ಮುಂಡಗೋಡ: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಲು ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದ್ರು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಕರ್ತರು, 2ಎ ಮೀಸಲಾತಿಗೆ ಸೇರಿಸುವಂತೆ ಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಸಿದ್ದೆವು, ಆ ವೇಳೆ, ಸಿಎಂ ಆಗಿದ್ದ ಯಡಿಯೂರಪ್ಪ ಅವರು 2ಎ ಮೀಸಲಾತಿ ನೀಡಲು ಆರು ತಿಂಗಳು ಸಮಯ ಕೇಳಿದ್ದರು, ಆದ್ರೆ ಈಗ ಯಡಿಯೂರಪ್ಪರ ಸಮಯದ ಅವಧಿ ಮುಗಿದಿದೆ. ಈಗ ನೂತನವಾಗಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ, ಕೂಡಲೇ...
Top Stories
ತಡಸ ತಾಯವ್ವನ ದೇವಸ್ಥಾನದ ಬಳಿ ಸ್ವಿಪ್ಟ್ ಕಾರಿಗೆ ಬೊಲೆರೋ ವಾಹನ ಡಿಕ್ಕಿ..!
ಶಿವಶಕ್ತಿ ತಂಡಕ್ಕೆ ‘ಗಜಾನನ ಟ್ರೋಫಿ-2026’ ಮಕುಟ; ಗಣೇಶ್ ನಗರದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿ ಸಂಪನ್ನ
KDCC ಬ್ಯಾಂಕ್ ನೂತನ ಅಧ್ಯಕ್ಷರಾಗಿ ಶಿವರಾಮ್ ಹೆಬ್ಬಾರ್ ಆಯ್ಕೆ, ಕೃಷ್ಣ ದೇಸಾಯಿಗೆ ಒಲಿದ ಉಪಾಧ್ಯಕ್ಷ ಸ್ಥಾನ..!
ಮುರುಡೇಶ್ವರದಲ್ಲಿ ಮಹಾಶಿವರಾತ್ರಿಯ ಜಾಗರಣೆ ಉತ್ಸವ, ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ : ಸಚಿವ ಮಾಂಕಾಳ ವೈದ್ಯ
ಹಾವೇರಿಯಲ್ಲಿ ಇಂದು ರಾಜ್ಯ ಮಟ್ಟದ “ಭೂ ಗ್ಯಾರಂಟಿ ಸಮರ್ಪಣಾ” ಸಮಾವೇಶ, ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಂಭ್ರಮಕ್ಕೆ ಸಜ್ಜು..!
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಖಡಕ್ ಸೂಚನೆ..!
ನಾಳೆ ನಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಉಷ್ಣ ಅಲೆ; ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚನೆ..!
ಕೆಂಪು ಕೋಟೆ ದಾಳಿಗೆ ಜೈಶ್-ಎ-ಮೊಹಮ್ಮದ್ ನಂಟು : ವಿಶ್ವಸಂಸ್ಥೆ ವರದಿ ; ಮಹಿಳಾ ಘಟಕದ ಬಗ್ಗೆ ಎಚ್ಚರಿಕೆ
ಗ್ರಾಮ ಪಂಚಾಯತಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು; ಸಚಿವ ಮಾಂಕಾಳ ವೈದ್ಯ..!
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರ ಕಾರ್ಣಿಕ..! ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ..!
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!
ತಟ್ಟಿಹಳ್ಳಿ ಶಿವಾನಂದನ ಹತ್ಯೆ ಯತ್ನ ಕೇಸ್, ಆರೋಪಿಯ ಹೆಡೆಮುರಿ ಕಟ್ಟಿದ ಮುಂಡಗೋಡಿನ ಚಾಣಾಕ್ಷ ಪೊಲೀಸ್ರು..!
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!
ವಿ.ಎಸ್.ಪಾಟೀಲರ “ಬಂದೂಕು” ನಾಪತ್ತೆ, ಹುಡಿಕಿಕೊಡುವಂತೆ ಮುಂಡಗೋಡ ಠಾಣೆಯಲ್ಲಿ ದೂರು..!
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ
ಹೊನ್ನಾವರದಲ್ಲಿ ಭೀಕರ ಅಗ್ನಿ ದುರಂತ, ಸುಟ್ಟು ಕರಕಲಾದ ಕಾರು, ಕಾರಲ್ಲಿದ್ದ ಇಬ್ಬರು ಸಜೀವ ದಹನ..!
Category: ಉತ್ತರ ಕನ್ನಡ
ಸಿನಿಮೀಯ ರೀತಿಯಲ್ಲಿ ಕಳ್ಳನ ಕೈಚಳಕ, ಜ್ಯುವೇಲ್ಲರಿ ಮಾಲೀಕನಿಂದ ಚಿನ್ನದ ಸರ ಕಸಿದು ಪರಾರಿ..!
ಶಿರಸಿ: ಸಿನಿಮೀಯ ರೀತಿಯಲ್ಲಿ ಚಿನ್ನದ ಸರ ಅಪಹರಣ ಮಾಡಿದ ಘಟನೆ, ಶಿರಸಿಯ ರತ್ನದೀಪ ಜ್ಯುವೆಲರ್ಸ್ ನಲ್ಲಿ ನಡೆದಿದೆ. ಚಿನ್ನದ ಸರ ಖರೀದಿಯ ನೆಪದಲ್ಲಿ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ವ್ಯಕ್ತಿ, ಚಿನ್ನದ ಸರ ತೋರಿಸುವಂತೆ ಕೇಳಿದ್ದಾನೆ. ಅಂಗಡಿಯಾತ ಚಿನ್ನದ ಸರ ತೋರಿಸುತ್ತಿದ್ದಾಗಲೇ ಸರ ಕಸಿದುಕೊಂಡ ಕಳ್ಳ ಕಾಲ್ಕಿತ್ತಿದ್ದಾನೆ. ಚಿನ್ನದ ಸರದೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾನೆ. ಕಳ್ಳನ ಸಂಪೂರ್ಣ ಕೃತ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಚಾಲಾಕಿ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.
ಮುಂಡಗೋಡಿನಲ್ಲಿ ಸರಳ ವಿಶ್ವಕರ್ಮ ಜಯಂತಿ ಆಚರಣೆ..!
ಮುಂಡಗೋಡ: ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ಉತ್ಸವ ಸರಳವಾಗಿ ಆಚರಿಸಲಾಯಿತು. ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಹಶೀಲ್ದಾರ ಕಾರ್ಯಾಲಯದ ಅಧಿಕಾರಿಗಳು ಹಾಗೂ ಮುಂಡಗೋಡ ತಾಲೂಕಿನ ವಿವಿಧ ಗ್ರಾಮಗಳ ವಿಶ್ವಕರ್ಮ ಸಮಾಜದ ಮುಖಂಡರು ಸರಳವಾಗಿ ಆಚರಿಸಿದ್ರು. ಈ ವೇಳೆ ವಿಶ್ವಕರ್ಮ ಸಮಾಜದ ಆರ್.ವಿ. ಬಡಿಗೇರ್, ಮೌನೇಶ್ ಬಡಿಗೇರ್, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸೇರಿ ವಿಶ್ವಕರ್ಮ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.
ಯಲ್ಲಾಪುರದ ತುಡುಗುಣಿ ಕಾಡು ಮನೆಯಲ್ಲಿ ಮಹಿಳೆಯ ಭೀಕರ ಹತ್ಯೆ..! ಅಷ್ಟಕ್ಕೂ ಹಂತಕನ ನೆರಳು ಅದೇನಾ..?
ಯಲ್ಲಾಪುರ ತಾಲೂಕಿನಲ್ಲಿ ನಿನ್ನೆ ರಾತ್ರಿ ಭೀಕರ ಹತ್ಯೆಯಾಗಿದೆ. ಮಹಿಳೆಯೋರ್ವಳನ್ನ ಆಗಂತುಕರು ಭೀಕರವಾಗಿ ಹತ್ಯೆ ಮಾಡಿ ಹೋಗಿದ್ದಾರೆ. ಯಲ್ಲಾಪುರ-ಶಿರಸಿ ಗಡಿಭಾಗದ ತುಡುಗುಣಿಯಲ್ಲಿ ಇಂತಹದ್ದೊಂದು ಹತ್ಯೆ ನಡೆದಿದ್ದು, ಇಡೀ ಯಲ್ಲಾಪುರ ತಾಲೂಕೇ ಬೆಚ್ಚಿ ಬೀಳುವಂತೆ ಮಾಡಿದೆ. ಅಂದಹಾಗೆ, ಇಲ್ಲಿ ಹೀಗೆ ಭೀಕರ ಹತ್ಯೆಯಾಗಿ ಬಿದ್ದವಳ ಹೆಸರು, ಸರೋಜಾ ನಾಯರ್, ವಯಸ್ಸು ಈಗಿನ್ನು 35 ರ ಆಸು ಪಾಸು. ತುಡುಗುಣಿಯ ಕಾಡಿನಲ್ಲಿರೋ ಮನೆಯಲ್ಲಿ ವಾಸವಿದ್ದ ಈಕೆಯನ್ನ ನಿನ್ನೆ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಯಲ್ಲಾಪುರ ಪೊಲೀಸರು ಸ್ಥಳಕ್ಕೆ...
ಕಟ್ಟಿಗೆ ತುಂಬಿದ್ದ ಲಾರಿ ಪಲ್ಟಿ, ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಸಂಚಾರ ಅಸ್ತವ್ಯಸ್ತ..!
ಯಲ್ಲಾಪುರ: ಕಟ್ಟಿಗೆ ತುಂಬಿದ್ದ ಲಾರಿ ಹೆದ್ದಾರಿಯಲ್ಲೇ ಪಲ್ಟಿಯಾಗಿ, ವಾಹನ ದಟ್ಟಣೆ ಹೆಚ್ಚಿದ ಪರಿಣಾಮ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾದ ಘಟನೆ, ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ನಡೆದಿದೆ. ಅಂಕೋಲಾದಿಂದ ಯಲ್ಲಾಪುರಕ್ಕೆ ತೆರಳುತ್ತಿದ್ದ ಲಾರಿ, ಘಟ್ಟದಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹಾಗೆ ಪಲ್ಟಿಯಾದ ಲಾರಿ ಎದುರಲ್ಲೇ ಮತ್ತೊಂದು ಲಾರಿ, ಕೆಟ್ಟು ನಿಂತಿದೆ. ಪರಿಣಾಮ, ಅರಬೈಲ್ ಘಟ್ಟದಲ್ಲಿ ಸರಕು ಸಾಗಣೆ ಲಾರಿಗಳು ಸಾಲುಗಟ್ಟಿ ನಿಂತಿವೆ. ಮಳೆಯ ಅಬ್ಬರದಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಅಂಕೋಲಾ ಯಲ್ಲಾಪುರ...
ನಾಯಿ ಬೇಟೆಯಾಡಲು ಬಂದ ಚಿರತೆಗೆ ಏನಾಯ್ತು..? ಕುಮಟಾದಲ್ಲೊಂದು ವಿಚಿತ್ರ ಘಟನೆ..!
ಕುಮಟಾ: ನಾಯಿ ಬೇಟೆಯಾಡಲು ಬಂದ ಚಿರತೆಯೊಂದು, ತಾನೆ ನಾಯಿ ಬಲೆಯಲ್ಲಿ ಸಿಲಕಿದ ಘಟನೆ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ನಡೆದಿದೆ. ರಾತ್ರಿ ಮನೆಯ ಹತ್ತಿರ ಕಟ್ಟಿದ್ದ ನಾಯಿಯನ್ನು ಹಿಡಿಯಲು ಬಂದಿದ್ದ ಚಿರತೆ, ನಾಯಿಯ ಬೋನಿನೋಳಗೆ ಹೋಗಿದೆ. ಬೋನಿನೊಳಗೆ ಹೋಗಿದ್ದನ್ನ ಗಮನಿಸಿದ ಮನೆಯ ಮಾಲೀಕರು, ತಕ್ಷಣ ಬೋನ್ ಲಾಕ್ ಮಾಡಿದ್ದಾರೆ. ಹೀಗಾಗಿ, ನಾಯಿ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಲು ಬಂದಿದ್ದ ಚಿರತೆ ಈಗ ನಾಯಿ ಬೋನಲ್ಲೇ ಬಲೆ ಬಿದ್ದಿದೆ. ಹೀಗಾಗಿ, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಚಿರತೆ...
ಮುಂಡಗೋಡಿಗೆ ಸಿಮಾನಿ ಎಸ್.ಎಸ್. ನೂತನ ಪೊಲೀಸ್ ಇನ್ಸ್ ಪೆಕ್ಟರ್..!
ಮುಂಡಗೋಡಿಗೆ ನೂತನ ಪಿಐ ಆಗಿ, ಸಿಮಾನಿ ಎಸ್.ಎಸ್. ಬರಲಿದ್ದಾರೆ. ಸದ್ಯ ವಿಜಯಪುರದ DCRE (Directorate of Civil Rights Enforcement) ನಲ್ಲಿ ಕಾರ್ಯ ನಿರ್ವಹಿಸುತ್ತಿರೋ ಸಿಮಾನಿ ಎಸ್.ಎಸ್. ರವರನ್ನು ತಕ್ಷಣವೇ ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪಿಐ ಆಗಿದ್ದ, ಪ್ರಭುಗೌಡ ಕಿರೆದಳ್ಳಿ, ಡಿವೈಎಸ್ಪಿಯಾಗಿ ಬಡ್ತಿ ಹೊಂದಿ ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಯಾಗಿದ್ದರು.
ಅಗಡಿಯಲ್ಲಿ ತಮ್ಮ ನೆಚ್ಚಿನ ಹೋರಿಗೆ ಹುಟ್ಟು ಹಬ್ಬ ಆಚರಿಸಿದ ಗ್ರಾಮಸ್ಥರು..!
ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದಲ್ಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರೋ ಹೋರಿಗೆ ಹುಟ್ಟು ಹಬ್ಬ ಆಚರಿಸಿದ್ರು. ಗ್ರಾಮಸ್ಥರೇಲ್ಲರೂ ಸೇರಿ ರಾಜಾ ಎಂಬ ಹೆಸರಿನ ಹೋರಿಗೆ ವಿಶೇಷ ಅಲಂಕಾರ ಮಾಡಿ, ತಳೀರು ತೋರಣ ಕಟ್ಟಿ, ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡಿದ್ರು. ಅಲ್ಲದೇ ಗ್ರಾಮಸ್ಥರು ತಮ್ಮನೆಚ್ಚಿನ ಹೋರಿಗೆ ವಿಶೇಷ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು. ಮಹಿಳೆಯರು ಆರತಿ ಬೆಳಗಿದರು, ಜಯಘೋಷಗಳೊಂದಿಗೆ ಕುಣಿದು ಕುಪ್ಪಳಿಸಿದ್ರು.
ತೈಲ ಬೆಲೆ ಇಳಿಸುವಂತೆ ಮಹಿಳಾ ಕಾಂಗ್ರೆಸ್ ಪ್ರತಿಭಟನೆ, ಮನವಿ ಸಲ್ಲಿಕೆ..!
ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಇಂದು, ಗ್ಯಾಸ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸುವಂತೆ ಮುಂಡಗೋಡ ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಮುಖಾಂತರ ಮಾನ್ಯ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಭಾರತಿ ಮಣ್ಣಪ್ಪ ಗೌಡ್ರು, ಮಾಜಿ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಶಾರದಾ ಬಾಯಿ ರಾಠೋಡ್, ಧರ್ಮರಾಜ ನಡಗೇರಿ, ಎಂ. ಎನ್. ದುಂಡಸಿ, ಅಲಿ ಹಸನ್ ಬೆಂಡಿಗೇರಿ, ಮಲ್ಲಿಕಾರ್ಜುನ್ ಗೌಳಿ, ಜೈನು ಬೆಂಡಿಗೇರಿ, ಅಲ್ಲಾಉದ್ದೀನ್ ಕಮಡೊಳ್ಳಿ,ಪ್ರಶಾಂತ್...
ನಂದಿಕಟ್ಟಾ ಪ್ಲಾಟ್ ನಲ್ಲಿ ಕುಡಿಯಲು ನೀರಿಲ್ಲ, ಗದ್ದೆಗಳಿಗೆ ಅಲೆದಾಡಿ ನೀರು ತರದೇ ಗತಿಯಿಲ್ಲ; ಎಲ್ಲಿದೆ ಆಡಳಿತ..?
ನಂದಿಕಟ್ಟಾ ಗ್ರಾಮದ ನವನಗರ ಪ್ಲಾಟ್ ನ ಜನರು ನಿತ್ಯವೂ ಪರದಾಡುತ್ತಿದ್ದಾರೆ. ಯಾಕಂದ್ರೆ, ಇವ್ರಿಗೆ ಕುಡಿಯಲು ನೀರೇ ಸಿಗುತ್ತಿಲ್ಲ. ನಿತ್ಯವೂ ಕುಡಿಯುವ ನೀರಿಗಾಗಿ ಮಕ್ಕಳು, ಮರಿಗಳೊಂದಿಗೆ ಕೊಡಹೊತ್ತು ಗದ್ದೆಗಳಲ್ಲಿ ತಿರುಗಾಡುವ ಪರಿಸ್ಥಿತಿ ಇಲ್ಲಿನ ಜನ್ರದ್ದು.. ಹೀಗಾಗಿ, ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ ನಿವಾಸಿಗಳು. ಏನಿದು ಸಮಸ್ಯೆ..? ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ ನಂಬರ್ 2 ರಲ್ಲಿ ಬರೋ ನವನಗರ ಪ್ಲಾಟ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ, ಪ್ರತಿದಿನ ಇಲ್ಲಿನ ಜನ ಬಹುತೇಕ...









