Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಮುಂಡಗೋಡ ಬಿಜೆಪಿಯ ಒಳಗುದಿ ತಣ್ಣಗಾಗಿಸಲು “ವಿವೇಕ” ಯತ್ನ..!

ಮುಂಡಗೋಡ ಬಿಜೆಪಿಯ ಒಳಗುದಿ ತಣ್ಣಗಾಗಿಸಲು “ವಿವೇಕ” ಯತ್ನ..!

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಗಳು ಜಾರಿಯಲ್ಲಿವೆ. ಬಿಜೆಪಿಯ ಒಳ ಮಸಲತ್ತುಗಳ ಕುರಿತಾಗಿ ಎದ್ದಿರುವ ಸಾಲು ಸಾಲು ಗುಲ್ಲುಗಳು, ಒಂದರ್ಥದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಇನ್ನಿಲ್ಲದ ತಳಮಳಕ್ಕೆ ಕಾರಣವಾಗಿದೆ. ಬಹುತೇಕ ಯುವ ಪಡೆ ಒಳಗೊಳಗೇ ಕುದಿಯುತ್ತಿದೆ ಅನ್ನೋ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೆಬ್ಬಾರ್ ಪಡೆ ಅಲರ್ಟ್ ಆಗಿದೆ. ಅದ್ರಲ್ಲೂ ಮುಂಡಗೋಡ ತಾಲೂಕಿನಲ್ಲಿ ದಾರಿತಪ್ಪಿದ್ದ ಪಕ್ಷದ ಸಂಘಟನೆಯನ್ನು ಮತ್ತೆ ಟ್ರ್ಯಾಕ್ ಗೆ ತರಲು ಮತ್ತದೇ ಯುವ ನಾಯಕ ಫಿಲ್ಡಿಗೆ ಇಳಿದಿದ್ದಾರೆ. “ವಿವೇಕ” ದಿಂದ ಕೆಲಸ..! ಯಸ್, ಶಿವರಾಮ್ ಹೆಬ್ಬಾರ್...

Post
ಗೋಕರ್ಣದ ಸಮುದ್ರದಲ್ಲಿ ಮುಳುಗುತ್ತಿದ್ದ ಹುಬ್ಬಳ್ಳಿ ಹುಡುಗ, ತಕ್ಷಣವೇ ರಕ್ಷಿಸಿದ್ರು ಸ್ಥಳೀಯರು..!

ಗೋಕರ್ಣದ ಸಮುದ್ರದಲ್ಲಿ ಮುಳುಗುತ್ತಿದ್ದ ಹುಬ್ಬಳ್ಳಿ ಹುಡುಗ, ತಕ್ಷಣವೇ ರಕ್ಷಿಸಿದ್ರು ಸ್ಥಳೀಯರು..!

ಗೋಕರ್ಣ: ಸಮುದ್ರದ ನೀರಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ ಮಾಡಲಾಗಿದೆ. ಕುಮಟಾದ ಗೋಕರ್ಣ ಕಡಲತೀರದಲ್ಲಿ ಘಟನೆ ನಡೆದಿದ್ದು,ರೋಹಿತ್ ಪಾಟೀಲ್(21) ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದಾನೆ‌. ಐವರು ಸ್ನೇಹಿತರು ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಈಜಲು ಸಮುದ್ರಕ್ಕೆ ಇಳಿದಿದ್ದ ವೇಳೆ ರೋಹಿತ್ ಅಲೆಗಳಿಗೆ ಸಿಲುಕಿದ್ದ. ಈ ವೇಳೆ ಇನ್ನೇನು ಸಮುದ್ರ ಪಾಲಾಗುತ್ತಿದ್ದ ರೋಹಿತ್ ನನ್ನು ಸ್ಥಳೀಯರು, ಜೀವರಕ್ಷಕ ಸಿಬ್ಬಂದಿ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಬದುಕುಳಿದು ಬಂದ ಯುವಕ ಪ್ರಾಥಮಿಕ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾನೆ‌‌. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Post
ಅತ್ತಿವೇರಿ ಬಳಿ, ಬೈಕ್ ಸವಾರನ ಮೇಲೆ ಜಿಗಿದ ಜಿಂಕೆ, ಬೈಕ್ ನಿಂದ ಕೆಳಗೆ ಬಿದ್ದ ಸವಾರ ಗಂಭೀರ ಗಾಯ..!

ಅತ್ತಿವೇರಿ ಬಳಿ, ಬೈಕ್ ಸವಾರನ ಮೇಲೆ ಜಿಗಿದ ಜಿಂಕೆ, ಬೈಕ್ ನಿಂದ ಕೆಳಗೆ ಬಿದ್ದ ಸವಾರ ಗಂಭೀರ ಗಾಯ..!

ಮುಂಡಗೋಡ: ಜಿಂಕೆಯೊಂದು ಬೈಕ್ ಗೆ ಅಡ್ಡ ಬಂದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಅತ್ತಿವೇರಿ ಪಕ್ಷಿಧಾಮದ ಹತ್ತಿರ ನಡೆದಿದೆ. ಮಾರುತಿ ರಾಮಣ್ಣ ಹುಲಿಹೊಂಡ ಎಂಬುವವನೇ ಗಾಯಗೊಂಡಿರೋ ಬೈಕ್ ಸವಾರ. ಈತ ಅತ್ತಿವೇರಿ ಪಕ್ಷಿಧಾಮದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಇಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬರುವ ವೇಳೆ, ಏಕಾಏಕಿ ಜಿಂಕೆ ಬೈಕ್ ಮೇಲೆಯೇ ಜಿಗಿದಿದೆ. ಪರಿಣಾಮ, ಬೈಕ್ ಸವಾರ ಮಾರುತಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾನೆ. ತಲೆಗೆ ಹಾಗೂ ಕೈಗೆ ಗಾಯವಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ...

Post
ಮುಂಡಗೋಡಿನಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಯ್ತು ಭಾರತ್ ಬಂದ್..! ಎಂದಿನಂತೆ ಸಹಜ, ಸಹಜ..!!

ಮುಂಡಗೋಡಿನಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಯ್ತು ಭಾರತ್ ಬಂದ್..! ಎಂದಿನಂತೆ ಸಹಜ, ಸಹಜ..!!

ಮುಂಡಗೋಡ: ಕೃಷಿ ಕಾಯ್ದೆ ತಿದ್ದುಪಡಿ ವಿಧೇಯಕ ವಿರೋಧಿಸಿ ರೈತ ಸಂಘಟನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್, ಮುಂಡಗೋಡಿನಲ್ಲಿ ಸಾಂಕೇತಿಕ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು. ಬಿಟ್ಟರೆ, ಪಟ್ಟಣದಲ್ಲಿ ಜನಜೀವನ ಎಂದಿನಂತೆ ಇತ್ತು. ಇಂದು ಬೆಳಗಿನಿಂದಲೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಓಪನ್ ಆಗಿತ್ತು. ವ್ಯಾಪಾರ ವಹಿವಾಟು ಎಂದಿನಂತೆ ಪ್ರಾರಂಭವಾಗಿತ್ತು. ಆಟೋ, ಬಸ್ ಗಳು ಎಂದಿನಂತೆ ರಸ್ತೆಗಿಳಿದಿದ್ದವು. ಆದ್ರೆ, ಇಲ್ಲಿನ ಕೆಲವು ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ...

Post
ಸಿದ್ದಾಪುರದಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ; ಒಂದು ಲಾರಿ ವಶಕ್ಕೆ, ಮೂವರ ಮೇಲೆ ಕೇಸ್..!

ಸಿದ್ದಾಪುರದಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ; ಒಂದು ಲಾರಿ ವಶಕ್ಕೆ, ಮೂವರ ಮೇಲೆ ಕೇಸ್..!

ಸಿದ್ದಾಪುರ: ಸಿದ್ದಾಪುರದಲ್ಲಿ ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕಿದ್ದ ಮೂವರು ಲಾರಿ ಸಮೇತ ಸಿಕ್ಕಿಬಿದ್ದಿದ್ದಾರೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ತುಂಬಿ ಸಾಗಣೆ ಮಾಡುತ್ತಿದ್ದ ಲಾರಿ ವಶಕ್ಕೆ ಪಡೆಯಲಾಗಿದೆ‌. ಸಿದ್ದಾಪುರದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಅನ್ನಭಾಗ್ಯದ ಅಕ್ಕಿಯನ್ನು ಸಿದ್ದಾಪುರ ಪಟ್ಟಣದ ಭಗತ್ ಸಿಂಗ್ ವೃತ್ತದ ಬಳಿ, ತಹಶೀಲ್ದಾರ್ ನೇತೃತ್ವದ ತಂಡದಿಂದ ದಾಳಿ ಮಾಡಲಾಗಿದೆ. ಪರಿಣಾಮ, ಅಂದಾಜು 1,73,952 ರೂಪಾಯಿ ಮೌಲ್ಯದ, 50 ಕೆಜಿ ತೂಕದ 163 ಚೀಲದ, 81.40 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ‌. ಜೊತೆಗೆ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನೂ...

Post
ಹುನಗುಂದ, ಕೊಪ್ಪ, ಇಂದೂರು, ನಂದಿಕಟ್ಟಾ ಗ್ರಾಮಗಳಲ್ಲಿ ಪಂ.ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ..!

ಹುನಗುಂದ, ಕೊಪ್ಪ, ಇಂದೂರು, ನಂದಿಕಟ್ಟಾ ಗ್ರಾಮಗಳಲ್ಲಿ ಪಂ.ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ..!

ಮುಂಡಗೋಡ- ತಾಲೂಕಿನ ಹುನಗುಂದ, ಕೊಪ್ಪ, ಇಂದೂರು, ನಂದಿಕಟ್ಟಾ ಸೇರಿದಂತೆ ತಾಲೂಕಿನಾದ್ಯಂತ ಇಂದು ಹಲವು ಗ್ರಾಮಗಳಲ್ಲಿ ಜನಸಂಘದ ಸಂಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 105ನೇ ಜನ್ಮದಿನ ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು. ಹುನಗುಂದ ಗ್ರಾಮದ ಶಕ್ತಿಕೇಂದ್ರದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ, ಬೂತ್ ಗಳ ಅಧ್ಯಕ್ಷರುಗಳು, ಗ್ರಾಮಗಳ ಪ್ರಮುಖರು, ಬಿಜೆಪಿಯ ಹಿರಿಯರು ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು.

Post
ನಂದಿಕಟ್ಟಾ ಪಿಡಿಓ ಮೇಲೆ ಹಲ್ಲೆಗೆ ಖಂಡನೆ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಪಂ ನೌಕರರ ಒತ್ತಾಯ..!

ನಂದಿಕಟ್ಟಾ ಪಿಡಿಓ ಮೇಲೆ ಹಲ್ಲೆಗೆ ಖಂಡನೆ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಪಂ ನೌಕರರ ಒತ್ತಾಯ..!

ಮುಂಡಗೋಡ: ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಪ್ಪ ಲಮಾಣಿಯವರ ಮೇಲೆ ದೈಹಿಕ ಹಲ್ಲೆ ನಡೆಸಿದವರ ಮೇಲೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಪಂಚಾಯತಿ ಪಿಡಿಓಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮನವಿ ಅರ್ಪಿಸಿದ್ರು. ನಂದಿಕಟ್ಟಾ ಗ್ರಾಮ ಪಂಚಾಯತ ಪಿಡಿಓ ವೆಂಕಪ್ಪ ಕೆ.ಲಮಾಣಿ ರವರ ಮೇಲೆ ದೈಹಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗೌಸುಸಾಬ ಮೌಲಾಲಿ ಯಳ್ಳುರ ಎಂಬುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಅಪರಾಧಿಗೆ ತಕ್ಕೆ ಶಿಕ್ಷೆಯಾಗಬೇಕು...

Post
ಏಕಾಏಕಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ನರಳಾಡಿದ್ಲು ಯುವತಿ, ಭಯಬಿಟ್ಟು ಕಾಪಾಡಿದ್ರು ಮುಂಡಗೋಡಿಗರು..!

ಏಕಾಏಕಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ನರಳಾಡಿದ್ಲು ಯುವತಿ, ಭಯಬಿಟ್ಟು ಕಾಪಾಡಿದ್ರು ಮುಂಡಗೋಡಿಗರು..!

ನಿಜಕ್ಕೂ ಮುಂಡಗೋಡಿನ ಮಣ್ಣ ಕಣಕಣದಲ್ಲೇ ಮಾನವೀಯತೆ ಇದೆ ಅನ್ನೋದಕ್ಕೆ ಇವತ್ತಿನ ಈ ಘಟನೆಯೇ ಸಾಕ್ಷಿ. ಯುವತಿಯೊಬ್ಳು ರಸ್ತೆಯ ಮದ್ಯದಲ್ಲೇ ಪ್ರಜ್ಞಾಹೀನವಾಗಿ ಬಿದ್ದಾಗ ಸಾರ್ವಜನಿಕರೇ ಆ ಯುವತಿಯನ್ನ ಆಸ್ಪತ್ರೆಗೆ ಸೇರಿಸಿರೋ ಘಟನೆ ನಡೆದಿದೆ‌. ಏನಾಯ್ತು..? ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ಸಮೀಪ ಬಂಕಾಪುರ ರಸ್ತೆಯಲ್ಲಿ ಇಂದು ಮದ್ಯಾಹ್ನ ಓರ್ವ ಯುವತಿ ಏಕಾಏಕಿ ಪ್ರಜ್ಞೆ ತಪ್ಪಿ ರಸ್ತೆಯಲ್ಲೆ ಬಿದ್ದಿದ್ದಾಳೆ. ಆ ಹೊತ್ತಲ್ಲಿ ಆಕೆಯ ಜೊತೆಗಿದ್ದ ಓರ್ವ ಅಜ್ಜಿ ಆತಂಕದಲ್ಲಿ ಚೀರಾಟ ಶುರುವಿಟ್ಟಿದ್ದಾಳೆ. ಆ ಕ್ಷಣ ನಿಜಕ್ಕೂ ಈ ಘಟನೆ ಯಾರಿಗೂ...

Post
ಇದು ಲೊಯೊಲಾ ಕೇಂದ್ರೀಯ ವಿದ್ಯಾಲಯದ ಬೇಜವಾಬ್ದಾರಿ..! ಅಷ್ಟಕ್ಕೂ ಇವ್ರಿಗೆ ಸರ್ಕಾರದ ನಿಯಮ ಅನ್ವಯಿಸೋದೇ ಇಲ್ವಾ..?

ಇದು ಲೊಯೊಲಾ ಕೇಂದ್ರೀಯ ವಿದ್ಯಾಲಯದ ಬೇಜವಾಬ್ದಾರಿ..! ಅಷ್ಟಕ್ಕೂ ಇವ್ರಿಗೆ ಸರ್ಕಾರದ ನಿಯಮ ಅನ್ವಯಿಸೋದೇ ಇಲ್ವಾ..?

ಇಡೀ ರಾಜ್ಯ ಕೊರೋನಾ ಮೂರನೇ ಅಲೆಯ ಭೀತಿಯಲ್ಲಿದೆ. ಅದ್ರಲ್ಲೂ ಈ ಮೂರನೇ ಅಲೆ ಅನ್ನೋದು ಬಹುತೇಕ ಮಕ್ಕಳಿಗೆ ತುಂಬಾ ಎಫೆಕ್ಟ್ ಆಗತ್ತೆ ಅನ್ನೋ ಮಾತುಗಳನ್ನು ತಜ್ಞರು ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗೇ ಸರ್ಕಾರ ಮಕ್ಕಳ ಆರೋಗ್ಯದ ಸಲುವಾಗಿ ಇನ್ನಿಲ್ಲದ ಕಟ್ಟೇಚ್ಚರ ವಹಿಸಿದೆ. ಸಾಂಕ್ರಾಮಿಕ ಜ್ವರದ ಬಾಧೆ..! ಅಂದಹಾಗೆ, ಸದ್ಯ ಇಡೀ ರಾಜ್ಯಾದ್ಯಂತ ಪುಟ್ಟ ಪುಟ್ಟ ಮಕ್ಕಳಿಗೆ ಸಾಂಕ್ರಾಮಿಕ ಜ್ವರದ ಬಾಧೆ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಫ ಸೇರಿ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿವೆ. ಮುಂಡಗೋಡ...

Post
ಮನೆಯ ಛಾವಣಿಯಲ್ಲಿ ಅಡಗಿದ್ದ ಕಾಳಿಂಗ ಸರ್ಪ, ಹೇಗೆ ರಕ್ಷಣೆ ಮಾಡಿದ್ರು ನೋಡಿ..!

ಮನೆಯ ಛಾವಣಿಯಲ್ಲಿ ಅಡಗಿದ್ದ ಕಾಳಿಂಗ ಸರ್ಪ, ಹೇಗೆ ರಕ್ಷಣೆ ಮಾಡಿದ್ರು ನೋಡಿ..!

ಶಿರಸಿ: ಮನೆಯ ಛಾವಣಿಯಲ್ಲಿ ಅಡಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಶಿರಸಿಯಲ್ಲಿ ನಡೆದಿದೆ. ಶಿರಸಿ ತಾಲೂಕಿನ ಸುರನಗದ್ದೆಯ ಮನೆಯ ಛಾವಣಿಯಲ್ಲಿ ಅಡಗಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು. ಉರಗ ತಜ್ಞ ಪ್ರಶಾಂತ ಹುಲೇಕಲ್, ಮನೆಯ ಛಾವಣಿಯಲ್ಲಿ ಹೆಂಚಿನಡಿ ಸೇರಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಸಾಹಸ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಹಿಡಿದರು. ನಂತರ ಶಿವಗಂಗಾ ಫಾಲ್ಸ ಬಳಿಯ ನಿರ್ಜನ...

error: Content is protected !!