Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಟಿಬೇಟಿಯನ್ ಕಾಲೋನಿಗೆ ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನ ಸಮೇತ ಓರ್ವ ಪೊಲೀಸರ ವಶಕ್ಕೆ..?

ಟಿಬೇಟಿಯನ್ ಕಾಲೋನಿಗೆ ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನ ಸಮೇತ ಓರ್ವ ಪೊಲೀಸರ ವಶಕ್ಕೆ..?

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗೆ ಸಾಗಾಣಿಕೆ ಮಾಡಲಾಗುತ್ತಿದ್ದ ಅಕ್ರಮ ಗೋ ಮಾಂಸದ ವಾಹನವನ್ನು ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ ಸೀಜ್ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕಲಘಟಗಿ ಕಡೆಯಿಂದ ಸಾಗಿಸಲಾಗುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗೂ ಹೆಚ್ಚು ತೂಗುವ ಗೋಮಾಂಸವನ್ನು ವಾಹನ ಸಮೇತ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಅನ್ನೊ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಬರಬೇಕಿದೆ. 

Post
ಹುನಗುಂದ ಬಿಜೆಪಿ ಸಭೆಯಲ್ಲಿ ಇದೇನಿದು ವಿಚಿತ್ರ..? ಸಚಿವರೇ ಬಂದ್ರೂ ಬೂತ್ ಅಧ್ಯಕ್ಷರುಗಳೇ ಬರಲಿಲ್ಲ ಯಾಕೆ..?

ಹುನಗುಂದ ಬಿಜೆಪಿ ಸಭೆಯಲ್ಲಿ ಇದೇನಿದು ವಿಚಿತ್ರ..? ಸಚಿವರೇ ಬಂದ್ರೂ ಬೂತ್ ಅಧ್ಯಕ್ಷರುಗಳೇ ಬರಲಿಲ್ಲ ಯಾಕೆ..?

ಯಲ್ಲಾಪುರ ಕ್ಷೇತ್ರದಲ್ಲಿ ಇವಾಗ ಬಿಜೆಪಿ ಪಕ್ಷ ಸಂಘಟನೆಗಾಗಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಮೈದಡವಿ ಮಾತಾಡ್ತಿದಾರೆ. ಈಗಾಗಲೇ ಸಾಕಷ್ಟು ಕಡೆ ಇ‌ಂತಹ ಹತ್ತಾರು ಸಭೆ ಆಗಿ ಹೋಗಿದೆ‌. ಆದ್ರೆ ಅದೇಲ್ಲದರ ಪರಿಣಾಮ ಏನಾಗಿದೆ..? ಎಲ್ಲೇಲ್ಲಿ ಒಳಗುದಿಯ ಹೊಗೆ ಆಡ್ತಿದೆ ಅನ್ನೋದು ಖುದ್ದು ಹೆಬ್ಬಾರ್ ಸಾಹೇಬ್ರಿಗೆ ಅರ್ಥವಾಗಿದೆಯಾ.? ಹುನಗುಂದದ ಕತೆ ಏನು..? ನಿನ್ನೆ ಶುಕ್ರವಾರ ಹುನಗುಂದದ ವಿರಕ್ತ ಮಠದಲ್ಲಿ ಇದೇ ಹೆಬ್ಬಾರ್ ಸಾಹೇಬ್ರು ತಮ್ಮ ಅಜೆಂಡಾದಂತೆ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಮಾಡಿದ್ರು. ಅಲ್ಲಿ...

Post
ಬಡ್ಡಿಗೇರಿ ಕ್ರಾಸ್ ಬಳಿ ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಬಡ್ಡಿಗೇರಿ ಕ್ರಾಸ್ ಬಳಿ ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಮುಂಡಗೋಡ: ತಾಲೂಕಿನ ಬಡ್ಡಿಗೇರಿ ಕ್ರಾಸ್ ಬಳಿ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಲೂಕಿನ ಬಡ್ಡಿಗೇರಿ ಗ್ರಾಮದ 22 ವರ್ಷ ವಯಸ್ಸಿನ ಸಕ್ಕುಬಾಯಿ ಸಿದ್ದು ತೋರವತ್ ಎಂಬುವವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲು 108 ಅಂಬ್ಯುಲೆನ್ಸ್ ಗೆ ಕುಟುಂಬಸ್ಥರು ಕರೆ ಮಾಡಿದ್ದಾರೆ. ಹೀಗಾಗಿ, ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ಸಾಗಿಸುವಾಗ, ಮಹಿಳೆಗೆ ತೀವ್ರ ಹೆರಿಗೆ ನೋವು ಇದ್ದ ಕಾರಣ ಬಡ್ಡಿಗೇರಿ ಕ್ರಾಸ್ ಬಳಿ ಸುರಕ್ಷಿತವಾಗಿ ಹೆರಿಗೆಯನ್ನು...

Post
ಹುಲುಗೂರು ಶೂಟೌಟ್ ಗೆ ಮುಂಡಗೋಡಿನಲ್ಲಿ ಸುಪಾರಿ..? ಖಾಕಿ ಕಂಡು ಎಸ್ಕೇಪ್ ಆದ್ನಾ ಆರೋಪಿ..?

ಹುಲುಗೂರು ಶೂಟೌಟ್ ಗೆ ಮುಂಡಗೋಡಿನಲ್ಲಿ ಸುಪಾರಿ..? ಖಾಕಿ ಕಂಡು ಎಸ್ಕೇಪ್ ಆದ್ನಾ ಆರೋಪಿ..?

 ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪತಿಯೇ ತನ್ನ ಪತ್ನಿಯ ಹತ್ಯೆಗೆ ಸುಪಾರಿ ಕೊಟ್ಟಿದ್ನಾ..? ಅಷ್ಟಕ್ಕೂ ಆ “ಸುಪಾರಿ” ಕೈ ಬದಲಾಯಿಸಿದ್ದು ಮುಂಡಗೋಡಿನಲ್ಲಾ..? ಯಸ್, ಇಂತಹದ್ದೊಂದು ಅನುಮಾನ ಶಿಗ್ಗಾವಿ ಪೊಲೀಸರಿಗೆ ತಲೆ ಹೊಕ್ಕಿದೆ. ಯಾಕಂದ್ರೆ, ಅವತ್ತು ಗುಂಡಿನ ದಾಳಿ ಮಾಡಲು ಬಂದಿದ್ದ ಆ ಇಬ್ಬರಲ್ಲಿ ಓರ್ವ ಮುಂಡಗೋಡ ತಾಲೂಕಿನ ಆ ಗ್ರಾಮದವನಂತೆ.. ಆದ್ರೆ, ಆತ ಈ ಕ್ಷಣದವರೆಗೂ ಪೊಲೀಸರ ಕೈಗೆ ಸಿಕ್ಕೇ ಇಲ್ಲ ಅನ್ನೋ ಮಾಹಿತಿ ಗೊತ್ತಾಗಿದೆ. ಆದ್ರೆ, ಪೊಲೀಸರು ಮಾತ್ರ ಸುಮ್ನೆ ಕುಳಿತಿಲ್ಲ....

Post
ಕಾತೂರು ಬಳಿ ಶವ ಸಿಕ್ಕ ಕೇಸ್: ಟ್ರಾಕ್ಟರ್ ಮೇಲಿಂದ ಬಿದ್ದು ಸಾವು ಕಂಡನಾ ನಾಗನೂರಿನ ಶಂಭಣ್ಣ..?

ಕಾತೂರು ಬಳಿ ಶವ ಸಿಕ್ಕ ಕೇಸ್: ಟ್ರಾಕ್ಟರ್ ಮೇಲಿಂದ ಬಿದ್ದು ಸಾವು ಕಂಡನಾ ನಾಗನೂರಿನ ಶಂಭಣ್ಣ..?

 ಮುಂಡಗೋಡ ತಾಲೂಕಿನ ನಾಗನೂರಿನಲ್ಲಿ ವ್ಯಕ್ತಿಯೋರ್ವನ ಶವ ಸಿಕ್ಕಿದೆ. ಕಾತೂರಿನಿಂದ ನಾಗನೂರಿಗೆ ತೆರಳುವ ಮಾರ್ಗದಲ್ಲಿ ಕಾತೂರಿನಿಂದ ಹೆಚ್ಚೂ ಕಡಿಮೆ 200 ಮೀಟರ್ ಅಂತರದಲ್ಲಿ ರಕ್ತಸಿಕ್ತವಾಗಿದ್ದ ಶವ ಸಿಕ್ಕಿದ್ದು ಬಹುತೇಕ ಆ ಭಾಗದಲ್ಲಿ ಭಯದ ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಆದ್ರೀಗ ಅದೊಂದು ಆಕಸ್ಮಿಕ ಅಪಘಾತ ಅನ್ನೋ ಮಾತುಗಳು ಕೇಳಿ ಬರ್ತಿವೆ. ಮರ್ಡರ್ ಅನಕೊಂಡಿದ್ರು..! ಶವ ಸಿಕ್ಕ ಸ್ಥಿತಿ ನೋಡಿದ್ರೆ, ಇದೊಂದು ಕೊಲೆನಾ ಅನ್ನೊ ಅನುಮಾನಕ್ಕೆ ತಂದು ನಿಲ್ಲಿಸತ್ತು. ಆದ್ರೆ ಮತ್ತೊಂದು ಮಗ್ಗಲಿನಲ್ಲಿ ನೋಡಿದ್ರೆ ಇದೊಂದು ಆಕಸ್ಮಿಕ ಅಪಘಾತದ...

Post
ಶಿಗ್ಗಾವಿಯ ಹುಲಗೂರಲ್ಲಿ ನಡೆದ ಗುಂಡಿನ ದಾಳಿಗೂ, ಮುಂಡಗೋಡಿಗೂ ಏನದು ನಂಟು..? ಅಷ್ಟಕ್ಕೂ ಬಂದೂಕು ಯಾರದ್ದು..?

ಶಿಗ್ಗಾವಿಯ ಹುಲಗೂರಲ್ಲಿ ನಡೆದ ಗುಂಡಿನ ದಾಳಿಗೂ, ಮುಂಡಗೋಡಿಗೂ ಏನದು ನಂಟು..? ಅಷ್ಟಕ್ಕೂ ಬಂದೂಕು ಯಾರದ್ದು..?

ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯ ಹಿಂದೆ ಮುಂಡಗೋಡ ತಾಲೂಕಿನ ಲಿಂಕ್ ಇದೆಯಾ..? ಹೌದು ಅಂತಿದೆ ಮೂಲಗಳು. ನಿನ್ನೆ ರಾತ್ರಿ ಹುಲಗೂರಿನ ತನ್ನ ಮನೆಯ ಜಗುಲಿಯಲ್ಲಿ ಕುಳಿತಿದ್ದ ಮಹಿಳೆ ಸಲ್ಮಾಬಾನು ಮೇಲೆ ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕ್ ಮೇಲೆ ಬಂದು ಒಂದು ಸುತ್ತು ಗುಂಡಿನ ದಾಳಿ ನಡೆಸಿದ್ರು. ಅದೃಷ್ಟವಶಾತ್ ಮಹಿಳೆಗೆ ಗುಂಡು ತಗುಲಿಲ್ಲ. ಅದ್ರೆ, ಸಿಡಿದ ಗುಂಡಿನ ರಭಸಕ್ಕೆ ಗೋಡೆ ಸೀಳಿ ಒಳ ನುಗ್ಗಿವೆ ಗುಂಡುಗಳು. ಪಕ್ಕಾ ಸುಳಿವು..? ಆದ್ರೆ, ಹುಲಗೂರಿನಲ್ಲಿ ನಿನ್ನೆ...

Post
ಗಣೇಶಪುರದಲ್ಲಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಸೇರಿ, ಇಬ್ಬರ ಮೇಲೆ ಕೇಸ್ ದಾಖಲು..!

ಗಣೇಶಪುರದಲ್ಲಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಸೇರಿ, ಇಬ್ಬರ ಮೇಲೆ ಕೇಸ್ ದಾಖಲು..!

ಮುಂಡಗೋಡ: ತಾಲೂಕಿನ ಗಣೇಶಪುರ ಗ್ರಾಮದಲ್ಲಿ ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಹಾಗೂ ಹಣ ಪಡೆಯುತ್ತಿದ್ದ ಮುಂಡಗೋಡಿನ ಮತ್ತೊಬ್ಬ ವ್ಯಕ್ತಿ ಸೇರಿ ಇಬ್ಬರ ಮೇಲೆ ಕೇಸು ದಾಖಲಿಸಿದ್ದಾರೆ. ಗಣೇಶಪುರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಗಂಗಾಧರ ನರಸಿಂಗಪ್ಪ ದರಪ್ಪನವರ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ‌. ಅಲ್ಲದೇ ಆರೋಪಿ ನೀಡಿದ ಮಾಹಿತಿಯಂತೆ ಮಟ್ಕಾದ ಹಣ ಪಡೆಯುತ್ತಿದ್ದ ಮುಂಡಗೋಡ ಶಿರಸಿ ರಸ್ತೆಯ ಪ್ರವೀಣ್ ಪಾಟೀಲ್ ಎಂಬುವವನ ಮೇಲೂ ಕೇಸ್ ದಾಖಲಾಗಿದೆ. ಇದ್ರೊಂದಿಗೆ 825 ರೂ. ನಗದು ಹಣ ಸೇರಿದಂತೆ...

Post
ಮಳಗಿಯಲ್ಲಿ ಕಳ್ಳರ ಕೈಚಳಕ, ಮನೆ ಬೀಗ ಮುರಿದು ಚಿನ್ನ, ಹಣ ದೋಚಿದ ಕಳ್ಳರು..! ದೂರು ದಾಖಲು

ಮಳಗಿಯಲ್ಲಿ ಕಳ್ಳರ ಕೈಚಳಕ, ಮನೆ ಬೀಗ ಮುರಿದು ಚಿನ್ನ, ಹಣ ದೋಚಿದ ಕಳ್ಳರು..! ದೂರು ದಾಖಲು

ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಿರೋ ಘಟನೆ ನಡೆದಿದೆ. ಹೀಗಾಗಿ ಕುಟುಂಬಸ್ಥರು ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇ15 ರ ಮಧ್ಯಾಹ್ನ 02-00 ಗಂಟೆಯಿಂದ ದಿನಾಂಕ ಮೇ 23 ರಂದು ಸಾಯಾಂಕಾಲ 07-00 ಗಂಟೆಯ ನಡುವಿನ ಅವಧಿಯಲ್ಲಿ ಘಟನೆ ನಡೆದಿದೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಖಚಿತವಾಗಿ ಯಾವ ಹೊತ್ತಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ ಅನ್ನೋ ಮಾಹಿತಿ ಇಲ್ಲ‌. ಯಾಕಂದ್ರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ. ಏನೇನು ಕಳ್ಳತನ..? ಮಳಗಿಯ...

Post
ಚಿಗಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ, ಬಾಲಕಿ ಈಗ ಗರ್ಭಿಣಿ..! ಆರೋಪಿ ವಿರುದ್ಧ ಕೇಸ್ ದಾಖಲು

ಚಿಗಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ, ಬಾಲಕಿ ಈಗ ಗರ್ಭಿಣಿ..! ಆರೋಪಿ ವಿರುದ್ಧ ಕೇಸ್ ದಾಖಲು

ಮುಂಡಗೋಡ: ಅಪ್ರಾಪ್ತ ಬಾಲಕಿಯೋರ್ವಳಿಗೆ ಪುಸಲಾಯಿಸಿ ನಿರಂತರ ಅತ್ಯಾಚಾರ ನಡೆಸಿ ಗರ್ಭಿಣಿಯನ್ನಾಗಿ ಮಾಡಿದ ಘಟನೆ ತಾಲೂಕಿನ ಚಿಗಳ್ಳಿಯಲ್ಲಿ ನಡೆದಿದೆ. ಈ ಕುರಿತು ಬಾಲಕಿಯ ತಾಯಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪಿ ಮಂಜುನಾಥ ಫಕೀರಪ್ಪ ಹಂಚಿನಮನಿ ಎಂಬುವವನ ವಿರುದ್ಧ ದೂರು ದಾಖಲಿಸಿದ್ದಾರೆ. ಗಣೇಶ ಚತುರ್ಥಿಯ ಮರು ದಿನ..! ಅಂದಹಾಗೆ, ಕಳೆದ ವರ್ಷ ಗಣೇಶ ಚತುರ್ಥಿಯ ಮರುದಿನ ಮದ್ಯಾಹ್ನದ ಹೊತ್ತಲ್ಲಿ ಆರೋಪಿ ಮಂಜುನಾಥ, ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ಏನೂ ಅರಿಯದ ಬಾಲಕಿಯನ್ನು ಬಳಸಿಕೊಂಡಿದ್ದಾನೆ ಅಂತಾ ದೂರಿನಲ್ಲಿ ಆರೋಪಿಸಲಾಗಿದೆ. ಆನಂತರದಲ್ಲಿ ತೋಟದ...

Post
ಸಾಲಗಾಂವ್ ಬಾಣಂತಿ ದೇವಿ ದೇವಸ್ಥಾನದ ಬಳಿ ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಸಾಲಗಾಂವ್ ಬಾಣಂತಿ ದೇವಿ ದೇವಸ್ಥಾನದ ಬಳಿ ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಮುಂಡಗೋಡ: ತಾಲೂಕಿನ ಸಾಲಗಾಂವ್ ಬಾಣಂತಿದೇವಿ ದೇವಸ್ಥಾನದ ಹತ್ತಿರ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಲೂಕಿನ ನಂದಿಪುರ ಗ್ರಾಮದ 26 ವರ್ಷ ವಯಸ್ಸಿನ ಪವಿತ್ರ ಶಿವಾನಂದ ಹರಕುಣಿ ಎಂಬುವವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲು 108 ಅಂಬ್ಯುಲೆನ್ಸ್ ಗೆ ಕುಟುಂಬಸ್ಥರು ಕರೆ ಮಾಡಿದ್ದಾರೆ. ಹೀಗಾಗಿ, ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ಸಾಗಿಸುವಾಗ, ಮಹಿಳೆಗೆ ತೀವ್ರ ಹೆರಿಗೆ ನೋವು ಇದ್ದ ಕಾರಣ ಸಾಲಗಾಂವ ಬಾಣಂತಿದೇವಿ ಮತ್ತು ಅಯ್ಯಪ್ಪ...

error: Content is protected !!