ಮುಂಡಗೋಡ: ಬಂಜಾರಾ ಸಮುದಾಯದ ಪವಿತ್ರ ಕ್ಷೇತ್ರ ಸಂತ ಶ್ರೀ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪದ ಬಾಯಾಗಢನಲ್ಲಿ RSS ನವರು ನಡೆಸುತ್ತಿರೋ ಶಿಬಿರಕ್ಕೆ ಬಂಜಾರಾ ಸಮುದಾಯದ ಕೆಲವು ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ, ಹೀಗೆ RSS ನ ಶಿಬಿರವನ್ನು ವಿರೋಧಿಸುವುದು ಸರಿಯಲ್ಲ, ಶಿಬಿರ ನಡೆಯುವಂತಾಗಲಿ ಅಂತಾ ಮುಂಡಗೋಡಿನ ಬಂಜಾರಾ ಮುಖಂಡ, ಪಟ್ಟಣ ಪಂಚಾಯತಿ ಸದಸ್ಯ ಶೇಖರ್ ಲಮಾಣಿ ಆಗ್ರಹಿಸಿದ್ದಾರೆ. RSS ಬಗ್ಗೆ ಅರಿವಿದೆ..! ನಮಗೆ RSS ಬಗ್ಗೆ ಅರಿವಿದೆ. ದೇಶಭಕ್ತಿಯನ್ನು ಜಾಗ್ರತಗೊಳಿಸಿ, ಯುವಕರನ್ನು ದೇಶಭಕ್ತಿಯೆಡೆಗೆ ಸಂಘಟಿಸುವುದೇ RSS ಆಗಿದೆ....
Top Stories
PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?
ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
Category: ದೈವ ದರ್ಶನ..
ದುಂಢಸಿ, ಅ.ಮ. ಕೊಪ್ಪದಿಂದ ಹೊಂಬುಜ ಕ್ಷೇತ್ರಕ್ಕೆ ಪಾದಯಾತ್ರೆ, ಅರಟಾಳದಲ್ಲಿ ಮುನಿಶ್ರೀ ಚಾಲನೆ..!
ಶಿಗ್ಗಾವಿ: ತಾಲೂಕಿನ ಅ. ಮ.ಕೊಪ್ಪ ಹಾಗೂ ದುಂಡಶಿ ಗ್ರಾಮದ ಜೈನ ಶ್ರಾವಕರು ಶ್ರೀ ಕ್ಷೇತ್ರ ಹೊಂಬುಜ ಪದ್ಮಾವತಿದೇವಿಯ ದರ್ಶನಕ್ಕಾಗಿ ಪಾದಯಾತ್ರೆ ಹೊರಟಿದ್ದಾರೆ. ನೂರಾರು ಶ್ರಾವಕರ ತಂಡ ಇಂದಿನಿಂದ ಪಾದಯಾತ್ರೆ ಪ್ರಾರಂಭಿಸಿದೆ. ಜೈನರ ಅತಿಶಯ ಕ್ಷೇತ್ರ ಅರಟಾಳದಲ್ಲಿ ಮುನಿಶ್ರೀ ಪುಣ್ಯಸಾಗರ ಮಹಾರಾಜರು ಹಾಗೂ ಬಾ.ಬ್ರ. ಸೋಮದೇವ ಬೈಯಾಜಿಯವವರ ನೇತೃತ್ವದಲ್ಲಿ ಹೊಂಬುಜ ಪಾದಯಾತ್ರೆಗೆ ಚಾಲನೆ ನೀಡಿದ್ರು. ಈ ವೇಳೆ ರವಿ ಪಾಸರ, ಪ್ರಕಾಶ್ ಧರಣೆಪ್ಪನವರ್, ಸುನೀಲ್ ಆರೆಗೊಪ್ಪ, ಸುಧೀರ್ ಛಬ್ಬಿ, ಮಹಾವೀರ ಧಾರವಾಡ, ಪ್ರಶಾಂತ ಬಿಶೆಟ್ಟಿ, ಪಾಯಪ್ಪ ಬ್ಯಾಹಟ್ಟಿ...
ಶಿರಸಿ ಮಾರಿಕಾಂಬೆ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ..!
ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ನಟ ಶಿವರಾಜ್ ಕುಮಾರ್ ಇಂದು ದಂಪತಿ ಸಮೇತ ಭೇಟಿ ನೀಡಿದ್ರು.ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲೊಂದಾದ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ರು. ಪತ್ನಿ ಗೀತಾ ಶಿವರಾಜ್ ಕುಮಾರ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ಶಿವರಾಜ್ ಕುಮಾರ್, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆಯೇ ಶಿರಸಿಗೆ ಆಗಮಿಸಿದ್ದಾರೆ. ಇಂದು ಶುಕ್ರವಾರದ ಹಿನ್ನೆಲೆಯಲ್ಲಿ ಮಾರಿಕಾಂಬೆಗೆ ಸೇವೆ ಸಲ್ಲಿಸಿದ್ದಾರೆ.
ಅಸ್ಪಷ್ಟವಾಯ್ತು ಅಗಡಿ ಮೈಲಾರಲಿಂಗ ಕಾರಣೀಕ..! ಅಷ್ಟಕ್ಕೂ ಏನದು..?
ಮುಂಡಗೋಡ: ತಾಲೂಕಿನ ಅಗಡಿ ಶ್ರೀ ಮೈಲಾರಲಿಂಗ ಸ್ವಾಮಿಯ ಎಂಟನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಕಾರಣೀಕ ಉತ್ಸವ ನಡೆಯಿತು. ಆದ್ರೆ ಈ ವರ್ಷದ ಕಾರಣೀಕ ಅಸ್ಪಷ್ಟವಾಗಿ ಕೇಳಿತು. ಕಾರಣೀಕದ ನುಡಿಗಳು ಯಾರಿಗೂ ಸ್ಪಷ್ಟವಾಗಿ ಕೇಳಲೇ ಇಲ್ಲದಿರುವುದು ಭಕ್ತರಿಗೆ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ತಂಪಾಯಿತಲೇ ಪರಾಕ್..? “ರಾಜ್ಯ ತಂಪಾಯಿತಲೇ ಪರಾಕ್” ಇದು ಅಗಡಿಯಲ್ಲಿ ಇಂದು ಅಸ್ಪಷ್ಟವಾಗಿ ಕೇಳಿ ಬಂದ ಕಾರಣೀಕ ನುಡಿ. ಒಂದುವೇಳೆ ಇದೇ ಮೈಲಾರಲಿಂಗ ಸ್ವಾಮಿಯ ಕಾರಣೀಕವಾಗಿದ್ದರೆ, ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ, ಅಲ್ಲದೆ, ರಾಜ್ಯದಲ್ಲಿ ಶಾಂತಿ...
“ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಚೌಡಳ್ಳಿ ಮೈಲಾರಲಿಂಗನ ಕಾರಣೀಕ..!
ಮುಂಡಗೋಡ: ತಾಲೂಕಿನ ಚೌಡಳ್ಳಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಮೈಲಾರಲಿಂಗೇಶ್ವರ ಕಾರಣೀಕ ನುಡಿ ಹೊರಬಿದ್ದಿದೆ. ವೃತಾಧಾರಿ ಜಗಧೀಶ್ ಮಡ್ಲಿ ಬಿಲ್ಲನ್ನೇರಿ, ಆಕಾಶದತ್ತ ಶೂನ್ಯ ದೃಷ್ಟಿಸುತ್ತ ಮತ್ತೆ ಕಾರಣೀಕ ನುಡಿದಿದ್ದಾರೆ. ತಾತ್ಪರ್ಯವೇನು..? “ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಪ್ರಸಕ್ತ ವರ್ಷದ ಚೌಡಳ್ಳಿ ಮೈಲಾರಲಿಂಗನ ಕಾರಣೀಕವಿದು. ಅಂದಹಾಗೆ, ಪ್ರಸಕ್ತ ವರ್ಷದ ಕಾರಣೀಕದ ತಾತ್ಪರ್ಯ ಬಹುತೇಕ ರೈತರ ಕೃಷಿಗೆ ಸಂಬಂಧಿಸಿದಂತೆ ಹೊರಬಿದ್ದಿದೆ. ಮಳೆ, ಬೆಳೆಯ ಭವಿಷ್ಯ ನುಡಿಯಲಾಗಿದೆ. ಕಾರಣೀಕ ನುಡಿಯ...
ಮುಂಡಗೋಡ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕೋತ್ಸವ, ವರ್ಧಂತಿ ಉತ್ಸವ..!
ಮುಂಡಗೋಡ: ಪಟ್ಟಣದ ಇಂದಿರಾನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಇಂದು ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಹಾಗೂ 18 ನೇ ವರ್ಧಂತಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ.. ಇಂದು ಬೆಳಗಿನಿಂದಲೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಹೋಮ ಹವನಗಳು ನಡಯುತ್ತಿವೆ. ಸಂಜೆ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಲಿದೆ.. ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ದೇವಸ್ಥಾನದಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಇಂದಿನಿಂದ ದೇವಿ ದರ್ಶನಕ್ಕೆ ಅವಕಾಶ..!
ಬೆಳಗಾವಿ: ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಇಂದಿನಿಂದ ಸಂಭ್ರಮ ಮತ್ತೆ ಶುರುವಾಗುತ್ತಿದೆ. ಬರೋಬ್ಬರಿ, ಒಂದೂವರೆ ವರ್ಷದ ನಂತರ ಭಕ್ತರ ದರ್ಶನಕ್ಕೆ ಯಲ್ಲಮ್ಮ ದೇವಸ್ಥಾನ ತೆರದುಕೊಳ್ಳುತ್ತಿದೆ. ಇಂದು ಮಂಗಳವಾರ ಬೆಳಿಗ್ಗೆ 6.30ಕ್ಕೆ ಶಾಸ್ತ್ರೋಕ್ತವಾಗಿ ದೇವಸ್ಥಾನ ಓಪನ್ ಮಾಡಿದ ಆಡಳಿತ ಮಂಡಳಿ, ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಭಕ್ತರ ಸ್ವಾಗತಕ್ಕೆ ದೇವಸ್ಥಾನ ಆವರಣದಲ್ಲಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ. ಇಷ್ಟು ದಿನ, ಭಕ್ತರಿಲ್ಲದೇ ಭಣಗುಡುತ್ತಿದ್ದ ಏಳುಕೊಳ್ಳದಲ್ಲಿ ಭಕ್ತರ ಸಂಭ್ರಮ ಇಂದಿನಿಂದ ಕಳೆ ಕಟ್ಟಲಿದೆ. ಇನ್ನು, ಮಹಾರಾಷ್ಟ್ರ- ಕರ್ನಾಟಕ ಸೇರಿ ಹಲವು...
ಹುನಗುಂದ ವಿಠ್ಠಲ ರುಕ್ಮಾಯಿ ಮಂದಿರದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ..!
ಮುಂಡಗೋಡ:ತಾಲೂಕಿನ ಹುನಗುಂದ ಗ್ರಾಮದ ವಿಠಲ ರುಕ್ಮಿಣಿ ಹರಿಮಂದಿರದಲ್ಲಿ ರವಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 29-8-2021 ರಂದು ರವಿವಾರ ದಿವಸ ಬೆಳಿಗ್ಗೆ 10-00 ಘಂಟೆಗೆ ವಿಠ್ಹಲ ರುಕ್ಮಿಣಿ ಹರಿ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಕೃಷ್ಣನನ್ನು ತೊಟ್ಟಿಲು ಹಾಕುವ ಕಾರ್ಯಕ್ರಮ ಇರುತ್ತದೆ. ಮಧ್ಯಾನ ಪ್ರಸಾಧ ವ್ಯವಸ್ಥೆ ಇರುವದರಿಂದ ಎಲ್ಲಾ ಭಕ್ತಾದಿಗಳು ಭಾಗವಹಿಸಬೇಕೆಂದು ಪಾಂಡುರಂಗ ಸೇವಾ ಸಮಿತಿಯವರು ಮನವಿ ಮಾಡಿದ್ದಾರೆ.
ನ್ಯಾಸರ್ಗಿ ಗ್ರಾಮದೇವಿಗೆ 108 ದಿನದ ಉಡಿತುಂಬುವ ಕಾರ್ಯಕ್ರಮ..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಗ್ರಾಮದ ಗ್ರಾಮದೇವಿ ದ್ಯಾಮವ್ವ ತಾಯಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. 108 ದಿನದ ಉಡಿತುಂಬುವ ಕಾರ್ಯಕ್ರಮವನ್ನು ಗ್ರಾಮಸ್ಥರು ಶೃದ್ದಾಪೂರ್ವಕವಾಗಿ ನೆರವೇರಿಸಿದ್ರು. ಈ ವೇಳೆ ದ್ಯಾಮವ್ವ ತಾಯಿಗೆ ಸಾಂಪ್ರದಾಯಿಕವಾಗಿ ಉಡಿ ತುಂಬಲಾಯಿತು. ವಿಶೇಷವಾಗಿ ಪೂಜೆ ನೆರವೇರಿಸಿ ಪ್ರಸಾದ ಹಂಚಲಾಯಿತು. ಈ ವೇಳೆ ಗ್ರಾಮದ ಮುಖಂಡರು, ಮುತ್ತೈದೆಯರು ಸೇರಿದಂತೆ ಹಲವರು ಭಾಗಿಯಾಗಿದ್ರು.
ಈ ಊರಲ್ಲಿ ಮೊಹರಂ ದೇವರಿಗೆ ಹನುಮಪ್ಪನ ಹೂವಿನ ಪ್ರಸಾಧ ಬೇಕೇ ಬೇಕು..!
ಕೊಪ್ಪಳ: ಆ ಒಂದು ಗ್ರಾಮದ ಮೊಹರಂ ಹಬ್ಬಕ್ಕೆ ಇಡೀ ರಾಜ್ಯದ ಕೆಲ ಜಿಲ್ಲೆಗಳು ಸಾಕ್ಷಿಯಾಗುತ್ತವೆ. ಆ ಒಂದು ದೃಶ್ಯವನ್ನು ಕಣ್ಣತುಂಬಿಕೊಳ್ಳಲು ಗ್ರಾಮದ ಜನರು ಕಾತುರದಿಂದ ಕಾಯುತ್ತಾರೆ. ಆ ಗ್ರಾಮದ ಹನುಮಪ್ಪ ಹೂವು ಕೊಟ್ಟರೆ ಪೀರ್ ದೇವರು ಹೊತ್ತ ದೈವಭಕ್ತ ದರ್ಶನ ಪಡೆದು ಮುಂದೆ ಸಾಗುತ್ತಾರೆ. ನಂತರವೇ ಮೊಹರಂ ಹಬ್ಬ ಆಚರಿಸಲಾಗುತ್ತದೆ. ಹೌದು, ಹೀಗೆ ಪೀರ್ ದೇವರು ಹೊತ್ತ ಮುಸ್ಲಿಂ ದೈವ ಭಕ್ತನಿಗೆ, ಹೂವು ಕೊಟ್ಟು ಆಶೀರ್ವಾದ ಮಾಡುತ್ತಿರುವ ಹನುಮಪ್ಪ ದೇವರು. ದೇವಸ್ಥಾನದೊಳಗೆ ಬಂದು ಭಕ್ತಿಪೂರಕವಾಗಿ ಹನುಮನ ದರ್ಶನ...