Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಬಸಾಪುರದಲ್ಲಿ ರಾಣಾ ಪ್ರತಾಪ ಸಿಂಹರ ಜಯಂತಿ ಉತ್ಸವ, ಭವ್ಯ ಮೆರವಣಿಗೆ..!

ಬಸಾಪುರದಲ್ಲಿ ರಾಣಾ ಪ್ರತಾಪ ಸಿಂಹರ ಜಯಂತಿ ಉತ್ಸವ, ಭವ್ಯ ಮೆರವಣಿಗೆ..!

 ಮುಂಡಗೋಡ: ತಾಲೂಕಿನ ಬಸಾಪುರ ಗ್ರಾಮದಲ್ಲಿ ರಾತ್ರಿಯಿಡಿ ರಾಣಾ ಪ್ರತಾಪ್ ಸಿಂಗ್ ರವರ ಜಯಂತಿ ಭವ್ಯ ಮೆರವಣಿಗೆ ನಡೆಯಿತು. ಸಮಾಜ ಬಾಂದವರು ರಾಣಾ ಪ್ರತಾಪ ಸಿಂಹರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಇಡೀ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಮೆರವಣಿಗೆ ನಡೆಸಿದ್ರು. ಭಕ್ತಿಗೀತೆಗಳನ್ನು ಹಾಕಿ ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದ ಯುವಕರು, ರಾಣಾ ಪ್ರತಾಪ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದ್ರು. ಇನ್ನು ನಿನ್ನೆ ಸಂಜೆಯಿಂದಲೇ ಬಸಾಪುರ ಗ್ರಾಮದಲ್ಲಿ ” ರಾಣಾ” ಜಯಂತಿ ಆಚರಣೆ ಸಂಭ್ರಮ ಜೋರಾಗಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮ...

Post
ಶಿರಸಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಲಕ್ಷ ಲಕ್ಷ ನಗದು ವಶ..?

ಶಿರಸಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಲಕ್ಷ ಲಕ್ಷ ನಗದು ವಶ..?

ಶಿರಸಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿರೋ ಪೊಲೀಸರು ಬುಕ್ಕಿ ಸೇರಿ,15 ಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉತ್ತರ ಕನ್ನಡ ಎಸ್ಪಿ, ಡಾ.ಸುಮನಾ ಪೆನ್ನೇಕರ್ ರಚಿಸಿರೋ ವಿಶೇಷ ಪೊಲೀಸ್ ಟೀಂ ಕಾರ್ಯಾಚರಣೆ ನಡೆಸಿದ್ದು, ಮಟ್ಕಾ ಆಡಿಸುತ್ತಿದ್ದ ದಂಧೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆನೆ, ಮಟ್ಕಾ ದಂಧೆಯಲ್ಲಿಬಕೈ ಬದಲಾಯಿಸುತ್ತ ಅಂದಾಜು 3-4 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ‌. ಶಿರಸಿ ನಗರ ಹಾಗೂ...

Post
ಮುಂಡಗೋಡ ತಾಲೂಕಿನ ಮೂರು ಕಡೆ ಮಟ್ಕಾ ಅಡ್ಡೆಗಳ‌ ಮೇಲೆ ಪೊಲೀಸರ ದಾಳಿ, 7 ಜನರ ವಿರುದ್ಧ ಕೇಸ್..!

ಮುಂಡಗೋಡ ತಾಲೂಕಿನ ಮೂರು ಕಡೆ ಮಟ್ಕಾ ಅಡ್ಡೆಗಳ‌ ಮೇಲೆ ಪೊಲೀಸರ ದಾಳಿ, 7 ಜನರ ವಿರುದ್ಧ ಕೇಸ್..!

ಮುಂಡಗೋಡ ಪೊಲೀಸರು ನಿನ್ನೆಯಿಂದ ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಟ್ಕಾ ಅಡ್ಡೆಗಳ ಮೇಲೆ ಬಲೆ ಬೀಸಿರೋ ಮುಂಡಗೋಡ ಪಿಎಸ್ಐ ಬಸವರಾಜು ಮಬನೂರು ಮತ್ತವರ ತಂಡ ಮೂರು ಕಡೆ ಪ್ರತ್ಯೇಕ ದಾಳಿ ನಡೆಸಿ ಹಲವು ದಂಧೆಕೋರರ ಹೆಡೆಮುರಿ ಕಟ್ಟಿದ್ದಾರೆ. 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದ್ರೊಂದಿಗೆ ಮೂರೂ ಕೇಸುಗಳಲ್ಲಿ ಒಟ್ಟೂ 10 ಸಾವಿರಕ್ಕೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ. ದಾಳಿ ನಂಬರ್-1 ಮುಂಡಗೋಡ ತಾಲೂಕಿನ ಕಾತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದ, ನಾಗರಾಜ ಅಡಿವೆಪ್ಪ ಆಡಿನವರ ಎಂಬುವವನ...

Post
ಮುಂಡಗೋಡಿನ ಆನಂದ್ ಕಡಗಿ ಕಣ್ಮರೆ, ಅಷ್ಟಕ್ಕೂ CCTV ದೃಷ್ಯದಲ್ಲಿ ಕಂಡದ್ದು ಏನು..?

ಮುಂಡಗೋಡಿನ ಆನಂದ್ ಕಡಗಿ ಕಣ್ಮರೆ, ಅಷ್ಟಕ್ಕೂ CCTV ದೃಷ್ಯದಲ್ಲಿ ಕಂಡದ್ದು ಏನು..?

ಮುಂಡಗೋಡಿನ ಶಿಕ್ಷಕ ಆನಂದ್ ಕಡಗಿ ನಾಪತ್ತೆಯಾಗಿದ್ದಾರೆ. ರವಿವಾರ ದಿ.29 ರಂದು ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಬರಿಗಾಲಲ್ಲೇ ಮನೆ ಬಿಟ್ಟು ಹೋಗಿರೋ ಆನಂದ್, ಹಸಿರು ಬಣ್ಣದ ಸಿಮೆಂಟ್ ಕಂಪನಿ ಹೆಸರಿರೋ ಟೀಶರ್ಟ್, ಹಾಗೇ ಖಾಕಿ ಬಣ್ಣದ ತ್ರಿಪೋರ್ಥ್ ತೊಟ್ಟು ಉಟ್ಟುಡುಗೆಯಲ್ಲೇ ನಾಪತ್ತೆಯಾಗಿದ್ದಾರೆ. ಮೊಬೈಲ್, ಪರ್ಸ್ ಏನು ಅಂದ್ರೆ ಏನೂ ತೆಗೆದುಕೊಂಡು ಹೋಗಿಲ್ಲ. ಹೀಗಾಗಿ, ಕುಟುಂಬದವರು ಆತಂಕಗೊಂಡಿದ್ದಾರೆ. ಸಿಸಿಟಿವಿಯಲ್ಲಿ..! ಅಸಲು, ಆನಂದ್ ಕಡಗಿ ರವಿವಾರ ಬೆಳಿಗ್ಗೆ ಮಕ್ಕಳನ್ನು ಸಲೂನ್ ಶಾಪ್ ಗೆ ಕರೆದುಕೊಂಡು ಹೋಗಿ ಬಂದಿದ್ದರು. ತಾವೂ ಕೂಡ ಕಟ್ಟಿಂಗ್...

Post
ಮುಂಡಗೋಡಿನ ಶಿಕ್ಷಕ ಆನಂದ್ ಕಡಗಿ ನಾಪತ್ತೆ, ಪ್ರಕರಣ ದಾಖಲು..!

ಮುಂಡಗೋಡಿನ ಶಿಕ್ಷಕ ಆನಂದ್ ಕಡಗಿ ನಾಪತ್ತೆ, ಪ್ರಕರಣ ದಾಖಲು..!

ಮುಂಡಗೋಡ ರೋಟರಿ ಖಾಸಗಿ ಶಾಲೆಯ ಶಿಕ್ಷಕ ಆನಂದ್ ಕಡಗಿ ನಾಪತ್ತೆಯಾಗಿದ್ದಾರೆ ಅಂತಾ ಕುಟುಂಬಸ್ಥರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ಆನಂದ್, ಪರೀಕ್ಷೆಯಲ್ಲಿ ಪಾಸ್ ಆಗಿರಲಿಲ್ಲ. ಹೀಗಾಗಿ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು, ಮೇ.29 ರಂದು ಮನೆಯಿಂದ ಹೋದವನು, ಮರಳಿ ಬಂದಿಲ್ಲ ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಮೇ.29 ರ ರವಿವಾರ ಬೆಳಿಗ್ಗೆ ಸನವಳ್ಳಿ ರಸ್ತೆ ಕಡೆಗೆ ನಡೆದುಕೊಂಡೇ ಹೋಗಿದ್ದನ್ನ ಕೆಲವ್ರು ನೋಡಿದ್ದಾರೆ ಅನ್ನೋ ಮಾಹಿತಿ ಇದ್ದು ಮನೆ ಮಗನನ್ನು ಹುಡುಕಿ ಕೊಡಿ ಅಂತಾ ಪೊಲೀಸರಿಗೆ...

Post
ಇಂದಿನಿಂದ ಯಲ್ಲಾಪುರ ಕ್ಷೇತ್ರದಲ್ಲಿ ಪರಿಷತ್ ಪ್ರಚಾರ ಶುರು, ಯಲ್ಲಾಪುರಕ್ಕೆ ಬಂದಿಳಿದ ಅಭ್ಯರ್ಥಿ ಬಸವರಾಜ್ ಹೊರಟ್ಟಿ

ಇಂದಿನಿಂದ ಯಲ್ಲಾಪುರ ಕ್ಷೇತ್ರದಲ್ಲಿ ಪರಿಷತ್ ಪ್ರಚಾರ ಶುರು, ಯಲ್ಲಾಪುರಕ್ಕೆ ಬಂದಿಳಿದ ಅಭ್ಯರ್ಥಿ ಬಸವರಾಜ್ ಹೊರಟ್ಟಿ

ಯಲ್ಲಾಪುರ: ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣಾ ಪ್ರಚಾರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಅಭ್ಯರ್ಥಿ ಬಸವರಾಜ ಹೊರಟ್ಟಿ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ. ಹೀಗಾಗಿ ಇಂದು ಯಲ್ಲಾಪುರ ಪಟ್ಟಣಕ್ಕೆ ಆಗಮಿಸಿದ ಬಸವರಾಜ್ ಹೊರಟ್ಟಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರವರನ್ನು ಸಚಿವ ಶಿವರಾಮ್ ಹೆಬ್ಬಾರ್ ಸ್ವಾಗತಿಸಿಕೊಂಡ್ರು. ನಾಯಕರನ್ನು ಶಾಲು ಹೊದಿಸಿ ಸನ್ಮಾನಿಸಿ ಕ್ಷೇತ್ರಕ್ಕೆ ಬರಮಾಡಿಕೊಂಡ್ರು.    

Post
ಮುಂಡಗೋಡ ಕಿಲ್ಲೆ ಓಣಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ವಶ..!

ಮುಂಡಗೋಡ ಕಿಲ್ಲೆ ಓಣಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ವಶ..!

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆದಿದೆ‌. ಪಟ್ಟಣದ ಕಿಲ್ಲೆ ಓಣಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 45 ಕ್ವಿಂಟಾಲ್ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ‌. ಮುಂಡಗೋಡ ಪಟ್ಟಣದ ಕಿಲ್ಲೆ ಓಣಿಯ ಸಿರಾಜ್ ಮುಲ್ಲಾ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಇಡಲಾಗಿತ್ತು. ಈ ಕುರಿತು ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಪಿಎಸ್ಐ ಮತ್ತವರ ತ‌ಂಡ ಅಕ್ರಮ ಪಡಿತರ ಅಕ್ಕಿ ವಶಪಡಿಸಿಕೊಂಡಿದೆ. ನಂತರದಲ್ಲಿ ಮುಂಡಗೋಡ ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ...

Post
“ಮುಂಡಗೋಡ ಮಹಾರಾಜ್” ಸ್ಪರ್ಧಾ ಹೋರಿ ಅಸ್ತಂಗತವಾಗಿ ಒಂದು ವರ್ಷ, ಅಭಿಮಾನಿಗಳಿಂದ ವಾರ್ಷಿಕ ಪುಣ್ಯತಿಥಿ..!

“ಮುಂಡಗೋಡ ಮಹಾರಾಜ್” ಸ್ಪರ್ಧಾ ಹೋರಿ ಅಸ್ತಂಗತವಾಗಿ ಒಂದು ವರ್ಷ, ಅಭಿಮಾನಿಗಳಿಂದ ವಾರ್ಷಿಕ ಪುಣ್ಯತಿಥಿ..!

 ಮುಂಡಗೋಡ: ತಾಲೂಕಿನ ಮೊಟ್ಟ ಮೊದಲ ಪೀಪಿ ಹೋರಿ ಅಂತ ಹೆಸರು ಮಾಡಿದ್ದ, ಮುಂಡಗೋಡಿನ ಮನೆ ಮಗ ಅಂತಲೇ ಕರೆಸಿಕೊಂಡಿದ್ದ “ಮುಂಡಗೋಡ ಮಹಾರಾಜ್” 181 ಪಿಪಿ ಸ್ಪರ್ಧಾ ಹೋರಿಯ ಒಂದನೇ ವರ್ಷದ ಪುಣ್ಯತಿಥಿ ಕಾರ್ಯವನ್ನು ಅಭಿಮಾನಿಗಳು ನಡೆಸಿದ್ರು. ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದ ಸ್ಪರ್ಧಾ ಹೋರಿ “ಮುಂಡಗೋಡ ಮಹಾರಾಜ್” ಅನಾರೋಗ್ಯದಿಂದ ಮೃತಪಟ್ಟು ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ, ಅಭಿಮಾನಿಗಳು ತಮ್ಮ ನೆಚ್ಚಿನ ಹೋರಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ರು‌. ಅಲ್ಲದೇ ಹೋರಿಯ ನೆನಪಿನಲ್ಲಿ ಅನ್ನ ಸಂತರ್ಪಣೆ ಮಾಡಿದ್ರು‌. ಆರಾಧ್ಯ...

Post
ಕೊಪ್ಪ ಗ್ರಾಮದಲ್ಲಿ ಕಳೆನಾಶಕ ಸೇವಿಸಿ ಯುವಕ  ಆತ್ಮಹತ್ಯೆ, ಕಾರಣವಾದ್ರೂ ಏನು..?

ಕೊಪ್ಪ ಗ್ರಾಮದಲ್ಲಿ ಕಳೆನಾಶಕ ಸೇವಿಸಿ ಯುವಕ ಆತ್ಮಹತ್ಯೆ, ಕಾರಣವಾದ್ರೂ ಏನು..?

ಮುಂಡಗೋಡ: ತಾಲೂಕಿನ ಕೊಪ್ಪದಲ್ಲಿ ಎಮರ್ಜೆನ್ಸಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ‌. ಕೊಪ್ಪ ಗ್ರಾಮದ ಚನ್ನಪ್ಪ ಬಸಪ್ಪ ಶ್ಯಾಬಾಳ್ (30) ಎಂಬುವವನೇ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವ. ನಿನ್ನೆ ಬಾನುವಾರ ಬೆಳಿಗ್ಗೆ ತನ್ನ ಗದ್ದೆಯಲ್ಲೇ ಎಮರ್ಜೆನ್ಸಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಹೀಗಾಗಿ, ತಕ್ಷಣವೇ ಆತನನ್ನು ತಾಲೂಕಾಸ್ಪತ್ರೆಗ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಯುವಕ‌ ಮೃತ ಪಟ್ಟಿದ್ದಾನೆ...

Post
ಟಿಬೇಟಿಯನ್ ಕಾಲೋನಿಗೆ ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನ ಸಮೇತ ಓರ್ವ ಪೊಲೀಸರ ವಶಕ್ಕೆ..?

ಟಿಬೇಟಿಯನ್ ಕಾಲೋನಿಗೆ ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನ ಸಮೇತ ಓರ್ವ ಪೊಲೀಸರ ವಶಕ್ಕೆ..?

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗೆ ಸಾಗಾಣಿಕೆ ಮಾಡಲಾಗುತ್ತಿದ್ದ ಅಕ್ರಮ ಗೋ ಮಾಂಸದ ವಾಹನವನ್ನು ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ ಸೀಜ್ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕಲಘಟಗಿ ಕಡೆಯಿಂದ ಸಾಗಿಸಲಾಗುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗೂ ಹೆಚ್ಚು ತೂಗುವ ಗೋಮಾಂಸವನ್ನು ವಾಹನ ಸಮೇತ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಅನ್ನೊ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಬರಬೇಕಿದೆ. 

error: Content is protected !!