Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಸನವಳ್ಳಿ ಮಾರಿಕಾಂಬೆಯ ಆಭರಣ ಕದ್ದಿದ್ದ ಚಾಲಾಕಿ ಅರೆಸ್ಟ್, ಅಷ್ಟಕ್ಕೂ ಕಳ್ಳತನದ ಆರೋಪಿ ಯಾರು ಗೊತ್ತಾ..?

ಸನವಳ್ಳಿ ಮಾರಿಕಾಂಬೆಯ ಆಭರಣ ಕದ್ದಿದ್ದ ಚಾಲಾಕಿ ಅರೆಸ್ಟ್, ಅಷ್ಟಕ್ಕೂ ಕಳ್ಳತನದ ಆರೋಪಿ ಯಾರು ಗೊತ್ತಾ..?

 ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಶ್ರೀಮಾರಿಕಾಂಬಾದೇವಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಕೇಸ್ ಕೂಡ ಬಟಾ ಬಯಲಾಗಿದೆ. ಮುಂಡಗೋಡ ಪೊಲೀಸರ ಖಡಕ್ ತನಿಖೆಯಲ್ಲಿ ಆ ಗ್ರಾಮದಲ್ಲೇ ಅಡಗಿ ಕುಳಿತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಹಾಗೂ ಪಿಎಸ್ ಐ ಬಸವರಾಜ್ ಮಬನೂರು ಕಳ್ಳತನದ ಕೇಸ್ ಬಯಲು ಮಾಡಿದ್ದಾರೆ. ಮಳ್ಳನಂತಿದ್ದ ಕಳ್ಳ..! ಅಸಲಿಗೆ, ಊರ ದೇವಿಯ ಆಭರಣವನ್ನೇ ಎಗರಿಸಿ ಮಳ್ಳನಂತೆ ಕುಳಿತಿದ್ದ, ಸನವಳ್ಳಿ ಗ್ರಾಮದ ಮಹಾಂತೇಶ್ ಅರ್ಜುನ್ ಆರೆಗೊಪ್ಪ ಎಂಬುವ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ....

Post
ಅಡಿಕೆ ಕಳ್ಳತನ ಕೇಸ್ ಬೇಧಿಸಿದ ಮುಂಡಗೋಡ ಪೊಲೀಸರು, ಕೊಪ್ಪ ಗ್ರಾಮದವನೇ ಅಡಿಕೆ ಕದ್ದವನಂತೆ..!

ಅಡಿಕೆ ಕಳ್ಳತನ ಕೇಸ್ ಬೇಧಿಸಿದ ಮುಂಡಗೋಡ ಪೊಲೀಸರು, ಕೊಪ್ಪ ಗ್ರಾಮದವನೇ ಅಡಿಕೆ ಕದ್ದವನಂತೆ..!

 ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ರಾತ್ರೋ ರಾತ್ರಿ ಎಳೆದು ತಂದಿದ್ದಾರೆ. ಈ‌ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಮತ್ತವರ ತಂಡ ಅಡಿಕೆ ಕಳ್ಳತನದ ಕೇಸ್ ಸಾರಾಸಗಟಾಗಿ ಬೇಧಿಸಿದೆ. ಕೊಪ್ಪ (ಇಂದೂರು) ಗ್ರಾಮದ ಫಕ್ಕಿರೇಶ ಮಲ್ಲಪ್ಪ ದೊಡ್ಮನಿ ಎಂಬುವವನೇ ಅಡಿಕೆ ಕಳ್ಳತನದ ಆರೋಪಿಯಾಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈತನನ್ನು ಖಚಿತ ಸುಳಿವಿನ ಮೇರೆಗೆ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ ಐ ಬಸವರಾಜ್ ಮಬನೂರು ಸೇರಿದಂತೆ ಮತ್ತವರ ತಂಡ ದಾಳಿ ಮಾಡಿ...

Post
ಜನನ-ಮರಣ ನೋಂದಣಿ ನೂತನ ಆದೇಶ ಹಿಂಪಡೆಯಿರಿ, ಸರ್ಕಾರಕ್ಕೆ ಮುಂಡಗೋಡಿನ ವಕೀಲರ ಆಗ್ರಹ..!

ಜನನ-ಮರಣ ನೋಂದಣಿ ನೂತನ ಆದೇಶ ಹಿಂಪಡೆಯಿರಿ, ಸರ್ಕಾರಕ್ಕೆ ಮುಂಡಗೋಡಿನ ವಕೀಲರ ಆಗ್ರಹ..!

ಮುಂಡಗೋಡ : ಪಟ್ಟಣದಲ್ಲಿ ಇಂದು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ, ವಕೀಲರ ಸಂಘ ಮನವಿಯೊಂದನ್ನ ಅರ್ಪಿಸಿದೆ. ಜನನ-ಮರಣ ನೋಂದಣಿ ಸಂಬಂಧ ರಾಜ್ಯ ಸರ್ಕಾರದ ಅಧಿಸೂಚನೆ ವಾಪಸ್ ಪಡೆದು, ಈ ಹಿಂದಿನಂತೆ ಜೆ.ಎಮ್.ಎಫ್‌.ಸಿ. ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ. ಜನನ-ಮರಣ ನೋಂದಣಿ ಸಂದರ್ಭದಲ್ಲಿ ವಿಳಂಭ ಅಥವಾ ಬೇರೆ ಯಾವುದೋ ವಿವಾದಕ್ಕೆ ಸಂಬಂಧಿಸಿದಂತೆ, ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಅಂತಹ ವ್ಯಕ್ತಿಗಳು ಈ ಹಿಂದೆ, ಜನನ-ಮರಣ ನೋಂದಣಿ ಕಾಯ್ದೆ ಕಲಂ, 13 ರ ಪ್ರಕಾರ ಸ್ಥಳೀಯ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ...

Post
ನಂದಿಕಟ್ಟಾದಲ್ಲಿ ಪ್ರವೀಣ್ ಹತ್ಯೆಗೆ ಖಂಡನೆ, ಬಿಜೆಪಿ ಯುವ ಮೋರ್ಚಾದಿಂದ ಶೃದ್ಧಾಂಜಲಿ..!

ನಂದಿಕಟ್ಟಾದಲ್ಲಿ ಪ್ರವೀಣ್ ಹತ್ಯೆಗೆ ಖಂಡನೆ, ಬಿಜೆಪಿ ಯುವ ಮೋರ್ಚಾದಿಂದ ಶೃದ್ಧಾಂಜಲಿ..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ಕೊಟ್ಟಾರು ಸಾವಿಗೆ, ಬಿಜೆಪಿ ಯುವ ಮೋರ್ಚಾ ಘಟಕ ಕಂಬನಿ ಮಿಡಿದಿದೆ. ಹತ್ಯೆಯಾಗಿರೋ ಪ್ರವೀಣ್ ಕೊಟ್ಟಾರು ಭಾವಚಿತ್ರಕ್ಕೆ ಹೂ ಹಾರ ಹಾಕಿ ಶೃದ್ಧಾಂಜಲಿ ಸಲ್ಲಿಸಿದ ಯುವ ಕಾರ್ಯಕರ್ತರು, ಹಂತಕರಿಗೆ ಹೆಡೆಮುರಿ ಕಟ್ಟುವಂತೆ ಆಗ್ರಹಿಸಿದ್ದಾರೆ. ಈ ವೇಳೆ ನಂದಿಕಟ್ಟಾ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Post
ಮುಂಡಗೋಡ ಬಿಜೆಪಿ ಯುವ ಮೋರ್ಚಾದಿಂದ ಪ್ರವೀಣ್ ನೆಟ್ಟಾರು ಗೆ ಶೃದ್ಧಾಂಜಲಿ..!

ಮುಂಡಗೋಡ ಬಿಜೆಪಿ ಯುವ ಮೋರ್ಚಾದಿಂದ ಪ್ರವೀಣ್ ನೆಟ್ಟಾರು ಗೆ ಶೃದ್ಧಾಂಜಲಿ..!

ಮುಂಡಗೋಡ: ಬಿಜೆಪಿ ಯುವ ಮುಖಂಡ, ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ಖಂಡನೆ ವ್ಯಕ್ತ ಪಡಿಸಿದೆ. ಪಟ್ಟಣದಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಹತ್ಯೆಯಾದ ಪ್ರವೀಣ್ ಕೊಟ್ಟಾರುಯವರಿಗೆ ಶೃದ್ಧಾಂಜಲಿ ಅರ್ಪಿಸಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆಗೆ ತೀವ್ರ ಖಂಡನೆ ವ್ಯಕ್ತ ಪಡಿಸಿರೋ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಹಂತಕರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಯುವ ಮೋರ್ಚಾದ ಪದಾಧಿಕಾರಿಗಳು ಹಾಜರಿದ್ದರು.

Post
ಉಗ್ನಿಕೇರಿಯಲ್ಲಿ ವಿಶಿಷ್ಟವಾಗಿ ಆಚರಣೆಗೊಂಡ ಕಾರ್ಗಿಲ್ ವಿಜಯ್ ದಿವಸ್..!

ಉಗ್ನಿಕೇರಿಯಲ್ಲಿ ವಿಶಿಷ್ಟವಾಗಿ ಆಚರಣೆಗೊಂಡ ಕಾರ್ಗಿಲ್ ವಿಜಯ್ ದಿವಸ್..!

 ಮುಂಡಗೋಡ: ತಾಲೂಕಿನ ಉಗ್ನಿಕೇರಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಶ್ರೀರಾಮ ಸೇನೆ ಗ್ರಾಮ ಘಟಕದ ವತಿಯಿಂದ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರ ಇರುವ ನೀರಿನ ಟ್ಯಾಂಕ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇರುವ ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಲಾಯಿತು. ಹಲವು ದಿನಗಳಿಂದ ಸ್ವಚ್ಚತೆ ಮಾಡದೇ ಇದ್ದಿದ್ದ ನೀರಿನ ಟ್ಯಾಂಕ್ ಗಳನ್ನು ಸ್ವಚ್ಚಗೊಳಿಸಿದ ಕಾರ್ಯಕರ್ತರು, ಟ್ಯಾಂಕ್ ಸುತ್ತಮುತ್ತಲಿನ ಗಿಡಗಂಟಿಗಳನ್ನು ಹಾಗೂ ಕೊಳಚೆಯನ್ನು ಸ್ವಚ್ಚಗೊಳಿಸಿದ್ರು. ಈ ಮೂಲಕ ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿದ್ರು.

Post
ಮುಂಡಗೋಡಿನಲ್ಲಿ ಹಿರಿಯ ಸಾಧಕರಿಗೆ ಸಚಿವರಿಂದ ಸನ್ಮಾನ..!

ಮುಂಡಗೋಡಿನಲ್ಲಿ ಹಿರಿಯ ಸಾಧಕರಿಗೆ ಸಚಿವರಿಂದ ಸನ್ಮಾನ..!

 ಮುಂಡಗೋಡ: ಪಟ್ಟಣದ ಎಲ್.ವಿ.ಕೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ” ವಿಶ್ವ ಜನಸಂಖ್ಯಾ ದಿನಾಚರಣೆ ಅಭಿಯಾನ ” ಕಾರ್ಯಕ್ರಮದಲ್ಲಿ ಹುನಗುಂದದ ಹಿರಿಯ ಶುಶ್ರೂಕಿ ಶಾಲಿನಿ ನಾಯ್ಕ್ ಸೇರಿದಂತೆ ಹಲವು ಸಾಧಕರಿಗೆ ಸನ್ಮಾನಿಸಲಾಯಿತು. ಸಚಿವ ಶಿವರಾಮ್ ಹೆಬ್ಬಾರ್, ಹಲವು ಹಿರಿಯ ಶುಶ್ರೂಕಿಯರು ಹಾಗೂ ಹಿರಿಯ ಆಶಾ ಕಾರ್ಯಕರ್ತೆಯರಿಗೆ ಶಾಲು ಹೊದಿಸಿ ಸನ್ಮಾನಿಸಿದ್ರು. ಇದ್ರ ಜೊತೆ ತಾಲೂಕಿನ ಹಿರಿಯ ಆಶಾ ಕಾರ್ಯಕರ್ತೆಯರನ್ನು ಸಚಿವರು ಸನ್ಮಾನಿಸಿದ್ರು. ಈ ವೇಳೆ ಹಲವು ಮುಖಂಡರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Post
ಸಂಘದ ಪ್ರಚಾರಕ ಸತೀಶ್ ಕಟ್ಟಿಯವರಿಗೆ ಶೃದ್ಧಾಂಜಲಿ ಕಾರ್ಯಕ್ರಮ..!

ಸಂಘದ ಪ್ರಚಾರಕ ಸತೀಶ್ ಕಟ್ಟಿಯವರಿಗೆ ಶೃದ್ಧಾಂಜಲಿ ಕಾರ್ಯಕ್ರಮ..!

 ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಭಜರಂಗದಳ ಹಾಗೂ ಹಿಂದೂಪರ ಸಂಘಟನೆಗಳಿಂದ ದಿ. ಸತೀಶ್ ಕಟ್ಟಿವರಿಗೆ ಶೃದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಸೋಮವಾರ ನಿಧನರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸತೀಶ್ ಕಟ್ಟಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ತಾಲೂಕಾ ಭಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೇಣದ ಬತ್ತಿ ಹಚ್ಚಿ ಶೃದ್ದಾಂಜಲಿ ಅರ್ಪಿಸಲಾಯಿತು. ಈ ವೇಳೆ ಭಜರಂಗದಳದ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರೊಂದಿಗೆ ಭಕ್ತಿಪೂರ್ವಕವಾಗಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು

Post
ಮುಂಡಗೋಡಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ..!

ಮುಂಡಗೋಡಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ..!

 ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ಛತ್ರಪತಿ ಶಿವಾಜಿ ಮಂಡಳದ ವತಿಯಿಂದ ಗೌರವ ಸಮರ್ಪಣೆ ಹಾಗೂ ಶೃದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶಭಕ್ತಿಯ ಘೋಷಣೆಗಳೊಂದಿಗೆ ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು. ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಯೋಧರಾದ ಗಣಪತಿ ರವಳಪ್ಪನವರ್, ಯಲ್ಲಪ್ಪ ನಾಯ್ಕರ್, ಅಣ್ಣಪ್ಪ ಶಿಗ್ಗಾವಿ ಹಾಗೂ ಗಣಪತಿ‌ ಮಟ್ಟಿಮನಿ ಎಂಬುವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು. ಈ ವೇಳೆ ಹಲವು ಮುಖಂಡರು ಭಾಗಿಯಾಗಿದ್ರು.

Post
ಹುನಗುಂದದ ಸಹಕಾರಿ ಧುರೀಣ ಸಿದ್ದಪ್ಪ ಬೀರವಳ್ಳಿ ವಿಧಿವಶ..!

ಹುನಗುಂದದ ಸಹಕಾರಿ ಧುರೀಣ ಸಿದ್ದಪ್ಪ ಬೀರವಳ್ಳಿ ವಿಧಿವಶ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಸಹಕಾರಿ ಧುರೀಣ, ವೀರೇಶ್ವರ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದಪ್ಪ ಸಣ್ಣಕಲ್ಲಪ್ಪ ಬೀರವಳ್ಳಿ(65) ಹೃದಯಾಘತದಿಂದ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿರೋ ಸಿದ್ದಪ್ಪ ಬೀರವಳ್ಳಿ, ಮೃದುಸ್ವಭಾವದ, ಜನಾನುರಾಗಿ ವ್ಯಕ್ತಿತ್ವದವರಾಗಿದ್ದರು. ಈ ಹಿಂದೆ ವೀರೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸಿದ್ದಪ್ಪ ಬೀರವಳ್ಳಿ, ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದರು. ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿರೋ, ಸಿದ್ದಪ್ಪ ಬೀರವಳ್ಳಿಯವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.