ಮುಂಡಗೋಡ: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹಿಂದು ಯುವಕ, ಭಜರಂಗದಳ ಕಾರ್ಯಕರ್ತ ಹರ್ಷ ಸಾವಿಗೆ ಮುಂಡಗೋಡಿನ ಹಿಂದುಪರ ಸಂಘಟನೆಗಳು ತೀವ್ರ ಸಂತಾಪ ಸೂಚಿಸಿವೆ. ಪಟ್ಟಣದ ಶಿವಾಜಿ ವೃತ್ತದಲ್ಲಿ ಮಂಗಳವಾರ ಸಂಜೆ ಹರ್ಷ ಭಾವಚಿತ್ರಕ್ಕೆ ವಿಶೇಷ ಗೌರವ ಸಲ್ಲಿಸಿದ್ರು. ಮೇಣದ ಬತ್ತಿ ಬೆಳಗಿಸಿ ಶೃದ್ಧಾಂಜಲಿ ಅರ್ಪಿಸಿದ್ರು. ಹಿಂದು ಕಾರ್ಯಕರ್ತನಿಗೆ ಚಿರಶಾಂತಿ ಸಿಗಲಿ ಅಂತಾ ಮೌನಾಚರಣೆ ಮಾಡಿದ್ರು. ಶೀಘ್ರವೇ ಹತ್ಯೆಯ ಆರೋಪಿಗಳನ್ನು ಹೆಡೆಮುರಿ ಕಟ್ಟುವಂತೆ ಸರ್ಕಾರಕ್ಕೆ ಆಗ್ರಹಿಸಿದ್ರು. ಮತ್ತೊಮ್ಮೆ ಹುಟ್ಟಿ ಬಾ “ಹಿಂದು ಕಂದ” ಅಂತಾ ಹಾರೈಸಿದ್ರು. ಈ ವೇಳೆ ಮುಂಡಗೋಡಿನ ಹಿಂದು...
Top Stories
ಪ.ಜಾತಿ, ಪಂಗಡ ಯೋಜನೆಗಳಲ್ಲಿ 100% ಗುರಿ ಸಾಧಿಸಲು ಅಧಿಕಾರಿಗಳಿಗೆ ಡೀಸಿ ಕಟ್ಟುನಿಟ್ಟಿನ ಸೂಚನೆ..!
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
ಪೊಲೀಸ್ ಇಲಾಖೆ ವತಿಯಿಂದ ಪ್ರತಿ ತಿಂಗಳು ಪ.ಜಾತಿ ಪಂಗಡದವರ ಕುಂದುಕೊರತೆ ಸಭೆ: ಎಸ್ಪಿ ದೀಪನ್
ಖಾಸಗಿ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ನಕಲಿ ವೈದ್ಯರು ಕಂಡುಬಂದಲ್ಲಿ ಕಠಿಣ ಕ್ರಮ: ಡೀಸಿ ಖಡಕ್ ಎಚ್ಚರಿಕೆ..!
ಉತ್ತರ ಕನ್ನಡದಲ್ಲಿ ಹೊಸ ವರ್ಷ ಆಚರಣೆಗೆ ಡೀಸಿ ರೂಲ್ಸ್: ಈ ಸೂಚನೆ ಪಾಲಿಸಲೇಬೇಕು ಅಂದ್ರು ಜಿಲ್ಲಾಧಿಕಾರಿ..!
ಹುಬ್ಬಳ್ಳಿಯ ಅಂಚಟಗೇರಿ ಬಳಿ ಭೀಕರ ಅಪಘಾತ- ತಂದೆ, ಎರಡು ಮಕ್ಕಳು ದುರಂತ ಸಾವು..!
ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!
ಚಿಗಳ್ಳಿ ಪ್ರೌಢಶಾಲಾ ಆವರಣದಲ್ಲಿ ಡಿ.26 ರಂದು ಧರಣಿ ಸತ್ಯಾಗ್ರಹಕ್ಕೆ ವಿರೋಧ, ಮನವಿ ಅರ್ಪಣೆ..!
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!
ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
Category: ಮುಂಡಗೋಡ ಸುದ್ದಿ
ಬಾಚಣಕಿ ಡ್ಯಾಂ ನಲ್ಲಿ ನಾಪತ್ತೆಯಾಗಿರೋ ವಿದ್ಯಾರ್ಥಿಗಾಗಿ ಶೋಧ..! ಹಾಗಾದ್ರೆ ಆತ ಏನಾದ..?
ಮುಂಡಗೋಡ; ಬಾಚಣಕಿ ಜಲಾಶಯದಲ್ಲಿ ನಿನ್ನೆ ನಾಪತ್ತೆಯಾಗಿರೋ ವಿದ್ಯಾರ್ಥಿಗಾಗಿ ಇಂದೂ ಕೂಡ ಶೋಧ ಕಾರ್ಯ ಜಾರಿಯಲ್ಲಿತ್ತು. ಆದ್ರೆ ಇದುವರೆಗೂ ವಿದ್ಯಾರ್ಥಿ ಪತ್ತೆಯಾಗಿಲ್ಲ. ನಿನ್ನೆ ಇದೇ ಬಾಚಣಕಿ ಡ್ಯಾಂ ಅಂಗಳದಲ್ಲಿ ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ ಪಿಯೂ ಓದುತ್ತಿದ್ದ ಕಲಕೇರಿ ಗ್ರಾಮದ ತನುಜಾ ಎನ್ನುವ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಅಲ್ಲದೇ, ಆಕೆಯ ಜೊತೆಗೆ ಬಂದಿದ್ದ ಅಂತಾ ಹೇಳಲಾಗಿರೊ ವಿದ್ಯಾರ್ಥಿಯ ಪಾದರಕ್ಷೆಗಳು ಜಲಾಶಯದ ದಡದಲ್ಲಿ ದೊರೆತಿದ್ದವು. ಹೀಗಾಗಿ, ವಿದ್ಯಾರ್ಥಿ ಕೂಡ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ವಿದ್ಯಾರ್ಥಿಯ ಶವಕ್ಕಾಗಿ...
ಹರ್ಷ ಕೊಲೆಯ ಕಿಚ್ಚು..! ಮುಂಡಗೋಡಿನಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ..!
ಮುಂಡಗೋಡ: ಪಟ್ಟಣದಲ್ಲಿ ಇಂದು ಶ್ರೀರಾಮ ಸೇನೆ ಹಾಗೂ ಹಿಂದೂ ಪರ ಸಂಘಟನೆಗಳು ಬೀದಿಗಿಳಿದಿದ್ದವು. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೀತು. ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಕೈಗೊಂಡ ಹಿಂದು ಕಾರ್ಯಕರ್ತರು ಶೀಘ್ರವೇ ಹಿಂದು ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳನ್ನ ಬಂಧಿಸಿ, ಅವ್ರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಂತಾ ಅಗ್ರಹಿಸಿದ್ರು. ಈ ವೇಳೆ ನೂರಾರು ಸಂಖ್ಯೆಯ ಹಿಂದು ಕಾರ್ಯಕರ್ತರು ಭಾಗಿಯಾಗಿದ್ರು. ಪ್ರತಿಭಟನೆಗೆ ಗೋ ಮಾತೆ ಸಾಥ್..! ಶಿವಾಜಿ ಸರ್ಕಲ್...
ನೀರಿಗೆ ಜಿಗಿಯೋಕೂ ಮುನ್ನ ವಿಷ ಕುಡಿದಿತ್ತಾ ಜೋಡಿ..? ಅಷ್ಟಕ್ಕೂ ಬಾಚಣಕಿ ಡ್ಯಾಂ ಅಂಗಳದಲ್ಲಿ ನಡೆದದ್ದಾದ್ರೂ ಏನು..?
ಮುಂಡಗೋಡ: ಏನಾಗ್ತಿದೆ ನಮ್ಮ ಮುಂಡಗೋಡ ತಾಲೂಕಿನ ಯುವಕ ಯುವತಿಯರಿಗೆ..? ನಿಜಕ್ಕೂ ಮಮ್ಮಲ ಮರಗುತ್ತಿದೆ ಇಡೀ ತಾಲೂಕು. ಯಾಕಂದ್ರೆ ಇನ್ನೂ ಮೀಸೆ ಚಿಗುರದ, ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿ ಪ್ರೇಮ ಅಂತೇಲ್ಲ ಇಡೀ ಬದುಕನ್ನೇ ಹಾಳು ಮಾಡಿಕೊಳ್ತಿದಾರಾ ಯುವ ಪಡೆ..? ಹಾಗಂತ ಆತಂಕಗೊಂಡಿದ್ದಾರೆ ತಂದೆ ತಾಯಂದಿರು. ಪ್ರೀತಿಗೆ ಬಲಿ..? ಯಸ್, ಮುಂಡಗೋಡ ತಾಲೂಕಿನಲ್ಲಿ ಇತ್ತೀಚೆಗೆ ಪ್ರೇಮ ಪ್ರಕರಣಗಳಲ್ಲಿ ನಾಪತ್ತೆಯಾದ ಯುವಕ ಯುವತಿಯರ ಸಂಖ್ಯೆ ಇನ್ನಿಲ್ಲದ ಹಾಗೆ ಏರಿಕೆಯಾಗಿದೆ. ಅದ್ರೊಟ್ಟಿಗೆ, ಇವತ್ತಿನ ಈ ಪ್ರಕರಣ ಬಹುಶಃ ಇಡೀ ತಾಲೂಕಿನ ಮಂದಿಗೆ ಬೆಚ್ಚಿ...
ತಾಲೂಕಿನಲ್ಲಿ ಕುದುರೆ ಕಳ್ಳರ ಗ್ಯಾಂಗ್ ಆ್ಯಕ್ಟಿವ್ ಆಗಿದೆಯಾ..?
ಮುಂಡಗೋಡ: ತಾಲೂಕಿನಲ್ಲಿ ಕುದುರೆ ಕಳ್ಳರು ಬಂದಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಇಲ್ಲಿ ಎಲ್ಲಿಂದಲೋ ಬಂದು ವಾಹನ ತಂದು ಕುದುರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಸಂಚಾರಿ ಕುರುಬರು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರೋ ಕುದುರೆಗಳನ್ಬು ಕಳವು ಮಾಡಿಕೊಂಡು ಹೋಗುವ ಗ್ಯಾಂಗ್ ಬಂದಿದೆಯಾ ಅನ್ನೋ ಅನುಮಾನಗಳು ಶುರುವಾಗಿದೆ. ಯಾಕಂದ್ರೆ ತಾಲೂಕಿನ ಟಿಬೇಟಿಯನ್ ಕಾಲೊನಿ ಸೇರಿದಂತೆ ಎಲ್ಲೆಂದರಲ್ಲಿ ತಿರುಗಾಡುವ ಕುದುರೆಗಳನ್ನು ಕಳ್ಳರು ಹಾಡಹಗಲೆ ಎತ್ತಾಕೊಂಡು ಹೋಗ್ತಿದಾರಾ ಅನ್ನೊ ಅನುಮಾನಗಳು ಶುರುವಾಗಿದೆ. ಹೀಗಾಗಿ, ಹಾಗೆ ಕಳ್ಳರ ಕೃತ್ಯಗಳನ್ನು ಕೆಲ ಯುವಕರ ಪಡೆ ನಿಯಂತ್ರಿಸಲು ಪಣ...
ಇಂದೂರಿನಲ್ಲಿ “ದೇವರ ಹಾವು” ಪ್ರತ್ಯಕ್ಷ..!
ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ನಡೆಯುತ್ತಿರೊ ಕಾಲುವೆ ಕಾಮಗಾರಿ ವೇಳೆ ಬೃಹತ್ ನಾಗರ ಹಾವು ಪ್ರತ್ಯಕ್ಷವಾಗಿ ಆತಂಕ ಮೂಡಿಸಿತ್ತು. ಜಲಾಶಯದ ಕಾಲುವೆ ಕಾಮಗಾರಿ ವೇಳೆ ಆಹಾರ ಅರಸಿ ಬಂದಿದ್ದ ಘಟ ಸರ್ಪ ನಿರಾತಂಕವಾಗಿ ಕಾಲುವೆಯಲ್ಲಿ ಆಟವಾಡುತ್ತಿತ್ತು. ಹೀಗಾಗಿ ಕೆಲಹೊತ್ತು, ಕಾರ್ಮಿಕರ ಆತಂಕಕ್ಕೆ ಕಾರಣವಾಗಿತ್ತು. ಹಾವನ್ನು ಸುರಕ್ಷಿತವಾಗಿ ಕಾಲುವೆಯಿಂದ ಹೊರಗೆ ಕಳಿಸುವಲ್ಲಿ ಜನರು ಯಶಸ್ವಿಯಾದ್ರು. ಅಲ್ಲದೆ ಈ ಹಾವು ದೇವರ ಹಾವು ಅಂತಾ ಅಲ್ಲಿದ್ದವರು ಕೈ ಮುಗಿದು ನಿಂತಿರೊ ದೃಷ್ಯ ಕಂಡು ಬಂತು. ಒಟ್ನಲ್ಲಿ ಹಾವು ಬಂದ ಕಾರಣಕ್ಕೆ ಸ್ಥಳದಲ್ಲಿ...
ಕೂರ್ಲಿ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಜಾನುವಾರು ಪ್ರದರ್ಶನ..!
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂರ್ಲಿ ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಜಾನುವಾರು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಜಾನುವಾರು ಪ್ರದರ್ಶನದಲ್ಲಿ ಉತ್ತಮ ಜಾನುವಾರುಗಳಿಗೆ ಬಹುಮಾನ ನೀಡಲಾಯಿತು. ಇನ್ನು ಜಾನುವಾರುಗಳಿಗೆ ಕಾಲುಬಾಯಿ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿ, ಲಸಿಕೆ ಹಾಕಿಸಬೇಕು. ಜಾನುವಾರುಗಳ ಆರೋಗ್ಯ ಕಾಪಾಡಲು ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಜಾನುವಾರುಗಳಿಗೆ ಕಿವಿಓಲೆ(ಗುರುತಿನ ಸಂಖ್ಯೆ) ಹಾಕಿಸಿಕೊಳ್ಳುವುದು ಕಡ್ಡಾಯವಾಗಿದ್ದು, ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಜಾನುವಾರುಗಳ ಸಂತತಿ ಹೆಚ್ಚಾದರೆ, ರೈತರಿಗೆ ಅನುಕೂಲವಾಗುತ್ತದೆʼ ಅಂತಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು....
ಅಗಡಿ ಚೆಕ್ ಪೊಸ್ಟ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಒದ್ದಾಡಿದ ಸವಾರ, ಆಸ್ಪತ್ರೆಗೆ ರವಾನೆ..!
ಮುಂಡಗೋಡ; ತಾಲೂಕಿನ ಕಲಘಟಗಿ ರಸ್ತೆಯ ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ಬೆಂಡ್ಲಗಟ್ಟಿ ಗ್ರಾಮದವನು ಅಂತಾ ಹೇಳಲಾಗಿರೋ ವ್ಯಕ್ತಿ ಬೈಕ್ ನಿಂದ ಬಿದ್ದು ಒದ್ದಾಡುತ್ತಿದ್ದಾನೆ. ಈ ವೇಳೆ ಸ್ಥಳೀಯರು ಅಂಬ್ಯುಲೆನ್ಸ್ ಗೆ ಕಾಲ್ ಮಾಡಿ ಗಾಯಾಳು ವ್ಯಕ್ತಿಯ ಚಿಕಿತ್ಸೆಗೆ ರವಾನಿಸಲು ರೆಡಿಯಾಗಿದ್ದಾರೆ. ಆದ್ರೆ ಇದೇ ವೇಳೆ ಪೊಲೀಸರ ವಾಹನ ಬಂದು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದೆ.
ಮುಂಡಗೋಡ ಯುವಕರ ಮಾನವೀಯ ಕಾರ್ಯ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಚರ್ಮ ರೋಗದಿಂದ ಬಳಲುತ್ತಿದ್ದ ಆಕಳಿಗೆ ಇಲ್ಲಿನ ಯುವಕರ ಬಳಗ ಚಿಕಿತ್ಸೆ ನೀಡಿ ಮಾನವೀಯತೆ ತೋರಿದೆ. ತೀವ್ರವಾದ ಚರ್ಮರೋಗದಿಂದ ಬಳಲುತ್ತಿದ್ದ ಆಕಳು ಪರದಾಡುತ್ತಿತ್ತು. ಇದನ್ನು ಕಂಡ ಯುವಕರ ಪಡೆ ತಕ್ಷಣವೇ ಆಕಳನ್ನು ಹಿಡಿದು ಕಟ್ಟಿ, ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಯುವಕರ ಕರೆಗೆ ಓಗೋಟ್ಟು ತಕ್ಷಣವೇ ಹಾಜರಾದ ಪಶು ವೈದ್ಯ ಅವಿನಾಶ್ ಪೂಜಾರ್ ಕರ್ತವ್ಯ ಪ್ರಜ್ಞೆ ತೋರಿದ್ದಾರೆ. ಕಳೆದ ವಾರವಷ್ಟೇ ಅನಾರೋಗ್ಯದಿಂದ ಬಳಲಿ ನಿತ್ರಾಣಗೊಂಡಿದ್ದ ಆಕಳ ಕರುವಿಗೆ ಚಿಕಿತ್ಸೆ ನೀಡಿದ್ದ ಇದೇ...
ಇಂದೂರಿನಲ್ಲಿ ನೇಣಿಗೆ ಶರಣಾದ 17 ವರ್ಷದ ಯುವತಿ..!
ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ 17 ವರ್ಷದ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ನಡೆದಿದೆ.ಇಂದು ಮದ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ರೂಪಾ ಬಸವರಾಜ್ ಹಳಿಯಾಳ (17) ಎಂಬ ಯುವತಿಯೇ ನೇಣಿಗೆ ಶರಣಾಗಿದ್ದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.









