ಮುಂಡಗೋಡ:ಪಟ್ಟಣದ ಹೊರ ವಲಯದ ನ್ಯಾಸರ್ಗಿ ರಸ್ತೆಯಲ್ಲಿ ಯುವಕನೊಬ್ಬ ಹೆಣವಾಗಿದ್ದಾನೆ. ಪಟ್ಟಣದ ಕಂಬಾರಗಟ್ಟಿ ಪ್ಲಾಟ್ ನ ವಿಜಯ್ ಮಂಜಪ್ಪ ಈಳಗೇರ್ ಎಂಬುವನನ್ನು ಬೀಕರವಾಗಿ ಹತ್ಯೆ ಮಾಡಲಾಗಿದೆ. ಎದೆಗೆ ಹಾಗೂ ಬೆನ್ನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೊಂದು ಅಪ್ಪಟ ದುಶ್ಮನಿಗಳ ಸೇಡಿನ ಕೊಲೆ ಅನ್ನೋದು ಮೇಲ್ನೊಟಕ್ಕೆ ಕಂಡು ಬರ್ತಿದೆ. ನಿನ್ನೆ ರಾತ್ರಿ ನಡೆದಿರಬಹುದು ಎನ್ನಲಾದ ಕೊಲೆ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
Top Stories
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
Category: ಮುಂಡಗೋಡ ಸುದ್ದಿ
ಮಂಡಗೋಡಿನಲ್ಲಿ “ಕಾಂಗ್ರೆಸ್ ಸಹಾಯ ಹಸ್ತ” ಉದ್ಘಾಟಿಸಿದ ಬಿ.ಕೆ.ಹರಿಪ್ರಸಾದ್..!
ಮುಂಡಗೋಡ: ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ “ಕಾಂಗ್ರೆಸ್ ಸಹಾಯ ಹಸ್ತ” ಕಾರ್ಯಕ್ರಮ ಇಂದು ಮುಂಡಗೋಡಿನಲ್ಲಿ ನಡೆಯಿತು.ಸಹಾಯ ಹಸ್ತ ಕಾರ್ಯಕ್ರಮದ ಉಸ್ತುವಾರಿ, ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಣ್ಣ ನಾಯಕ್ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪ್ರಶಾಂತ್ ದೇಶಪಾಂಡೆ, ವಿ.ಎಸ್. ಆರಾಧ್ಯ, ಕೃಷ್ಣ ಹಿರೇಹಳ್ಳಿ, ಎಚ್. ಎಂ. ನಾಯಕ್, ಅಬ್ದುಲ್ ಮಜೀದ್ ಶೇಖ್, ಶ್ರೀಮತಿ ಸುಜಾತ ಗಾಂವ್ಕರ್, ಬಸವರಾಜ್ ದೊಡ್ಮನಿ, ಕೆಪಿಸಿಸಿ ವೀಕ್ಷಕ ಸುರೇಶ್ ಸವನೂರು,ನಾಗರಾಜ್ ನರ್ವೇಕರ್, ಅಬ್ಬಾಸ್...
“ಚೀಪ್ ರೇಟ್ ಚಿನ್ನ” ಕ್ಕಾಗಿ ಅವ್ರು ಕಳೆದುಕೊಂಡಿದ್ದು 28 ಲಕ್ಷ..! ಅಷ್ಟಕ್ಕೂ ಅಲ್ಲಿ ಆ್ಯಕ್ಟಿವ್ ಆಗಿರೋ ಗ್ಯಾಂಗ್ ಅದೇನಾ..?
ಮುಂಡಗೋಡ; ತಾಲೂಕಿನ ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ನಡೆಯಬಾರದ ರಾಬರಿ ನಡೆದು ಹೋಗಿದೆ. ದೂರದ ಬೆಳಗಾವಿಯ ಚಿಕ್ಕೋಡಿಯಿಂದ ಬಂದಿದ್ದ ಆ ಇಬ್ಬರೂ ಬರೋಬ್ಬರಿ 28 ಲಕ್ಷ ರೂ. ಅನಾಮತ್ತಾಗಿ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ಮುಂಡಗೋಡ ಪೊಲೀಸ್ರು ಎಲ್ಲಾ ಆಯಾಮಗಳಲ್ಲೂ ತನಿಖೆಗಿಳಿದಿದ್ದಾರೆ. ಅದ್ರಂತೆ, ದಾಸನಕೊಪ್ಪ ಭಾಗದ ಕೆಲವರನ್ನ ಪೊಲೀಸ್ರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರಂತೆ. ಇದು ಈ ಕ್ಷಣದವರೆಗೆ ನಡೆದಿರೋ ಅಪಡೇಟ್ಸ್..! ಆದ್ರೆ, ಶುಕ್ರವಾರ ಅಂತಹದ್ದೊಂದು ಘಟನೆ ನಡೆದು ಹೋಯ್ತು ಅಂತಾ ಇನ್ನಿಲ್ಲದ ಊಹಾಪೋಹಗಳು, ಕತೆಗಳು ಹುಟ್ಟಿಕೊಂಡಿದ್ದವು. ಗೋಡಂಬಿ ಬೀಜ...
ಆ ಪ್ರಬುದ್ಧ ನಾಯಕನಿಗೆ ಇದೇಂತಾ ಗತಿ..? ಬಿಜೆಪಿ “ಬಣ” ಗುದ್ದಾಟದಲ್ಲಿ ಎಲ್ಟಿ ಪಾಟೀಲರ ದಾರಿ ಯಾವುದಯ್ಯ..?
“ನಾನು ಬಿಜೆಪಿಗೆ ಬಂದು ತಪ್ಪು ಮಾಡಿಬಿಟ್ನಾ..?” ಇಂತಹದ್ದೊಂದು ಪ್ರಶ್ನೆ ಬಹುಶಃ ಆ ನಾಯಕನಿಗೆ ಅನ್ನಿಸಿದೆಯೆನೋ.. ಯಾಕಂದ್ರೆ, ಮುಂಡಗೋಡ ತಾಲೂಕಿನ ಒಂದು ಪ್ರಬಲ ಸಮುದಾಯದ ನಾಯಕ ಈಗ ದಾರಿ ಕಾಣದಂತಾಗಿದ್ದಾರೆ. ಒಂದುವೇಳೆ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಇಷ್ಟೋತ್ತಿಗಾಗಲೇ ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹುಶಃ ಕಾಂಗ್ರೆಸ್ MLA ಅಭ್ಯರ್ಥಿ ಅಂತಾ ಪತಾಕೆ ಹಾರಿಸ್ತಿದ್ದರೇನೋ…! ಅಂತವರು ಈಗ ಬಿಜೆಪಿಯಲ್ಲಿ ಎಲ್ಲೊ ಒಂದು ಕಡೆ ಸೈಡ್ ಲೈನ್ ಆಗ್ತಿದಾರಾ..? ಈ ಪ್ರಶ್ನೆ ಸದ್ಯದ ಬಲು ಚರ್ಚಿತ ವಿಷಯ. ಹೌದು, ಮುಂಡಗೋಡ ತಾಲೂಕಿನಲ್ಲಿ...
SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ..!
ಮುಂಡಗೋಡ: ಜು,19 ರಿಂದ ನಡೆಯಲಿರುವ SSLC ಪರೀಕ್ಷೆಗೆ ಹಾಜರಾಗೋ ಮಕ್ಕಳಿಗೆ ಹಾಗೂ ಸಿಬ್ಬಂದಿಗಳಿಗೆ ಎರಡು ಪದರುಗಳಿರುವ ಮಾಸ್ಕ್ ಗಳನ್ನು ಸರಕಾರಿ ನೌಕರರ ಸಂಘ ತಾಲೂಕಾ ಘಟಕದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಯಿತು. ಕೊವೀಡ-19 ಸಂಕಷ್ಟದ ನಡುವೆಯೂ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಹಾಗೂ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೂ ಪ್ರಯೋಜನವಾಗಲಿ ಅಂತಾ, ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನಲ್ಲಿ ಈ ಬಾರಿ ಸುಮಾರು 1440 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ,...
ಹೀಗೆ ಹುಲಿರಾಯ ಹೆಜ್ಜೆ ಹಾಕಿದ್ದು ಬೆಡಸಗಾಂವ್ ಅರಣ್ಯದಲ್ಲಾ..?
ಮುಂಡಗೋಡ: ತಾಲೂಕಿನ ಬೆಡಸಗಾಂವ ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷವಾಗಿದೆ ಅಂತಾ ಹೇಳಲಾದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಲ್ಲಿ ನಿರ್ಭಿಡೆಯಿಂದ ಓಡಾಡುತ್ತಿರೋ ಹುಲಿರಾಯ ಘರ್ಜನೆ ಮೊಳಗಿಸಿದ್ದಾನೆ. ಆದ್ರೆ ಈ ವಿಡಿಯೋ ಮುಂಡಗೋಡ ತಾಲೂಕಿ ಬೆಡಸಗಾಂವ್ ಅರಣ್ಯ ಪ್ರದೇಶದಲ್ಲಿಯದೋ ಅಥವಾ ಬೇರೆ ಕಡೆಯದ್ದೋ ಸ್ಪಷ್ಟವಾಗಿಲ್ಲ. ಅದ್ರೆ ಸಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಾತ್ರ ಹರಿದಾಡುತ್ತಿದೆ.
ಗುಂಜಾವತಿ ಭಾಗದಲ್ಲಿ ಕಾಡಾನೆ ಹಾವಳಿ, 5 ಎಕರೆ ಕಬ್ಬಿನ ಬೆಳೆ ತಿಂದು ತೇಗಿದ ಗಜ ಪಡೆ..!
ಮುಂಡಗೋಡ: ತಾಲೂಕಿನ ಗುಂಜಾವತಿ ಸೇರಿದಂತೆ ಸುತ್ತ ಮುತ್ತಲ ಭಾಗಗಳಲ್ಲಿ ಕಾಡಾನೆ ಹಾವಳಿ ಶುರುವಾಗಿದೆ. ಕಳೆದ 3 ದಿನಗಳಿಂದ ಕಾಡಾನೆಗಳ ಹಿಂಡು ಈ ಭಾಗದ ರೈತರ ನಿದ್ದೆಗೆಡಿಸಿವೆ. ಗುಂಜಾವತಿ ಭಾಗದ ರೈತರ ಕಬ್ಬಿನ ಗದ್ದೆ ಹಾಗೂ ಅಡಿಕೆ ತೋಟಕ್ಕೆ ನುಗ್ಗಿರೋ ಕಾಡಾನೆಗಳು ಗಬ್ಬಿನ ಬೆಳೆಯನ್ನು ತಿಂದು ಹಾಕಿ, ಹಾನಿ ಮಾಡಿವೆ. ಇಲ್ಲಿನ ಗುರುಬಸಯ್ಯ ಎಂಬುವವರ 5 ಎಕರೆ ಕಬ್ಬಿನ ಗದ್ದೆಯಲ್ಲಿ ಬೆಳೆ ತಿಂದು, ನಾಶಗೊಳಿಸಿವೆ. ಇಷ್ಟೇಲ್ಲ ಆದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ ಅಂತಾ ರೈತರು ಆಕ್ರೋಶ...
ಹುನಗುಂದ ತಾಪಂ ಕ್ಷೇತ್ರ: ಬಿಜೆಪಿಯಲ್ಲಿ “ಹಳೇ” ಕಲಿಗಳ ಮದ್ಯೆ ಟಿಕೆಟ್ ಫೈಟ್..! “ಕೈ” ಅಂಗಳದಲ್ಲಿ ಎಲ್ಲವೂ ಸೀಕ್ರೆಟ್..!!
ಮುಂಡಗೋಡ: ತಾಲೂಕಿನಲ್ಲಿ ಈಗ ಬರೀ ರಾಜಕೀಯದ್ದೇ ಹವಾ. ಇನ್ನೇನು ತಾಲೂಕಾ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕು, ಮೀಸಲಾತಿಗಳೂ ಪ್ರಕಟವಾಗಿದೆ. ಹೀಗಾಗಿ, ಎಲ್ಲೇಲ್ಲೂ ರಾಜಕೀಯ ಚರ್ಚೆ ಶುರುವಾಗಿದೆ. ಅದ್ರಂತೆ ಇವತ್ತು ನಾವು ಹುನಗುಂದ ತಾಪಂ ಕ್ಷೇತ್ರದ ಹಕೀಕತ್ತು ನಿಮ್ಮ ಮುಂದೆ ಇಡ್ತಿದಿವಿ. ಇದು ಹುನಗುಂದ ಕ್ಷೇತ್ರ..! ಅಂದಹಾಗೆ, ಹುನಗುಂದ ತಾಪಂ ಕ್ಷೇತ್ರ ಹುನಗುಂದ, ಅಗಡಿ, ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳನ್ನು ಒಳಗೊಂಡಿದೆ. ಗ್ರಾಮ ಪಂಚಾಯತಿ ಆಡಳಿತ ಸಧ್ಯ ಕಾಂಗ್ರೆಸ್ ಬೆಂಬಲಿತರ “ಕೈ” ಯಲ್ಲಿದೆ. ಹೀಗಿದ್ದಾಗಲೂ...
ನಂದಿಕಟ್ಟಾ ತಾಪಂ ಕ್ಷೇತ್ರ; ಬಿಜೆಪಿಗೆ ಟಿಕೆಟ್ ಆಕಾಂಕ್ಷಿಗಳ ತಲೆಬಿಸಿ, ಕಾಂಗ್ರೆಸ್ ಗೆ ವರವಾಗೋ ಖುಶಿ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ತಾಲೂಕಾ ಪಂಚಾಯತಿ ಮತಕ್ಷೇತ್ರ ಬಿರುಸುಗೊಂಡಿದೆ. ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ, ಮೀಸಲಾತಿ ಪ್ರಕಟವಾಗ್ತಿದ್ದಂತೆ ರಾಜಕೀಯ ಚದುರಂಗದಾಟಗಳು ತೆರೆಮರೆಯಲ್ಲೇ ಚಾಲ್ತಿ ಪಡೆದುಕೊಂಡಿವೆ. ಬಿಜೆಪಿ ತಲೆಬಿಸಿ..! ಅಂದಹಾಗೆ, ನಂದಿಕಟ್ಟಾ ತಾಪಂ ಕ್ಷೇತ್ರಕ್ಕೆ ” ಸಾಮಾನ್ಯ” ಮೀಸಲಾತಿ ಪ್ರಕಟಗೊಂಡಿದೆ. ಹೀಗಾಗಿ, ಇಲ್ಲಿನ ಬಿಜೆಪಿಯಲ್ಲಿ ಈಗಾಗಲೇ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತುಗಳು ಜಾರಿಯಲ್ಲಿವೆ. ಹಾಗೆ ಆಕಾಂಕ್ಷಿತರ ಪಟ್ಟಿ ಹನುಂಮತನ ಬಾಲದಂಗಿದೆ. ಈ ಸಾರಿ ನಾನೂ ಒಂದು ಕೈ ನೋಡೇ ಬಿಡ್ತಿನಿ ಅಂತಾ ಆಕಾಂಕ್ಷಿಗಳು ತೋಳು ಏರಿಸಿಕೊಂಡು ಸನ್ನದ್ದವಾಗಿದ್ದಾರೆ. ಆದ್ರೆ ಆ...
ಮುಂಡಗೋಡಿಗೆ ಡಿಕೆಶಿ ಭೇಟಿ, ಹೂವಿನ ಮಳೆ ಸುರಿಸಿ ಕಾರ್ಯಕರ್ತರ ಉತ್ಸಾಹ..!
ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಪ್ರತಿಭಟನೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂಡಗೋಡ ಪಟ್ಟಣಕ್ಕೆ ಭೇಟಿ ನೀಡಿದ್ರು. ಶಿರಸಿಯಿಂದ ಹುಬ್ಬಳ್ಳಿಗೆ ತೆರಳುವ ವೇಳೆ ಮುಂಡಗೋಡ ಪಟ್ಟಣದಲ್ಲೂ ಕೆಲಹೊತ್ತು ನಿಂತು ಕಾರ್ಯಕರ್ತರನ್ನು ಭೇಟಿ ಮಾಡಿದ್ರು. ಡಿಕೆಶಿ ಬರ್ತಿದ್ದಾರೆ ಅಂತಾ ಮಾಹಿತಿ ತಿಳಿದು ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಜಮಾವಣೆ ಆಗಿದ್ರು. ಡಿ.ಕೆ.ಶಿವಕುಮಾರ್ ಬರುತ್ತಿದ್ದಂತೆ ಘೋಷಣೆ ಕೂಗಿ ಹೂವಿನ ಮಳೆ ಸುರಿಸಿದ್ರು. ಹಾರ...









