Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಟಿಬೇಟಿಯನ್ ಕ್ಯಾಂಪ್ ನಂ 1 ರಲ್ಲಿ ನಡೆದಿದೆ ಅಚ್ಚರಿಯ ಘಟನೆ, CCTVಯಲ್ಲಿ ಸೆರೆಯಾದದ್ದು ಭೂತದ ಆಟವಾ..? ಕಳ್ಳರ ಕೈಚಳಕವಾ..? ಅಷ್ಟಕ್ಕೂ ಕ್ಷಣದಲ್ಲೇ ಬೈಕ್ ಮಾಯವಾದದ್ದು ಹೇಗೆ..?

ಟಿಬೇಟಿಯನ್ ಕ್ಯಾಂಪ್ ನಂ 1 ರಲ್ಲಿ ನಡೆದಿದೆ ಅಚ್ಚರಿಯ ಘಟನೆ, CCTVಯಲ್ಲಿ ಸೆರೆಯಾದದ್ದು ಭೂತದ ಆಟವಾ..? ಕಳ್ಳರ ಕೈಚಳಕವಾ..? ಅಷ್ಟಕ್ಕೂ ಕ್ಷಣದಲ್ಲೇ ಬೈಕ್ ಮಾಯವಾದದ್ದು ಹೇಗೆ..?

  ಇದು ಮುಂಡಗೋಡ ತಾಲೂಕಿನ ಮಟ್ಟಿಗೆ ವಿಚಿತ್ರ, ಭಯ ಹುಟ್ಟಿಸುವ, ಆತಂಕಕಾರಿ ಘಟನೆ. ಸಿಸಿಟಿವಿ ದೃಷ್ಯಗಳನ್ನು ನೋಡಿದ್ರೆ ಎಂಥವರೂ ಒಂದು ಕ್ಷಣ ನಿಬ್ಬೆರಗಾಗೋ ವಿಚಿತ್ರ ಘಟನೆ. ಅಲ್ಲಿ ಗ್ಯಾರೇಜ್ ಎದುರು ನಿಲ್ಲಿಸಿದ್ದ ಬೈಕ್ ಕ್ಷಣಾರ್ಧದಲ್ಲಿ ಮಂಗಮಾಯವಾಗತ್ತೆ. ಅದಕ್ಕೂ ಮುಂಚೆ ಅದೇಂತದ್ದೋ ವಿಚಿತ್ರ ಚಲನ ವಲನ, ಅಷ್ಟಕ್ಕೂ ಇದೇಲ್ಲ ಕಳ್ಳರ ಕರಾಮತ್ತಿನ ಕಣ್ಣಾಮುಚ್ಚಾಲೆಯಾ..? ಅಥವಾ ಆತ್ಮಗಳ ಅಸಲೀ ಚೇಷ್ಟೆಯಾ..? ಅರ್ಥವೇ ಆಗುತ್ತಿಲ್ಲ. CCTV ದೃಷ್ಯ..! ಅಸಲು, ಇದು ನಡೆದದ್ದು ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ...

Post
ಬಾಚಣಕಿ ಡ್ಯಾಂನಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ ಯಾರದ್ದು ಗೊತ್ತಾ..? ಸಾವಿನ ಸುತ್ತ ಮತ್ತದೇ ಅನುಮಾನದ ಹುತ್ತ..?

ಬಾಚಣಕಿ ಡ್ಯಾಂನಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ ಯಾರದ್ದು ಗೊತ್ತಾ..? ಸಾವಿನ ಸುತ್ತ ಮತ್ತದೇ ಅನುಮಾನದ ಹುತ್ತ..?

ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವದ ಗುರುತು ಪತ್ತೆಯಾಗಿದೆ‌. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ಮುಂಡಗೋಡ ಪೊಲೀಸರಿಗೆ ಮಹಿಳೆಯ ಡೀಟೇಲ್ಸ್ ಲಭ್ಯವಾಗಿದೆ. ಅಂದಹಾಗೆ, ಮೃತ ಮಹಿಳೆಯ ಹೆಸ್ರು ಸುರೇಖಾ ದೇವೇಂದ್ರ ಕಲಾಲ್, ವಯಸ್ಸು ಅಜಮಾಸು 50 ವರ್ಷವಂತೆ, ಹುಬ್ಬಳ್ಳಿಯ ಆನಂದ ನಗರ ನಿವಾಸಿಯಂತೆ. ಇದು ಫಸ್ಟ್ ಇನ್ಫರ್ಮೇಶನ್ ರಿಪೋರ್ಟ್..! ಐದು ದಿನದ ಹಿಂದೆ..! ಅಸಲು, ಡಿಸೆಂಬರ್ 2 ನೇ ತಾರೀಖಿನ ದಿನವೇ ಈ ಮಹಿಳೆ ನಾಪತ್ತೆಯಾಗಿದ್ದಾಳೆ. ಹೀಗಾಗಿ, ಹುಬ್ಬಳ್ಳಿಯಲ್ಲಿ ಮಿಸ್ಸಿಂಗ್...

Post
ಬಾಚಣಕಿ ಜಲಾಶಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಅನಾರೋಗ್ಯದ ಆತ್ಮಹತ್ಯೆಯಾ..?

ಬಾಚಣಕಿ ಜಲಾಶಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಅನಾರೋಗ್ಯದ ಆತ್ಮಹತ್ಯೆಯಾ..?

ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 40-45ವರ್ಷ ವಯಸ್ಸಿನ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಶವ ತೇಲುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ದುರ್ನಾತ..! ಇನ್ನು, ಮಹಿಳೆ ಮೂರ್ನಾಲ್ಕು ದಿನದ ಹಿಂದೆಯೇ ಸಾವು ಕಂಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿದ್ದು. ಸದ್ಯ ಶವ ಕೊಳೆತು ದುರ್ನಾತ ಬೀರುತ್ತಿದೆ. ಹೀಗಾಗಿ, ಸ್ಥಳಕ್ಕೆ ಬಂದ ಪೊಲೀಸರು ಶವ ಹೊರ ತೆಗೆಯಲು ಹರಸಾಹಸ ಪಡುವಂತಾಗಿದೆ. ಆತ್ಮಹತ್ಯೆಯಾ..? ಅಂದಹಾಗೆ, ಮಹಿಳೆಯ...

Post
ಪಾಳಾದ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಕೇಸ್, ಅಪರಾಧಿಗೆ 20 ವರ್ಷ ಜೈಲು, 1 ಲಕ್ಷ ದಂಡ, ಕೋರ್ಟ್ ತೀರ್ಪು

ಪಾಳಾದ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಕೇಸ್, ಅಪರಾಧಿಗೆ 20 ವರ್ಷ ಜೈಲು, 1 ಲಕ್ಷ ದಂಡ, ಕೋರ್ಟ್ ತೀರ್ಪು

ಮುಂಡಗೋಡ ತಾಲೂಕಿನ ಪಾಳಾದಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ. ಜಿಲ್ಲಾ ಫೋಕ್ಸೋ ನ್ಯಾಯಾಲಯ ಅಪರಾಧಿಗೆ ಕಠಿಣ ಶಿಕ್ಷೆ ನೀಡಿದೆ. 20 ವರ್ಷ ಜೈಲಿನ ಜೊತೆಗೆ 1 ಲಕ್ಷ ರೂ. ದಂಡ ಹಾಗೂ ಸಂತ್ರಸ್ಥೆಗೆ 3 ಲಕ್ಷ ರೂ. ಪರಿಹಾರ ನೀಡಬೇಕು ಅಂತಾ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಅಂದಹಾಗೆ, ಪಾಳಾ ಗ್ರಾಮದ ದೇವರಾಜ್ ಶಿವಪುರ ಎಂಬುವ ವ್ಯಕ್ತಿ ಕಳೆದ ವರ್ಷ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಕುರಿತು ಮುಂಡಗೋಡ...

Post
ನಾಯಿ ದಾಳಿಗೆ ತುತ್ತಾಗಿದ್ದ ಸನವಳ್ಳಿ ಬಾಲಕನ ಬೇಟಿಯಾಗಿ, ದೈರ್ಯ ತುಂಬಿದ ಪಿಐ ಸಿದ್ದಪ್ಪ ಸಿಮಾನಿ

ನಾಯಿ ದಾಳಿಗೆ ತುತ್ತಾಗಿದ್ದ ಸನವಳ್ಳಿ ಬಾಲಕನ ಬೇಟಿಯಾಗಿ, ದೈರ್ಯ ತುಂಬಿದ ಪಿಐ ಸಿದ್ದಪ್ಪ ಸಿಮಾನಿ

ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಗೆ ತುತ್ತಾದ ಬಾಲಕನನ್ನು ಪಿಐ ಸಿದ್ದಪ್ಪ ಸಿಮಾನಿ ಭೇಟಿ ಮಾಡಿ ದೈರ್ಯ ತುಂಬಿದ್ರು. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಿಗೆ ಹಣ್ಣು ಹಂಪಲು ನೀಡಿ ಸಂತೈಸಿದರು. ಅಂದಹಾಗೆ, ಕಳೆದ ವರ್ಷವಷ್ಟೇ ತಾಯಿ ಕಳೆದುಕೊಂಡು ಅನಾಥರಾಗಿರೋ ಮೂವರು ಬಾಲಕರಿಗೆ, ತಂದೆಯ ನಿರ್ಲಕ್ಷವೂ ಇನ್ನಿಲ್ಲದಂತೆ ಕಾಡುತ್ತಿದೆ. ಅದ್ರ ಜೊತೆ ನಿನ್ನೆ ಸನವಳ್ಳಿ ಗ್ರಾಮದಲ್ಲಿ 7 ವರ್ಷದ ಬಾಲಕನಿಗೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ್ದವು. ಈ ಕಾರಣಕ್ಕಾಗಿ, ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೂ...

Post
ಹುನಗುಂದದಲ್ಲಿ ಬೋರವೆಲ್ ನಿಂದ ವಿದ್ಯುತ್ ಪ್ರವಹಿಸಿ ಯುವಕನ ದಾರುಣ ಸಾವು..! ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ..!

ಹುನಗುಂದದಲ್ಲಿ ಬೋರವೆಲ್ ನಿಂದ ವಿದ್ಯುತ್ ಪ್ರವಹಿಸಿ ಯುವಕನ ದಾರುಣ ಸಾವು..! ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ..!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗದ್ದೆಯಲ್ಲಿ ನೀರು ಹಾಯಿಸಲು ಹೋಗಿದ್ದ ಯುವಕನೋರ್ವ ವಿದ್ಯುತ್ ಸ್ಪರ್ಶಿಸಿ ದಾರುಣ ಸಾವು ಕಂಡಿದ್ದಾನೆ. ಜೊತೆಗೆ ತನ್ನ ನೇತ್ರ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಈ ಮೂಲಕ ತಾಲೂಕಿನ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನೇತ್ರದಾನ ಮಾಡಿದ ಯುವಕನಾಗಿ ಪ್ರೇರಕ ಶಕ್ತಿಯಾಗಿದ್ದಾನೆ. ಜಿನೇಂದ್ರ ಪಾರ್ಶ್ವನಾಥ್ ಬಸ್ತವಾಡ್ (18) ಎಂಬುವ ಯುವಕನೇ ದಾರುಣ ಸಾವು ಕಂಡಿದ್ದು, ಇಂದು ಬುಧವಾರ ತನ್ನ ಗದ್ದೆಯಲ್ಲಿ ಬೋರವೆಲ್ ಶುರು ಮಾಡಲು ಹೋಗಿದ್ದ....

Post
ಸನವಳ್ಳಿ ಬಾಲಕರ ಭವಿಷ್ಯಕ್ಕೆ ಬೆಳಕಾದ ಸಚಿವ್ರು..! ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ ಅಲ್ವಾ..? ಸಲಾಂ ಸಾಹೇಬ್ರೇ..!

ಸನವಳ್ಳಿ ಬಾಲಕರ ಭವಿಷ್ಯಕ್ಕೆ ಬೆಳಕಾದ ಸಚಿವ್ರು..! ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ ಅಲ್ವಾ..? ಸಲಾಂ ಸಾಹೇಬ್ರೇ..!

ನಿಜ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ರಾಜಕೀಯವಾಗಿ ಅದೇನೋ ನಂಗೆ ಗೊತ್ತಿಲ್ಲ. ಆದ್ರೆ ಮಾನವೀಯ ಮೌಲ್ಯಗಳ ವಿಷಯಕ್ಕೆ ಬಂದ್ರೆ ಬಹುಶಃ ಕ್ಷೇತ್ರದಲ್ಲಿ ಮನೆ ಮನೆಗೂ ಶಿವರಾಂ ಹೆಬ್ಬಾರ್ ರವರ ಆಸರೆಯ ಅರಿವು ಇದೆ. ಮನೆ ಮನೆಯಲ್ಲೂ ಸಾಂತ್ವನದ ಕಿರಿಬೆರಳಿನ ಆಸರೆಗಳಿವೆ. ಇವತ್ತೂ ಕೂಡ ಅದೇ ಶಿವರಾಂ ಹೆಬ್ಬಾರ್ ನೊಂದಿದ್ದ ಒಂದಿಡೀ ಕುಟುಂಬಕ್ಕೆ ಕಿರಿಬೆರಳಿನ ಆಸರೆ ನೀಡಿದ್ದಾರೆ‌. ಬಡಬಾಲಕರ ಭವಿಷ್ಯತ್ತಿಗೆ ಬೆಳಕಾಗಿದ್ದಾರೆ. ಅಸಲು, ನಿನ್ನೆ ಮಂಗಳವಾರ ಪಬ್ಲಿಕ್ ಫಸ್ಟ್ ನ್ಯೂಸ್ ಬಡ ಬಾಲಕರ ಕುರಿತು ವಿಸ್ತೃತ ವರದಿ...

Post
ಸನವಳ್ಳಿಯ ಬಡ ಬಾಲಕರ ಕಷ್ಟಕ್ಕೆ ಹೃದಯವಂತರ ಸ್ಪಂಧನೆ, ಮಾನವೀಯತೆ ತೋರಿದ್ರು ಅಧಿಕಾರಿಗಳು..!

ಸನವಳ್ಳಿಯ ಬಡ ಬಾಲಕರ ಕಷ್ಟಕ್ಕೆ ಹೃದಯವಂತರ ಸ್ಪಂಧನೆ, ಮಾನವೀಯತೆ ತೋರಿದ್ರು ಅಧಿಕಾರಿಗಳು..!

ನಿಜಕ್ಕೂ ನನ್ನ ಕಣ್ಣಂಚಲ್ಲಿ ಹನಿಗಳು ಜಿನುಗುತ್ತಿದೆ. ಸನವಳ್ಳಿಯ ಬಾಲಕರ ಕರುಣಾಜನಕ ಕತೆ ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಪ್ರಸಾರ ಆಗಿದ್ದೇ ತಡ, ಹತ್ತಾರು ಪೋನ್ ಕಾಲ್ ಗಳು, ನೂರಾರು ಮೆಸೇಜ್ ಗಳು, ಅಣ್ಣಾ ಆ ಬಾಲಕರಿಗೆ ನಾವೂ ನಮ್ಮ ಕೈಲಾದಷ್ಟು ಸಹಾಯ ಮಾಡ್ತಿವಿ ದಯವಿಟ್ಟು ಅವ್ರ ಅಕೌಂಟ್ ನಂಬರ್ ಕಳಿಸಿ ಅಂತಾ ಬೆಂಗಳೂರು ಸೇರಿ ರಾಜ್ಯದ ಹಲವೆಡೆಯಿಂದ ಹೃದಯವಂತರು ಕೇಳಿಕೊಳ್ತಿದಾರೆ. ಆ ಬಡ ಬಾಲಕರ ಜೊತೆ ನಾವಿದ್ದೇವೆ ಏನು ಕಳಿಸಬೇಕು ಹೇಳಿ ಕಳಿಸಿ ಕೊಡ್ತಿವಿ ಅಂತಾ ಹೃದಯ...

Post
ಸನವಳ್ಳಿಯ ಬಾಲಕನ “ಮೂಕ”ರೋಧನ, ನಾಯಿಗಳ ದಾಳಿಗೆ ತುತ್ತಾದ ತಮ್ಮನಿಗೆ ಪುಟ್ಟ ಅಣ್ಣನೇ ಆಸರೆ, ಕರುಳು ಹಿಂಡುವ ಕತೆಯಿದು..!

ಸನವಳ್ಳಿಯ ಬಾಲಕನ “ಮೂಕ”ರೋಧನ, ನಾಯಿಗಳ ದಾಳಿಗೆ ತುತ್ತಾದ ತಮ್ಮನಿಗೆ ಪುಟ್ಟ ಅಣ್ಣನೇ ಆಸರೆ, ಕರುಳು ಹಿಂಡುವ ಕತೆಯಿದು..!

ನಿಜಕ್ಕೂ ಇದೊಂದು ಹೃದಯ ಹಿಂಡುವ ಕರುಣಾಜನಕ ಕತೆ. ಮುಂಡಗೋಡ ತಾಲೂಕಿನ ಸನವಳ್ಳಿಯ ಅದೊಬ್ಬ ಬಾಲಕನ ಮನಮಿಡಿಯುವ ಕತೆ. ಆತನ ಹೆಸ್ರು ಗುತ್ತೆಪ್ಪ.. ಈಗಿನ್ನೂ 7 ವರ್ಷದ ಬಾಲಕ. ಆತನಿಗೆ ಹಡೆದವ್ವ ಇಲ್ಲ. ತಾಯಿ ತೀರಿಕೊಂಡು ವರ್ಷ ಕಳೆದಿದೆ. ಹಡೆದ ತಂದೆಗೆ ಅದೇನಾಗಿದೆಯೋ ಗೊತ್ತಿಲ್ಲ. ಮಕ್ಕಳ ಬಗ್ಗೆ ಕ್ಯಾರೇ ಇಲ್ಲ. ಮೇಲಾಗಿ ಆ ಬಾಲಕನಿಗೆ ಮಾತೇ ಬರಲ್ಲ. ಇವನೊಬ್ಬನೇ ಅಲ್ಲ ಈತನಿಗೆ ಇನ್ನಿಬ್ಬರು ಅಣ್ಣಂದಿರು ಇದ್ದಾರೆ. ಓರ್ವ ಅಣ್ಣನ ಹೆಸ್ರು ನಾಗರಾಜ ಆತನಿಗೆ 17 ವರ್ಷ ವಯಸ್ಸು, ಮತ್ತೋರ್ವ...

Post
ಬಡ ಮಕ್ಕಳ ಗೋಳಿಗೆ ಸ್ಪಂಧಿಸಿದ್ರು ಸಿಡಿಪಿಓ ದೀಪಕ್ಕ, ಕಾರ್ಮಿಕರ ಮಕ್ಕಳಿಗೆ ದೊರೆಯಿತು ಆಸರೆ..!

ಬಡ ಮಕ್ಕಳ ಗೋಳಿಗೆ ಸ್ಪಂಧಿಸಿದ್ರು ಸಿಡಿಪಿಓ ದೀಪಕ್ಕ, ಕಾರ್ಮಿಕರ ಮಕ್ಕಳಿಗೆ ದೊರೆಯಿತು ಆಸರೆ..!

ಮುಂಡಗೋಡ ತಾಲೂಕಿನ ಹುನಗುಂದ ಭಾಗದಲ್ಲಿ ಕಬ್ಬು ಕಟಾವಿಗೆ ಬಂದಿದ್ದ ಬಡ ಕಾರ್ಮಿಕರ ಮಕ್ಕಳಿಗೆ ಅಂತೂ ಇಂತೂ ಆಸರೆ ಸಿಕ್ಕಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಸಿಡಿಪಿಓ ದೀಪಾ ಬಂಗೇರ್ ಮೇಡಮ್ಮು ಹುನಗುಂದಕ್ಕೆ ಧಾವಿಸಿ ಬಂದಿದ್ದಾರೆ. ಬಡಮಕ್ಕಳ ಗೋಳು ಕಣ್ಣಾರೆ ಕಂಡಿದ್ದಾರೆ. ಮಮ್ಮಲ ಮರುಗಿದ್ದಾರೆ. ಇಲಾಖೆಯಿಂದ ಅದೇನೇನು ಸೌಲಭ್ಯ ಇದೆಯೋ ಅದನ್ನೇಲ್ಲ ಯಥಾವತ್ತಾಗಿ ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಹೀಗಾಗಿ, ಪುಟ್ಟ ಕಂದಮ್ಮಗಳ ಮುಖದಲ್ಲಿ ಈಗ ಮಂದಹಾಸ ಮೂಡಿದೆ. ಹೀಗಾಗಿ, ದೀಪಕ್ಕನ ಕರ್ತವ್ಯಪರತೆಗೆ ಧನ್ಯವಾದ ಹೇಳಲೇಬೇಕಿದೆ....