ಮುಂಡಗೋಡ- ತಾಲೂಕಿನ ಸಾಲಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸನವಳ್ಳಿ ಗ್ರಾಮದಲ್ಲಿ ಇದುವರೆಗೂ ಗ್ರಾಮದ ಮುಖ್ಯರಸ್ತೆಯಲ್ಲಿ ಪಕ್ಕಾಗಟಾರ ಇಲ್ಲದೆ ಚರಂಡಿ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರಿಗೆ ಇನ್ನಿಲ್ಲದ ಪಜೀತಿ ತಂದಿಡುತ್ತಿದೆ..! ಗಟಾರದ ಕಲುಷಿತ ನೀರು ಸಂಪೂರ್ಣವಾಗಿ ಮುಖ್ಯ ರಸ್ತೆಯ ಮೇಲೆ ಬಂದು ಸಾರ್ವಜನಿಕರ ಓಡಾಟಕ್ಕೆ, ವಾಹನ ಸವಾರರಿಗೆ ತೊಂದರೆಯಾಗಿದೆ. ವಾಹನ ಸವಾರರು ಪ್ರತಿದಿನವೂ ಈ ರಸ್ತೆಯಲ್ಲಿ ಜಾರಿಬಿದ್ದು ಗಾಯಗೊಂಡಿರೋ ಸಾಕಷ್ಟು ಪ್ರಕರಣಗಳಿವೆ. ನಿತ್ಯವೂ ಹೀಗೆ ಈ ರಸ್ತೆಯಲ್ಲಿ ಎದ್ದು ಬಿದ್ದು ಅಂಗೈಯಲ್ಲಿ ಜೀವ ಹಿಡಿದು ಓಡಾಡುವುದು ಅನಿವಾರ್ಯ...
Top Stories
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
Category: ಉತ್ತರ ಕನ್ನಡ
ಮುಂಡಗೋಡ ತಾಲೂಕಾಸ್ಪತ್ರೆಗೆ, ಅಂಬ್ಯುಲೆನ್ಸ್, ಕೋವಿಡ್ ಕೇರ್ ಕಿಟ್ ವಿತರಿಸಿದ ಹೆಬ್ಬಾರ್..!
ಮುಂಡಗೋಡ- ತಾಲೂಕಾಸ್ಪತ್ರೆಯ ಆವರಣದಲ್ಲಿ ಇಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮುಂಡಗೋಡ ತಾಲೂಕಾ ಆಸ್ಪತ್ರೆಗೆ 2 ಹೊಸ ಅಂಬ್ಯುಲೆನ್ಸ್ ಹಸ್ತಾಂತರ ಹಾಗೂ ಕೋವಿಡ್ ಶಂಕಿತರಿಗೆ ಹೆಬ್ಬಾರ್ ಕೋವಿಡ್ ಕೇರ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸಿರು ನಿಶಾನೆ ತೋರಿಸುವ ಮೂಲಕ ಅಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಸಚಿವ ಹೆಬ್ಬಾರ್, ಕೋವಿಡ್ ಶಂಕಿತರಿಗೆ ನೀಡಲಾಗುವ ಕೋವಿಡ್ ಕೇರ್ ಕಿಟ್ ಬಿಡುಗಡೆಗೊಳಿಸಿದ್ರು. ಈ ವೇಳೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಉತ್ತರ ಕನ್ನಡ ಜಿಲ್ಲಾಧಿಕಾರಿ...
ಸಿಎಂ ಬದಲಾವಣೆ ಯಾವ ಕಾರಣಕ್ಕೂ ಇಲ್ಲ: ಸಿ.ಪಿ.ಯೋಗೀಶ್ವರ್ ಗೆ ಸಚಿವ ಹೆಬ್ಬಾರ್ ಟಾಂಗ್..!
ಯಲ್ಲಾಪುರ: ಮುಖ್ಯಮಂತ್ರಿ ಬದಲಾವಣೆ ಯಾವ ಕಾರಣಕ್ಕೂ ಇಲ್ಲ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ಸಿಎಂ ಬದಲಾವಣೆ ವಿಚಾರವಾಗಿ, ಸಚಿವ ಸಿ.ಪಿ.ಯೋಗೀಶ್ವರ ಹೇಳಿಕೆಗೆ ನನ್ನ ಸಹಮತ ಇಲ್ಲ ಅಂತಾ ಖಡಕ್ಕಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ರು. ಸರಕಾರದಲ್ಲಿ ಇದ್ದುಕೊಂಡು ಈ ರೀತಿಯ ಹೇಳಿಕೆ ನೀಡುವುದು ಯೋಗೀಶ್ವರಗೆ ಶೋಭೆ ತರುವುದಿಲ್ಲ ಅಂತಾ ಹೆಬ್ಬಾರ್ ಕಿಡಿ ಕಾರಿದ್ರು. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆದಿದ್ದಾಗಿ ಸಚಿವ ಅಶೋಕ್ ಹೇಳಿದ್ದು ನಿಜ, ಆದ್ರೆ ಮುಖ್ಯಮಂತ್ರಿ ಬದಲಾವಣೆ...
ಮುಂಡಗೋಡ ತಾಲೂಕಾಸ್ಪತ್ರೆಗೆ 1.33 ಲಕ್ಷ ರೂ. ವೈದ್ಯಕೀಯ ಸಲಕರಣೆ ನೀಡಿದ, ಟಿಬೇಟಿಗರ ಕರ್ಮಾ ಪೌಂಡೇಶನ್..!
ಮುಂಡಗೋಡ-ತಾಲೂಕಿನಲ್ಲಿ ನೊಂದವರ ಕಣ್ಣೀರು ಒರೆಸುತ್ತಿರೋ ಟಿಬೇಟಿಗರ ಕರ್ಮಾ ಪೌಂಡೇಶನ್ ಈಗ ಮತ್ತೊಂದು ಮಹತ್ತರ ಕಾರ್ಯ ಮಾಡಿ ಆದರ್ಶ ತೋರಿದೆ. ಬುದ್ದ ಪೂರ್ಣಿಮೆಯ ಅಂಗವಾಗಿ, ಮುಂಡಗೋಡ ತಾಲೂಕಾಸ್ಪತ್ರೆಗೆ ಒಟ್ಟೂ 1,33,280 ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ್ದಾರೆ. ಅದ್ರಲ್ಲಿ, 49280 ರೂ.ಮೌಲ್ಯದ NIBP patient monitor machine, 84,000 ರೂ. ಮೌಲ್ಯದ oxygen concentrator ಸೆರಿದ್ದು ಮುಂಡಗೋಡ ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆಯವರಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ. ಇನ್ನು ಟಿಬೇಟಿಯನ್ ಕಾಲೋನಿಯ ಡಿಟಿಆರ್ ಆಸ್ಪತ್ರೆಗೂ ಕೂಡ 84 ಸಾವಿರ ರೂ....
ಇಂದೂರು ಪ್ರಾಥಮಿಕ ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ: CCTV ಕ್ಯಾಮೆರಾ ಕದ್ದೊಯ್ದ ಕಳ್ಳರು..!
ಮುಂಡಗೋಡ: ತಾಲೂಕಿನ ಇಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಇಂದೂರು ಗ್ರಾಮವನ್ನು ವಿಶೇಷ ಕಂಟೈನ್ ಮೆಂಟ್ ವಲಯವನ್ನಾಗಿ ಮಾಡಿ, ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಇದೇ ಸಮಯವನ್ನೇ ಉಪಯೋಗಿಸಿಕೊಂಡಿರೋ ಕಳ್ಳರು, ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.. ಅಂದಹಾಗೆ, ಶಾಲೆಯ ವರಾಂಡದಲ್ಲಿ ಹಾಕಲಾಗಿದ್ದ ಎರಡು CCTV ಕ್ಯಾಮೆರಾಗಳನ್ನು ಕಿತ್ತೊಯ್ದಿರೋ ಕಳ್ಳರು, ಶಾಲೆಯ 5 ಕೊಠಡಿಗಳ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದಾರೆ, ಅಲ್ದೆ ಬಾತ್ ರೂಮಿನ ಬೀಗವನ್ನೂ ಮುರಿದಿದ್ದಾರೆ. ಆದ್ರೆ...
ಜೂನ್ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು..!
ಬೆಂಗಳೂರು : ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗುವ ಸಾಧ್ಯತೆಯಿದೆ. ಕೇರಳಕ್ಕೆ 31 ರಂದು ಪ್ರವೇಶಿಸಲಿರುವ ಮುಂಗಾರಿನಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 1 ರಂದು ನೈಋತ್ಯ ಮುಂಗಾರು ಕೇರಳ ರಾಜ್ಯ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 5 ರಂದು ಪ್ರವೇಶಿಸುವ ನಿರೀಕ್ಷೆ ಇದೆ.ರಾಜ್ಯದಲ್ಲಿ ಮೇ. 29 ರವರೆಗೆ ಮಳೆ ಮುಂದುವರೆಯಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ...
ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ದಿನಸಿ ವಿತರಣೆ..! ಇದು ಪಬ್ಲಿಕ್ ಫಸ್ಟ್ ನ್ಯೂಸ್ ಇಂಪ್ಯಾಕ್ಟ್..!!
ಮುಂಡಗೋಡ-ಪಟ್ಟಣದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ಐದು ಕಾರ್ಮಿಕ ಕುಟುಂಬಗಳು ನರಳುತ್ತಿದ್ದ ಸುದ್ದಿ ಗುರುವಾರ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಪ್ರಸಾರವಾಗಿತ್ತು.. ಅಂತಹದ್ದೊಂದು ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ತಾಲೂಕಿನ ಹಲವು ಹೃದಯವಂತರು ಸ್ಪಂಧಿಸಿದ್ದಾರೆ.. ಟಿಬೇಟಿಯನ್ ಕರ್ಮಾ ಪೌಂಡೇಶನ್ ವತಿಯಿಂದ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿದ್ದ ಆಂದ್ರ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ.. ಅಂದಹಾಗೆ, ಗಾರೆ ಕೆಲಸಕ್ಕೆಂದು ಆಂದ್ರ ಪ್ರದೇಶದಿಂದ ಬಂದಿದ್ದ ಕುಟುಂಬ, ಲಾಕ್ ಡೌನ್ ಘೋಷಣೆಯಾದ ನಂತ್ರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲು...
ಹಳಿಯಾಳ: ಗುಂಡಳ್ಳಿ ಗ್ರಾಪಂ ವ್ಯಾಪ್ತಿಯ ತಾಂಡಾದಲ್ಲಿ ಮಾಸ್ಕ್ ಸ್ಯಾನಿಟೈಸರ್ ವಿತರಣೆ..!
ಹಳಿಯಾಳ: ತಾಲೂಕಿನ ಗುಂಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಜಮಾನ ತಾಂಡಾ ವಾರ್ಡಿನಲ್ಲಿ ಮಾಸ್ಕ್, ಸ್ಯಾನಿಟೈಸರ್, ದಿನನಿತ್ಯದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುನಿಲ್ ಹೆಗಡೆಯವರ ಸಲಹೆ ಮೇರೆಗೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಎಂ.ಪಾಟೀಲ್ ಹಾಗೂ ಪಂಚಾಯತಿ ಸದಸ್ಯೆ ಪುಷ್ಪಾ ಪಾಟೀಲ್ ವಾರ್ಡಿನ ಜನರಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಿಸಿದ್ರು.. ಅತಿಹೆಚ್ಚು ಕೂಲಿ ಕಾರ್ಮಿಕರು, ದಲಿತರು, ಲಂಬಾಣಿಗಳು ವಾಸಿಸುತ್ತಿರುವ ಗುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಜಮಾನ ತಾಂಡಾ ವಾರ್ಡಿನಲ್ಲಿ ಜನರಿಗೆ ವಿತರಿಸಿದ್ರು.. ಈ...
ಮುಂಡಗೋಡಿಗೆ ದೇಶಪಾಂಡೆಯವರ ಗಿಫ್ಟ್..! PPE ಕಿಟ್, ಔಷಧಿ, ಮಾಸ್ಕ್, ಅಂಬ್ಯುಲೆನ್ಸ್ ಹಸ್ತಾಂತರ..!
ಮುಂಡಗೋಡ-ತಹಶೀಲ್ದಾರ ಕಚೇರಿ ಆವರಣದಲ್ಲಿ ಇಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ, ಹಾಗೂ ಅವರ ಪುತ್ರ ಪ್ರಶಾಂತ್ ದೇಶಪಾಂಡೆ, ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿಗೆ ಹಲವು ಸೌಲಭ್ಯಗಳನ್ನು ಒದಗಿಸಿದ್ರು.. ಮುಂಡಗೋಡ ತಾಲೂಕಿನ ತಹಶಿಲ್ದಾರ್ ಶ್ರೀಧರ್ ಮುಂದಲಮನಿಯವರ ಮೂಲಕ 500 ಔಷಧಿ ಕಿಟ್, ಹಾಗೂ 320 ಆಕ್ಸಿ ಮೀಟರ್, 500 n95 ಮಾಸ್ಕ್, 250 ಪಿಪಿಇ ಕಿಟ್ ಹಾಗೂ 1 ಉಚಿತ ಅಂಬ್ಯುಲೆನ್ಸ್ ವಾಹನ ಹಸ್ತಾಂತರಿಸಿದ್ರು.. ಈ ವೇಳೆ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ದೇಶಪಾಂಡೆ,...
ಮುಂಡಗೋಡ: 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನ..!
ಮುಂಡಗೋಡ- ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದು 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು..! ಬೆಳಿಗ್ಗೆ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಯಾ ವ್ಯಾಪ್ತಿಯ ಗ್ರಾಮಗಳ 18 ವರ್ಷ ಮೇಲ್ಪಟ್ಟ ವಿಕಲಚೇತನರು ಲಸಿಕೆ ಪಡೆದರು.. ತಮ್ಮ ವಿಕಲಚೇತನದ ಗುರುತಿನ ಪ್ರಮಾಣಪತ್ರ, ಆಧಾರ್ ಕಾರ್ಡ್ ನೊಂದಿಗೆ ಬಂದು 18 ವರ್ಷ ಮೇಲ್ಪಟ್ಟ ವಿಕಲಚೇತನರು ಲಸಿಕೆ ಪಡೆದ್ರು.. ತಾಲೂಕಾಡಳಿತ ಶುಕ್ರವಾರದ ಇಡೀ ದಿನ ಮುಂಡಗೋಡ ತಾಲೂಕಿನಲ್ಲಿ ಕೋವಿಡ್ ಉಚಿತ ಲಸಿಕಾ ಅಭಿಯಾನ...


