ಮುಂಡಗೋಡ: ಯುವಕನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ನಡೆದಿದೆ. ಸಂಜೀವ್ ಫಕ್ಕೀರಪ್ಪ ಹೊನ್ನಳ್ಳಿ(30) ನೇಣಿಗೆ ಶರಣಾದ ಯುವಕನಾಗಿದ್ದಾನೆ. ರಾತ್ರಿ 8 ಗಂಟೆಯ ಹೊತ್ತಿಗೆ ಮನೆಯಲ್ಲೇ ಎಲ್ಲರೊಂದಿಗೆ ಇದ್ದ ಮೃತ ಯುವಕ, ಮನೆಯವರೇಲ್ಲರೂ ಹೊರಗಡೆ ಕುಳಿತಿದ್ದಾಗ, ಒಳಗೆ ಹೋಗಿ ಮನೆಯ ಜಂತಿಗೆ ನೇಣು ಬಿಗಿದುಕೊಂಡಿದ್ದಾನೆ. ಪೋಷಕರು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಅಷ್ಟೊತ್ತಿಗಾಗಲೇ ಯುವಕ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ...
Top Stories
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!
ಪ.ಜಾತಿ, ಪಂಗಡ ಯೋಜನೆಗಳಲ್ಲಿ 100% ಗುರಿ ಸಾಧಿಸಲು ಅಧಿಕಾರಿಗಳಿಗೆ ಡೀಸಿ ಕಟ್ಟುನಿಟ್ಟಿನ ಸೂಚನೆ..!
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
ಪೊಲೀಸ್ ಇಲಾಖೆ ವತಿಯಿಂದ ಪ್ರತಿ ತಿಂಗಳು ಪ.ಜಾತಿ ಪಂಗಡದವರ ಕುಂದುಕೊರತೆ ಸಭೆ: ಎಸ್ಪಿ ದೀಪನ್
ಖಾಸಗಿ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ನಕಲಿ ವೈದ್ಯರು ಕಂಡುಬಂದಲ್ಲಿ ಕಠಿಣ ಕ್ರಮ: ಡೀಸಿ ಖಡಕ್ ಎಚ್ಚರಿಕೆ..!
ಉತ್ತರ ಕನ್ನಡದಲ್ಲಿ ಹೊಸ ವರ್ಷ ಆಚರಣೆಗೆ ಡೀಸಿ ರೂಲ್ಸ್: ಈ ಸೂಚನೆ ಪಾಲಿಸಲೇಬೇಕು ಅಂದ್ರು ಜಿಲ್ಲಾಧಿಕಾರಿ..!
ಹುಬ್ಬಳ್ಳಿಯ ಅಂಚಟಗೇರಿ ಬಳಿ ಭೀಕರ ಅಪಘಾತ- ತಂದೆ, ಎರಡು ಮಕ್ಕಳು ದುರಂತ ಸಾವು..!
ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!
ಚಿಗಳ್ಳಿ ಪ್ರೌಢಶಾಲಾ ಆವರಣದಲ್ಲಿ ಡಿ.26 ರಂದು ಧರಣಿ ಸತ್ಯಾಗ್ರಹಕ್ಕೆ ವಿರೋಧ, ಮನವಿ ಅರ್ಪಣೆ..!
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!
ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
Category: ಮುಂಡಗೋಡ ಸುದ್ದಿ
ಕಳ್ಳತನ ಕೇಸ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಪರಿಶೀಲನೆ..!
ಮುಂಡಗೋಡ: ಪಟ್ಟಣದಲ್ಲಿ ಇಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಯಲ್ಲಾಪುರ ರಸ್ತೆಯ ಶ್ರೀ ಮೊಬೈಲ್ ಶಾಪ್ ಹಾಗೂ ಶ್ರೀ ಶಕ್ತಿ ಪೋಟೋ ಸ್ಟುಡಿಯೋದಲ್ಲಿ ಕಳ್ಳತನವಾದ ಹಿನ್ನೆಲೆ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ರು.
12 ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿ ಮಾಜಿ ಪೊಲೀಸಪ್ಪ ಅಂದರ್..!
ಮುಂಡಗೋಡ: ಪೊಲೀಸ್ ಇಲಾಖೆಯಲ್ಲಿ ನೌಕರಿ ಕೊಡಿಸ್ತಿನಿ ಅಂತಾ ನಂಬಿಸಿ, 12 ಜನ ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿಯನ್ನ ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಷರಶಃ ಭೂಗತನಾಗಿ ತಲೆಮರೆಸಿಕೊಂಡಿದ್ದ ಬಂಧಿತ, ವಂಚನೆಯ ಆರೋಪಿ ಸಂತೋಷ ಗುದಗಿಯನ್ನು ಮುಂಡಗೋಡ ಪೊಲೀಸರು ಬಂಧಿಸಿ ಇನ್ನೇನು ಸಂಜೆಯಷ್ಟೊತ್ತಿಗೆ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಇನ್ನು ಈ ವಂಚಕ ಆರೋಪಿಯನ್ನ ಮುಂಡಗೋಡ ಪೊಲೀಸರು ಬಂಧಿಸಿದ್ದೇ ರೋಚಕ ಕಣ್ರಿ.. ನಿನ್ನೆಯ ಕತೆ ಮುಂದುವರಿದ ಭಾಗ..! ಅದು ಕಳೆದ ಮಂಗಳವಾರ, ಮುಂಡಗೋಡ ಪೊಲೀಸರು, ವಂಚನೆಗೊಳಗಾದ ಯುವಕರು...
ಕಳ್ಳ ಇವನೇ ನೋಡಿ..! ಮೊಬೈಲ್ ಶಾಪ್ ದೋಚಿದ ಕಳ್ಳನ ಕರಾಮತ್ತು ಹೇಗಿದೆ ಗೊತ್ತಾ..?
ಮುಂಡಗೋಡ: ಯಲ್ಲಾಪುರ ರಸ್ತೆಯ ಶ್ರೀ ಮೊಬೈಲ್ ಶಾಪ್ ದೋಚಿದ ಕಳ್ಳ ಕೊನೆಗೂ ತನ್ನ ಕುರುಹು ಬಿಟ್ಟು ಹೋಗಿದ್ದಾನೆ. ಕಳ್ಳ ಅಂಗಡಿಗೆ ನುಗ್ಗಿ ಮೊಬೈಲ್ ಎಗರಿಸೋ ಅಷ್ಟೂ ದೃಷ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿವೆ. “ಕತ್ತಲಿನಲ್ಲಿ ಯಾರಯ್ಯಾ ನನ್ನ ನೋಡ್ತಾರೆ” ಅಂತಾ ಬೆಳ್ಳಂ ಬೆಳಿಗ್ಗೆ ನಾಲ್ಕೂವರೇ ಹೊತ್ತಲ್ಲಿ, ಪುಟ್ಟದೊಂದು ಮೊಬೈಲ್ ಟಾರ್ಚ್ ಬೆಳಕಲ್ಲೇ ಮೊಬೈಲ್ ಅಂಗಡಿಗೆ ಕನ್ನ ಹಾಕೋ ಖದೀಮ, ತನ್ನ ಲೀಲೆಗಳನ್ನು ಅಲ್ಲೇ ಕಣ್ಣರಳಿಸಿ ಕೂತಿರೋ ಸಿಸಿಟಿವಿ ದಾಖಲಿಸಿಕೊಳ್ಳತ್ತೆ ಅಂತಾ ಬಹುಶಃ ಆತನಿಗೆ ಗೊತ್ತಿರಲಿಲ್ಲವೇನೋ. ಅಂದಹಾಗೆ, ಈ ಸಿಸಿಟಿವಿಯಲ್ಲಿ ಸೆರೆಯಾಗಿರೋ...
ಅಯ್ಯೋ, ನಿನ್ನೆ ನಡೆದಿದ್ದು ಒಂದೇ ಕಳ್ಳತನ ಅಲ್ಲಾ..! ಅದೇ ರಸ್ತೆಯ ಪೋಟೊ ಸ್ಟುಡಿಯೋನೂ ದೋಚಿದ್ರು ನೋಡಿ ಕಳ್ಳರು..!!
ಮುಂಡಗೋಡ: ಪಟ್ಟಣದಲ್ಲಿ ರಾತ್ರಿ ಮತ್ತೊಂದು ಕಳ್ಳತನ ನಡೆದಿದೆ. ಶ್ರೀ ಮೊಬೈಲ್ ಶಾಪ್ ದೋಚಿದ ಹಾಗೇ, ಅದೇ ಮಾದರಿಯಲ್ಲಿ ಯಲ್ಲಾಪುರ ರಸ್ತೆಯ ಶ್ರೀ ಶಕ್ತಿ ಪೋಟೋ ಸ್ಟುಡಿಯೋಗೆ ನುಗ್ಗಿ ಬೆಲೆ ಬಾಳುವ ವಿಡಿಯೊ ಕ್ಯಾಮೆರಾ, ಪೋಟೊ ಕ್ಯಾಮೆರಾ, ಹಾರ್ಡ್ ಡಿಸ್ಕ್ ಸೇರಿ ಹಲವು ವಸ್ತಗಳನ್ನು ಎಗರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಹುಶಃ, ನಿನ್ನೆ ರಾತ್ರಿ ಮೊಬೈಲ್ ಶಾಪ್ ದೋಚಿರೋ ಕಳ್ಳರೇ, ಪೋಟೋ ಸ್ಟುಡಿಯೋಗೂ ನುಗ್ಗಿರೋ ಸಾಧ್ಯತೆ ಇದೆ. ಇನ್ನು ಯಲ್ಲಾಪುರ ರಸ್ತೆಯ ಈ ಏರಿಯಾದಲ್ಲಿ ಕಳ್ಳರು ಅಷ್ಟೊಂದು ಲೀಲಾಜಾಲವಾಗಿ...
ಮುಂಡಗೋಡಿನಲ್ಲಿ ಮತ್ತೆ ಕಳ್ಳರ ಕರಾಮತ್ತು, ಮೊಬೈಲ್ ಶಾಪ್ ದೋಚಿದ ಖದೀಮರು..!
ಮುಂಡಗೋಡ: ಪಟ್ಟಣದಲ್ಲಿ ಅದ್ಯಾಕೋ ಏನೋ ಕಳ್ಳರ ಕೈಚಳಕಗಳು ಕಡಿಮೆಯೇ ಆಗುತ್ತಿಲ್ಲ. ಪಟ್ಟಣದ ವೈನ್ ಶಾಪ್ ಕಳ್ಳತನ ನಡೆದು ಇನ್ನೂ ತಿಂಗಳಾಗಿಲ್ಲ, ಈಗ ಮತ್ತೆ ಮೊಬೈಲ್ ಅಂಗಡಿಯೊಂದಕ್ಕೆ ಖದೀಮರು ಕನ್ನ ಹಾಕಿದ್ದಾರೆ. ನಿನ್ನೆ ರಾತ್ರಿ, ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರೋ ಶ್ರೀಧರ್ ಉಪ್ಪಾರ್ ಎಂಬುವವರ “ಶ್ರೀ ಮೊಬೈಲ್” ಶಾಪ್ ನ ಮೇಲ್ಚಾವಣಿ ತೆಗೆದ ಒಳನುಗ್ಗಿರೋ ಕಳ್ಳರು ಬೆಲೆಬಾಳುವ ಮೊಬೈಲ್ ಸೇರಿ ಹಲವು ವಸ್ತುಗಳನ್ನು ಎಗರಿಸಿದ್ದಾರೆ ಅಂತಾ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದ್ರೆ, ಕಳ್ಳತನವಾದ ವಸ್ತುಗಳ ಅಸಲೀ ಮೌಲ್ಯ ಎಷ್ಟು,...
ಮಾಜಿ ಪೊಲೀಸಪ್ಪನ ವಂಚಕ ಪುರಾಣ; ಬಗೆದಷ್ಟು ಬಯಲಾಗತ್ತೆ “ಪೀಕಾ”ಯಣ..! ಅಷ್ಟಕ್ಕೂ, ಆತನ ಅಸಲಿ ಕಹಾನಿ ಏನು ಗೊತ್ತಾ..?
ಖಾಕಿ ಪಡೆಯಲ್ಲೂ ಇನ್ನಿಲ್ಲದ ಎತ್ತುವಳಿ ಶೂರರಿದ್ದಾರೆ, ಅವ್ರಿಂದ ಹುಶಾರಾಗಿರಿ ಅಂತಾ ಉತ್ತರ ಕನ್ನಡ ಎಸ್ಪಿ ಪ್ರಕಾಶ ದೇವರಾಜು ಇತ್ತಿಚೇಗಷ್ಟೇ ಖಡಕ್ಕಾಗಿ ಹೇಳಿದ್ರು. ಅಲ್ದೇ ಹಿರಿಯ ಅಧಿಕಾರಿಗಳ ಹೆಸ್ರಲ್ಲಿ ದುಡ್ಡು ಪೀಕೊ ಕೆಲ ಪೊಲೀಸರು, ವಂಚಕರು ದಂಧೆಗೆ ಇಳಿದಿದ್ದಾರೆ. ಅಂತವರಿಗೆ ಯಾರೂ ಬಿಡಿಗಾಸೂ ಕೊಡಬೇಡಿ, ಹಾಗೇನಾದ್ರೂ ಕೇಳಿದ್ರೆ ನೇರವಾಗಿ ನಂಗೆ ಕಂಪ್ಲೇಂಟ್ ಕೊಡಿ ಅಂತಾ ಖಡಕ್ಕಾದ ಮಾತು ಹೇಳಿದ್ರು. ಹಾಗಾದ್ರೆ, ಅವ್ರು ಇಂತವರನ್ನ ನೋಡಿಯೇ ಹೇಳಿದ್ರಾ..? ಗೊತ್ತಿಲ್ಲ. ಹಾಗಾದ್ರೆ, ಎಸ್ಪಿ ಸಾಹೇಬ್ರು ಹೇಳಿದ್ದಾದ್ರೂ ಏನು ಒಮ್ಮೆ ಕೇಳಿ, ಆಮೇಲೆ...
ಅಗಡಿಯ “ಮೈಲಾರಿ”ಗೆ ಹುಟ್ಟುಹಬ್ಬದ ಸಂಭ್ರಮ..! ಹಾಗಾದ್ರೆ ಯಾರು ಈ ಮೈಲಾರಿ..?
ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ನಿಂಗಪ್ಪ ಬರಮಪ್ಪ ತಳವಾರ ಎಂಬುವವರು ತಾವು ಮುದ್ದಿನಿಂದ ಸಾಕಿದ ಹೋರಿಗೆ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿದ್ರು. ತಮ್ಮ ಮನೆಯ ಮುದ್ದಿನ ಮಗನ ಹಾಗೆ ಸಾಕಿದ ಮೈಲಾರಿ ಎಂಬ ಹೋರಿಗೆ ನಾಲ್ಕನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ರು. ಅಂದಹಾಗೆ, ಮೈಲಾರಿ ಅನ್ನೋ ಹೋರಿ ಈಗಾಗಲೇ ನಾಲ್ಕೈದು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದೆ. ತಮ್ಮ ಮನೆಯಲ್ಲೆ ಹುಟ್ಟಿ ಬೆಳೆದ ಹೋರಿಗೆ ಇಡೀ ಮನೆಯ ಮಂದಿ ತಮ್ಮ ಮನೆಮಗನ ಹಾಗೇ ಮುದ್ದು ಮಾಡುತ್ತಾರೆ. ಪ್ರೀತಿಯಿಂದ ತುತ್ತು...
ಹುನಗುಂದ ವಿಠ್ಠಲ ರುಕ್ಮಾಯಿ ಮಂದಿರದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ..!
ಮುಂಡಗೋಡ:ತಾಲೂಕಿನ ಹುನಗುಂದ ಗ್ರಾಮದ ವಿಠಲ ರುಕ್ಮಿಣಿ ಹರಿಮಂದಿರದಲ್ಲಿ ರವಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 29-8-2021 ರಂದು ರವಿವಾರ ದಿವಸ ಬೆಳಿಗ್ಗೆ 10-00 ಘಂಟೆಗೆ ವಿಠ್ಹಲ ರುಕ್ಮಿಣಿ ಹರಿ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಕೃಷ್ಣನನ್ನು ತೊಟ್ಟಿಲು ಹಾಕುವ ಕಾರ್ಯಕ್ರಮ ಇರುತ್ತದೆ. ಮಧ್ಯಾನ ಪ್ರಸಾಧ ವ್ಯವಸ್ಥೆ ಇರುವದರಿಂದ ಎಲ್ಲಾ ಭಕ್ತಾದಿಗಳು ಭಾಗವಹಿಸಬೇಕೆಂದು ಪಾಂಡುರಂಗ ಸೇವಾ ಸಮಿತಿಯವರು ಮನವಿ ಮಾಡಿದ್ದಾರೆ.
ಆಲಳ್ಳಿಯಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ, ಗಾಯ..!
ಮುಂಡಗೋಡ : ತಾಲೂಕಿನ ಆಲಳ್ಳಿ ಗ್ರಾಮದ ಕಾಡಿನಲ್ಲಿ ಅಣಬೆ ಕೀಳಲು ಹೋದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದ ಘಟನೆ ನಡೆದಿದೆ. ಇಂದು ನಸುಕಿನ ಜಾವ ಆಲಳ್ಳಿ ಗ್ರಾಮದ ಧರ್ಮಣ್ಣ ಖಂಡೋಜಿ ಹಾಗೂ ಸಂಗಡಿಗರು ಸೇರಿ ಆಲಳ್ಳಿ ಅರಣ್ಯದಲ್ಲಿ ಅಣಬೆ ಕೀಳಲು ಹೋದಾಗ ಧರ್ಮಣ್ಣನ ಮೇಲೆ ಕರಡಿ ದಾಳಿ ಮಾಡಿದೆ ಅಂತಾ ತಿಳಿದು ಬಂದಿದೆ. ಅರಣ್ಯದಂಚಿನಲ್ಲಿರುವ ಗೋವಿನಜೋಳ ಹೊಲಕ್ಕೆ ಹೋದ ಸಂದರ್ಭದಲ್ಲಿ ಮಂಗಗಳನ್ನು ಓಡಿಸಲು ಹೋದಾಗ ಕರಡಿ ದಾಳಿ ಮಾಡಿದೆ. ಕರಡಿಯ ಜೊತೆ ಎರಡು ಮರಿಗಳಿದ್ದವು. ಜೋರಾಗಿ...









