ಮುಂಡಗೋಡ: ಪಟ್ಟಣದಲ್ಲಿ ಇಂದು ದಿ.ನಟ ಪುನಿತ್ ರಾಜಕುಮಾರ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿತ್ತು. ಇಲ್ಲಿನ ಹಲವು ಸಂಘಟನೆ ಕಾರ್ಯಕರ್ತರು ಅಭಿಮಾನಿಗಳು ಪುನಿತ್ ಹುಟ್ಟುಹಬ್ಬದ ನಿಮಿತ್ತ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದ್ರಂತೆ ಸಂಜೆಯಿಂದ ಇಲ್ಲಿನ ಮಾರಿಕಾಂಬಾ ದೇವಾಲಯದ ಆವರಣದಿಂದ ಪುನಿತ್ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಗಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಪುನಿತ್ ರಾಜಕುಮಾರ್ ಅಭಿಮಾನಿಗಳು ಪುನಿತ್ ಪರವಾಗಿ ಘೋಷಣೆ ಕೂಗಿದ್ರು https://youtu.be/G7KlEBOg4d8
Top Stories
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
ಪೊಲೀಸ್ ಇಲಾಖೆ ವತಿಯಿಂದ ಪ್ರತಿ ತಿಂಗಳು ಪ.ಜಾತಿ ಪಂಗಡದವರ ಕುಂದುಕೊರತೆ ಸಭೆ: ಎಸ್ಪಿ ದೀಪನ್
ಖಾಸಗಿ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ನಕಲಿ ವೈದ್ಯರು ಕಂಡುಬಂದಲ್ಲಿ ಕಠಿಣ ಕ್ರಮ: ಡೀಸಿ ಖಡಕ್ ಎಚ್ಚರಿಕೆ..!
ಉತ್ತರ ಕನ್ನಡದಲ್ಲಿ ಹೊಸ ವರ್ಷ ಆಚರಣೆಗೆ ಡೀಸಿ ರೂಲ್ಸ್: ಈ ಸೂಚನೆ ಪಾಲಿಸಲೇಬೇಕು ಅಂದ್ರು ಜಿಲ್ಲಾಧಿಕಾರಿ..!
ಹುಬ್ಬಳ್ಳಿಯ ಅಂಚಟಗೇರಿ ಬಳಿ ಭೀಕರ ಅಪಘಾತ- ತಂದೆ, ಎರಡು ಮಕ್ಕಳು ದುರಂತ ಸಾವು..!
ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!
ಚಿಗಳ್ಳಿ ಪ್ರೌಢಶಾಲಾ ಆವರಣದಲ್ಲಿ ಡಿ.26 ರಂದು ಧರಣಿ ಸತ್ಯಾಗ್ರಹಕ್ಕೆ ವಿರೋಧ, ಮನವಿ ಅರ್ಪಣೆ..!
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!
ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
Category: ಮುಂಡಗೋಡ ಸುದ್ದಿ
ಮುಂಡಗೋಡಿನಲ್ಲಿ “ಅಪ್ಪು” ಜನ್ಮದಿನದ ಸಂಭ್ರಮಕ್ಕೆ ನೇತ್ರದಾನದ ಕೊಡುಗೆ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಇಂದು ದಿ. ನಟ ಪುನಿತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ರೇಣುಕಾ ಮೆಮೊರೆಬಲ್ ಟ್ರಸ್ಟ್, ಹಾಗೂ ಆಟೋ ಚಾಲಕರ ಸಂಘ ಒಕ್ಕೂಟ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ನೇತ್ರದಾನ ಶಿಬಿರ ನಡೆಯುತ್ತಿದೆ. ಪುನಿತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಅಯ್ಯಪ್ಪ ಬಜಂತ್ರಿ, ಪಣಿರಾಜ್ ಹದಳಗಿ, ಡಾ. ಎಚ್.ಎಫ್. ಇಂಗಳೆ,...
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಬಳಿ ಸ್ಕೂಟಿ ಸ್ಕಿಡ್ ಆಗಿ ಬಿದ್ದ ಯುವಕನಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಕ್ಯಾಂಪ್ ನಂಬರ್ 6 ರ ಕ್ರಾಸ್ ಬಳಿ ಬೈಕ್ ಅಪಘಾತವಾಗಿದೆ. ಸ್ಕೂಟಿ ಮೇಲಿಂದ ಸ್ಕಿಡ್ ಆಗಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಇಂದೂರು ಗ್ರಾಮದ ರಾಹುಲ್ ಎಂಬುವವನೇ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾನೆ. ಸ್ಕೂಟಿಯಿಂದ ಬರುವಾಗ ಏಕಾಏಕಿ ಸ್ಕೂಟಿ ಸ್ಕಿಡ್ ಆಗಿ ಬಿದ್ದು ಘಟನೆ ನಡೆದಿದೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಂಡಗೋಡ ತಹಶೀಲ್ದಾರ್ ಬಂಧನವಾಗ್ತಾರಾ..? ಅಷ್ಟಕ್ಕೂ ಪೊಲೀಸ್ರು ತಹಶೀಲ್ದಾರ್ ಮನೆ ಮುಂದೆ ಠಿಕಾಣಿ ಹೂಡಿದ್ಯಾಕೆ..?
ಮುಂಡಗೋಡಿನ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಸಂಕಷ್ಟಕ್ಕೆ ಸಿಲುಕಿದ್ರಾ..? ನಕಲಿ ಜಾತಿ ಪ್ರಮಾಣ ಪತ್ರ ನೀಡಿ ತಹಸೀಲ್ದಾರ್ ಪದವಿ ಗಿಟ್ಟಿಸಿಕೊಂಡಿರೋ ಆರೋಪಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಬಂಧನಕ್ಕೆ..? ಕಲಬುರ್ಗಿಯಿಂದ ಪೊಲೀಸ್ ಅಧಿಕಾರಿಗಳು ಮದ್ಯರಾತ್ರಿಯೇ ಮುಂಡಗೋಡಿಗೆ ಬಂದಿಳಿದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಪೊಲೀಸ್ ಅಧಿಕಾರಿಗಳು ಬಂದು ಬಾಗಿಲು ಬಡಿದ್ರೂ ತಹಶೀಲ್ದಾರ್ ಸಾಹೇಬ್ರು ಮಾತ್ರ ಬಾಗಿಲು ತೆರೆಯುತ್ತಿಲ್ಲವಂತೆ. ಹೀಗಾಗಿ, ಪೊಲೀಸ್ ಅಧಿಕಾರಿಗಳು ಬೆಳಗಿನ ಮೂರು ಗಂಟೆಯಿಂದ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ಸರ್ಕಾರಿ ನಿವಾಸದ ಎದುರು ಬೀಡು ಬಿಟ್ಟಿದ್ದಾರೆ. ಏನದು...
ನಂದಿಕಟ್ಟಾ ಗ್ರಾಪಂ ಗೆ ಕೆಂದಲಗೇರಿ ಗ್ರಾಮಸ್ಥರ ಮುತ್ತಿಗೆ, ಯಾಕೆ ಗೊತ್ತಾ..?
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿಗೆ ಇಂದು ಕೆಂದಲಗೇರಿ ಗ್ರಾಮಸ್ಥರು ಮುತ್ತಿಗೆ ಹಾಕಿದ್ರು. ಕೆಂದಲೆಗೇರಿ ಗ್ರಾಮದ ಅಂಗನವಾಡಿ ಕಟ್ಟಡದ ಜಾಗದಲ್ಲಿ ಓರ್ವರು ಮನೆ ಕಟ್ಟಿಕೊಂಡು ಅಂಗನವಾಡಿ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ. ಹೀಗಾಗಿ, ಅವ್ರನ್ನು ಆ ಜಾಗದಿಂದ ತೆರವುಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ರು. ಘಟನೆ ಏನು..? ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂದಲಗೇರಿ ಗ್ರಾಮದಲ್ಲಿ ಸರ್ಕಾರಿ ಅಂಗನವಾಡಿ ಇದೆ. ಅಲ್ಲಿ ನಿತ್ಯವೂ ನೂರಾರು ಪುಟ್ಟ ಪುಟ್ಟ ಮಕ್ಕಳು ಬರುತ್ತಾರೆ. ಅದ್ರೆ, ಅಂಗನವಾಡಿ ಪಕ್ಕದಲ್ಲೇ ವಾಸವಾಗಿರುವ ನೀಲವ್ವ ಸುಣಗಾರ ಎಂಬುವ ಮಹಿಳೆ...
ವಿ.ಎಸ್.ಪಾಟೀಲರಿಂದ ಹಡಪದ ಅಪ್ಪಣ್ಣ ಸಮಾಜದ ನೂತನ ರಾಜ್ಯಾಧ್ಯಕ್ಷ ಸಿದ್ದು ಹಡಪದಗೆ ಸನ್ಮಾನ..!
ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಇಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ್, ಹಡಪದ ಅಪ್ಪಣ್ಣ ಸಮಾಜದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರೋ ಸಿದ್ದಪ್ಪ ಹಡಪದರಿಗೆ ಸನ್ಮಾನಿಸಿದ್ರು. ಹುನಗುಂದದ ಸಿದ್ದಪ್ಪ ಹಡಪದ ನಿವಾಸಕ್ಕೆ ತೆರಳಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಶುಭಾಶಯ ಕೋರಿದ್ರು. ಈ ವೇಳೆ ಮಾತನಾಡಿದ ಅವ್ರು, ಸಮಾಜದ ಉನ್ನತಿಗಾಗಿ ಶ್ರಮಿಸುವಂತೆ ಕರೆ ನೀಡಿದ್ರು. ಅಲ್ಲದೆ, ಒಂದು ಸಮಾಜದ ರಾಜ್ಯಾಧ್ಯಕ್ಷರಾಗುವುದು ಸಾಧನೆ ಆಗಿದೆ. ಶ್ರಮಕ್ಕೆ ಸಂದ ಪ್ರತಿಫಲ ಇದು ಅಂತ ಹಡಪದ್ ರವರಿಗೆ...
ಡಿಸೇಲ್ ದರ ಹೆಚ್ಚಳವಾದ್ರೂ ಬಸ್ ದರ ಹೆಚ್ಚಳವಿಲ್ಲ- ಖಾಸಗಿ ಬಂಕ್ ಗಳಲ್ಲಿ ಡಿಸೇಲ್ ಖರೀದಿಗೆ ಚಿಂತನೆ- ವಿ.ಎಸ್.ಪಾಟೀಲ್
ಮುಂಡಗೋಡ: ಡಿಸೇಲ್ ದರ ಸಗಟು ಖರೀದಿದಾರರಿಗೆ ಪ್ರತೀ ಲೀಟರ್ ಗೆ 25 ರೂ. ಏರಿಕೆಯಾಗಿದೆ, ಇದ್ರಿಂದ ನಿಗಮಗಳಿಗೆ ಸಾಕಷ್ಟು ಹೊರೆಯಾಗಿದೆ ಆದ್ರೂ ಸಾರಿಗೆ ಬಸ್ ಟಿಕೇಟ್ ದರ ಹೆಚ್ಚಳ ಮಾಡಲ್ಲ, ಅಂತಾ ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದ್ರು. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ಅವ್ರು, ಕೊರೋನಾ ಸಂದರ್ಭದಲ್ಲಿನ ಹಾನಿಯಿಂದ ಅದೇಷ್ಟೋ ನಿಗಮಗಳು ತೀವ್ರ ಸಂಕಷ್ಟದಲ್ಲಿವೆ. ಈ ಮದ್ಯೆ ಮತ್ತೆ ಸದ್ಯ ಡಿಸೆಲ್ ದರ ಹೆಚ್ಚಳವಾಗಿದ್ದು ಅದನ್ನ...
ಮುಂಡಗೋಡ ತಾಲೂಕಿನ ಹಲವೆಡೆ ಭಾರೀ ಮಳೆ..!
ಮುಂಡಗೋಡ: ತಾಲೂಕಿನ ಹುನಗುಂದ,ಇಂದೂರು ಸೇರಿದಂತೆ ಹಲವು ಕಡೆ ಗಾಳಿ, ಗುಡುಗು, ಮಿಂಚು ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಮಳೆಯ ಕಾರಣಕ್ಕೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ. ಭಾರೀ ಗಾಳಿ..! ಸಂಜೆ ನಾಲ್ಕೂವರೆ ಅಷ್ಟೊತ್ತಿಗೆ ಶುರುವಾದ ಭರ್ಜರಿ ಮಳೆಗೂ ಮೊದಲು ಭಾರೀ ಗಾಳಿ ಬೀಸಿದೆ. ಪರಿಣಾಮ ಗಿಡ ಮರಗಳ ಟೊಂಗೆಗಳು ಎಲ್ಲೆಲ್ಲೂ ಮುರಿದು ಬಿದ್ದಿದೆ. ಉರುಳಿದ ಮರ..! ಶಿರಸಿ ರಸ್ತೆಯಲ್ಲಿ ಮರಬಿದ್ದು ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು....
ಮುಂಡಗೋಡಿನಲ್ಲಿ ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯ ಜಯಂತಿ ಆಚರಣೆ..!
ಮುಂಡಗೋಡಿನಲ್ಲಿ ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯ ಜಯಂತಿ ಆಚರಣೆ..! ಮುಂಡಗೋಡ: ಪಟ್ಟಣದ ಬಸವಣ್ಣ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಪುರೋಹಿತ ಘಟಕ ವತಿಯಿಂದ ಶ್ರೀಮದ್ ವೀರಶೈವ ಧರ್ಮದ ಸಂಸ್ಥಾಪಕ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಲಾಯಿತು.. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪುರೋಹಿತ ಘಟಕದ ಅಧ್ಯಕ್ಷ, ವೇ. ಪವನ್ ಕುಮಾರ್ ಶಾಸ್ತ್ರಿಗಳು ಕೋರಿಮಠ, ಸಾಕಿನ ಮಳವಳ್ಳಿ, ಉಪಾಧ್ಯಕ್ಷರಾದ ವೇ. ಬಸಯ್ಯ ಶಾಸ್ತ್ರಿಗಳು ತೋಟಯ್ಯನವರು ಸಾ, ಹುನುಗುಂದ, ಮೃತ್ಯುಂಜಯ ಶಾಸ್ತ್ರಿಗಳು ಹಿರೇಮಠ್, ಸನವಳ್ಳಿ, ವೇ. ರೇಣುಕಯ್ಯ...
“ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಚೌಡಳ್ಳಿ ಮೈಲಾರಲಿಂಗನ ಕಾರಣೀಕ..!
ಮುಂಡಗೋಡ: ತಾಲೂಕಿನ ಚೌಡಳ್ಳಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಮೈಲಾರಲಿಂಗೇಶ್ವರ ಕಾರಣೀಕ ನುಡಿ ಹೊರಬಿದ್ದಿದೆ. ವೃತಾಧಾರಿ ಜಗಧೀಶ್ ಮಡ್ಲಿ ಬಿಲ್ಲನ್ನೇರಿ, ಆಕಾಶದತ್ತ ಶೂನ್ಯ ದೃಷ್ಟಿಸುತ್ತ ಮತ್ತೆ ಕಾರಣೀಕ ನುಡಿದಿದ್ದಾರೆ. ತಾತ್ಪರ್ಯವೇನು..? “ಮಳೆ ಬಂದು ಭೂಮಿತಾಯಿ ಉಡಿ ತುಂಬಿತಲೇ ಪರಾಕ್” ಪ್ರಸಕ್ತ ವರ್ಷದ ಚೌಡಳ್ಳಿ ಮೈಲಾರಲಿಂಗನ ಕಾರಣೀಕವಿದು. ಅಂದಹಾಗೆ, ಪ್ರಸಕ್ತ ವರ್ಷದ ಕಾರಣೀಕದ ತಾತ್ಪರ್ಯ ಬಹುತೇಕ ರೈತರ ಕೃಷಿಗೆ ಸಂಬಂಧಿಸಿದಂತೆ ಹೊರಬಿದ್ದಿದೆ. ಮಳೆ, ಬೆಳೆಯ ಭವಿಷ್ಯ ನುಡಿಯಲಾಗಿದೆ. ಕಾರಣೀಕ ನುಡಿಯ...









