Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಕೊಪ್ಪದಲ್ಲಿ ದಾರಿತಪ್ಪಿ ಬಂದಿದ್ದ ಅಪರೂಪದ ಕಾಡು ಪ್ರಾಣಿ, ರಕ್ಷಿಸಿದ ಅರಣ್ಯ ಸಿಬ್ಬಂದಿ..!

ಕೊಪ್ಪದಲ್ಲಿ ದಾರಿತಪ್ಪಿ ಬಂದಿದ್ದ ಅಪರೂಪದ ಕಾಡು ಪ್ರಾಣಿ, ರಕ್ಷಿಸಿದ ಅರಣ್ಯ ಸಿಬ್ಬಂದಿ..!

 ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ಅಪರೂಪ ಕಾಡುಪ್ರಾಣಿಯನ್ನು ರಕ್ಷಿಸಲಾಗಿದೆ. ನಿರಂತರ ಸುರಿಯುತ್ತಿರೊ ಮಳೆಯಿಂದ ಕಂಗೆಟ್ಟ ಕಾಡು ಬೆಕ್ಕು(Indian small sivit) ಅನ್ನು ಅರಣ್ಯ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಅಂದಹಾಗೆ, ಇಂದು ಬೆಳಿಗ್ಗೆ ಕೊಪ್ಪ ಗ್ರಾಮದ ರಸ್ತೆ ಪಕ್ಕದ ಪೊದೆಯಲ್ಲಿ ಈ ಅಪರೂಪದ ಪ್ರಾಣಿ ಕಂಡಿದೆ. ಆಹಾರ ಅರಸಿಯೋ ಅಥವಾ ನಿರಂತರ ಮಳೆಯಿಂದಲೋ ಕಂಗೆಟ್ಟಿದೆ. ಹೀಗಾಗಿ, ಕಾಡು ಬಿಟ್ಟು ನಾಡಿನೆಡೆ ಬಂದಿದ್ದ ಕಾಡುಬೆಕ್ಕು ತೀವ್ರ ಭಯದಿಂದ ಅಲ್ಲೇ ಸುಳಿದಾಡಿದೆ. ಹೀಗಾಗಿ, ಈ ದೃಷ್ಯ ಕಂಡ ಗ್ರಾಮಸ್ಥರು ಅರಣ್ಯ...

Post
ಮುಂಡಗೋಡ ಬಿಜೆಪಿಯಲ್ಲೀಗ “ರಾಜೀ”ನಾಮೆ ಪರ್ವ; ಅಷ್ಟಕ್ಕೂ, ಬದಲಾವಣೆಯ ಆಟದಲ್ಲಿ ಗೆಲ್ಲೋರು ಯಾರು..?

ಮುಂಡಗೋಡ ಬಿಜೆಪಿಯಲ್ಲೀಗ “ರಾಜೀ”ನಾಮೆ ಪರ್ವ; ಅಷ್ಟಕ್ಕೂ, ಬದಲಾವಣೆಯ ಆಟದಲ್ಲಿ ಗೆಲ್ಲೋರು ಯಾರು..?

ಮುಂಡಗೋಡ: ಬಿಜೆಪಿಯಲ್ಲಿ ಬದಲಾವಣೆ ಪರ್ವ ಶುರುವಾಗಿದೆಯಾ..? ಒಳ ಒಪ್ಪಂದಗಳನ್ನು ಮೀರಿ, ಬಹುತೇಕ ಪಕ್ಷದ ಆಂತರಿಕ ಕಚ್ಚಾಟಕ್ಕೆ ಕಾರಣವಾಗಿದ್ದ ಅಧ್ಯಕ್ಷರು, ಉಪಾಧ್ಯಕ್ಷರ ರಾಜೀನಾಮೆ ಮಸಲತ್ತುಗಳಿಗೆ ಬಿಜೆಪಿ ಪಕ್ಷದ ಕೋರ್ ಕಮೀಟಿ ಮೂಗುದಾಣ ಹಾಕಲು ಸನ್ನದ್ಧವಾಗಿದೆ ಅನ್ನೊ ಖಚಿತ ಮಾಹಿತಿ ಲಭ್ಯವಾಗಿದೆ. 15-15 ರ ಒಪ್ಪಂದ..! ಅಂದಹಾಗೆ, ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹಲವು ಕಡೆ ಭರ್ಜರಿ ಜಯ ದಾಖಲಿಸಿದ್ದರು. ಹೀಗಾಗಿ, ಬಿಜೆಪಿ ಬೆಂಬಲಿತರಿಗೆ ಅಧಿಕಾರದ ಚುಕ್ಕಾಣಿ ಸಿಕ್ಕಿದ್ದ ಹಲವು ಗ್ರಾಪಂ ಗಳಲ್ಲಿ ಅವತ್ತು, ಅಧಿಕಾರದ ಹಂಚಿಕೆಯಲ್ಲಿ...

Post
ಮಜ್ಜಿಗೇರಿ ಬಳಿ ಚಿರತೆ ಪ್ರತ್ಯಕ್ಷ..? ಅನಾಮತ್ತಾಗಿ 12 ಕುರಿಗಳನ್ನು ತಿಂದು ಹಾಕ್ತಾ ಚಿರತೆ..? ಗ್ರಾಮಸ್ಥರಲ್ಲಿ ಆತಂಕ..!

ಮಜ್ಜಿಗೇರಿ ಬಳಿ ಚಿರತೆ ಪ್ರತ್ಯಕ್ಷ..? ಅನಾಮತ್ತಾಗಿ 12 ಕುರಿಗಳನ್ನು ತಿಂದು ಹಾಕ್ತಾ ಚಿರತೆ..? ಗ್ರಾಮಸ್ಥರಲ್ಲಿ ಆತಂಕ..!

 ಮುಂಡಗೋಡ: ತಾಲೂಕಿನ ಮಜ್ಜಿಗೇರಿ ಬಳಿಯ ಕಾಡಿನಲ್ಲಿ ಚಿರತೆ ಪ್ರತ್ಯಕ್ಷವಾಗಿರೋ ಅನುಮಾನ ದಟ್ಟವಾಗಿದೆ. ಕಾಡಿನಲ್ಲಿ ಮೇಯಲು ಹೋಗಿದ್ದ ಬರೋಬ್ಬರಿ 12 ಕುರಿಗಳನ್ನು ಚಿರತೆ ಕೊಂದು ಹಾಕಿದೆ ಅಂತಾ ಹೇಳಲಾಗ್ತಿದೆ. ಮಜ್ಜಿಗೇರಿ ಗ್ರಾಮದ ಬರಮಣ್ಣ ಉಗ್ರಾಣಿ ಎಂಬುವವರಿಗೆ ಸೇರಿದ 10 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ನಿನ್ನೆ ಸಂಜೆ 4 ಗಂಟೆಯ ಹೊತ್ತಿನಲ್ಲಿ ಚಿರತೆಯನ್ನು ಬರಮಣ್ಣ ನೋಡಿದ್ದಾರೆ ಎನ್ನಲಾಗಿದೆ. ಆದ್ರೆ, ಹಾಗೆ ಚಿರತೆ ಕಂಡ ತಕ್ಷಣವೇ ಭಯದಿಂದ ಕಾಲ್ಕಿತ್ತಿರೊ ಬರಮಣ್ಣ ಉಗ್ರಾಣಿಯವರ 10 ಕುರಿಗಳು ಹಾಗೆ ಬೇರೆಯವರ 2...

Post
ಮುಂಡಗೋಡ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆಯಿಲ್ಲ..!

ಮುಂಡಗೋಡ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆಯಿಲ್ಲ..!

ಮುಂಡಗೋಡ: ನಾಳೆ ಶುಕ್ರವಾರ ಮುಂಡಗೋಡ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಆದೇಶ ನೀಡಿರುವಂತೆ ಕರಾವಳಿ ಭಾಗದ ತಾಲೂಕುಗಳಾದ ಕಾರವಾರ, ಅಂಕೋಲಾ, ಭಟ್ಕಳ, ಕುಮಟಾ, ಹೊನ್ನಾವರ ಹಾಗೂ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಜೋಯಿಡಾ ತಾಲೂಕಿನ ಶಾಲಾ ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದೆ. ಆದ್ರೆ, ಮುಂಡಗೋಡ ತಾಲೂಕಿಗೆ ರಜೆ ನೀಡಲಾಗಿಲ್ಲ ಅಂತಾ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

Post
ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಮನವಿ..!

ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಮನವಿ..!

 ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಇಂದು, ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಸತ್ಯಾಗ್ರಹಕ್ಕೆ ಬೆಂಬಲಿಸಿ ಹಾಗೂ ಬೇಡ ಜಂಗಮ, ಬುಡ್ಗ ಜಂಗಮ, ಮಾಲ ಜಂಗಮದವರಾದ ನಮಗೆ ಸಂವಿಧಾನಾತ್ಮಕವಾಗಿ ಸಿಗುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ವಿತರಿಸುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಂಗಮ ಸಮುದಾಯದಿಂದ ಮನವಿ ನೀಡಲಾಯಿತು. ಬೇಡ ಜಂಗಮರಿಗೆ ಸಂವಿಧಾನಾತ್ಮಕವಾಗಿ ಸಿಗುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು...

Post
21 ವರ್ಷ ದೇಶ ಕಾಯ್ದ ವೀರ ಯೋಧನಿಗೆ ಮುಂಡಗೋಡಿಗರ ಭವ್ಯ ಸ್ವಾಗತ ಹೇಗಿತ್ತು ಗೊತ್ತಾ..?

21 ವರ್ಷ ದೇಶ ಕಾಯ್ದ ವೀರ ಯೋಧನಿಗೆ ಮುಂಡಗೋಡಿಗರ ಭವ್ಯ ಸ್ವಾಗತ ಹೇಗಿತ್ತು ಗೊತ್ತಾ..?

 ಮುಂಡಗೋಡ; ಅವ್ರು ಬರೋಬ್ಬರಿ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶ ಕಾಯ್ದವರು. ಈಗಷ್ಟೇ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸುತ್ತಿರೋ ದೀರ ಯೋಧ. ಬಿಎಸ್ ಎಫ್ ಯೋಧನಾಗಿ ದೇಶದ ಗಡಿ ಕಾಯ್ದ ವೀರನಿಗೆ ಇ‌ಂದು ಮುಂಡಗೋಡಿಗರು ಹೃದಯಪೂರ್ವಕ ಸ್ವಾಗತ ಕೋರಿದ್ರು. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಯೋಧ ಗಣಪತಿ ರವಳಪ್ಪನವರ್ ರವರಿಗೆ ಭವ್ಯ ಸ್ವಾಗತ ಕೋರಲಾಯಿತು. ಹಾರ ಹಾಕಿ ಗೌರವಪೂರ್ವಕ ಸನ್ಮಾನಿಸಲಾಯಿತು. ಪಟಾಕಿ ಸಿಡಿಸಿ ಯೋಧನ ಆಗಮನಕ್ಕೆ ಸಂಭ್ರಮಿಸಲಾಯಿತು. ನೂರಾರು ಬೈಕ್ ಗಳನ್ನೇರಿ ಜಯಕಾರಗಳೊಂದಿಗೆ ಯೋಧನಿಗೆ...

Post
ನಾಳೆ ಗುರುವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಿಸಿ ಡೀಸಿ ಆದೇಶ..!

ನಾಳೆ ಗುರುವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಿಸಿ ಡೀಸಿ ಆದೇಶ..!

ಮುಂಡಗೋಡ ತಾಲೂಕಿನಲ್ಲಿ ಮಳೆಯ ಅರ್ಬಟ ಮುಂದುವರೆದ ಹಿನ್ನೆಲೆಯಲ್ಲಿ ನಾಳೆ ಗುರುವಾರವೂ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಸೂಚನೆ‌ ನೀಡಲಾಗಿದ್ದು. ಹವಾಮಾನ ಇಲಾಖೆ ನೀಡಿರೋ ಮುನ್ಸೂಚನೆ ಹಿನ್ನೆಲೆಯಲ್ಲಿ, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಾಳೆ ಗುರುವಾರವೂ ರಜೆ ಘೋಷಣೆ‌ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಭಾರೀ‌ಮಳೆ ಸುರಿಯೋ ಮುನ್ಸೂಚನೆ ನೀಡಲಾಗಿದ್ದು, ಎಚ್ಚರಿಕೆ ವಹಿಸುವಂತೆ ತಾಲೂಕಾಡಳಿತಗಳಿಗೆ ಸಂದೇಶ ರವಾನಿಸಲಾಗಿದೆ.

Post
ಟಿಬೇಟಿಯನ್ ಕಾಲೋನಿಯಲ್ಲಿ ದಲೈ ಲಾಮಾರ 87 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ..!

ಟಿಬೇಟಿಯನ್ ಕಾಲೋನಿಯಲ್ಲಿ ದಲೈ ಲಾಮಾರ 87 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ..!

 ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಇಂದು ನೊಬೆಲ್ ಪ್ರಶಸ್ತಿ ಪುರಸ್ಕೃತ, ಟಿಬೇಟಿಗರ ಧರ್ಮಗುರು ದಲೈ ಲಾಮಾರವರ 87 ನೇ ಜನ್ಮ ದಿನದ ಸಂಭ್ರಮ ಕಳೆ ಕಟ್ಟಿದೆ. ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂ.3 ರ ಕಮ್ಯುನಿಟಿ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ದಲೈ ಲಾಮಾರವರ ಹುಟ್ಟು ಹಬ್ಬದ ನಿಮಿತ್ತ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಅಪರ ಜಿಲ್ಲಾಧಿಕಾರಿ ರಾಜೂ ಮೊಗವೀರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ರು. ಇನ್ನು, ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಟಿಬೇಟಿಗರು, ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ್ರು....

Post
ಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂದ್ರು, ವಿ.ಎಸ್.ಪಾಟೀಲ್, ಮಾಜಿ ಶಾಸಕರ ಮನದಾಳದ ಮಾತು ಎಂಥಾದ್ದು ಗೊತ್ತಾ..?

ಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂದ್ರು, ವಿ.ಎಸ್.ಪಾಟೀಲ್, ಮಾಜಿ ಶಾಸಕರ ಮನದಾಳದ ಮಾತು ಎಂಥಾದ್ದು ಗೊತ್ತಾ..?

ಮುಂಡಗೋಡ: ತಮ್ಮ ಸುಪುತ್ರನ ವಿರುದ್ಧ ಪ್ರಕಟಣೆ ಹೊರಡಿಸಿದ್ದು ನಾನೇ ಅಂತಾ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ತಮ್ಮ ಮನದಾಳದ ನೋವು ಹಂಚಿಕೊಂಡಿರೋ ಪಾಟೀಲರು, ಮಮ್ಮಲ ಮರುಗಿದ್ದಾರೆ. ಯಾವ ತಂದೆಗೂ ಈ ಪರಿಸ್ಥಿತಿ ಬರೋದು ಬೇಡ ಅಂತ ಅಳಲು ತೋಡಿಕೊಂಡಿದ್ದಾರೆ.

Post
ತಮ್ಮ ಸುಪುತ್ರನ ವಿರುದ್ಧವೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ರಾ ವಿ.ಎಸ್.ಪಾಟೀಲ್..?

ತಮ್ಮ ಸುಪುತ್ರನ ವಿರುದ್ಧವೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ರಾ ವಿ.ಎಸ್.ಪಾಟೀಲ್..?

ವಿ.ಎಸ್.ಪಾಟೀಲ್, ಈ ಹೆಸ್ರು ಕೇಳಿದ್ರೆ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ, ಅದ್ರಲ್ಲೂ ಯಲ್ಲಾಪುರ ಕ್ಷೇತ್ರದಲ್ಲಿ ಅದೇನೋ ಒಂದು ಅಭಿಮಾನ. ಅದೇನೋ ಒಂದು ಪ್ರೀತಿ. ಅವರ ಅಪ್ಪಟ ಜವಾರಿ ಭಾಷೆಯ ಮಾತುಗಳು, ನೇರ ನುಡಿಗಳು, ನಿಷ್ಕಲ್ಮಶ ಮನಸ್ಸು ಹೀಗೆ ಅವ್ರನ್ನ ನಾನು ಇವತ್ತಿಗೂ ಒಬ್ಬ ರಾಜಕಾರಣಿ ಅಂತಾ ನೋಡಿಯೇ ಇಲ್ಲ. ಅವ್ರು ನಮ್ಮ ಮಾರ್ಗದರ್ಶಿ ಸ್ಥಾನದಲ್ಲಿ ಯಾವಾಗ್ಲೂ ಇರ್ತಾರೆ. ಹೀಗಿರೋ ಅವ್ರಿಗೆ ಇಂತಹದ್ದೊಂದು ಪರಿಸ್ಥಿತಿ ಬಂದಿದೆಯಾ..? ಆ ಮಟ್ಟಿಗಿನ ಅನಿವಾರ್ಯತೆ ಎದುರಾಗಿದೆಯಾ..? ನಿಜಕ್ಕೂ ವಿ.ಎಸ್.ಪಾಟೀಲರ ಮನಸ್ಸು ಈ ಮಟ್ಟಿಗೆ...