Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಹುನಗುಂದದಲ್ಲಿ ರಾಯಣ್ಣ ಬಾಯ್ಸ್ ನಿಂದ ಸಂಭ್ರಮದ ಧ್ವಜಾರೋಹಣ..!

ಹುನಗುಂದದಲ್ಲಿ ರಾಯಣ್ಣ ಬಾಯ್ಸ್ ನಿಂದ ಸಂಭ್ರಮದ ಧ್ವಜಾರೋಹಣ..!

ಮುಂಡಗೋಡ; ತಾಲೂಕಿನ ಹುನಗುಂದ ಗ್ರಾಮದಲ್ಲಿ ರಾಯಣ್ಣ ಬಾಯ್ಸ್ ವತಿಯಿಂದ ಸಂಭ್ರಮದ ಧ್ವಜಾರೋಹಣ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ರು‌. ಹುನಗುಂದದ ಮುಖ್ಯ ಸರ್ಕಲ್ ನಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಅಲ್ದೇ ಸರ್ಕಲ್ ನಲ್ಲಿ ಇರುವ ಧ್ವಜಸ್ತಂಭದ ಮೇಲೆ ಭಗವಾ ಧ್ವಜವನ್ನೂ ಹಾರಿಸಲಾಯಿತು. ಈ ವೇಳೆ ಗ್ರಾಮದ ರಾಯಣ್ಣ ಬಾಯ್ಸ್ ಸೇರಿದಂತೆ ಹಲವರು ಭಾಗಿಯಾಗಿದ್ರು.

Post
ಭಲೇ ಬಹಾದ್ದೂರ್..! ಒಂದೇ ನಿಮಿಷದಲ್ಲಿ 100 ಅಡಿ ದೂರ ಟ್ರಾಕ್ಟರ್ ಎಳೆದ ಪೈಲ್ವಾ‌ನ್..!

ಭಲೇ ಬಹಾದ್ದೂರ್..! ಒಂದೇ ನಿಮಿಷದಲ್ಲಿ 100 ಅಡಿ ದೂರ ಟ್ರಾಕ್ಟರ್ ಎಳೆದ ಪೈಲ್ವಾ‌ನ್..!

ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ನಾಗರ ಪಂಚಮಿ ಪ್ರಯುಕ್ತ ಖಾಲಿ ಟ್ರಾಕ್ಟರ್ ಇಂಜಿನ್ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಯಲ್ಲಪ್ಪ ಫಕ್ಕೀರಪ್ಪ ತುಳಜಾನವರ್ ಎಂಬುವ ಯುವಕ, ಕೇವಲ ಒಂದು ನಿಮಿಷದಲ್ಲಿ100 ಅಡಿ ದೂರ ಟ್ರಾಕ್ಟರ್ ಎಳೆದು ಸಾಹಸ ತೋರಿಸಿದ್ರು. ಹೀಗಾಗಿ, ಗ್ರಾಮಸ್ಥರ ಸಂಭ್ರಮಕ್ಕೆ ಕಾರಣರಾದ್ರು. ಜಯಶಾಲಿ ಯುವಕನಿಗೆ ಕೊಪ್ಪ ಗ್ರಾಮಸ್ಥರು ಸನ್ಮಾನಿಸಿ ಬಹುಮಾನ ನೀಡಿದ್ರು.

Post
ಇಬ್ಬರು ಅಂತರ್ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿದ ಮುಂಡಗೋಡ ಪೊಲೀಸ್ರು..!

ಇಬ್ಬರು ಅಂತರ್ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿದ ಮುಂಡಗೋಡ ಪೊಲೀಸ್ರು..!

ಮುಂಡಗೋಡ: ಅವ್ರು ದೇವಸ್ಥಾನ, ಒಂಟಿ ಮನೆಗಳನ್ನು ಗುಡಿಸಿ ಗುಂಡಾಂತರ ಮಾಡೋ ಮಹಾನ್ ಖದೀಮರು, ಅವಕಾಶ ಸಿಕ್ರೆ ರಾಬರಿ ಮಾಡಿ ಬಾಚಿಕೊಂಡು ಹೋಗೋ ಖತರ್ನಾಕ ಕಿರಾತಕರು, ಆದ್ರೆ ಈಗ ಮುಂಡಗೋಡ ಪೊಲೀಸರ ಕೈಗೆ ತಗಲಾಕ್ಕೊಂಡು ಬಿಟ್ಟಿದ್ದಾರೆ. ತಾಲೂಕಿನ ಮಂದಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ದೇವರನ್ನೇ ಬಿಡದವರು..! ಯಸ್, ಇವ್ರು ಅಕ್ಷರಶಃ ಅಂತರ್ ಜಿಲ್ಲಾ ಪ್ರೊಫೆಷನಲ್ ಕಳ್ಳರು. ಮುಂಡಗೋಡ ತಾಲೂಕಿನಲ್ಲಿ ದೇವಸ್ಥಾನ, ಮನೆ ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಆದ್ರೆ ನಸೀಬು...

Post
ಎಸ್.ಎಸ್.ಎಲ್.ಸಿ ಫಲಿತಾಂಶ: ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್..!

ಎಸ್.ಎಸ್.ಎಲ್.ಸಿ ಫಲಿತಾಂಶ: ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್..!

ಶಿರಸಿ: ಇಂದು ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಸಿದ್ದಾಪುರದ ಪ್ರಶಾಂತಿ ವಿದ್ಯಾನಿಕೇತನದಲ್ಲಿ ಓದುತ್ತಿರೋ ವಿದ್ಯಾರ್ಥಿನಿ ಹೇಮಾ ಉಮೇಶ ಹೆಗಡೆ ಹಾಗೂ ಸಿದ್ದಾಪುರದ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ಎಸ್.ಎನ್.ಸುನೈ ಮತ್ತು ರೇಷ್ಮಾ ಹೆಗಡೆ 625 ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಒಬ್ಬ ವಿದ್ಯಾರ್ಥಿನಿ 625 ಅಂಕ ಗಳಿಸಿ ಸಾಧನೆ ಮಾಡಿದ್ದಳು. ಆದರೆ ಈ ಬಾರಿ...

Post
ಹೊನ್ನಾವರದಲ್ಲಿ ಶಂಕಿತ ಭಯೋತ್ಪಾದಕನ ಬಂಧನ; ಇಂದು ಕೋರ್ಟ್ ಗೆ ಹಾಜರು ಪಡಿಸಲಿರೋ ಪೊಲೀಸರು..!

ಹೊನ್ನಾವರದಲ್ಲಿ ಶಂಕಿತ ಭಯೋತ್ಪಾದಕನ ಬಂಧನ; ಇಂದು ಕೋರ್ಟ್ ಗೆ ಹಾಜರು ಪಡಿಸಲಿರೋ ಪೊಲೀಸರು..!

ಹೊನ್ನಾವರ: ತಾಲೂಕಿನ ಮಂಕಿ ಗ್ರಾಮದಲ್ಲಿ ನಿನ್ನೆ ಬಂಧಿಸಿದ್ದ ಶಂಕಿತ ಭಯೋತ್ಪಾದಕನನ್ನು ಇಂದು ಪೊಲೀಸರು, ಹೊನ್ನಾವರ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿರೋ ಮಾಹಿತಿ ಲಭ್ಯವಾಗಿದೆ. ಜುಫ್ರಿ ಜವಾಹರ್ ದಾಮೂದಿ ಎನ್ನುವವನನ್ನ ನಿನ್ನೆ NIA ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಐಸೀಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಜುಫ್ರಿ, ಐಸೀಸ್ ಮಾಸಿಕ ಪತ್ರಿಕೆ “ವಾಯ್ಸ್ ಆಫ್ ಹಿಂದ್” ನ್ನು ದಕ್ಷಿಣ ಭಾರತದಲ್ಲಿ ಭಾಷಾಂತರ ಮಾಡುತ್ತಿದ್ದ. ಸಾಮಾಜಿಕ ಜಾಲತಾಣ ಮೂಲಕ ಯುವಕರಿಗೆ ಪ್ರಚೋದನೆ ಕೊಡುತ್ತಿದ್ದ. ಹೀಗಾಗಿ, ಖಚಿತ...

Post
ಇಂದೂರಿನಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟ ಅರಣ್ಯ ಇಲಾಖೆ..!

ಇಂದೂರಿನಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟ ಅರಣ್ಯ ಇಲಾಖೆ..!

ಮುಂಡಗೋಡ: ತಾಲೂಕಿನ ಇಂದೂರು ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರೋ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಿದೆ. ಇಂದೂರು ಹೊರವಲಯದ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

Post
ಭಟ್ಕಳದಲ್ಲಿ ಮತ್ತೆ NIA ದಾಳಿ; ಶಂಕಿತ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ..!

ಭಟ್ಕಳದಲ್ಲಿ ಮತ್ತೆ NIA ದಾಳಿ; ಶಂಕಿತ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ..!

ಭಟ್ಕಳ: ಪಟ್ಟಣದಲ್ಲಿ ಮತ್ತೆ ಎನ್ಐಎ ದಾಳಿ ನಡೆದಿದೆ. ಭಯೋತ್ಪಾದನೆ ನಂಟಿನ ಆರೋಪದಡಿ ಇಲ್ಲಿನ ಉಮರ್‌ ಸ್ಟ್ರೀಟ್, ತೆಂಗಿನಗುಂಡಿ, ಸಾಗರ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿರೋ NIA ತಂಡ ಮೂವರನ್ನು ವಶಕ್ಕೆ ಪಡೆದಿದೆ. ಈ ಹಿಂದೆ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ಕೃತ್ಯದಲ್ಲಿ ತೋಡಗಿದ್ದವನ ಸಹೋದರನನ್ನು NIA ಟೀಂ ವಶಕ್ಕೆ ಪಡೆದ ಮಾಹಿತಿ ಲಭ್ಯವಾಗಿದೆ‌. ಜಿಲ್ಲೆಯ ಉನ್ನತಾಧಿಕಾರಿಗಳ ಜತೆ ಗುಪ್ತವಾಗಿ ದಾಳಿ ನಡೆಸಿರುವ ಎನ್‌ಐಎ ವಶಕ್ಕೆ ಪಡೆದಿರುವ ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ಇನ್ನು, ಇಂತಹದ್ದೊಂದು ದಾಳಿ ವೇಳೆ ಜಿಲ್ಲಾ...

Post
ನಂದಿಕಟ್ಟಾದ “ಗಟಾರು ಸಮಸ್ಯೆ” ಪರಿಶೀಲಿಸಿದ ಸದಸ್ಯರು..! ಪಿಡಿಓ ಸಾಹೇಬ್ರೇ ನಿಮ್ಮ ನಿರ್ಲಕ್ಷ ಸರಿನಾ..?

ನಂದಿಕಟ್ಟಾದ “ಗಟಾರು ಸಮಸ್ಯೆ” ಪರಿಶೀಲಿಸಿದ ಸದಸ್ಯರು..! ಪಿಡಿಓ ಸಾಹೇಬ್ರೇ ನಿಮ್ಮ ನಿರ್ಲಕ್ಷ ಸರಿನಾ..?

ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಿನ್ನೆ ಗುರುವಾರ ನಡೆದಿದ್ದ ಪುಟ್ಟ ಬಾಲಕಿ ಗಟಾರಿನಲ್ಲಿ ಬಿದ್ದು ಒದ್ದಾಡಿದ ಘಟನೆಗೆ ಸಂಬಂಧಿಸಿದಂತೆ ಇಂದು ನಂದಿಕಟ್ಟಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದ್ರೆ ಪಿಡಿಓ ಸಾಹೇಬ್ರು ಮಾತ್ರ ಪಂಚಾಯತಿಗೆ ಬಂದರೂ ಘಟನಾ ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ ತೋರಿದ್ದಾರೆ ಅಂತಾ ಕೆಲವ್ರು ಅಸಮಾಧಾನ ಹೊರ ಹಾಕಿದ್ರು. ಅವೈಜ್ಞಾನಿಕ ಗಟಾರು‌ ನಿರ್ಮಾಣ..! ಇನ್ನು ಗಟಾರಗಳ ಅವ್ಯವಸ್ಥೆ ಕಣ್ಣಾರೆ ಕಂಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ತಕ್ಷಣವೇ...

Post
ಗಟಾರಿನ ಕೊಳಚೆಯಲ್ಲಿ ಬಿದ್ದ ಮಗು: ಆ ಅಜ್ಜಿಯ ಸಮಯಪ್ರಜ್ಞೆಯಿಂದ ಬಚಾವ್..!

ಗಟಾರಿನ ಕೊಳಚೆಯಲ್ಲಿ ಬಿದ್ದ ಮಗು: ಆ ಅಜ್ಜಿಯ ಸಮಯಪ್ರಜ್ಞೆಯಿಂದ ಬಚಾವ್..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಇವತ್ತು ಭಯಾನಕ ಘಟನೆಯೊಂದು ನಡೆದು ಹೋಗಿದೆ. ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೇ ವರ್ಷದ ಪುಟ್ಟ ಕಂದಮ್ಮ ಕೊಳಚೆ ತುಂಬಿದ್ದ ಗಟಾರಿನಲ್ಲಿ ಬಿದ್ದು ಒದ್ದಾಡಿದೆ‌. ಅದೃಷ್ಟವಶಾತ್ ಹಾಗೆ ಬಿದ್ದ ಪುಟ್ಟ ಮಗುವನ್ನು ತಕ್ಷಣವೇ ಅಜ್ಜಿ ಮೇಲಕ್ಕೆತ್ತಿದ್ದಾರೆ. ಇಲ್ಲವಾಗಿದ್ದರೆ, ಪುಟ್ಟ ಮಗು ಈಗ ನೆನಪಾಗಿ ಉಳಿಯುತ್ತಿತ್ತು ಅಷ್ಟೆ. ಮಗು ಬದುಕಿದ್ದೇ ಪುಣ್ಯ..! ಹೌದು, ನಂದಿಕಟ್ಟಾ ಗ್ರಾಮದ ಮಕ್ಬುಲ್ ಖಾನ್ ಶಾಹಪುರ್ ಎಂಬುವರ, ಒಂದೂವರೇ ವರ್ಷದ ಪುಟ್ಟ ಬಾಲಕಿ ಇವತ್ತು ಮದ್ಯಾಹ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಈ...

Post
ಇಂದೂರಿನಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ್ದು ಚಿರತೆ ಮರಿನಾ..?

ಇಂದೂರಿನಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ್ದು ಚಿರತೆ ಮರಿನಾ..?

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದ ಇಬ್ಬರು ಮಹಿಳೆಯರ ಮೇಲೆ ಚಿರತೆ ಮರಿ ದಾಳಿ ಮಾಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ‌. ಇಂದು ಬೆಳಿಗ್ಗೆ ಗದ್ದೆಯ ಕೆಲಸಕ್ಕಾಗಿ ಹೋಗುತ್ತಿದ್ದ ವೇಳೆ ಎರಡು ಮರಿಗಳೊಂದಿಗೆ ಚಿರತೆ ಅಲ್ಲಿ ಕಂಡುಬಂದಿತ್ತು ಎನ್ನಲಾಗಿದೆ. ಆ ವೇಳೆ ತಾಯಿ ಚಿರತೆ ಮುಂದೆ ಹೋಗಿದೆ. ಆದ್ರೆ ಚಿರತೆ ಮರಿಗಳು ಮಾತ್ರ ಮಹಿಳೆಯರ ಮೇಲೆ ಅಟ್ಯಾಕ್ ಮಾಡಿವೆ ಎನ್ನಲಾಗಿದೆ‌. ಇಬ್ಬರು ಮಹಿಳೆಯರ ಮೇಲೆ ಮರಿ ದಾಳಿ ಮಾಡಿದೆ ಆದ್ರೆ, ಅದ್ರಲ್ಲಿ ಓರ್ವ ಮಹಿಳೆ ಗೀತಾ ನಾಗಪ್ಪ ದೊಡ್ಮನಿ ಎಂಬುವವರಿಗೆ...