ಮುಂಡಗೋಡ: ಕಳೆದ ಹಲವು ದಿನಗಳಿಂದ ಮುಂಡಗೋಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಗಾಯದಿಂದ ಬಳಲುತ್ತಿದ್ದ 4 ವರ್ಷದ ಗಂಡು ಆನೆ ಮೃತಪಟ್ಟಿದೆ. ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಪಂ ವ್ಯಾಪ್ತಿಯ ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಗಂಡು ಆನೆ ಸಾವನ್ನಪ್ಪಿದೆ. ಮುಂಡಗೋಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಕಲಘಟಗಿ ತಾಲೂಕಿನ ಅರಣ್ಯಕ್ಕೆ ಬಂದಿತ್ತು. ಸೊಂಡಿಲು ಬಳಿ ಗಾಯಗೊಂಡಿದ್ದ ಆನೆಗೆ ಆಹಾರ ಸೇವಿಸಲು ಕಷ್ಟಪಡುತ್ತಿತ್ತು. ಇದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಕಳೆದ ಮೂರು...
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: ಮುಂಡಗೋಡ ಸುದ್ದಿ
ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಮಳಗಿಯಲ್ಲಿ ಗಾಂಜಾ ಸಾಗಿಸುತ್ತಿದ್ದವ ಅಂದರ್..!
ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಎಳೆದು ತಂದಿದ್ದಾರೆ. ಮಳಗಿ ಸಮೀಪದ ದಾಸನಕೊಪ್ಪ ರಸ್ತೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿ ಸೇರಿದಂತೆ ಅರ್ಧ ಕೇಜಿಯಷ್ಟು ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿರೋ ಮುಂಡಗೋಡ ಪೊಲೀಸರು, ಶಿವಮೊಗ್ಗ ಜಿಲ್ಲೆ ಸಾಗರದ ಮಹಮದ್ ಫಾರುಕ್ ತಂದೆ ನಜೀರ್ ಅಹಮ್ಮದ್ ಅರಮನಿಕೆರಿ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ಅರ್ದ ಕೇಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ...
ಮುಂಡಗೋಡಿಗೆ ಕರಾಳ ದಿನವಾಯ್ತು ಗುರುವಾರ, ಮಡಿದ ಮೂವರೂ ಯುವಕರಿಗೆ ಸ್ನೇಹಿತರ ಅಶ್ರುತರ್ಪಣ..!
ನಿಜಕ್ಕೂ ಮುಂಡಗೋಡಿಗರ ಪಾಲಿಗೆ ಇವತ್ತು ಕರಾಳ ದಿನ. ಆಡಾಡುತ್ತಲೇ ಮನೆ ಮಕ್ಕಳನ್ನು ಕಳೆದುಕೊಂಡ ಕೆಟ್ಟ ದಿನ. ಬಹುಶಃ ಇವತ್ತು ಮುಂಡಗೋಡಿನಲ್ಲಿ ಯಾರೊಬ್ಬರ ಮುಖದಲ್ಲಿ ನಗು ಅಪರೂಪವಾಗಿತ್ತು. ಬರೀ ಆತಂಕ, ನಮ್ಮವರನ್ನು ಕಳೆದುಕೊಂಡ ನೋವಿನ ಛಾಯೆ ತುಂಬಿತ್ತು. ಆ ನೋವಿನಲ್ಲೇ ಇಲ್ಲಿನ ಶಿವಾಜಿ ಸರ್ಕಲ್ ನಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ, ಮೂವರೂ ಯುವಕರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಜಾತ್ರೆಗೆ ಹೋಗಿದ್ದವರು..! ಜಾತ್ರೆಗೆ ಹೋಗಿದ್ದ ಆ ಐದು ಸ್ನೇಹಿತರು ಅದ್ಯಾವ ಗಳಿಗೆಯಲ್ಲಿ ಮನೆಯಿಂದ ಹೊರಗೆ ಹೆಜ್ಜೆ ಹಾಕಿದ್ದರೋ ಗೊತ್ತಿಲ್ಲ....
ಪಾಳಾ ಸಮೀಪ ಕಾರು ದುರಂತ ಕೇಸ್: ಕೊನೆಗೂ ಫಲಿಸಲಿಲ್ಲ ಚಿಕಿತ್ಸೆ.. ಗಾಯಗೊಂಡಿದ್ದ ಶಂಕರಯ್ಯಾ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮುಂಡಗೋಡ ತಾಲೂಕಿನ ಪಾಳಾ ಸಮೀಪ ಬುಧವಾರ ರಾತ್ರಿ ನಡೆದಿದ್ದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಈಗಷ್ಟೇ ಮೃತಪಟ್ಟಿದ್ದಾನೆ. ಈ ಮೂಲಕ ಅಪಘಾತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ. ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಶಂಕರಯ್ಯ ಮಲ್ಲಯ್ಯ ಹಿರೇಮಠ್, ಮೃತಪಟ್ಟ ಮತ್ತೋರ್ವ ಯುವಕನಾಗಿದ್ದು, ನಿನ್ನೆ ರಾತ್ರಿ ಪಾಳಾ ಜಾತ್ರೆ ಮುಗಿಸಿ ಮುಂಡಗೋಡಿಗೆ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಐ20 ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮುಂಡಗೋಡಿನ ಇಬ್ಬರು ಸಹೋದರರು ಮೃತಪಟ್ಟಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಂಕರ್ ಹಿರೇಮಠನನ್ನು ಹುಬ್ಬಳ್ಳಿಯ ಕಿಮ್ಸ್...
ಶಂಕ್ರಯ್ಯ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾನೆ, ದಯವಿಟ್ಟು ತಪ್ಪು ಮಾಹಿತಿಯ ಸ್ಟೇಟಸ್ ಬೇಡ ಗೆಳೆಯರೆ, ಎಲ್ಲರೂ ಆತನಿಗಾಗಿ ಪ್ರಾರ್ಥಿಸೋಣ..!
ಮುಂಡಗೋಡಿನ ಪಾಳಾ ಸಮೀಪ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರೋ ಯುವಕ ಶಂಕರಯ್ಯನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಆದ್ರೆ, ಇನ್ನೇನೂ ಬೇರೆಯ ರೀತಿಯ ಅನಾಹುತ ಸಂಭವಿಸಿಲ್ಲ. ತಜ್ಞ ವೈದ್ಯರು ನಿರಂತರವಾಗಿ ಶಂಕರಯ್ಯನಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಅಂತಾ ಕಿಮ್ಸ್ ನ ವೈದ್ಯರಿಂದ ಮಾಹಿತಿ ಲಭ್ಯವಾಗಿದೆ. ಆತ ಬದುಕಿದ್ದಾನೆ. ಹೀಗಾಗಿ, ತಪ್ಪು ಮಾಹಿತಿ ಹರಡಬೇಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದ್ದಾರೆ.. ಬದುಕಿ ಬಾ ತಮ್ಮಾ..! ಅಷ್ಟಕ್ಕೂ, ನಿನ್ನೆ ನಡೆದ ಭೀಕರ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರೋ ಶಂಕ್ರಯ್ಯ ಮಲ್ಲಯ್ಯ...
ಪಾಳಾ ಬಳಿ ಭೀಕರ ಅಪಘಾತ, ಮುಂಡಗೋಡಿನ ಇಬ್ಬರು ಸ್ಥಳದಲ್ಲೇ ಸಾವು..! ಮತ್ತಿಬ್ಬರಿಗೆ ಗಾಯ
ಮುಂಡಗೋಡ ತಾಲೂಕಿನ ಪಾಳಾ ಸಮೀಪ ಭೀಕರ ಅಪಘಾತವಾಗಿದೆ. ಐ20 ಕಾರ್ ಪಲ್ಟಿಯಾದ ಪರಿಣಾಮ ಇಬ್ಬರು ಮುಂಡಗೋಡಿನ ಯುವಕರು ಸ್ಥಳದಲ್ಲೇ ದಾರುಣ ಸಾವು ಕಂಡಿದ್ದಾರೆ. ಮತ್ತಿಬ್ಬರಿಗೆ ಗಾಯವಾಗಿದೆ. ಮುಂಡಗೋಡಿನ ಗಣೇಶ್ ಗಾಣಿಗೇರ್, ಮಹೇಶ ಗಾಣಿಗೇರ ಮೃತ ದುರ್ದೈವಿಗಳು. ಪಾಳಾದಿಂದ ಮುಂಡಗೋಡಿಗೆ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕರಿಂದ ಅಧಿಕಾರಿಗಳ ತರಾಟೆ, ಕಿಟ್ ಗಾಗಿ ಎಡತಾಕಿಸೋದು ಸರಿನಾ..?
ಮುಂಡಗೋಡ: ಪಟ್ಟಣದಲ್ಲಿ ಇರೋ ಕಾರ್ಮಿಕ ಇಲಾಖೆಯ ಕಛೇರಿಯಲ್ಲಿನ ಅಧಿಕಾರಿಗಳ ಮೇಲೆ ನೂರಾರು ಕಾರ್ಮಿಕರು ಆಕ್ರೋಶಗೊಂಡಿದ್ದಾರೆ. ಕಾರ್ಪೆಂಟರ್ ಕೆಲಸದವರು, ಗಾರೆ ಕೆಲಸದವರು ಸೇರಿದಂತೆ ಹಲವರು ಕಾರ್ಮಿಕ ಇಲಾಖೆಯ ತಾಲೂಕಾ ಕಚೇರಿಯ ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ರು. ಅಸಮರ್ಪಕ ಕಿಟ್ ಹಂಚಿಕೆ..! ಇನ್ನು, ಕಾರ್ಮಿಕರ ಆರೋಪದಂತೆ, ಈ ತಾಲುಕಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಿಟ್ ನೀಡುವಲ್ಲಿ ಬೇಜವಾಬ್ದಾರಿ ತೋರುತ್ತಿದ್ದಾರಂತೆ. ಅರ್ಹರಿಗೆ ಸಿಗಬೇಕಾದ ಕಾರ್ಪೆಂಟರ್ ಕಿಟ್, ಗಾರೆ ಕೆಲಸದ ಕಿಟ್ ಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡುತ್ತಿಲ್ಲವಂತೆ. ತಿಂಗಳುಟ್ಟಲೇ ಅಲೆದಾಡಿಸಿ ಕಾರ್ಮಿಕರ...
ಇಂದೂರು ಗ್ರಾ.ಪಂಚಾಯತಿಯಲ್ಲಿ ಪಿಡಿಓ ಮೇಡಂ ಕಚೇರಿಗೆ ಬರೋ ಟೈಮಿಂಗ್ ಎಷ್ಟು..? ಸೂಚನಾ ಫಲಕವನ್ನಾದ್ರೂ ಹಾಕಿ ಮೇಡಂ..!
ಮುಂಡಗೋಡ ತಾಲೂಕಿನಲ್ಲಿ ಬಹುಶಃ ಇಂದೂರು ಗ್ರಾಮ ಪಂಚಾಯತಿಯ ಪಿಡಿಓ ಮೇಡಂ ನಷ್ಟು ಬ್ಯುಸಿ ಯಾರೂ ಇರಲಿಕ್ಕಿಲ್ವೇನೊ..? ಯಾಕಂದ್ರೆ, ಈ ಮೇಡಮ್ಮು ಇಂದೂರು ಪಂಚಾಯತಿಯಲ್ಲಿ ಸಿಗೋದೇ ಅಪರೂಪ ಅಂತಾ ಜನ ಹೇಳ್ತಿದಾರೆ. ತಮ್ಮ ಪಂಚಾಯತಿ ಅಡಿಯಲ್ಲಿ ಏನೇನೇಲ್ಲ ನಡೀತಿವೆ ಅನ್ನೊ ಕನಿಷ್ಟ ಖಬರೂ ಇಲ್ಲದಂತಾಗಿದೆ. ಯಾರ್ಯಾರು ಎಲ್ಲೇಲ್ಲಿ ಏನೇನು ಕಾಮಗಾರಿ ಮಾಡ್ತಿದಾರೆ, ಹೇಗೇ ಹೇಗೆ ನಡಿತಿವೆ ಅನ್ನೊ ಉಸಾಬರಿ ಬಹುತೇಕ ಪಿಡಿಓ ಮೇಡಂಗೆ ಇದೆಯೊ ಇಲ್ವೋ ಅರ್ಥವಾಗಬೇಕಿದೆ. ಬರೋದೇ ಮದ್ಯಾಹ್ನ..! ಅಸಲು, ಇಂದೂರು ಗ್ರಾಮ ಪಂಚಾಯತಿಗೆ ಪಿಡಿಓ ಆಗಿ...
ಟಿಬೇಟಿಯನ್ ಕಾಲೋನಿಯಲ್ಲಿ ಜೇನು ನೋಣಗಳ ದಾಳಿ, 100 ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಜೇನು ನೋಣಗಳು..!
ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಂ.1 ರಲ್ಲಿ ಜೇನು ದಾಳಿಯಾಗಿದೆ. ದಲಿತ ಸಂಘರ್ಷ ಸಮಿತಿಯ ಕಾರ್ಯಕ್ರಮಕ್ಕೆ ಬಂದಿದ್ದವರ ಮೇಲೆ ಜೇನುನೋಣಗಳ ದಾಳಿಯಾಗಿದೆ. ಪರಿಣಾಮ ಸುಮಾರು 100 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಅದಹಾಗೆ, ಇಂದು ತಾಲೂಕಿನ ಟಿಬೇಟಿಯನ್ ಕಾಲೋನಿ ನಂಬರ್ 1 ರಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಅಹಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ರು. ಈ ವೇಳೆ ಅದು ಹೇಗೋ ಗೊತ್ತಿಲ್ಲ, ಜೇನು ನೋಣಗಳು ದಾಳಿಮಾಡಿವೆ...
ಮುಂಡಗೋಡಿನಲ್ಲಿ ಬೇಡ ಜಂಗಮ ಒಕ್ಕೂಟದ ಜಿಲ್ಲಾ ಯಶಸ್ವಿ ಸಮಾವೇಶ, ಹಲವು ಶ್ರೀಗಳ ಸಾನಿಧ್ಯ, ಆಶೀರ್ವಚನ..!
ಮುಂಡಗೋಡ: ದೇಶದಲ್ಲಿ ಮಾನವ ಧರ್ಮ ಹುಟ್ಟಿದಾಗಿನಿಂದ ವೀರಶೈವ ಸಮಾಜ ಹುಟ್ಟಿಕೊಂಡಿದೆ ವೀರಶೈವ ಸನಾತನ ಸಂಸ್ಕೃತ ಪದ ಎಂದು ಶಿರಸಿ ಬಣ್ಣದ ಮಠ ಚೌಕಿಮಠದ ಶಿವಲಿಂಗ ಮಹಾಸ್ವಾಮೀಜಿ ನುಡಿದರು. ಅವ್ರು ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಬೇಡಜಂಗಮ ಒಕ್ಕೂಟದ ಜಿಲ್ಲಾ ಸಮಾವೇಶ ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೀರಶೈವ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಬಾರದು. ಅವರಲ್ಲಿ ಅದ್ಭುತ ಶಕ್ತಿ ಇದೆ. ವೀರಶಕ್ತಿ ಪ್ರಬಲಗೊಳಿಸಿ ಸಮಾಜಕ್ಕೆ ಹಂಚಬೇಕು ಎಂದರು. ಗೋಕರ್ಣ...








