ಮುಂಡಗೋಡ: ಪಟ್ಟಣದಲ್ಲಿ ಹೊಟೇಲ್ ನಡೆಸುತ್ತಿದ್ದ ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ (68) ದೈವಾಧೀನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗಿನ ಜಾವ ಕೊನೆ ಉಸಿರೆಳೆದಿದ್ದಾರೆ. ಮೃತರು ಪತ್ನಿ, 7 ಜನ ಗಂಡು ಮಕ್ಕಳು, ಅಣ್ಣ ತಮ್ಮಂದಿರು, ಸಹೋದರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Top Stories
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರ ಕಾರ್ಣಿಕ..! ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ..!
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!
ತಟ್ಟಿಹಳ್ಳಿ ಶಿವಾನಂದನ ಹತ್ಯೆ ಯತ್ನ ಕೇಸ್, ಆರೋಪಿಯ ಹೆಡೆಮುರಿ ಕಟ್ಟಿದ ಮುಂಡಗೋಡಿನ ಚಾಣಾಕ್ಷ ಪೊಲೀಸ್ರು..!
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!
ವಿ.ಎಸ್.ಪಾಟೀಲರ “ಬಂದೂಕು” ನಾಪತ್ತೆ, ಹುಡಿಕಿಕೊಡುವಂತೆ ಮುಂಡಗೋಡ ಠಾಣೆಯಲ್ಲಿ ದೂರು..!
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ
ಹೊನ್ನಾವರದಲ್ಲಿ ಭೀಕರ ಅಗ್ನಿ ದುರಂತ, ಸುಟ್ಟು ಕರಕಲಾದ ಕಾರು, ಕಾರಲ್ಲಿದ್ದ ಇಬ್ಬರು ಸಜೀವ ದಹನ..!
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..!
ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಮುಂಡಗೋಡ ತಾಲೂಕಿನ ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಅಹ್ವಾನ..!
ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!
ಪ.ಜಾತಿ, ಪಂಗಡ ಯೋಜನೆಗಳಲ್ಲಿ 100% ಗುರಿ ಸಾಧಿಸಲು ಅಧಿಕಾರಿಗಳಿಗೆ ಡೀಸಿ ಕಟ್ಟುನಿಟ್ಟಿನ ಸೂಚನೆ..!
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
Category: ಉತ್ತರ ಕನ್ನಡ
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ..! ಸಲೈನ್ ಹಚ್ಚಿಕೊಂಡೇ ಪ್ರಚಾರಕ್ಕಿಳಿದಿರೋ ಕೈ ಅಭ್ಯರ್ಥಿ..!!
ಕುಮಟಾ: ಕಳೆದ ಒಂದು ತಿಂಗಳಿನಿಂದಲೂ ನಿರಂತರವಾಗಿ ಪ್ರಚಾರದಲ್ಲಿರುವ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಅನಾರೋಗ್ಯದ ನಡುವೆಯೂ ಪ್ರಚಾರ ಮುಂದುವರಿಸಿ ಕಾರ್ಯಕರ್ತರ ಹುರುಪು ಹೆಚ್ಚಿಸಿದ್ದಾರೆ. ಕಾಂಗ್ರೆಸ್‌ನಿಂದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದ ಡಾ.ಅಂಜಲಿ ನಿಂಬಾಳ್ಕರ್, ಈಗಾಗಲೇ ಬ್ಲಾಕ್ ಮಟ್ಟದ ಸಭೆಗಳನ್ನ ಪೂರ್ಣಗೊಳಿಸಿ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನ ನಡೆಸುತ್ತಿದ್ದಾರೆ. ಸತತವಾಗಿ ವಿರಾಮವಿಲ್ಲದೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅವರಿಗೆ ಕೊಂಚ ಆರೋಗ್ಯದಲ್ಲಿ ಏರುಪೇರಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ವೈದ್ಯಕೀಯ ತಪಾಸಣೆಗೆ ಒಳಗಾಗಿ...
ಪಾಳಾ ಸಮೀಪದ ಕಲಕೊಪ್ಪದಲ್ಲಿ ಭಾರೀ ಅನಾಹುತ, ಸಿಡಿಲು ಬಡಿದು 5 ಹಸುಗಳು ದಾರುಣ ಸಾವು..!
ಮುಂಡಗೋಡ ತಾಲೂಕಿನ ಪಾಳಾ ಸಮೀಪದ ಕಲಕೊಪ್ಪದಲ್ಲಿ ಭಾರೀ ಅನಾಹುತ ಸಂಭವಿಸಿದೆ. ಮೊದಲ ದಿನದ ಮಳೆಯಲ್ಲೇ ಐದು ಹಸುಗಳು ದಾರುಣ ಸಾವು ಕಂಡಿವೆ. ಸಿಡಿಲು ಬಡಿದು ಗದ್ದೆಯಲ್ಲಿದ್ದ 5 ಹಸುಗಳು ಮೃತಪಟ್ಟಿವೆ. ಪಾಳಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಕೊಪ್ಪ ಗ್ರಾಮದ ಪಕ್ಕೀರ ಗೌಡ ಕಡಬಗೇರಿ ಎಂಬುವವರ ಐದು ಹಸುಗಳು ಗದ್ದೆಯಲ್ಲಿ ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿವೆ. ಇಂದು ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಲ್ಲಿ ಸಿಡಿಲ ಅರ್ಭಟದಿಂದ ಅನಾಹುತ ಸಂಭವಿಸಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ “ಕೈ”ಪಡೆಯಲ್ಲಿ ಬದಲಾವಣೆ ಬಿರುಗಾಳಿ, ಹೆಬ್ಬಾರ್ “ಬೆಂ”ಬಲದ ಅಲೆಯಲ್ಲಿ ಕೊಚ್ಚಿ ಹೋಗುವವರೇಷ್ಟು..?
ಮುಂಡಗೋಡ: ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಪಡೆ ಸದ್ಯ ಬಿಜೆಪಿಯಿಂದ ಕಾಂಗ್ರೆಸ್ ಕಡೆ ಜಂಪ್ ಮಾಡಿದೆ. ಹೀಗಾಗಿ, ವಿಧಾನಸಭೆ ಚುನಾವಣೆ ಬಳಿಕ ಬಹುತೇಕ ಕೊಸರಾಟದಲ್ಲೇ ತೊಡಗಿದ್ದ ಮುಂಡಗೋಡ ಕಾಂಗ್ರೆಸ್ ಗೆ ಹೆಬ್ಬಾರ್ ಪಡೆಯ ಆಗಮನ ಆನೆ ಬಲ ತಂದಿದ್ದು, ಒಳಗೊಳಗಿನ ಅಸಮಾಧಾನ, ಕಚ್ಚಾಟಗಳಿಗೆ “ಪವರ್ ಬ್ರೇಕ್” ಬೀಳೋ ಸಾಧ್ಯತೆ ಇದೆ. ಹೀಗಾಗಿ, ಸೋತ ಮನೆಯಲ್ಲಿ ನಾ ಹೆಚ್ಚು ನೀ ಹೆಚ್ಚು ಅಂತಾ ಕತ್ತಿ ಮಸೆಯುತ್ತಿದ್ದ “ಐರನ್ನು” ಮುಖಂಡರುಗಳಿಗೆ ಈಗ ತಮ್ಮ ಸ್ಥಾನಮಾನಗಳದ್ದೇ ಚಿಂತೆ...
ಕೊಪ್ಪ ಕೆರೆಯ ಬಳಿ ಬೆಳ್ಳಂ ಬೆಳಿಗ್ಗೆ ಬೈಕ್ ಅಫಘಾತ, ಮೂವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ ತಾಲೂಕಿನ ಕೊಪ್ಪದ ಕೆರೆ ಬಳಿ ಬೆಳ್ಳಂ ಬೆಳಿಗ್ಗೆ ಬೈಕ್ ಅಪಘಾತವಾಗಿದೆ. ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿದೆ. ರಸ್ತೆ ಬದಿಯ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಅಪಘಾತವಾಗಿದೆ. ಕೊಪ್ಪ ಇಂದಿರಾನಗರದ ಲಕ್ಷ್ಮಣ ರಾಮಣ್ಣ ಬೋವಿವಡ್ಡರ (36), ಬಸವರಾಜ್ ಹನ್ಮಂತಪ್ಪ ಕುಂಕೂರ್ (36), ಮುಂಡಗೋಡಿನ ಸಾದಿಕ್ ಜಲಾಲ್ ಸಾಬ್ ಹುಬ್ಬಳ್ಳಿ(36) ಗಂಭೀರ ಗಾಯಗೊಂಡಿದ್ದಾರೆ. ಅಪಘಾತವಾದ ತಕ್ಷಣವೇ ಗ್ರಾಮಸ್ಥರು ಗಾಯಗೊಂಡವರನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೆಬ್ಬಾರ್ ಬೆಂಬಲಿಗರು ಬಿಜೆಪಿ ತೊರೆಯುವ ಮುಹೂರ್ತ ಫಿಕ್ಸ್..! ನಾಳೆ ಗುರುವಾರ ಮದ್ಯಾನ ಕೈ ಸೇರ್ತಾರಂತೆ ಸಾವಿರಾರು ಕಾರ್ಯಕರ್ತರು..!!
ಮುಂಡಗೋಡ: ಕೊನೆಗೂ ಯಲ್ಲಾಪುರ ಮುಂಡಗೋಡ ಕ್ಷೇತ್ರದ ಹೆಬ್ಬಾರ್ ಬಳಗ ಕೈ ಪಡೆಗೆ ಸೇರಲು ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಅಂದ್ರೆ ಗುರುವಾರ ಎಪ್ರಿಲ್ 11 ರಂದು, ಮದ್ಯಾನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರಂತೆ ಸಾವಿರಾರು ಬೆಂಬಲಿಗರು. ಆದ್ರೆ, ಸದ್ಯಕ್ಕೆ ಶಿವರಾಮ್ ಹೆಬ್ಬಾರ್ ಸುಪುತ್ರ ವಿವೇಕ್ ಹೆಬ್ಬಾರ್ ಕೈಗೆ ಸೇರ್ಪಡೆಯಾಗಲ್ಲವಂತೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನ ರಾಜ್ಯ ನಾಯಕರ ಸಮ್ಮುಖದಲ್ಲಿ ವಿವೇಕ್ ಸೇರ್ಪಡೆ ಆಗ್ತಾರಂತೆ. ಪಟ್ಟಣ ಪಂಚಾಯತಿ 6 ಸದಸ್ಯರು “ಕೈ”ಗೆ..!? ಅಂದಹಾಗೆ, ನಾಳೆ ಗುರುವಾರ ಮುಂಡಗೋಡಿನಲ್ಲಿ ನಡೆಯುವ...
ನಂದಿಕಟ್ಟಾದಲ್ಲಿ ನೀರು ಅರಸಿ ನಾಡಿಗೆ ಬಂದ ಜಿಂಕೆಯ ಮೇಲೆ ನಾಯಿಗಳ ದಾಳಿ, ರಕ್ಷಿಸಿದ ಗ್ರಾಮಸ್ಥರು..!
ಮುಂಡಗೋಡ: ತೀವ್ರ ಬರದ ಎಫೇಕ್ಟ್ ಕಾಡು ಪ್ರಾಣಿಗಳಿಗೂ ತಟ್ಟಿದೆ. ಜಿಂಕೆಯೊಂದು ಕುಡಿಯುವ ನೀರು ಅರಸಿ ಕಾಡಿನಿಂದ ನಾಡಿಗೆ ಬಂದು ನಾಯಿಗಳ ದಾಳಿಗೆ ಒಳಗಾಗಿದೆ. ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಜಿಂಕೆ ನಾಯಿಗಳ ದಾಳಿಯಿಂದ ಬಚಾವಾಗಿದ್ದು ರಕ್ಷಣೆಯಾಗಿದೆ. ಅಂದಹಾಗೆ, ನಂದಿಕಟ್ಟಾ ಗ್ರಾಮದ ಅರಣ್ಯದಂಚಿನಿಂದ ಜಿಂಕೆ, ಕುಡಿಯುವ ನೀರು ಅರಸಿಕೊಂಡು ಗ್ರಾಮದ ಹೊರವಲಯಕ್ಕೆ ಬಂದಿತ್ತು. ಈ ವೇಳೆ ನಾಯಿಗಳ ಹಿಂಡು ಜಿಂಕೆಯ ಮೇಲೆ ದಾಳಿ ಮಾಡಿದ್ದವು. ಹೀಗಾಗಿ, ತೀವ್ರವಾಗಿ ಗಾಬರಿಗೊಂಡಿದ್ದ ಜಿಂಕೆಗೆ ನಾಯಿಗಳಿಂದ ರಕ್ಷಣೆ ಮಾಡಿದ ಯುವಕರು, ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ...
ಮುಂಡಗೋಡಿನಲ್ಲಿ ನೆಲಕ್ಕುರುಳಿದ ಬೃಹತ್ ಆಲದ ಮರ, ಅಪಾರ ಹಾನಿ..!
ಮುಂಡಗೋಡ ಪಟ್ಟಣದ ಬಂಕಾಪುರ ರಸ್ತೆಯಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂದೆ ಬೃಹತ್ ಆಲದ ಮರ ಏಕಾಏಕಿ ನೆಲಕ್ಕುರುಳಿದೆ. ಪರಿಣಾಮ ಮರದ ಕೆಳಗಡೆ ನಿರ್ಮಿಸಿಕೊಂಡಿದ್ದ ಗ್ಯಾರೇಜ್ ಹಾಗೂ ವೆಲ್ಡಿಂಗ್ ವರ್ಕ್ ಶಾಪ್ ಗೆ ಹಾನಿಯಾಗಿದೆ. ನಾಲ್ಕೈದು ಬೈಕ್ ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂದಹಾಗೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದುಗಡೆ ಇರೋ ಪುರಾತನ ಆಲದ ಮರ ಮೂರು ಭಾಗಗಳಾಗಿ ನೆಲಕ್ಕುರಿಳಿದ್ದು. ಪ್ರಮೋದ್ ಎಂಬುವವರಿಗೆ ಸೇರಿದ ಗ್ಯಾರೇಜು ಸಂಪೂರ್ಣ ಜಖಂ ಗೊಂಡಿದೆ. ಇದ್ರಿಂದ ಗ್ಯಾರೇಜಿನಲ್ಲಿ ರಿಪೇರಿಗೆಂದು ಬಂದಿದ್ದ ಬೈಕ್...
ಕೇಸ್ ದಾಖಲಾದ ಮೇಲೆ ‘ನಮ್ಮವರಲ್ಲ’ವೆಂದ ಬಿಜೆಪಿ, ಬಿಜೆಪಿ ವಿರುದ್ಧ ಸ್ವಪಕ್ಷಿಗರಿಂದಲೇ ಅಸಮಾಧಾನ
ಕುಮಟಾ: ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ವಿರುದ್ಧ ನಿಂದನಾತ್ಮಕವಾಗಿ ಕಮೆಂಟ್ ಮಾಡಿದವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ‘ಅವರು ನಮ್ಮ ಪಕ್ಷದವರಲ್ಲ’ ಎಂದಿದ್ದ ಬಿಜೆಪಿ ವಿರುದ್ಧ ಇದೀಗ ಸ್ವಪಕ್ಷದವರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತ ಎನ್ನಲಾದ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಎನ್ನುವವರು ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಮರಾಠ ಜಾತಿಗೆ ನಿಂದಿಸಿ ಫೇಸ್‌ಬುಕ್ ನಲ್ಲಿ ಕಾಂಗ್ರೆಸ್ಸಿಗರ ಪೋಸ್ಟ್ ವೊಂದಕ್ಕೆ ಕಮೆಂಟ್ ಮಾಡಿದ್ದರು. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್...
ಮುಂಡಗೋಡಿನಿಂದ ಹಜ್ ಯಾತ್ರೆಗೆ ತೆರಳಿದ್ದ ಮೂವರು ಕಾರ್ ಅಪಘಾತದಲ್ಲಿ ಸಾವು..! ಮತ್ತೆ ಮೂವರಿಗೆ ಗಾಯ..!
ಮುಂಡಗೋಡಿನಿಂದ ಮೆಕ್ಕಾ( ಹಜ್ ಯಾತ್ರೆಗೆ) ತೆರಳಿದ್ದ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡಿನ ರೋಣ್ಸ್ ಮೆಡಿಕಲ್ ಮಾಲೀಕ ಫಯಾಜ್ ಅಹ್ಮದ್ ರೋಣ್, ಅವ್ರ ಧರ್ಮಪತ್ನಿ ಆಫೀನಾ ಬಾನು ಹಾಗೂ ಅಣ್ಣನ ಮಗ ಆಯಾನ್ ರೋಣ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಾಯವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮೆಕ್ಕಾದ ದರ್ಶನ ಮುಗಿಸಿಕೊಂಡು ಕಾರಿನಲ್ಲಿ ಮದಿನಾಕ್ಕೆ ಹೊರಟಿದ್ದ ವೇಳೆ, ಕಾರಿನ ಟೈಯರ್ ಸ್ಪೋಟಗೊಂಡ ಪರಿಣಾಮ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇನ್ನುಳಿದಂತೆ ಹೆಚ್ಚಿನ...









