ಮುಂಡಗೋಡ:ತಾಲೂಕಿನ ಹುನಗುಂದ ಗ್ರಾಮದ ವಿಠಲ ರುಕ್ಮಿಣಿ ಹರಿಮಂದಿರದಲ್ಲಿ ರವಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 29-8-2021 ರಂದು ರವಿವಾರ ದಿವಸ ಬೆಳಿಗ್ಗೆ 10-00 ಘಂಟೆಗೆ ವಿಠ್ಹಲ ರುಕ್ಮಿಣಿ ಹರಿ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಕೃಷ್ಣನನ್ನು ತೊಟ್ಟಿಲು ಹಾಕುವ ಕಾರ್ಯಕ್ರಮ ಇರುತ್ತದೆ. ಮಧ್ಯಾನ ಪ್ರಸಾಧ ವ್ಯವಸ್ಥೆ ಇರುವದರಿಂದ ಎಲ್ಲಾ ಭಕ್ತಾದಿಗಳು ಭಾಗವಹಿಸಬೇಕೆಂದು ಪಾಂಡುರಂಗ ಸೇವಾ ಸಮಿತಿಯವರು ಮನವಿ ಮಾಡಿದ್ದಾರೆ.
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: ಉತ್ತರ ಕನ್ನಡ
ಆಲಳ್ಳಿಯಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ, ಗಾಯ..!
ಮುಂಡಗೋಡ : ತಾಲೂಕಿನ ಆಲಳ್ಳಿ ಗ್ರಾಮದ ಕಾಡಿನಲ್ಲಿ ಅಣಬೆ ಕೀಳಲು ಹೋದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದ ಘಟನೆ ನಡೆದಿದೆ. ಇಂದು ನಸುಕಿನ ಜಾವ ಆಲಳ್ಳಿ ಗ್ರಾಮದ ಧರ್ಮಣ್ಣ ಖಂಡೋಜಿ ಹಾಗೂ ಸಂಗಡಿಗರು ಸೇರಿ ಆಲಳ್ಳಿ ಅರಣ್ಯದಲ್ಲಿ ಅಣಬೆ ಕೀಳಲು ಹೋದಾಗ ಧರ್ಮಣ್ಣನ ಮೇಲೆ ಕರಡಿ ದಾಳಿ ಮಾಡಿದೆ ಅಂತಾ ತಿಳಿದು ಬಂದಿದೆ. ಅರಣ್ಯದಂಚಿನಲ್ಲಿರುವ ಗೋವಿನಜೋಳ ಹೊಲಕ್ಕೆ ಹೋದ ಸಂದರ್ಭದಲ್ಲಿ ಮಂಗಗಳನ್ನು ಓಡಿಸಲು ಹೋದಾಗ ಕರಡಿ ದಾಳಿ ಮಾಡಿದೆ. ಕರಡಿಯ ಜೊತೆ ಎರಡು ಮರಿಗಳಿದ್ದವು. ಜೋರಾಗಿ...
ಎಲ್ಟಿ MLC ಆಗೋ ಕನಸಿನ ಹಿಂದೆ, ಇಂದೂರು ಕ್ಷೇತ್ರದ ನಂಟು..? ಒಳ ಮಸಲತ್ತುಗಳ ಏಟಿಗೆ, ಎಲ್ಲವೂ ಕಗ್ಗಂಟು..!!
ಮುಂಡಗೋಡ: ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಸದ್ಯ ಟಿಕೆಟ್ ಪೈಪೋಟಿ ತಾರ್ಕಿಕ ಅಂತ್ಯಕ್ಕೆ ಬಂದಾಯ್ತಾ..? ಇಂತಹದ್ದೊಂದು ಪ್ರಶ್ನೆ ಮತ್ತು ಅನುಮಾನ ಸದ್ಯದ ಕೆಲ ಬೆಳವಣಿಗೆಗಳನ್ನು ನೋಡಿದ್ರೆ ಎಂತವರಿಗೂ ಅನಿಸದೇ ಇರಲ್ಲ. ಯಾಕಂದ್ರೆ, ಮೊದ ಮೊದಲು ಮೂವರ ನಡುವೆ ಟಿಕೆಟ್ ಗುದ್ದಾಟ ಇತ್ತು. ಅದ್ರಲ್ಲಿ, ಕೆಂಜೋಡಿ ಗಲಬಿ, ಸಿದ್ದು ಹಡಪದ ಹಾಗೂ ರವಿಗೌಡ ಪಾಟೀಲರ ನಡುವೆ ಟಿಕೆಟ್ ಫೈಟ್ ನಡೆದಿತ್ತು, ಆ ನಂತರದಲ್ಲಿ ಬಸನೂ ನಡುವಿನಮನಿ ಅನ್ನೊ ಯುವಕ ನಾನೂ ಒಂದು ಕೈ ನೋಡೇ ಬಿಡ್ತಿನಿ ಅಂತಾ...
ಬಿಜೆಪಿ ಮಹಿಳಾ ಮೋರ್ಚಾದಿಂದ ಹಿರಿಯ ನಾಗರಿಕರಿಗೆ ರಕ್ಷಾಬಂಧನ..!
ಮುಂಡಗೋಡ: ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ನಿಮಿತ್ತ ಹಿರಿಯ ನಾಗರಿಕರಿಗೆ ರಾಖಿ ಕಟ್ಟುವ ಮೂಲಕ ಆಚರಿಸಲಾಯಿತು. ಈ ವೇಳೆ ಜಿಲ್ಲಾ ಉಪಾಧ್ಯಕ್ಷೆ ವೀಣಾ ಓಸಿಮಠ, ತಾಲೂಕಾಧ್ಯಕ್ಷೆ ಲೈಸಾ ಥಾಮಸ್, ಪ್ರದಾನ ಕಾರ್ಯದರ್ಶಿ ಅಂಜು ಪಾಯಣ್ಣವರ, ಉಪಾಧ್ಯಕ್ಷೆ ಸರಸ್ವತಿ ಕೊಂಡ್ಲಿ, ಮತ್ತು ಸವಿತಾ ಸಾನು ಸೇರಿ ಹಲವರು ಹಾಜರಿದ್ದರು.
ಮುಂಡಗೋಡಿನಲ್ಲಿ ನೂಲಿ ಚಂದಯ್ಯನವರ ಜಯಂತ್ಯೋತ್ಸವ..!
ಮುಂಡಗೋಡ: ಪಟ್ಟಣದಲ್ಲಿ ಕೊರವ ಸಮಾಜದ ಶಿವಶರಣ ಶ್ರೀ ನೂಲಿ ಚಂದಯ್ಯ ನವರ ಜಯಂತೋತ್ಸವ ಕಾರ್ಯಕ್ರಮವನ್ನು ಬಂಕಾಪುರ ರಸ್ತೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾಜದ ಗುರುಹಿರಿಯರ ಹಾಗೂ ಸಮಾಜದ ಬಂಧು ಮಿತ್ರ ಸಹೋದರರ ಆಶ್ರಯದಲ್ಲಿ ಶಿವ ಶರಣರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಮಾಡಲಾಯಿತು. ಕಾಯಕಯೋಗಿ ನೂಲಿಯ ಚಂದಯ್ಯನವರು ಜನಿಸಿದ ದಿನವಾದ ಇಂದು ರಕ್ಷಾ ಬಂಧನದ ಪ್ರಯುಕ್ತವಾಗಿ ಬಂಧುಗಳಲ್ಲಿ ಶ್ರೀರಕ್ಷೆ ನಮ್ಮೆಲ್ಲರಿಗೂ ರಕ್ಷಣೆ ಆಗಲೆಂದು ರಕ್ಷಾಬಂಧನವನ್ನು ಮಾಡಿಸಿ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ವೇಳೆ ತಾಲೂಕಿನ ಸಮಾಜದ ಎಲ್ಲ...
ನಾಗರಹಾವು ಸೆರೆಹಿಡಿದು ರಕ್ಷಿಸಿದ ಅರಣ್ಯ ಸಿಬ್ಬಂದಿ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ಹತ್ತಿರ ವಿರುವ ರಾಮಣ್ಣ ಕುನ್ನೂರ ಅವರ ಹಿತ್ತಲಲ್ಲಿ ನಾಗರಹಾವು ಪ್ರತ್ಯಕ್ಷವಾಗಿ ಆತಂಕ ಹುಟ್ಟಿಸಿತ್ತು. ಹೀಗಾಗಿ, ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಕರೆ ಮಾಡಿದ್ರು. ನಂತರ ಬಂದ ಅರಣ್ಯ ಸಿಬ್ಬಂದಿ ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ್ರು. ನಂತರ ಸೆರೆಹಿಡಿದ ಹಾವನ್ನು ಸುರಕ್ಷಿತವಾಗಿ ಕಾಡಿನಲ್ಲಿ ಬಿಡಲಾಯಿತು.. ಹೀಗಾಗಿ, ಅಲ್ಲಿನ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ನ್ಯಾಸರ್ಗಿ ಗ್ರಾಮದೇವಿಗೆ 108 ದಿನದ ಉಡಿತುಂಬುವ ಕಾರ್ಯಕ್ರಮ..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಗ್ರಾಮದ ಗ್ರಾಮದೇವಿ ದ್ಯಾಮವ್ವ ತಾಯಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. 108 ದಿನದ ಉಡಿತುಂಬುವ ಕಾರ್ಯಕ್ರಮವನ್ನು ಗ್ರಾಮಸ್ಥರು ಶೃದ್ದಾಪೂರ್ವಕವಾಗಿ ನೆರವೇರಿಸಿದ್ರು. ಈ ವೇಳೆ ದ್ಯಾಮವ್ವ ತಾಯಿಗೆ ಸಾಂಪ್ರದಾಯಿಕವಾಗಿ ಉಡಿ ತುಂಬಲಾಯಿತು. ವಿಶೇಷವಾಗಿ ಪೂಜೆ ನೆರವೇರಿಸಿ ಪ್ರಸಾದ ಹಂಚಲಾಯಿತು. ಈ ವೇಳೆ ಗ್ರಾಮದ ಮುಖಂಡರು, ಮುತ್ತೈದೆಯರು ಸೇರಿದಂತೆ ಹಲವರು ಭಾಗಿಯಾಗಿದ್ರು.
ಸಿದ್ದಪ್ಪ ಹಡಪದ್ ಗೆ ಟಿಕೆಟ್ ನೀಡುವಂತೆ ಒತ್ತಾಯ: ಸಚಿವ ಹೆಬ್ಬಾರ್ ರನ್ನು ಭೇಟಿ ಮಾಡಿದ ಹುನಗುಂದ ಮುಖಂಡರು..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಮುಖಂಡರು ಹಾಗೂ ಗ್ರಾಮದ ನೂರಾರು ಜನ ಬಿಜೆಪಿ ಕಾರ್ಯಕರ್ತರು ಇಂದು ಯಲ್ಲಾಪುರಕ್ಕೆ ತೆರಳಿ, ಸಚಿವ ಶಿವರಾಮ್ ಹೆಬ್ಬಾರ್ ರವರನ್ನು ಭೇಟಿಯಾಗಿದ್ರು. ಮುಂಬರುವ ಜಿಲ್ಲಾಪಂಚಾಯತಿ ಚುನಾವಣೆಗೆ ಇಂದೂರು ಜಿ ಪಂ ಕ್ಷೇತ್ರದಿಂದ ಹುನಗುಂದ ಗ್ರಾಮದ ಸಿದ್ದಪ್ಪ ಹಡಪದ್ ರವರಿಗೇ ಅಭ್ಯರ್ಥಿಯನ್ನಾಗಿಸಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಿದ್ದಪ್ಪ ಹಡಪದ್ ರವರು ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೇ ಕಳೆದ ಎರಡು ಬಾರಿ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋತಿದ್ದಾರೆ. ಇಂದೂರು ಕ್ಷೇತ್ರದಲ್ಲಿ ಸಿದ್ದಪ್ಪ ಹಡಪದ್...
ಮುಂಡಗೋಡ ಬಿಜೆಪಿಯಲ್ಲೀಗ “ಜಂಪಿಂಗ್” ಪರ್ವ ಶುರು..! ಒಳಗೊಳಗೇ ನಡೀತಿದೆ ಭಾರೀ ಮಸಲತ್ತು..!!
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಸ್ಪೋಟಕ ಬದಲಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಆಗೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಕಳಾಹೀನವಾಗಿರೋ “ಕೈ” ಪಾಳಯಕ್ಕೆ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಘಟಾನುಘಟಿಗಳೇ ಹಾರಲು ತುದಿಗಾಲಲ್ಲಿ ನಿಂತಿದ್ದಾರೆ. ಅಂತಹದ್ದೊಂದು ಬಾತ್ಮಿ ಕ್ಷೇತ್ರದ ಬಿಜೆಪಿ ಪಾಲಿಗೆ ಖಂಡಿತ ಪೂರಕವಾಗಿಲ್ಲ. ಬದಲಾಗಿ ಇಲ್ಲಿನ ಬಿಜೆಪಿಗೆ “ಅದೇನೋ ಕಾದಿದೆ” ಅನ್ನೋ ಸ್ಪಷ್ಟ ಸೂಚನೆಗಳು ಕಾಣಸಿಗ್ತಿವೆ. ಆಂತರಿಕ ಕುದಿ… ನಿಜ, ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ. ಇಡೀ ಕ್ಷೇತ್ರದಲ್ಲಿ ಆಂತರಿಕ ಬೆಗುದಿ ಅನ್ನೋದು ಬಹುಶಃ ಯಾರೂ...
ಇದು ಉತ್ತರ ಕನ್ನಡದ ಹೆಮ್ಮೆ..! ಪ್ರತಿಷ್ಠಿತ ನಾಸಾಗೆ ಕನ್ನಡ ಕುವರನ ಆಯ್ಕೆ..!!
ಸಿದ್ದಾಪುರ: ಹಂಟ್ಸ್ವಿಲ್ ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ (UAH) ಇಬ್ಬರು ಡಾಕ್ಟರೇಟ್ ವಿದ್ಯಾರ್ಥಿಗಳು ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FINESST) ಅನುದಾನದಲ್ಲಿ NASA ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಭಾಜನವಾಗಿದೆ. ಕ್ಯಾಥರೀನ್ ಡೇವಿಡ್ಸನ್ ಮತ್ತು ದಿನೇಶ (ದಿನೇಶ್) ವಸಂತ ಹೆಗಡೆ ತಲಾ 135000 ಅಮೇರಿಕನ್ ಡಾಲರ್ ಅನ್ನು ಸ್ಟೈಫಂಡ್ , ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಲು...









