ಮುಂಡಗೋಡ ಪಟ್ಟಣದ ಟೌನ್ ಹಾಲ್‌ನಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್‌ನ ಸಹೋಗದಲ್ಲಿ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಕಾರ್ಯಕ್ರಮದ ಸಂಪೂರ್ಣತಾ ಅಭಿಯಾನ ಉತ್ಸವ ಹಮ್ಮಿಕೊಳ್ಳಲಾಗಿತ್ತು. ನೀತಿ ಆಯೋಗದ ಪ್ರತಿನಿಧಿಯಾದ ರೀಷಬ್ ಜೈನ್, ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿಗಳಾದ ವಿನೋದ ಅಣ್ವೇಕರ, ತಾಲೂಕಾ ಪಂಚಾಯತ್ ಇಓ ಟಿ.ವೈ. ದಾಸನಕೊಪ್ಪ ಅವರು ಜಂಟಿಯಾಗಿ ಉದ್ಘಾಟಿಸಿದರು.. ಉತ್ಸವ ಉದ್ಘಾಟನೆಗೂ ಮುನ್ನ ತಾಲ್ಲೂಕು ಪಂಚಾಯತಿ ಕಚೇರಿಯಿಂದ ನಗರದ ಟೌನ್ ಹಾಲ್ ವರೆಗೂ ಆಶಾ, ಅಂಗನವಾಡಿ, ತಾಪಂ ಅಧಿಕಾರಿಗಳು,...
Top Stories
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರ ಕಾರ್ಣಿಕ..! ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ..!
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!
ತಟ್ಟಿಹಳ್ಳಿ ಶಿವಾನಂದನ ಹತ್ಯೆ ಯತ್ನ ಕೇಸ್, ಆರೋಪಿಯ ಹೆಡೆಮುರಿ ಕಟ್ಟಿದ ಮುಂಡಗೋಡಿನ ಚಾಣಾಕ್ಷ ಪೊಲೀಸ್ರು..!
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!
ವಿ.ಎಸ್.ಪಾಟೀಲರ “ಬಂದೂಕು” ನಾಪತ್ತೆ, ಹುಡಿಕಿಕೊಡುವಂತೆ ಮುಂಡಗೋಡ ಠಾಣೆಯಲ್ಲಿ ದೂರು..!
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ
ಹೊನ್ನಾವರದಲ್ಲಿ ಭೀಕರ ಅಗ್ನಿ ದುರಂತ, ಸುಟ್ಟು ಕರಕಲಾದ ಕಾರು, ಕಾರಲ್ಲಿದ್ದ ಇಬ್ಬರು ಸಜೀವ ದಹನ..!
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..!
ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಯಲ್ಲಾಪುರ ರಂಜಿತಾ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್, ನಿಸರ್ಗ ಮನೆ ಜಂಗಲ್ ನಲ್ಲಿ ಹೆಣವಾಗಿ ಪತ್ತೆಯಾದ ಆರೋಪಿ ರಫೀಕ್, ಆತ್ಮಹತ್ಯೆ ಮಾಡಿಕೊಂಡ್ನಂತೆ..!
ಮುಂಡಗೋಡ ತಾಲೂಕಿನ ಪ.ಪಂಗಡದ ಮೀನುಗಾರರಿಗೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಅಹ್ವಾನ..!
ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!
ಪ.ಜಾತಿ, ಪಂಗಡ ಯೋಜನೆಗಳಲ್ಲಿ 100% ಗುರಿ ಸಾಧಿಸಲು ಅಧಿಕಾರಿಗಳಿಗೆ ಡೀಸಿ ಕಟ್ಟುನಿಟ್ಟಿನ ಸೂಚನೆ..!
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
Category: ಉತ್ತರ ಕನ್ನಡ
ಉತ್ತರ ಕನ್ನಡ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀ ಪ್ರಿಯ ಕೆ. ಅಧಿಕಾರ ಸ್ವೀಕಾರ..!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಕೆ. ಇಂದು ಮೊದಲ ಬಾರಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ರು. ನಂತರ, ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀ ಪ್ರಿಯ ಕೆ. ಅಧಿಕಾರ ಸ್ವೀಕರಿಸಿದರು.
ಜಿಲ್ಲೆಯಲ್ಲಿ ಇನ್ಮೇಲೆ ಅಕ್ರಮಿಗಳು ಬಾಲ ಬಿಚ್ಚಂಗಿಲ್ಲ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕ್ತಿವಿ : ನೂತನ ಎಸ್ಪಿ ನಾರಾಯಣ್ ಮೊದಲ ಮಾತು
ಕಾರವಾರ: ಉತ್ತರ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಿದ್ದು, ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಜಿಲ್ಲೆಯಲ್ಲಿ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಮಾಡುವುದಾಗಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಹೇಳಿದ್ರು. ಅವರು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದರು. ಇಲ್ಲಿ ಕೆಲಸ ಮಾಡೋದು ಸವಾಲು..! ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಪ್ರಕೃತಿ ಸೌಂದರ್ಯದಿಂದ...
ಜಿಲ್ಲೆಯಲ್ಲಿ ವ್ಯಾಪಕ ಮಳೆ, ರಕ್ಷಣೆಗೆ NDRF ತಂಡ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್
ಕಾರವಾರ; ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶದಲ್ಲಿರುವವರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಲ್ಲಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ, ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು, ಜಿಲ್ಲೆಯಲ್ಲಿ ಇನ್ನೂ 3 ರಿಂದ 4 ದಿನಗಳು ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗೆ ರಾಜ್ಯ ಸರ್ಕಾರದಿಂದ 2 ರಾಷ್ಟೀಯ ವಿಪತ್ತು ನಿರ್ವಹಣಾ ತಂಡಗಳನ್ನು ಕಳುಹಿಸುವಂತೆ ಕೋರಿದ್ದು, ಈಗಾಗಲೇ ಈ ತಂಡಗಳು ಬೆಂಗಳೂರಿನಿಂದ ಹೊರಟಿವೆ. ಶುಕ್ರವಾರ ಈ ತಂಡಗಳು ಜಿಲ್ಲೆಗೆ ಆಗಮಿಸಲಿವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ. 2...
ಜಾಗ್ರತೆಯಿರಲಿ..! ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿ..!?
ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಗೆ ಮೊದಲ ಬಲಿಯಾಗಿದೆ. ಅಂಕೋಲದ ಬಾವಿಕೇರಿಯ ನಿವಾಸಿ ಹರೇ ರಾಮ್ ಗೋಪಾಲ್ ಭಟ್ (32) ಡೆಂಗ್ಯೂ ನಿಂದ? ಸಾವನ್ನಪ್ಪಿದ್ದಾರೆ. ಒಂದು ವಾರದ ಹಿಂದೆ ಡೆಂಗ್ಯೂ ನಿಂದ ಬಳಲಿ, ಬೆಳಗಾವಿಯಲ್ಲಿ ಚಿಕಿತ್ಸೆ ಪಡೆಯುತಿದ್ದ ಹರೇ ರಾಮ್ ಭಟ್, ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ 119 ಜನರಲ್ಲಿ ಡೆಂಗ್ಯು ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅರ್ಭಟ, ಹಲವು ಶಾಲೆಗಳಿಗೆ ರಜೆ ಘೋಷಣೆ..! ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ..!
ಉತ್ತರ ಕನ್ನಡದಲ್ಲಿ ಮಳೆಯ ಅರ್ಭಟ ಜೋರಾಗಿದೆ. ಪರಿಣಾಮ, ಹೊನ್ನಾವರ ತಾಲೂಕಿನ ಗುಂಡಬಾಳ ನದಿಯ ನೆರೆ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಅಧಿಕಗೊಳ್ಳುತ್ತಿದೆ. ಹೀಗಾಗಿ, ಹೊನ್ನಾವರ ತಾಲೂಕಿನ ಕೆಲವು ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ಹೊರಡಿಸಿದ್ದಾರೆ. ಹೊನ್ನಾವರ ತಾಲೂಕಿನ ಜನತಾ ವಿದ್ಯಾಲಯ ಅನಿಲಗೋಡ್, ಹಿರಿಯ ಪ್ರಾಥಮಿಕ ಶಾಲೆ ಅನಿಲಗೋಡ, ಗುಂಡ ಬಾಳ ನಂ-2, ಗುಂಡಿ ಬೈಲ್ ನಂ 2, ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್ ವಲ್ಕಿ, ಕಿರಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ...
ಲಂಚಕ್ಕಾಗಿ ಕೈಚಾಚಿದ್ದ ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ..!
ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಖಾತಾ ಬದಲಾವಣೆಗಾಗಿ ವ್ಯಕ್ತಿ ಓರ್ವರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣ ಪಂಚಾಯತದಲ್ಲಿ ನಡೆದಿದೆ. ಪಟ್ಟಣ ಪಂಚಾಯತ ಅಧಿಕಾರಿ ಪ್ರವೀಣ ಕುಮಾರ ಎಂಬುವವರು ಚಂದ್ರಹಾಸ ಎಂಬುವವರ ಬಳಿ ಜಮೀನಿಗೆ ಸಂಬಂಧಿಸಿ A ಖಾತಾ ಬದಲಾವಣೆಗಾಗಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಮೊದಲ ಹಂತವಾಗಿ ಚಂದ್ರಹಾಸ ಅವರು ಇಂದು 60ಸಾವಿರ ನಗದು ಕೊಡುತ್ತಿದ್ದ ವೇಳೆ ಲೋಕಾಯುಕ್ತರು ನಡೆಸಿದ ದಾಳಿಯ ವೇಳೆ...
ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಡಾ. ವಿಷ್ಣುವರ್ಧನ್ ವರ್ಗ, ನೂತನ ಎಸ್ಪಿ ಯಾರು ಗೊತ್ತಾ..?
ಕಾರವಾರ: ಉತ್ತರ ಕನ್ನಡದ ಎಸ್ಪಿ ಡಾ.ವಿಷ್ಣುವರ್ಧನ್ ವರ್ಗವಾಗಿದ್ದಾರೆ. ನೂತನ ಎಸ್ಪಿಯಾಗಿ ನಾರಾಯಣ್ ಎಂ. ಅವರನ್ನು ಸರ್ಕಾರ ನೇಮಕ ಮಾಡಿದೆ. ಅಂದಹಾಗೆ, ರಾಜ್ಯದ 25 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅದ್ರಲ್ಲಿ, ಉತ್ತರಕನ್ನಡ ಎಸ್ಪಿ ಆಗಿದ್ದ ಡಾ. ವಿಷ್ಣುವರ್ಧನ್ ಅವರನ್ನ ಸಹ ವರ್ಗಾವಣೆ ಮಾಡಲಾಗಿದೆ. ಉತ್ತರಕನ್ನಡ ಹಾಲಿ ಎಸ್ಪಿ ಆಗಿದ್ದ ವಿಷ್ಣುವರ್ಧನ್ ಅವರನ್ನ ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ನಾರಾಯಣ್ ಎಂ ಅವರನ್ನ ನೇಮಕ ಮಾಡಲಾಗಿದೆ. ಇನ್ನು, ನಾರಾಯಣ್ ಎಂ. ರವರು...
ಜೋಯಿಡಾದಲ್ಲಿ ಪತ್ರಕರ್ತರ ಕಾರಿನಡಿ ನಾಡಬಾಂಬ್ ಸ್ಪೋಟ, ಕಾರಿಗೆ ಹಾನಿ..!
ಜೊಯಿಡಾ: ಪತ್ರಕರ್ತರು ತೆರಳುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟವಾದ ಘಟನೆ ಜೊಯಿಡಾದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂದಹಾಗೆ, ಜೋಯಿಡಾದಲ್ಲಿ ನಡೆಯತ್ತಿದ್ದ ಜನ ಸಂಪರ್ಕ ಸಭೆಗೆ ಗುಂದದಿಂದ ಆಗಮಿಸುತ್ತಿದ್ದ ಪತ್ರಕರ್ತರ ಕಾರಿನಡಿ ನಾಡಬಾಂಬ್ ಬ್ಲಾಸ್ಟ್ ಆಗಿದೆ. ಪರಿಣಾಮ ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಮೂವರು ಪತ್ರಕರ್ತರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ನಾಡ ಬಾಂಬ್ ರಸ್ತೆಯಲ್ಲಿ ಬಿದ್ದಿದ್ದು, ಅದರ ಮೇಲೆ ಕಾರಿನ ಟಯರ್ ಹತ್ತಿ ಸ್ಫೋಟ ಸಂಭವಿಸಿದೆ. ಜೊಯಿಡಾ...
ಬಾಡಿಗೆಗೆ ಇಳಿಯುವ ವೈಟ್ ಬೋರ್ಡ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಿ- ಟ್ಯಾಕ್ಸಿ ಮಾಲೀಕರ ಸಂಘದ ಆಗ್ರಹ..!
ಮುಂಡಗೋಡ: ಖಾಸಗಿ ಮಾಲೀಕತ್ವದ (ವೈಟ್ ಬೋರ್ಡ್) ಟ್ಯಾಕ್ಸಿ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಉಪಯೋಗಿಸುತ್ತಿರುವ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಟ್ಯಾಕ್ಸಿ ಮಾಲೀಕರ ಸಂಘದ ಸದಸ್ಯ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಖಾಸಗೀ ಮಾಲೀಕತ್ವದ ಟ್ಯಾಕ್ಸಿ ವಾಹನಗಳನ್ನು ಬೇಕಾಬಿಟ್ಟಿ ದರಗಳಲ್ಲಿ ಬಾಡಿಗೆಗೆ ಬಿಡುತ್ತಿದ್ದಾರೆ. ಇದ್ರಿಂದ ನಮ್ಮ ಬದುಕೇ ಮೂರಾಬಟ್ಟೆಯಾಗ್ತಿದೆ. ನಾವು ಸರ್ಕಾರಕ್ಕೆ ಕಾಲ ಕಾಲಕ್ಕೆ ಟ್ಯಾಕ್ಸ್ ಕಟ್ಟಿ, ಬಾಡಿಗೆಗಾಗಿ ವಾಹನಗಳನ್ನು ಬಿಡುತ್ತಿದ್ದೇವೆ. ಅದ್ರಿಂದ ಬಂದ ಬಾಡಿಗೆಯಲ್ಲೇ...









