ಮುಂಡಗೋಡ ತಾಲೂಕಿನ ನ್ಯಾಸರ್ಗಿಯ ಗೌಳಿದಡ್ಡಿ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಮೃತನು ಶಿಗ್ಗಾವಿ ತಾಲೂಕಿನ ಹೊಸುರು ಗ್ರಾಮದವನು ಅಂತಾ ತಿಳಿದು ಬಂದಿದೆ. ಹೊಸೂರಿನ ವೀರಭದ್ರಪ್ಪ ಶೇಖರಯ್ಯ ಹಿರೇಮಠ(48), ಎಂಬುವವರೇ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಈತ ಮುಂಡಗೋಡಿನಿಂದ ನ್ಯಾಸರ್ಗಿ ಮಾರ್ಗವಾಗಿ ಹೊಸೂರಿಗೆ ಬೈಕ್ ಮೂಲಕ ಹೊರಟಿದ್ದ. ಈ ವೇಳೆ ನ್ಯಾಸರ್ಗಿ ಸಮೀಪದ ಗೌಳಿದಡ್ಡಿಯ ರಸ್ತೆ ತಿರುವಿನಲ್ಲಿ ಅಪಘಾತವಾಗಿದೆ ಅನ್ನೊ ಮಾಹಿತಿ ತಿಳಿದುಬಂದಿದೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.
Top Stories
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರ ಕಾರ್ಣಿಕ..! ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ..!
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!
ತಟ್ಟಿಹಳ್ಳಿ ಶಿವಾನಂದನ ಹತ್ಯೆ ಯತ್ನ ಕೇಸ್, ಆರೋಪಿಯ ಹೆಡೆಮುರಿ ಕಟ್ಟಿದ ಮುಂಡಗೋಡಿನ ಚಾಣಾಕ್ಷ ಪೊಲೀಸ್ರು..!
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!
ವಿ.ಎಸ್.ಪಾಟೀಲರ “ಬಂದೂಕು” ನಾಪತ್ತೆ, ಹುಡಿಕಿಕೊಡುವಂತೆ ಮುಂಡಗೋಡ ಠಾಣೆಯಲ್ಲಿ ದೂರು..!
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ
ಹೊನ್ನಾವರದಲ್ಲಿ ಭೀಕರ ಅಗ್ನಿ ದುರಂತ, ಸುಟ್ಟು ಕರಕಲಾದ ಕಾರು, ಕಾರಲ್ಲಿದ್ದ ಇಬ್ಬರು ಸಜೀವ ದಹನ..!
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..!
ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಮುಂಡಗೋಡ ತಾಲೂಕಿನ ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಅಹ್ವಾನ..!
ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!
ಪ.ಜಾತಿ, ಪಂಗಡ ಯೋಜನೆಗಳಲ್ಲಿ 100% ಗುರಿ ಸಾಧಿಸಲು ಅಧಿಕಾರಿಗಳಿಗೆ ಡೀಸಿ ಕಟ್ಟುನಿಟ್ಟಿನ ಸೂಚನೆ..!
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
Category: ಉತ್ತರ ಕನ್ನಡ
ಕೊಪ್ಪದ ಕುಟ್ರಿಯವರ ಹುಡುಗ “ಅಭಿ” ಇನ್ನು ನೆನಪು ಮಾತ್ರ..! ಕ್ರೂರ ವಿಧಿಯೇ ಧಿಕ್ಕಾರವಿರಲಿ
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಅಭಿಷೇಕ ಬಸವಂತಪ್ಪ ಕುಟ್ರಿ ಮೃತಪಟ್ಟಿದ್ದಾನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಷೇಕಙ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಅಂದಹಾಗೆ, ಸದಾ ಹಸನ್ಮಖಿಯಾಗಿದ್ದ ಹುಡುಗ ಅಭಿಷೇಕ ಮುಂಡಗೋಡಿನ ಮಹಾರಾಜಾ ಮೊಬೈಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಕಳೆದ ಎರಡು ಮೂರು ದಿನಗಳಿಂದ ಕೊಂಚ ಜ್ವರದಿಂದ ಬಳಲುತ್ತಿದ್ದ ಅಭಿಷೇಕ ಗೆ ಹುಬ್ಬಳ್ಳಿ ಕೀಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ನಂತ್ರ ಇಂದು ರವಿವಾರ...
ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ನಾಲ್ವರ ಬಂಧನ, ಮೂವರು ಎಸ್ಕೇಪ್..!?
ಮುಂಡಗೋಡ ಪಿಎಸ್ ಐ ಪರಶುರಾಮ್ ಮತ್ತವರ ಟೀಂ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ ಆಟದಲ್ಲಿ “ಬ್ಯುಸಿ” ಆಗಿದ್ದ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೆ ಮೂವರು ಪರಾರಿಯಾಗಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಫಸ್ಟ್ ಗೆ ತಿಳಿದು ಬಂದಿದೆ. ಅಂದಹಾಗೆ, ತಾಲೂಕಿನ ಕಾತೂರು ಸಮೀಪ ಇಸ್ಪೀಟು ಆಟದಲ್ಲಿ ತೊಡಗಿದ್ದರು. ಈ ವೇಳೆ ದಾಳಿ ನಡೆಸಿರೋ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದಂತೆ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಆಟದಲ್ಲಿ...
ಇಂದೂರು ಗ್ರಾಪಂ ನಲ್ಲಿ ಉದ್ಯೋಗ ಖಾತ್ರಿಯಲ್ಲಿ ಚೊಂಬಾಟ..! ತಾಲೂಕಿನಲ್ಲಿ ಅವನೊಬ್ಬ ನುಂಗಣ್ಣನಿಂದ ಇಡೀ ಯೋಜನೆಯೇ ಉಳ್ಳವರ ಪಾಲಾಗ್ತಿದೆಯಾ..?
ಮುಂಡಗೋಡ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಹುತೇಕ ಹಳ್ಳ ಹಿಡಿತಿದೆಯಾ..? ಅವನೊಬ್ಬ ಬಕಾಸುರ ಬಗಬಂಡಿಯಿಂದ ಬಡ ಕೂಲಿ ಕಾರ್ಮಿಕರಿಗೆ ಬದುಕಾಗಬೇಕಿದ್ದ ಉದ್ಯೋಗ ಖಾತ್ರಿ ಯೋಜನೆ, ಕೆಲ ಆಸೆ ಬುರುಕ ಗ್ರಾಮ ಪಂಚಾಯತಿ ಮೆಂಬರುಗಳಿಗೆ ರೊಕ್ಕ ಗಳಿಸುವ ಅಡ್ಡ ಕಸುಬು ಆಗ್ತಿದೆಯಾ..? ಇಂತಹದ್ದೊಂದು ಅನುಮಾನ ಇಂದೂರಿನ ಈ ಗ್ರಾಮ ಪಂಚಾಯತಿ ಸದಸ್ಯನ ಮಾತುಗಳನ್ನು ಕೇಳಿದ್ರೆ ಎಂತವರಿಗೂ ಅರ್ಥವಾಗ್ತಿದೆ. ಅದು ಇಂದೂರು ಪಂಚಾಯತಿ..! ಯಸ್, ಇಂದೂರು ಗ್ರಾಮ ಪಂಚಾಯತಿ ತಾಲೂಕಿನಲ್ಲಿ ಇದುವರೆಗೂ ಒಂದಿಷ್ಟು ಮಾನ ಮರ್ಯಾದೆ ಅಂತಾ ಇಟ್ಕೊಂಡು ಹೆಸರುವಾಸಿಯಾಗಿತ್ತು....
ಮುಂಡಗೋಡ ಪೊಲೀಸಪ್ಪನ ವಿರುದ್ಧ 420 ಕೇಸ್, ಆತ ಹಾಸನದ ಯುವತಿಗೆ ಹಾಕಿದ್ದು, 18 ಲಕ್ಷದ ನಾಮ..!
ಇದು ಮುಂಡಗೋಡ ಪೊಲೀಸಪ್ಪನ ಘನಂಧಾರಿ ಕೆಲಸ. ಯುವತಿಯೋರ್ವಳಿಗೆ ಅನಾಮತ್ತಾಗಿ ಲಕ್ಷ ಲಕ್ಷ ಹಣ ಮುಂಡಾಮೋಚಿದ ನಯವಂಚಕತನದ ಸ್ಟೋರಿ. ಈತನಿಗೆ ಈ ಹಿಂದೆಯೇ ಇಲ್ಲಿನ ಇಲಾಖೆಯ ಹಿರಿಯರು ಒಂದಿಷ್ಟು ಕಿವಿ ಹಿಂಡಿದ್ದಿದ್ರೆ ಬಹುಶಃ ಇವತ್ತು ಇಡೀ ಇಲಾಖೆಗೆ ಆಗಿರೋ ಮುಜುಗರ ಒಂದಿಷ್ಟು ತಪ್ಪುತ್ತಿತ್ತೋ ಏನೋ. ಆದ್ರೆ, ಯಾರಂದ್ರೆ ಯಾರೂ ಈತನ ಅಡ್ನಾಡಿ ಕೆಲಸಗಳ ವಿರುದ್ಧ ಧನಿ ಎತ್ತಲೇ ಇಲ್ಲ. ಹೀಗಾಗಿ ಇವತ್ತು ಅದೊಂದು ಅಮಾಯಕ ಹೆಣ್ಣು ಜೀವ ಮುಂಡಗೋಡ ಠಾಣೆಯ ಮೆಟ್ಟಿಲೇರಿ FIR ದಾಖಲಿಸಿದೆ. ತನಗೆ ಆಗಿರೋ ಅನ್ಯಾಯದ...
ಭಟ್ಕಳದಲ್ಲಿ ಮತ್ತೋರ್ವ ಶಂಕಿತ ಉಗ್ರನಿಗಾಗಿ ATS ಅಧಿಕಾರಿಗಳಿಂದ ಶೋಧ, ಶಂಕಿತನ ಮನೆಗೆ ನೋಟೀಸ್..!
ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೊಬ್ಬ ಶಂಕಿತ (Suspected Terrorist) ಮಹಾರಾಷ್ಟ್ರದ ಉಗ್ರ ನಿಗ್ರಹ ಪಡೆ (ಎಟಿಎಸ್) ತೀವ್ರ ಶೋಧ ನಡೆಸಿದ್ದು, ಶಂಕಿತ ಉಗ್ರನ ನಿವಾಸಕ್ಕೆ ATS ಅಧಿಕಾರಿಗಳು ನೋಟಿಸ್ ಅಂಟಿಸಿದ್ದು, ಶಂಕಿತನ ಬಂಧನಕ್ಕೆ ಉತ್ತರ ಕನ್ನಡ ಪೊಲೀಸರ ಸಹಕಾರ ಕೋರಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಲ ವರ್ಷಗಳ ಹಿಂದೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಭಟ್ಕಳ ಮೂಲದ ವ್ಯಕ್ತಿಯನ್ನು ಜೂನ್ 21ಕ್ಕೆ ಹಾಜರು ಪಡಿಸಲು ಪುಣೆ ಜಿಲ್ಲಾ ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪುಣೆಯ ಅಧಿಕಾರಿಗಳ ತಂಡ ಭಟ್ಕಳದಲ್ಲಿ ತಲಾಶ್...
ಬಿಸಿಯೂಟದ ಸಿಬ್ಬಂದಿ ನೇಮಕಕ್ಕೂ ಫಿಕ್ಸ್ ಆಯ್ತಾ ರೇಟು..? ಮುಂಡಗೋಡ ತುಂಬ, ಪ.ಪಂ. ಸದಸ್ಯೆ ಆಡಿರೋ ಮಾತಿನದ್ದೇ ಘಾಟು..!
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಬಿಸಿಯೂಟದ ನೌಕರಿ ಬಿಕರಿಗಿದೆಯಾ..? ಇಂತಹದ್ದೊಂದು ಅನುಮಾನ ಅದೊಂದು ಆಡಿಯೋ ಕೇಳಿದ ಎಂತವ್ರಿಗೂ ಮೂಡದೇ ಇರಲ್ಲ. ಮುಂಡಗೋಡ ಪಟ್ಟಣ ಪಂಚಾಯತಿಯ ಸದಸ್ಯೆಯೊಬ್ಬರು ಮಾತನಾಡಿದ್ದು ಎನ್ನಲಾದ ಆಡಿಯೋ ಸದ್ಯ ಊರ ತುಂಬಾ ವೈರಲ್ ಆಗಿದೆ. ಖುಲ್ಲಂ ಖುಲ್ಲಾ ದಂಧೆನಾ..? ಅಷ್ಟಕ್ಕೂ, ಪಟ್ಟಣ ಪಂಚಾಯತಿ ವ್ಯಾಪ್ತಿಯ ಎರಡು ಶಾಲೆಗಳಿಗೆ ಅವಶ್ಯವಿರುವ ಬಿಸಿಯೂಟದ ಸಿಬ್ಬಂದಿಯ ನೇಮಕದಲ್ಲಿ ಪಟ್ಟಣ ಪಂಚಾಯತಿಯ ಆ ಸದಸ್ಯೆ ಖುಲ್ಲಂ ಖುಲ್ಲಾ ವ್ಯವಹಾರಕ್ಕೆ ಇಳಿದು ಬಿಟ್ರಾ..? ಬಿಸಿಯೂಟದ ಸಿಬ್ಬಂದಿಗಳ ನೇಮಕಕ್ಕೆ, ಬರೋಬ್ಬರಿ ತಲಾ 50...
ಪಾಳಾ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಮರ, ಮಗು ಸೇರಿ ದಂಪತಿಗೆ ಗಂಭೀರ ಗಾಯ..!
ಪಾಳಾ ಕ್ರಾಸ್ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಮಾವಿನ ಮರ ಬಿದ್ದ ಪರಿಣಾಮ ಒಂದು ಮಗು ಸೇರಿ ಮೂವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಪಾಳಾದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಬೈಕ್ ಸವಾರನ ಮೇಲೆ ರಸ್ತೆ ಬದಿಯ ಹಳೆಯ ಮರ ಬಿದ್ದು ಘಟನೆ ಸಂಭವಿಸಿದೆ. ಮುಂಡಗೋಡ ತಾಲೂಕಿನ ಚಿಟಗೇರಿಯ ಪರಶುರಾಮ್ ಸಿದ್ದಪ್ಪ ನಾಯ್ಕರ್, ಮಧು ಪರಶುರಾಮ್ ನಾಯ್ಕರ್ ಹಾಗೂ ಒಂದೂವರೆ ವರ್ಷದ ಮಗು ಧನವೀರ್ ಪರಶುರಾಮ್ ನಾಯ್ಕರ್ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಾಗೆ...
ಪಾಳಾ ಬಳಿ ಬೈಕ್ ಸವಾರನ ಮೇಲೆ ಉರುಳಿ ಬಿದ್ದ ಮರ, ಸವಾರನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಪಾಳಾ ಕ್ರಾಸ್ ಬಳಿ ರಸ್ತೆ ಮೇಲೆ ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಮರ ಉರುಳಿಬಿದ್ದು ಗಂಭೀರ ಗಾಯವಾದ ಘಟನೆ ನಡೆದಿದೆ. ಪಾಳಾದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಬೈಕ್ ಸವಾರನ ಮೇಲೆ ರಸ್ತೆ ಬದಿಯ ಹಳೆಯ ಮರ ಬಿದ್ದು ಘಟನೆ ಸಂಭವಿಸಿದೆ. ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಸದ್ಯ ಗಾಯಾಳುವನ್ನು ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮುಂಡಗೋಡ ಪಿಎಸ್ ಐ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶಿರಸಿ ದಾಸನಕೊಪ್ಪದಲ್ಲಿ ಭಯೋತ್ಪಾದನೆ ನಂಟು; ಓರ್ವನನ್ನು ವಶಕ್ಕೆ ಪಡೆದ NIA
ಶಿರಸಿ: ಭಯೋತ್ಪಾದನೆಯ ನಂಟಿನ ಜಾಲ ಭೇದಿಸಲು ಶಿರಸಿಗೆ ಬಂದಿಳಿದ ಎನ್‌ಐಎ ಅಧಿಕಾರಿಗಳು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ದಾಸನಕೊಪ್ಪದ ಅಬ್ದುಲ್ ಸಕೂರ್ ಎನ್‌ಐಎ ವಶದಲ್ಲಿರುವ ಆರೋಪಿ. ಈತನು ಆನ್ ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟನಲ್ಲಿ ನಕಲಿ ದಾಖಲೆ ನೀಡಿರುವ ಆರೋಪವಿತ್ತು. ಈ ನಡುವೆ ದುಬೈನಿಂದ ಬಕ್ರೀದ್ ಹಬ್ಬಕ್ಕೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ದಾಸನಕೊಪ್ಪಕ್ಕೆ ಅಬ್ದುಲ್ ಸಕೂರ್ ಆಗಮಿಸಿದ್ದ. ಈ ವೇಳೆ ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಎನ್‌ಐಎ ತಂಡವು...









