿಸಿದ್ದಾರೆ. ಬೆಂಗಳೂರಿನಿಂದ ನೇರವಾಗಿ ಉತ್ತರ ಕನ್ನಡ ಜಿಲ್ಲೆಗೆ ತೆರಳಬೇಕಿದ್ದ ಸಿಎಂ, ಹುಬ್ಬಳ್ಳಿಗೆ ಅಗಮಿಸುತ್ತಿದ್ದಂತೆಯೇ ಟೂರ್ ಪ್ಲಾನ್ ಬಹುತೇಕ ಬದಲಾಗಿದೆ. ಹುಬ್ಬಳ್ಳಿಯ ಕೇಶಕುಂಜ ಸೇರಿದಂತೆ, ಬೊಮ್ಮಾಯಿ ತಂದೆ ದಿ.S R ಪಾಟೀಲ ಸಮಾಧಿಗೆ ಭೇಟಿ ನೀಡಿದ ಸಿಎಂ, ಅಲ್ಲಿಂದ ನೇರವಾಗಿ ನಗರದಲ್ಲಿರೋ ರಂಭಾಪುರಿ ಮಠಕ್ಕೆ ಭೇಟಿ ನೀಡಿ...
ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ದುರ್ಮರಣ.!
ಹುಬ್ಬಳ್ಳಿ: ಲಾರಿ ಹಾಗೂ ಆಟೋ ಮದ್ಯೆ ಡಿಕ್ಕಿ ಸಂಭವಿಸಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ, ಹುಬ್ಬಳ್ಳಿಯ ಹೊರಹೊಲಯದ ಗಬ್ಬೂರು ಬೈಪಾಸ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ವರೂರಿಗೆ ಹೊರಟಿದ್ದ ಆಟೋಗೆ, ಎದುರಿನಿಂದ ಬಂದ ಲಾರಿಯಿಂದ ಡಿಕ್ಕಿಯಾಗಿದೆ. ಹೀಗಾಗಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಆದ್ರೆ, ಸಾವಿಗೀಡಾದ ವ್ಯಕ್ತಿಗಳ ಗುರುತು ಇನ್ನು ಪತ್ತೆಯಾಗಿಲ್ಲ. ಘಟನೆಯ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆ ಹುಬ್ಬಳ್ಳಿ ಹುಡುಗನ ಮರ್ಡರ್ ಹಿಂದೆ ಇದ್ದಿದ್ದು “ಗಾಜಿನ ಪುರಾಣ”
ಹುಬ್ಬಳ್ಳಿ: ಆ ಯುವಕ ತನ್ನ ಮುಂದಿನ ಬದುಕಿನ ಬಗ್ಗೆ ಸಾವಿರಾರು ಕನಸು ಕಂಡವನು. ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿದ್ದ ಆ ಯುವಕ ಗೆಳೆಯರ ಜೊತೆ ಎಂಜಾಯ್ ಮಾಡುತ್ತಾ ಮನೆಯ ಮುದ್ದು ಮಗನಾಗಿದ್ದವನು. ಆದ್ರೆ ಆ ಯುವಕನ ಮೇಲೆ ಅದಾಗಲೇ ಒಂದು ಗ್ಯಾಂಗ್ ನ ಕಣ್ಣು ಬಿದ್ದಿತ್ತು. ನಿನ್ನೆ ಯುವಕನ ಜೊತೆ ಸಣ್ಣದಾಗಿ ಜಗಳ ಮಾಡಿದ್ದ ಆ ಗ್ಯಾಂಗ್ ಸದ್ದಿಲ್ಲದೆ ಯುವಕನ ಪ್ರಾಣ ತಿಂದು ಹಾಕಿದೆ. ಸ್ಮಾರ್ಟ್ ಹುಡುಗ ಕಣ್ರಿ..! ಆಸ್ಪತ್ರೆಯ ಎದುರು ನಿಂತಿರೋ ನೂರಾರು ಜನರು..ಶವಾಗರದ ಬಳಿ ಬಂದು...
ಆ ನೀಚ ಪತಿ ಕುಡಿದ ಮತ್ತಿನಲ್ಲಿ, ತನ್ನ ಪತ್ನಿಯ ಮೂಗನ್ನೇ ಕಚ್ಚಿ ತಿಂದುಬಿಟ್ಟ..!
ಆತ ಕುಡಿದ ಮತ್ತಿನಲ್ಲಿದ್ದ ಪತಿ, ಪತ್ನಿ ಮನೆಯಲ್ಲಿ ಬಂದು ಉಳಿದಿದ್ದ ಆತನದು ನಿತ್ಯದ ಕಾಯಕ ಕುಡಿತ ಮತ್ತು ಜಗಳ. ನಿತ್ಯ ಕುಡಿದು ಬಂದು ಬೈಯುತ್ತಲೇ ಇದ್ದರೂ ಸಹ ಪತ್ನಿ ಹೇಗೋ ಹೊಂದಿಕೊಂಡು ಹೊರಟ್ಟಿದ್ದಳು. ಇಂದಲ್ಲ ನಾಳೆ ನನ್ನ ಪತಿ ಸುಧಾರಿಸಿಯಾನೂ ಅಂತಾನೆ ಅವಳು ತಿಳಿದಿದ್ದಳು. ಆದ್ರೆ ಪತ್ನಿಯನ್ನ ಚೆನ್ನಾಗಿ ನೋಡಕೊಳ್ಳಬೇಕಾದ ದುರುಳ ಪತಿ ಮಾಡಿದ್ದು ಮಾತ್ರ ವಿಚಿತ್ರ ಕಾರ್ಯ..ಕುಡಿತದ ಮತ್ತಿನಲ್ಲೇ ತೇಲುತ್ತಿದ್ದ ಪತಿ ಮಾತ್ರ ಹೆಂಡತಿಯ ಮೂಗನ್ನೇ ಕಚ್ಚಿಬಿಟ್ಟಿದ್ದಾನೆ. ಹೌದು, ಹೀಗೆ ಸಂಪೂರ್ಣವಾಗಿ ರಕ್ತಸಿಕ್ತವಾಗಿರು ಮೂಗು..ಮೂಗಿನಿಂದ ನಿರಂತರವಾಗಿ...
ಧಾರವಾಡ ಯೋಗಿಶಗೌಡ ಹತ್ಯೆ ಕೇಸ್ ಗೆ ಮೇಜರ್ ಟ್ವಿಸ್ಟ್..!
ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗಿಶಗೌಡ ಕೊಲೆ ಕೇಸ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಕೊಲೆ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದ ವ್ಯಕ್ತಿಯೇ ಈಗ ಖುದ್ದು ವಿನಯ ಕುಲಕರ್ಣಿ ವಿರುದ್ಧವೇ ಪರೋಕ್ಷ ಹೇಳಿಕೆ ನೀಡಿದ್ದು, ಇಷ್ಟು ದಿನ ಹೇಳದೇ ಇರೋ ಸತ್ಯಗಳನ್ನೆಲ್ಲ ಇನ್ನು ಮುಂದೆ ಹೇಳುವೆ ಅಂತಾ ಹೇಳಿದ್ದಾನೆ. ಮತ್ತೊಂದು ಕಡೆ ನಿನ್ನೆಯಷ್ಟೇ ಸಿಬಿಐ ಬಂಧಿಸಿದ್ದ ಸೋಮು ನ್ಯಾಮಗೌಡನಿಗೆ ಇವತ್ತು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ. 2016ರ ಜೂನ್ 15ರಂದು ನಡೆದಿದ್ದ ಧಾರವಾಡ ಜಿಲ್ಲಾ...
ಬೆಲೆ ಏರಿಕೆ ವಿರುದ್ಧ ಕಲಘಟಗಿಯಲ್ಲಿ ಸಂತೋಷ್ ಲಾಡ್ ನೇತೃತ್ವದಲ್ಲಿ ಬೃಹತ್ ಸೈಕಲ್ ಜಾಥಾ..!
ಕಲಘಟಗಿ: ಪೆಟ್ರೊಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಸೈಕಲ್ ಜಾಥಾವನ್ನ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಮಾಡಲಾಯಿತು. ಸೈಕಲ್ ಜಾಥಾ ಜೊತೆಗೆ ಸಂತೋಷ್ ಲಾಡ್ ಒಂಟೆ, ಕುದುರೆ ಹಾಗೂ ಎತ್ತಿನ ಬಂಡಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದು ರಾಜ್ಯದಲ್ಲೇ ವಿನೂತನವಾಗಿತ್ತು. ಅಲ್ಲದೇ ಎತ್ತಿನ ಬಂಡೆಯ ಮೇಲೆ ಬೈಕ್ ಇಟ್ಟು ಆಕ್ರೋಶವನ್ನ ಲಾಡ್ ವ್ಯಕ್ತ ಪಡಿಸಿದರು, ಇನ್ನು ಬಡವರ...
16 ಕಿಮೀ ಜಿರೋ ಟ್ರಾಫಿಕ್ ನಲ್ಲಿ ಅಂಬ್ಯುಲೆನ್ಸ್ ಮೂಲಕ “ಲಿವರ್” ರವಾನೆ..!
ಹುಬ್ಬಳ್ಳಿ: ಎಸ್ ಡಿಎಂ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಜಿರೋ ಟ್ರಾಫಿಕ್ ನಲ್ಲೇ ಲೀವರ್ ರವಾನೆ ಮಾಡಲಾಗಿದೆ. ಲಿವರ್ ಸಾಗಿಸಲು ಆಂಬ್ಯುಲೆನ್ಸ್ ಗೆ ಹುಬ್ಬಳ್ಳಿ ಪೊಲೀಸ್ರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ರು. ಹುಬ್ಬಳ್ಳಿಯ SDM ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ, 16 ಕಿಲೋಮೀಟರ್ ದೂರ ಕ್ರಮಿಸಲು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಇನ್ನು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರಿಗೆ ಲೀವರ್ ಅವಶ್ಯವಾಗಿತ್ತು. ಎಸ್ ಡಿಎಂ ಆಸ್ಪತ್ರೆಯಲ್ಲಿ ಬ್ರೇನ್ ಡೆಡ್ ಆದ ವ್ಯಕ್ತಿ...