Home ಉತ್ತರ ಕನ್ನಡ

Category: ಉತ್ತರ ಕನ್ನಡ

Post

ಇಂದೂರಿನಲ್ಲಿ‌ ಮನೆಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಮನೆ, ಲಕ್ಷಾಂತರ ಹಾನಿ..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾ‌ಮದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಮನೆಯೇ ಭಸ್ಮವಾಗಿ ಲಕ್ಷಾಂತರ ರೂ. ಹಾನಿಯಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಇಂದೂರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದ ಹಿಂದುಗಡೆ ಇರುವ ಗೂಡುಮನಿ ಅತ್ತಾರ್ ಎಂಬುವ ಮಹಿಳೆಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಾಲಾಗಿದ್ದು, ಬೆಂಕಿಯ ಕೆನ್ನಾಲಿಗೆ ಕೆಲವೇ ಹೊತ್ತಲ್ಲಿ ಇಡೀ ಮನೆಗೆ ಆವರಿಸಿದೆ. ಪಬ್ಲಿಕ್ ಫಸ್ಟ್ ನ್ಯೂಸ್ TOP 5...

Post

“ನಮ್ಮ ಊರಾಗ್ ಇನ್ ಸೆರೇ ಮಾರಂಗಿಲ್ಲ” ಕಾಳಗಿನಕೊಪ್ಪ ಮಹಿಳೆಯರ ಖಡಕ್ ಎಚ್ಚರಿಕೆ..!

ಮುಂಡಗೋಡ: ತಾಲೂಕಿನ ಕಾಳಗಿನಕೊಪ್ಪದ ಮಹಿಳೆಯರು ಸಿಡಿದು ನಿಂತಿದ್ದಾರೆ. ತಮ್ಮ ಗ್ರಾಮದಲ್ಲಿ ಯುವಕರನ್ನ ದಾರಿ ತಪ್ಪಿಸ್ತಿರೋ ಸರಾಯಿ, ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಹೌದು, ಮುಂಡಗೋಡ ತಾಲೂಕಿನ ಕಾಳಗಿನ ಕೊಪ್ಪದ ಮಹಿಳೆಯರಿಗೆ ಇವತ್ತು ಆಕ್ರೋಶದ ಕಟ್ಟೆಯೊಡೆದಿದೆ. ನಿತ್ಯವೂ ಕುಡಿದು ನಶೆಯಲ್ಲಿ ತೇಲಾಡುವ, ಗುಟ್ಕಾ ತಿಂದು ಕಂಡ ಕಂಡಲ್ಲೆ ಗಲೀಜು ಮಾಡುವ, ಸಿಗರೇಟು ಸೇದುತ್ತು ಮಸ್ತಿ ಮಾಡುವ ಯುವಕರನ್ನು ಹಾಗೂ ತಮ್ಮ ಮನೆ ಯುವ ಹುಡುಗರನ್ನು ಹೇಗಾದ್ರೂ ಸರಿ ದಾರಿಗೆ ತರಲೇ ಬೇಕು ಅಂತಾ...

Post
KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ: ಬೆಳೆಸಾಲ ಪಡೆಯಲು ಹರಸಾಹಸ..!

KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ: ಬೆಳೆಸಾಲ ಪಡೆಯಲು ಹರಸಾಹಸ..!

ಮುಂಡಗೋಡ: ಪಟ್ಟಣದ KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ ಇನ್ನೂ ನಿಂತಿಲ್ಲ. ತಮ್ಮ ಬೆಳೆಸಾಲದ ಹಣಕ್ಕಾಗಿ ದಿನವಿಡೀ ಬಿಸಿಲು, ಮಳೆಯಲ್ಲೇ ಕಾಯಬೇಕಾದ ದುಸ್ತಿತಿ ತಪ್ಪಿಲ್ಲ.. ಬ್ಯಾಂಕ್ ಎದುರು ಅರ್ಧ ಕಿಲೋ ಮೀಟರ್ ವರೆಗೂ ಸರತಿ ಸಾಲಲ್ಲಿ ನಿಂತು ಬಸವಳಿಯುತ್ತಿರೋ ಅನ್ನದಾತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಯಾರೂ ತೋರುತ್ತಿಲ್ಲ. ಈ ಸುದ್ದಿಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. ಹೌದು, ಮುಂಡಗೋಡ ತಾಲೂಕಿನ ರೈತರಿಗೆ ಸಿಗಬೇಕಾದ ಬೆಳೆಸಾಲಕ್ಕೆ ಅನ್ನದಾತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ....

Post
ಮುಂಡಗೋಡಿನಲ್ಲಿ ಇಂದಿನಿಂದ 4 ನೇ ಹಂತದ ಲಾಕ್ ಡೌನ್: ಅಗತ್ಯ ವಸ್ತುಗಳ ಖರೀಧಿಗೆ ಮುಗಿಬಿದ್ದ ಜನ..!

ಮುಂಡಗೋಡಿನಲ್ಲಿ ಇಂದಿನಿಂದ 4 ನೇ ಹಂತದ ಲಾಕ್ ಡೌನ್: ಅಗತ್ಯ ವಸ್ತುಗಳ ಖರೀಧಿಗೆ ಮುಗಿಬಿದ್ದ ಜನ..!

ಮುಂಡಗೋಡ-ಪಟ್ಟಣದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಇಂದಿನಿಂದ ಪ್ರಾರಂಭವಾಗಿದೆ. ನಿನ್ನೆಯಷ್ಟೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಪರಿಷ್ಕೃತ ಆದೇಶ ಹೊರಡಿಸಿದ್ದಾರ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ಹೀಗೆ ನಾಲ್ಕು ದಿನಗಳ ಕಾಲ, ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಇಂದು ಮುಂಡಗೋಡ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀಧಿಗೆ ಜನ ಮುಗಿಬಿದ್ದಿದ್ರು. ಇಲ್ಲಿನ ದಿನಸಿ ಅಂಗಡಿಗಳ ಎದುರು ಜನ ಜಂಗುಳಿಯೇ ಸೇರಿತ್ತು. ಇನ್ನು ಅನಗತ್ಯ ತಿರುಗಾಡುವ...

Post
ಮುಂಡಗೋಡಿನಲ್ಲಿ ಛತ್ರಿ, ರೇನ್ ಕೋಟ್ ಮಾರಾಟಕ್ಕೆ ಅನುಮತಿ: ಪಪಂ ನಿಂದ ಧ್ವನಿವರ್ದಕದ ಮೂಲಕ ಸೂಚನೆ..!

ಮುಂಡಗೋಡಿನಲ್ಲಿ ಛತ್ರಿ, ರೇನ್ ಕೋಟ್ ಮಾರಾಟಕ್ಕೆ ಅನುಮತಿ: ಪಪಂ ನಿಂದ ಧ್ವನಿವರ್ದಕದ ಮೂಲಕ ಸೂಚನೆ..!

ಮುಂಡಗೋಡ: ಪಟ್ಟಣದಲ್ಲಿ ಮಳೆಗಾಲಕ್ಕೆ ಅವಶ್ಯಕವಾಗಿರೋ ಛತ್ರಿ, ರೇನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಲಾಗಿದ್ದು ಪಟ್ಟಣ ಪಂಚಾಯತ ಈ ಕುರಿತು ಧ್ವನಿ ವರ್ಧಕದ ಮೂಲಕ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಛತ್ರಿ ರೇನ್ ಕೋಟ್ ಸೇರಿದಂತೆ ಮಳೆಗಾಲಕ್ಕೆ ಉಪಯೋಗಿಸುವ ಪಾದರಕ್ಷೆಗಳ ಮಾರಾಟಗಾರರು ತಮ್ಮ ಅಂಗಡಿಗಳಲ್ಲೆ ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

Post
ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ TOP 5 ನ್ಯೂಸ್

ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ TOP 5 ನ್ಯೂಸ್

ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ ಟಾಪ್ 5 ನ್ಯೂಸ್ ನೋಡಲು ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. Subscribe ಮಾಡಿ.. https://youtu.be/CJbeBeJyGuk

Post
ನಂದಿಕಟ್ಟಾ ಗ್ರಾಮದ ಕೊರೋನಾ ಸೋಂಕು ಪೀಡಿತರ ಕುಟುಂಬಗಳಿಗೆ ದಿನಸಿ ಕಿಟ್..!

ನಂದಿಕಟ್ಟಾ ಗ್ರಾಮದ ಕೊರೋನಾ ಸೋಂಕು ಪೀಡಿತರ ಕುಟುಂಬಗಳಿಗೆ ದಿನಸಿ ಕಿಟ್..!

ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಪೀಡಿತರ ಕುಟುಂಬಗಳಿಗೆ, ಗ್ರಾಮ ಪಂಚಾಯತಿ ಸದಸ್ಯರು ಆಹಾರದ ಕಿಟ್ ವಿತರಿಸಿದ್ರು. ಕೊರೋನಾ ಎರಡನೇ ಅಲೆಯ ಪರಿಣಾಮ ಲಾಕ್ ಡೌನ್ ಜಾರಿಯಾದ ಹಿನ್ನಲೆಯಲ್ಲಿ ನಂದಿಕಟ್ಟಾ ಗ್ರಾಮದ ಬಡ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಅದ್ರಲ್ಲೂ ಕೊರೋನಾ ಪಾಸಿಟಿವ್ ದೃಢಪಟ್ಟ ಕೆಲವು ಕುಟುಂಬಗಳ ಪಾಡು ಹೇಳತೀರದ್ದಾಗಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಭೋಸ್ಲೆ ಸೇರಿದಂತೆ ಹಲವು ಸದಸ್ಯರು ಅಂತಹ ಬಡ‌ ಕುಟುಂಬಗಳಿಗೆ ಆಹಾರದ ದಿನಸಿ ಕಿಟ್ ವಿತರಿಸಿದ್ದಾರೆ.

Post

ಸಾರ್ವಜನಿಕ ಆಸ್ಪತ್ರೆಯಲ್ಲಿ, ಸಂತೋಷಿ ಮಾತಾ ಕಾಳಿಕಾ ಮಠದಿಂದ ಆಹಾರ ಪೊಟ್ಟಣ ವಿತರಣೆ..!

ಹಳಿಯಾಳ : ಜೊಯಿಡಾ ತಾಲೂಕಿನ ಕ್ಯಾಸರಲಾಕ್ ಸಮೀಪದ ಕುಣಗಿನಿಯಲ್ಲಿರುವ ಶ್ರೀ ಸಂತೋಷಿ ಮಾತಾ ಕಾಳಿಕಾ ಮಠದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ರೋಗಿಗಳಿಗೆ ಆಶ್ರಮದ ಶ್ರೀ ರಘುವೀರ ಗುರೂಜಿಯವರು ಒಂದು ದಿನದ ಊಟದ ಪೊಟ್ಟಣವನ್ನು ವಿತರಿಸಿದರು. 150 ಕ್ಕೂ ಹೆಚ್ಚು ಊಟದ ಪೊಟ್ಟಣವನ್ನು ವಿತರಿಸಲಾಯ್ತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಚವ್ವಾಣ, ಪ್ರಮುಖರಾದ ಮಾರುತಿ ನರಗುಂದಕರ, ಯಲ್ಲಪ್ಪಾ ಮಾಲವಣಕರ, ಯಶವಂತ ಪಟ್ಟೇಕರ,...

Post

ಮಳಗಿ: ಮೀನು ಹಿಡಿಯಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವು..!

ಮುಂಡಗೋಡ: ತಾಲೂಕಿನ ಮಳಗಿಯಲ್ಲಿ, ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟ‌ನೆ ನಡೆದಿದೆ. ಉಮೇಶ್ ಶಿವಪ್ಪ ಬೋವಿ(25) ಮೃತಪಟ್ಟ ಯುವಕನಾಗಿದ್ದಾನೆ. ಮಳಗಿ ಗ್ರಾಮದ ಸಿದ್ದಾಪುರ ಓಣಿಯ ನಿವಾಸಿಯಾಗಿರೊ ಯುವಕ ಶನಿವಾರ ಮದ್ಯಾನ ಮೀನು ಹಿಡಿಯಲೆಂದು ಕೆರೆಗೆ ಹೋಗಿದ್ದ. ಈ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಅಂತಾ ಸಂಬಂಧಿ ಜಯಮ್ಮ ಹನ್ಮಂತ ಬೋವಿ ಎಂಬುವವರು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Post

ಬನವಾಸಿ ಭಾಗದ ಗ್ರಾಮಗಳಿಗೆ ಸಚಿವ ಹೆಬ್ಬಾರ್ ಭೇಟಿ: ಕೋವಿಡ್ ನಿರ್ವಹಣೆ ಕುರಿತು ಚರ್ಚೆ..!

ಶಿರಸಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇಂದು ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ಬದನಗೋಡ, ಬಿಸಲಕೊಪ್ಪ, ಅಂಡಗಿ ಹಾಗೂ ಸುಗಾವಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಬ್ಬಾರ್ ಕೋವಿಡ್ ಕೇರ್ ಕಿಟ್ ಅನ್ನು ವಿತರಿಸಿದರು. ಈ...