ಶಿಗ್ಗಾವಿ: ಗ್ರಾಮ ಪಂಚಾಯತಿ ಪಿಡಿಓ ಹಾಗೂ ಗುತ್ತಿಗೆದಾರನ ನಡುವೆ ಕೈ-ಕೈ ಮಿಲಾಯಿಸಿದ ಘಟನೆ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು ಗ್ರಾಮ ಪಂಚಾಯಿತಿಯ ಪಿಡಿಓ ಅಶೋಕ್ ಗೋಂದಿ ಅವರನ್ನು ಪಂಚಾಯಿತಿಯ ಗುತ್ತಿಗೆ ಕೆಲಸದ ವಿಷಯವಾಗಿ ಗುತ್ತಿಗೆದಾರ ಮಂಜುನಾಥ ಕಂಕನವಾಡಿ ಅವರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿ, ಬಾಯಿಗೆ ಬಂದಹಾಗೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ. ಘಟನೆ ನಡೆದು ನಂತರ ಪೊಲೀಸ್ ಠಾಣೆ...
Top Stories
ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!
ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!
ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!
ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!
‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ..!
ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?
ಇಸ್ರೋ-ನಾಸಾ ಜಂಟಿ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ..!
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!
ಕಾತೂರು ಪ್ರೌಢಶಾಲೆಯಲ್ಲಿ ಆ “ಹುಡುಗ”ನ ಭಯಕ್ಕೆ, ತರಗತಿಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿಗಳು..! ದೈರ್ಯ ತುಂಬಿದ ಪಿಐ ರಂಗನಾಥ್..!
ಚಿಗಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ರಹೀಮಾಬಿ ಮಕ್ತೇಸರ್, ಉಪಾಧ್ಯಕ್ಷರಾಗಿ ರತ್ನವ್ವ ಅವಿರೋಧ ಆಯ್ಕೆ..!
ಇಸ್ಪೀಟು ಅಡ್ಡೆಯ ಮೇಲೆ ಭರ್ಜರಿ ದಾಳಿ ಕೇಸ್..! ಮುಂಡಗೋಡ ಪೊಲೀಸ್ರಿಗೆ ಬಂದಿತ್ತು ಅದೊಂದು ಪೋನ್ ಕಾಲ್, ಬೆನ್ನತ್ತಿ ಹೋದವರದ್ದೇ ರೋಚ”ಕತೆ”..!
ಶಿರಸಿ ಬಳಿ ಹೋಂ ಸ್ಟೇಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಬಂಧನ, ಬಂಧಿತರು ಯಾರ್ಯಾರು ಗೊತ್ತಾ..? ವಿವರ ಇಲ್ಲಿದೆ ನೋಡಿ..!
ವಾಯುಭಾರ ಕುಸಿತ ಹಿನ್ನೆಲೆ; ಜು.29 ರವರೆಗೆ ಅತೀ ಭಾರೀ ಮಳೆ ಮುನ್ಸೂಚನೆ..!
ಶಿರಸಿ ಡಿವೈಎಸ್ಪಿ ನೇತೃತ್ವದಲ್ಲಿ ಭರ್ಜರಿ ದಾಳಿ, ಇಸ್ಪೀಟು ಆಟದಲ್ಲಿ ತೊಡಗಿದ್ದ 19 ಜನರ ಬಂಧನ, ಸಿಕ್ಕ ಹಣವೆಷ್ಟು..? ಹಾವೇರಿ ವೈದ್ಯನ ರೆಸಾರ್ಟಿನಲ್ಲಿ ದಂಧೆ..!?
ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ..!
ಅರಣ್ಯದಲ್ಲಿ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚನೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ..!
ಕೋರ್ಟ್ ಆವರಣದಲ್ಲೇ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾಪಿ ಪತಿ..!
ಉತ್ತರ ಕನ್ನಡ; ಗುಡ್ಡ ಕುಸಿತ, ಕಡಲುಕೊರೆತ ತಡೆಗೆ 800 ಕೋಟಿ ಅನುದಾನ- ಸಚಿವ ಕೃಷ್ಣ ಬೈರೇಗೌಡ
Category: ಹಾವೇರಿ
ನಮ್ಮ ಮೇಲೆ ಬಂದಿರೋ ಆರೋಪಗಳೇಲ್ಲ ಸುಳ್ಳು, ಸುಳ್ಳು, ಸುಳ್ಳು..! ಕಬನೂರು ಗ್ರಾಪಂ ಅಧ್ಯಕ್ಷರ ಸ್ಪಷ್ಟನೆ..!!
ಶಿಗ್ಗಾವಿ:ತಾಲೂಕಿನ ಕಬನೂರ ಪಂಚಾಯತಿಯಲ್ಲಿ ಅಧ್ಯಕ್ಷರು ಮತ್ತು ಕೆಲ ಸದಸ್ಯರ ಸರ್ವಾಧಿಕಾರಿ ಧೋರಣೆ ಆರೋಪಕ್ಕೆ ಸಂಬಂಧಿಸಿದಂತೆ, ಆರೋಪಕ್ಕೆ ಒಳಗಾಗಿದ್ದ ಅಧ್ಯಕ್ಷ ದೇವೇಂದ್ರಪ್ಪ ಸೊರಟೂರ ಅವರು ಬೆಂಬಲಿಗ 6 ಜನ ಸದಸ್ಯರೊಡನೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲೆ ಬಂದಿದ್ದ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದು ಆರೋಪ ಮಾಡಿರುವ ಸದಸ್ಯರ ಒಪ್ಪಿಗೆಯಿಂದಲೇ ಎಲ್ಲವೂ ನಡೆದಿದೆ ಎಂದು ದಾಖಲೆ ಸಮೇತ ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ಅಧ್ಯಕ್ಷರ ಆಯ್ಕೆಯಲ್ಲಿ ಅಸಮಾಧಾನ ಗೊಂಡಿರುವ ಸದಸ್ಯರು ಹಾಗೂ ಅದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೋಟೆಪ್ಪ ಕಮ್ಮಾರ ಅವರು...
ಮಂಟಗಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ..!
ಸವಣೂರು: ತಾಲೂಕಿನ ಮಂಟಗಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಇಂದು “ಆರೋಗ್ಯ ತಪಾಸಣೆ ಶಿಬಿರ” ಏರ್ಪಡಿಸಲಾಗಿತ್ತು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು, ಗುರುಮಾತೆಯರು, ಆರೋಗ್ಯ ವೈದ್ಯಾಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು, ಹಾಗೂ ಗ್ರಾಮದ ಮುಖಂಡರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಮುಖ್ಯ ಶಿಕ್ಷಕರು, ಪ್ರಾಸ್ತಾವಿಕ ನುಡಿಗಳನ್ನು ಆಡಿ, ಈಗಿನ ಮಕ್ಕಳಿಗೆ ಆರೋಗ್ಯ ಚೆನ್ನಾಗಿದ್ದರೆ ಮುಂದೆ ಸದೃಢ ದೇಹ ಹಾಗೂ ದೇಶ ಕಟ್ಟಬಹುದು ಎಂಬುದನ್ನು ಮಾರ್ಮಿಕವಾಗಿ ನುಡಿದರು. ವೈದ್ಯಾಧಿಕಾರಿಗಳು ಮಕ್ಕಳನ್ನು ತಪಾಸಣೆ ಮಾಡಿ...
ಶಿಗ್ಗಾವಿ:ಐತಿಹಾಸಿಕ ನಾಗನೂರು ಕೆರೆಯ ಸುತ್ತಮುತ್ತ ಪುರಸಭೆ ಅಧ್ಯಕ್ಷರು, ಸದಸ್ಯರಿಂದ ಸ್ವಚ್ಚತಾ ಕಾರ್ಯ..!
ಶಿಗ್ಗಾವಿ : ಪಟ್ಟಣದ ಐತಿಹಾಸಿಕ ನಾಗನೂರ ಕೆರೆಯ ಸುತ್ತಮುತ್ತಲೂ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಹಾಗೂ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮತ್ತು ಸಿಬ್ಬಂದಿ ಸೇರಿದಂತೆ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯ ಕೈಗೊಂಡರು. ನಾಗನೂರ ಕೆರೆಯ ಸ್ವಚ್ಚತಾ ಕಾರ್ಯದಲ್ಲಿ ತೊಡಗಿ ಮಾತನಾಡಿದ ಪುರಸಭೆ ಅದ್ಯಕ್ಷ ಮತ್ತು ಉಪಾಧ್ಯಕ್ಷರು, ಕೆರೆಯ ದಂಡೆಯಲ್ಲಿ ಗಣೇಶನ ದೇವಸ್ಥಾನವಿದೆ ಈ ಪ್ರದೇಶವು ಪುರಸಭೆಯವರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಸಾರ್ವಜನಿಕರ ಜವಾಬ್ದಾರಿ ಸಹ ಅದನ್ನು ಮನಗಂಡು ತಾವು ಕೂಡ ಯಾರೇ ಕಲುಷಿತ ಮಾಡಿದರೂ ಸಹಿತ ನೋಡಿ ಸುಮ್ಮನೇ...
ಕಬನೂರು ಗ್ರಾಪಂ ನಲ್ಲಿ ಏನಿದು ವಾಸನೆ..? ಸದಸ್ಯರೇ ಮಾಡಿರೋ ಆರೋಪಗಳು ಸತ್ಯವಾ..?
ಶಿಗ್ಗಾವಿ : ತಾಲೂಕಿನ ಕಬನೂರ ಪಂಚಾಯತಿಯ ನೂತನ ಅದ್ಯಕ್ಷರು ಮತ್ತು ಪಿಡಿಓ ಸೇರಿದಂತೆ ಕೆಲ ಸದಸ್ಯರ ಸರ್ವಾಧಿಕಾರಿ ಧೋರಣೆ ವಿರುದ್ದ ಪಂಚಾಯತಿಯ ಕೆಲ ಸದಸ್ಯರುಗಳು ಸಿಡಿದೆದ್ದಿದ್ದಾರೆ. ಯಾರವರು..? ಗ್ರಾಮ ಪಂಚಾಯತಿ ಸದಸ್ಯರಾದ ಕೋಟೆಪ್ಪ ಕಮ್ಮಾರ್, ಅನ್ನಪೂರ್ಣ ಓಲೇಕಾರ, ಹಲೀಮಾ ಕಾಳಂಗಿ ಅವರುಗಳು ತಮ್ಮದೇ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಓರವರ ಮೇಲೆ ಆರೋಪ ಮಾಡ್ತಿದಾರೆ. ಹೌದು, ಶಿಗ್ಗಾವಿ ಪಟ್ಟಣದ ಪತ್ರಕರ್ತರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಗಳ ಸುರಿಮಳೆ ಗೈದಿದಾರೆ. ಏನದು ಆರೋಪ..? 15 ನೇ ಹಣಕಾಸಿನ ಯೋಜನೆಯಲ್ಲಿ...
ಶಿಗ್ಗಾವಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 40 ಕ್ವಿಂಟಾಲ್ ಅಕ್ಕಿ ವಶ..!
ಶಿಗ್ಗಾವಿ: ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 40 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾದ ಘಟನೆ ಶಿಗ್ಗಾವಿ ಪಟ್ಟಣದಲ್ಲಿ ನಡದಿದೆ. ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವ ಗೋಡಾನ್ ಮೇಲೆಯೇ ದಾಳಿ ನಡೆಸಿರೋ ಪೊಲೀಸರು, 86 ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ತುಂಬಿಡಲಾಗಿದ್ದ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಹನುಮಂತಪ್ಪ ಬಡ್ನಿ ಎಂಬುವವರಿಗೆ ಸೇರಿದ ಮನೆಯಲ್ಲಿ, 40 ಕ್ವಿಂಟಲ್ 95 ಕೇಜಿ ಅಕ್ಕಿ ದೊರೆತಿದೆ. ಖಚಿತ ಮಾಹಿತಿ ಮೇರೆಗೆ ಶಿಗ್ಗಾವಿ ಪೊಲೀಸರು ದಾಳಿ ಮಾಡಿದ್ದು, ಅಕ್ಕಿ ಸೇರಿದಂತೆ ಒಂದು ಟಾಟಾ ಎಸ್ ವಾಹನ ವಶಕ್ಕೆ...
ಲಾರಿಗೆ ಕ್ಯಾಂಟರ್ ಡಿಕ್ಕಿ: ಲಾರಿಯಡಿ ಕಾಲು ಸಿಲುಕಿ ನರಳಾಡಿದ ಚಾಲಕನ ಸ್ಥಿತಿ ಕರುಣಾಜನಕ..!
ಹಾವೇರಿ: ನಗರದ ಹೊರವಲಯದಲ್ಲೊಂದು ಮನಕಲಕುವ ಘಟನೆ ನಡೆದಿದೆ. ಅಪಘಾತವಾದ ಲಾರಿಯಲ್ಲಿ ಚಾಲಕ ಸಿಲುಕಿಕೊಂಡು ಒಂ ದು ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾನೆ. ಹೌದು,ಹಾವೇರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಪೆಟ್ರೋಲ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಟ್ಯಾಂಕರ್ ಡಿಕ್ಕಿಯಾಗಿದೆ. ಪರಿಣಾಮ ಚಾಲಕನ ಎಡಗಾಲು ಸಂಪೂರ್ಣ ನುಜ್ಜು ಗುಜ್ಜಾಗಿದ್ದ ಲಾರಿಯಡಿಯೇ ಸಿಲುಕಿಕೊಂಡಿದೆ. ಹೀಗಾಗಿ ಚಾಲಕ ನೋವಿನಿಂದ ಚೀರಾಡಿದ್ದಾನೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾನೆ. ಈ ವೇಳೆ ಹಾವೇರಿ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ...
ಇದೇ ತಿಂಗಳು ಮದುವೆಯಿತ್ತು..! ಆದ್ರೆ ಮದುಮಗ ಮಾತ್ರ ಇವತ್ತು ರೈಲಿಗೆ ತಲೆ ಕೊಟ್ಟು ಬಿಟ್ಟ..! ಯಾಕೆ ಹೀಗಾಯ್ತು..?
ಹಾವೇರಿ: ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗಬೇಕಿದ್ದ ಯುವಕ ರೈಲು ಹಳಿಗೆ ಬಿದ್ದು ಸಾವು ಕಂಡ ಘಟನೆ ಹಾವೇರಿ ನಗರದ ಹೊರವಲಯದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಹಾವೇರಿ ಬಸವೇಶ್ವರ ನಗರದ ನಿವಾಸಿ, ವೀರೇಶ್ ಬೆನಕಪ್ಪನವರ (36), ಮೃತ ಯುವಕನಾಗಿದ್ದು ಇತ್ತೀಚೆಗಷ್ಟೇ ಮದುವೆ ನಿಶ್ಚಿತಾರ್ಥವಾಗಿತ್ತು. ಈ ತಿಂಗಳು 28 ರಂದು ಹಾವೇರಿಯಲ್ಲಿ ಮದವೆ ಕೂಡ ನಿಶ್ಚಯವಾಗಿತ್ತು. ಆದ್ರೆ ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಶಂಕೆ ವ್ಯಕ್ತವಾಗಿದೆ. ಇನ್ನು ಸ್ಥಳಕ್ಕೆ ರೈಲ್ವೆ ಪೋಲಿಸರು ಭೇಟಿ...
ಉದಾಸಿ ಅಂತಿಮ ದರ್ಶನದ ವೇಳೆ ಮೊಬೈಲ್ ಕಳ್ಳರ ಕೈಚಳಕ: ಸಿಕ್ಕಿಬಿದ್ದು ಒದೆ ತಿಂದ ಯುವಕ.!
ಹಾನಗಲ್: ಬಿಜೆಪಿ ಹಿರಿಯ ಶಾಸಕ ಸಿ.ಎಂ. ಉದಾಸಿ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ. ಈ ವೇಳೆ ಜೇಬುಗಳ್ಳರು ಕೈ ಚಳಕ ತೋರಿದ್ದಾರೆ. ಎಷ್ಟೊ ಜನರ ಮೊಬೈಲ್ ಎಗರಿಸಿದ್ದಾರೆ. ಇನ್ನು ಹೀಗೆ ಜೇಬಿಗೆ ಕತ್ತರಿ ಹಾಕುತ್ತಿರುವಾಗಲೇ, ರೆಡ್ ಹ್ಯಾಂಡ್ ಆಗಿ ಓರ್ವ ಖತರ್ನಾಕ ಜೇಬುಗಳ್ಳ ತಗಲಾಕ್ಕೊಂಡಿದ್ದ. ಜೇಬು ಕತ್ತರಿಸುವಾಗಲೆ ಕಳ್ಳನನ್ನು ಹಿಡಿದು ಸಾರ್ವಜನಿಕರು ಛಳಿ ಬಿಡಿಸಿದ್ದಾರೆ. ನಂತರ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಹಾನಗಲ್ ಪೊಲೀಸ್ರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಜನಸಂದಣಿಯಲ್ಲಿ ಜೇಬಿಗೆ ಕತ್ತರಿ ಹಾಕಿಸಿಕೊಂಡವರ ಗೋಳು...
ಸಿ.ಎಂ.ಉದಾಸಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅಪಾರ ಅಭಿಮಾನಿಗಳು..!
ಹಾನಗಲ್: ಮಾಜಿ ಸಚಿವ, ಬಿಜೆಪಿ ಹಿರಿಯವಹಾಲಿ ಶಾಸಕ ಸಿ.ಎಂ.ಉದಾಸಿ ನಿಧನರಾದ ಹಿನ್ನೆಲೆ ಅವ್ರ ಪಾರ್ಥೀವ ಶರೀರದ ದರ್ಶನಕ್ಕೆ ಅಪಾರ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹಾನಗಲ್ ಕುಮಾರೇಶ್ವರ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಅಪಾರ ಅಭಿಮಾನಿಗಳು ತನ್ನ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಹೂಮಾಲೆ ಹಿಡಿದು ಸಾಲು ಸಾಲಾಗಿ ಬರುತ್ತಿರೋ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಇನ್ನು ಸಿ.ಎಂ.ಉದಾಸಿ ಪುತ್ರ ಸಂಸದ ಶಿವಕುಮಾರ್ ಉದಾಸಿ, ತಂದೆಯ ಪಾರ್ಥೀವ ಶರೀರದ ಪಕ್ಕದಲ್ಲೇ ನಿಂತು ಕಂಬನಿ ಮಿಡಿಯುತ್ತಿದ್ದಾರೆ.