ಮುಂಡಗೋಡ: ತಾಲೂಕಿನ ಇಂದೂರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿ, ನಿವೃತ್ತಿಯಾಗಿರೋ ಸಿಬ್ಬಂದಿ ವಸಂತ ವರೂರವರಿಗೆ ಇಂದು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು. ವಸಂತ ವರೂರ ದಂಪತಿಗೆ ಶಾಲು ಹೊದಿಸಿ, ಹಾರ ಹಾಕಿ ಫಲ ಪುಷ್ಪ ನೀಡಿ ಸನ್ಮಾನಿಸಿದ ಆಡಳಿತ ಮಂಡಳಿ ಸದಸ್ಯರು, ನೆನಪಿನ ಕಾಣಿಕೆ ನೀಡಿ ವಸಂತ್ ವರೂರರವರ ಸೇವೆಯನ್ನು ಶ್ಲಾಘಿಸಿದ್ರು. ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ರು.
Top Stories
ತಡಸ ತಾಯವ್ವನ ದೇವಸ್ಥಾನದ ಬಳಿ ಸ್ವಿಪ್ಟ್ ಕಾರಿಗೆ ಬೊಲೆರೋ ವಾಹನ ಡಿಕ್ಕಿ..!
ಶಿವಶಕ್ತಿ ತಂಡಕ್ಕೆ ‘ಗಜಾನನ ಟ್ರೋಫಿ-2026’ ಮಕುಟ; ಗಣೇಶ್ ನಗರದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿ ಸಂಪನ್ನ
KDCC ಬ್ಯಾಂಕ್ ನೂತನ ಅಧ್ಯಕ್ಷರಾಗಿ ಶಿವರಾಮ್ ಹೆಬ್ಬಾರ್ ಆಯ್ಕೆ, ಕೃಷ್ಣ ದೇಸಾಯಿಗೆ ಒಲಿದ ಉಪಾಧ್ಯಕ್ಷ ಸ್ಥಾನ..!
ಮುರುಡೇಶ್ವರದಲ್ಲಿ ಮಹಾಶಿವರಾತ್ರಿಯ ಜಾಗರಣೆ ಉತ್ಸವ, ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ : ಸಚಿವ ಮಾಂಕಾಳ ವೈದ್ಯ
ಹಾವೇರಿಯಲ್ಲಿ ಇಂದು ರಾಜ್ಯ ಮಟ್ಟದ “ಭೂ ಗ್ಯಾರಂಟಿ ಸಮರ್ಪಣಾ” ಸಮಾವೇಶ, ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಂಭ್ರಮಕ್ಕೆ ಸಜ್ಜು..!
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಖಡಕ್ ಸೂಚನೆ..!
ನಾಳೆ ನಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಉಷ್ಣ ಅಲೆ; ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚನೆ..!
ಕೆಂಪು ಕೋಟೆ ದಾಳಿಗೆ ಜೈಶ್-ಎ-ಮೊಹಮ್ಮದ್ ನಂಟು : ವಿಶ್ವಸಂಸ್ಥೆ ವರದಿ ; ಮಹಿಳಾ ಘಟಕದ ಬಗ್ಗೆ ಎಚ್ಚರಿಕೆ
ಗ್ರಾಮ ಪಂಚಾಯತಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು; ಸಚಿವ ಮಾಂಕಾಳ ವೈದ್ಯ..!
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರ ಕಾರ್ಣಿಕ..! ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ..!
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!
ತಟ್ಟಿಹಳ್ಳಿ ಶಿವಾನಂದನ ಹತ್ಯೆ ಯತ್ನ ಕೇಸ್, ಆರೋಪಿಯ ಹೆಡೆಮುರಿ ಕಟ್ಟಿದ ಮುಂಡಗೋಡಿನ ಚಾಣಾಕ್ಷ ಪೊಲೀಸ್ರು..!
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!
ವಿ.ಎಸ್.ಪಾಟೀಲರ “ಬಂದೂಕು” ನಾಪತ್ತೆ, ಹುಡಿಕಿಕೊಡುವಂತೆ ಮುಂಡಗೋಡ ಠಾಣೆಯಲ್ಲಿ ದೂರು..!
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ
ಹೊನ್ನಾವರದಲ್ಲಿ ಭೀಕರ ಅಗ್ನಿ ದುರಂತ, ಸುಟ್ಟು ಕರಕಲಾದ ಕಾರು, ಕಾರಲ್ಲಿದ್ದ ಇಬ್ಬರು ಸಜೀವ ದಹನ..!
Category: ಮುಂಡಗೋಡ ಸುದ್ದಿ
ಕಲಕೇರಿ ಬಳಿ ಬೈಕ್-ಟಿಪ್ಪರ್ ನಡುವೆ ಮುಖಾಮುಕಿ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಕಲಕೇರಿ ಬ್ರಿಡ್ಜ್ ಬಳಿ ರಸ್ತೆ ಅಪಘಾತವಾಗಿದೆ. ಬೈಕ್ ಹಾಗೂ ಟಿಪ್ಪರ್ ನಡುವೆ ಮುಖಾಮುಕಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕರಗಿನಕೊಪ್ಪ ತಾಂಡಾದ ಶಿವಾಜಿ ನಾಗಪ್ಪ ಲಮಾಣಿ(32) ಎಂಬುವ ಯುವಕನೇ ಗಂಭೀರ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಕಟ್ಟಿಗೆ ತುಂಬಿಕೊಂಡು ಹೊರಟಿದ್ದ ಟಿಪ್ಪರ್, ಬೈಕ್ ಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ನಲ್ಲಿದ್ದ ಶಿವಾಜಿಗೆ ಗಂಭೀರ ಗಾಯವಾಗಿದ್ದು ಕಾಲು ಕಟ್ ಆಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ....
ಮಳಗಿಯಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮ..!
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳಿಂದ ಗಿಡ ನೆಡುವ ಕಾರ್ಯಕ್ರಮದ ಮೂಲಕ ಕಾರ್ಯಕ್ರಮ ಪ್ರಾರಂಭವಾಗಿದೆ. ತಹಶೀಲ್ದಾರರಿಂದ ಕಂದಾಯ ಅದಾಲತ, ಪಿಂಚಣಿ ಅದಾಲತ ಹಾಗೂ ಹಲವು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ನಂತರ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಇದೆ. ಮಳಗಿ ಭಾಗದ ನೂರಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಅಹವಾಲುಗಳೊಂದಿಗೆ ವೃದ್ಧರು, ರೈತರು, ಯುವಕರು ಪಾಲ್ಗೊಂಡಿದ್ದಾರೆ.
ಟಿಬೇಟಿಯನ್ ಕಾಲೋನಿಯಲ್ಲಿ 2ನೇ ದಿನದ ಇಂಡೋ-ಟಿಬೇಟಿಯನ್ ವಿದ್ವಾಂಸರ ಸಮ್ಮೇಳನ ಜಾರಿ..!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಗಾಂದೇನ್ ಬೌದ್ಧ ಮಠದಲ್ಲಿ ನಿನ್ನೆಯಿಂದ ಶುರುವಾಗಿರೋ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನ ಇಂದು ಎರಡನೇ ದಿನದ ಪ್ರಾರಂಭ ಕಂಡಿದೆ. ಹೀಗಾಗಿ ಇಂದು ಬೆಳಿಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ಟಿಬೇಟಿಯನ್ ಸಂಪ್ರದಾಯದಂತೆ ಜರುಗಿದೆ. ಸೈಕಾಲಜಿ ಮತ್ತು ಚಿಂತನಶೀಲ ಅಭ್ಯಾಸಗಳ ಕುರಿತು ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದಲ್ಲಿ ಅನೇಕ ಗಣ್ಯ ಭಾಷಣಕಾರರು ಮತ್ತು ವಿದ್ವಾಂಸರು ಭಾಗಿಯಾಗಲಿದ್ದಾರೆ. ಭಾರತದ 15 ರಾಜ್ಯಗಳಿಂದ ಬಂದಿರೋ ಬೌದ್ಧ ಬಿಕ್ಕುಗಳು, ಮಠಾಧೀಶರು, ಧಾರ್ಮಿಕ ಮುಖಂಡರು...
ಟಿಬೇಟಿಯನ್ ಕಾಲೋನಿಯಲ್ಲಿ ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನ ಉದ್ಘಾಟನೆ..!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಗಾಂದೇನ್ ಬೌದ್ಧ ಮಠದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಹೀಗಾಗಿ ಇಂದು ಸಮ್ಮೇಲನ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಸೈಕಾಲಜಿ ಮತ್ತು ಚಿಂತನಶೀಲ ಅಭ್ಯಾಸಗಳ ಕುರಿತು ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದಲ್ಲಿ ಅನೇಕ ಗಣ್ಯ ಭಾಷಣಕಾರರು ಮತ್ತು ವಿದ್ವಾಂಸರು ಭಾಗಿಯಾಗಲಿದ್ದಾರೆ. ಭಾರತದ 15 ರಾಜ್ಯಗಳಿಂದ ಬಂದಿರೋ ಬೌದ್ಧ ಬಿಕ್ಕುಗಳು, ಮಠಾಧೀಶರು, ಧಾರ್ಮಿಕ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ....
ನಂದಿಕಟ್ಟಾ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಸೊಸೈಟಿಯ ನೂತನ ಅಧ್ಯಕ್ಷರಾಗಿ ಸುಧಾಕರ್ ಮೋರೆ, ಉಪಾಧ್ಯಕ್ಷರಾಗಿ ಬಸವಣ್ಣೆವ್ವ ಶಿವಪುತ್ರಪ್ಪ ಅಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸೊಸೈಟಿ ನಿರ್ದೇಶಕರ ಮಧ್ಯ ನಡೆದ ಒಪ್ಪಂದದಂತೆ,ನಿಕಟ ಪೂರ್ವ ಅಧ್ಯಕ್ಷ ತುಕಾರಾಮ್ ಔಂಡೋಜಿ ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರಿಂದ ಇಂದು ಚುನಾವಣೆ ಘೋಷಣೆ ಮಾಡಲಾಗಿತ್ತು, ಹಾಗಾಗಿ ಇಂದು ಸೊಸೈಟಿ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯಾಗಿ, ಸುಧಾಕರ್ ಮೋರೆ ಅಧ್ಯಕ್ಷರಾಗಿ, ಬಸವಣ್ಣೆವ್ವ ಶಿವಪುತ್ರಪ್ಪ ಅಗಡಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಚುನಾವಣಾಧಿಕಾರಿಯಾಗಿ, ಶಿರಸಿಯ ಸಹಕಾರಿ...
ಮೈನಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್, ಕೆಂದಲಗೇರಿಯ ವ್ಯಕ್ತಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಮೈನಳ್ಳಿ ಸಮೀಪದಲ್ಲಿ ಬೈಕ್ ಅಪಘಾತವಾಗಿದೆ. ಬೈಕ್ ಸವಾರನೊಬ್ಬ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಕೆಂದಲೆಗೇರಿ ಗ್ರಾಮದ ನೂರ್ ಅಹ್ಮದ್ (30) ಎಂಬುವವನೇ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಈತ ಕೆಂದಲಗೇರಿ ಗ್ರಾಮದಿಂದ ಯಲ್ಲಾಪುರ ರಸ್ತೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ, ಈ ವೇಳೆ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬವೂ ಮುರಿದಿದೆ. ಸದ್ಯ ಬೈಕ್ ಸವಾರನ...
ಹುನಗುಂದದಲ್ಲಿ ಅಪರಿಚಿತ, ಅರೆನಗ್ನ ವ್ಯಕ್ತಿಯ ತಿರುಗಾಟದ ಆತಂಕ, ಪೊಲೀಸರ ವಶಕ್ಕೆ ಒಪ್ಪಿಸಿದ ಗ್ರಾಮಸ್ಥರು..!
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಇಂದು ಸಂಜೆ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಅರೆನಗ್ನ ಸ್ಥಿತಿಯಲ್ಲಿ ಏಕಾಏಕಿ ಮನೆಗಳಿಗೆ ನುಗ್ಗಿ ಅವಾಚ್ಯವಾಗಿ ನಿಂದಿಸುತ್ತಿದ್ದ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಕಂಡ ಜನ ಅಕ್ಷರಶಃ ಆತಂಕಕ್ಕೀಡಾಗಿದ್ದರು. ಆತ ಬಿಹಾರಿ..! ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡುಬಂದ. ಆದ್ರೆ ಜನ ಮಾತ್ರ ಆತ ನಡೆದುಕೊಂಡ ರೀತಿ ನೋಡಿ ಭಯಭೀತಗೊಂಡು ಆತನನ್ನು ಕಳ್ಳ ಇರಬಹುದು ಅಂತ ಭಾವಿಸಿದ್ರು. ಹೀಗಾಗಿ, ತಕ್ಷಣವೇ 112 ಪೊಲೀಸರಿಗೆ ಕರೆ...
ನ್ಯಾಸರ್ಗಿಯಲ್ಲಿ ವಿಷಕಾರಿ ಹಾವು ಕಚ್ಚಿ ಯುವಕ ದಾರುಣ ಸಾವು..!
ಮುಂಡಗೋಡ: ನ್ಯಾಸರ್ಗಿಯಲ್ಲಿ ಮೊಬೈಲ್ ನಲ್ಲಿ ಮಾತಾನಾಡುತ್ತ ಹಾವು ತುಳಿದ ಕಾರಣ ವಿಷಕಾರಿ ಹಾವು ಕಚ್ಚಿ ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ. ಚಂದ್ರು ಗೂಳಪ್ಪ ಜಮಾತಿ(30) ಎಂಬ ಯುವಕನೇ ವಿಷಕಾರಿ ಹಾವಿಗೆ ಬಲಿಯಾಗಿದ್ದಾನೆ. ನಿನ್ನೆ ಬೆಳಿಗ್ಗೆ ತನ್ನ ಹಿತ್ತಲಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚಂದ್ರು, ವಿಷಕಾರಿ ಹಾವಿನ ಮೇಲೆ ಹೆಜ್ಜೆಯಿಟ್ಟಿದ್ದಾನೆ. ಹೀಗಾಗಿ, ಹಾವು ರೋಷದಿಂದ ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ...
ಮುಂಡಗೋಡಿನಲ್ಲಿ ವಿ.ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಶುರು..!
ಮುಂಡಗೋಡ: ತಹಶೀಲ್ದಾರ್ ಕಚೇರಿಯಲ್ಲಿ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿರುಸಿನ ಮತದಾನ ಶುರುವಾಗಿದೆ. ಬೆಳಗಿನಿಂದಲೂ ಶಿಕ್ಷಕರು ಬಂದು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಮತದಾನ ನಡೆಯುವ ತಹಶೀಲ್ದಾರ್ ಕಚೇರಿಯ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 144 ಸೆಕ್ಸೆನ್ ಜಾರಿ ಮಾಡಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುಂಡಗೋಡ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಇನ್ನು, ಮತದಾರರ ಯಾದಿಯನ್ನು ಹಿಡಿದು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಬೆಂಬಲಿಗರ ಜೊತೆ ಒಂದೆಡೆ ಕುಳಿತು...









