ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಕಾಲೇಜು ಬಳಿ KSRTC ಬಸ್ ಗೆ ಲಾರಿಯೊಂದು ಡಿಕ್ಕಿ ಹೊಡೆದು ನಾಪತ್ತೆಯಾಗಿದೆ. ಪರಿಣಾಮ ಬಸ್ ನಲ್ಲಿದ್ದ ಓರ್ವ ವ್ಯಕ್ತಿಗೆ ತೀವ್ರ ಗಾಯವಾಗಿದೆ. ಗುರುವಾರ ನಡುರಾತ್ರಿಯಲ್ಲಿ ಘಟನೆ ನಡೆದಿದ್ದು ಮಂಗಳೂರಿಗೆ ಹೊರಟಿದ್ದ ಬಸ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಭೀಮಪ್ಪ ಮುತ್ತಪ್ಪ ಗಡಾದಿ(34) ತೀವ್ರ ಗಾಯಗೊಂಡಿದ್ದಾನೆ. ಅಂಬ್ಯುಲೆನ್ಸ್ ಸಿಬ್ಬಂದಿಗೆ ತರಾಟೆ..! ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ....
Top Stories
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!
ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
Category: ಮುಂಡಗೋಡ ಸುದ್ದಿ
ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಇಂದೂರಿನ ಯುವಕ ಚಿಕಿತ್ಸೆ ಫಲಿಸದೇ ಸಾವು..! ಪ್ರೀತಿಯೇ ಸಾವಿಗೆ ಕಾರಣವಾಯ್ತಾ..?
ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಕಳೆದ ರವಿವಾರ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಅಂತಾ ಕುಟುಂಬದ ಮೂಲಗಳು ತಿಳಿಸಿವೆ. ಪವನ್ ಕಬನೂರ್(ಸುತಗಟ್ಟಿ)(23) ಎಂಬುವವನೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಈತ ಕಳೆದ ರವಿವಾರ ಮನೆಯಲ್ಲೇ ಕಳೆನಾಶಕ ಸೇವಿಸಿದ್ದ. ಹೀಗಾಗಿ, ತಕ್ಷಣವೇ ಈತನನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಇಂದು ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ....
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ಜಿಲ್ಲಾ ಖತರ್ನಾಕ ಕಳ್ಳಿಯರ ಬಂಧನ..!
ಮುಂಡಗೋಡಿನ ಯಂಗ್ ಆಂಡ್ ಎನರ್ಜಿಟಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡಸಿದ್ದಾರೆ. ಪರಿಣಾಮ ಇಬ್ಬರು ಖತರ್ನಾಕ ಅಂತರ್ ಜಿಲ್ಲಾ ಕಳ್ಳಿಯರನ್ನು ಹೆಡೆಮುರಿ ಕಟ್ಟಿದ್ದಾರೆ. ಕಳ್ಳಿಯರ ಜಾಡು ಹಿಡಿದು ದೂರದ ಶಿವಮೊಗ್ಗ ಜಿಲ್ಲೆಯಿಂದ ಕಳ್ಳಿಯರನ್ನು ತಂದು ಕೂರಿಸಿದ್ದಾರೆ. ಅಂದಹಾಗೆ ಬಂಧಿತ ಇಬ್ಬರೂ ಕಳ್ಳಿಯರ ಕರಾಮತ್ತುಗಳು ಒಂದೆರಡಲ್ಲ. ಮುಂಡಗೋಡ ಹಾಗೂ ಶಿರಸಿಯಲ್ಲಿ ಅನಾಮತ್ತಾಗಿ ಲಕ್ಷ ಲಕ್ಷ ಬೆಲೆಯ ಬಂಗಾರ, ಹಣ ದೋಚಿಕೊಂಡು ಹೋಗುವ ಹೀನ ದಂಧೆಯವರು. ಅದು ಎರಡು ವರ್ಷದ ಹಿಂದೆ..! ನಿಮಗೆ ನೆನಪಿರಬಹುದು, ಕಳೆದ ಎರಡು ವರ್ಷದ ಹಿಂದೆ, ಅಂದ್ರೆ,...
ಕಾತೂರು ಬಳಿ ಶಿರಸಿ ಹುಬ್ಬಳ್ಳಿ ರಸ್ತೆ ಮೇಲೆ ಬಿದ್ದ ಬೃಹತ್ ಮರ, ಸಂಚಾರ ಸ್ಥಗಿತ..!
ಮುಂಡಗೋಡ ತಾಲೂಕಿನ ಮೂಡಸಾಲಿ ಕಾತೂರು ಬಳಿ ಬೃಹತ್ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಶಿರಸಿ ಹುಬ್ಬಳ್ಳಿ ರಸ್ತೆ ಸಂಚಾರ ಸ್ಥಗಿತವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಕಾತೂರು ಸಮೀಪದಲ್ಲಿ ಘಟನೆ ನಡೆದಿದ್ದು, ರಸ್ತೆಯ ಮೇಲೆಯೇ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದ್ರೆ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.
ಎಂಟು ದಿನಗಳ ನಂತ್ರ, ಕೊನೆಗೂ ತಾಯಿ ಮಡಿಲು ಸೇರಿದ ಚಿರತೆ ಮರಿಗಳು, ನಿಟ್ಟುಸಿರು ಬಿಟ್ಟ ಮುಂಡಗೋಡ ಅರಣ್ಯ ಅಧಿಕಾರಿಗಳು..!
ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಎಂಟು ದಿನಗಳಿಂದ ತಾಯಿ ಮಡಿಲಿಗಾಗಿ ಕಾಯುತ್ತಿದ್ದ ಎರಡು ಚಿರತೆ ಮರಿಗಳನ್ನು ಕೊನೆಗೂ ಹೆತ್ತಮ್ಮನ ಮಡಿಲು ಸೇರಿಸಿದ್ದಾರೆ. ಆದ್ರೆ, ಹಾಗೆ ಎರಡೂ ಪುಟ್ಟ ಕಂದಮ್ಮಗಳನ್ನು ತಾಯಿ ಮಡಿಲು ಸೇರಿಸುವಲ್ಲಿ ಅರಣ್ಯ ಸಿಬ್ಬಂದಿಗಳ ಕರ್ತವ್ಯ ಮತ್ತು ಸಮಯ ಪ್ರಜ್ಞೆ ನಿಜಕ್ಕೂ ಶ್ಲಾಘನೀಯ..! ಅದು ಕಬ್ಬಿನ ಗದ್ದೆ..! ಅಂದಹಾಗೆ, ಕಳೆದ ದಿನಾಂಕ 12.01.2024ರಂದು ಮುಂಡಗೋಡ ಅರಣ್ಯ ವಲಯ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಶಿವಾನಂದ ಕೆಂಗಾಪುರ್ ಅವರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ...
ನಿತ್ರಾಣಗೊಂಡು ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ಕಾರ್ಮಿಕ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ, ಮಾನವೀಯತೆ ಮೆರೆದ ನೂತನ ಪಿಎಸ್ಐ..!
ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ಸಮೀಪ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕನೋರ್ವ ತಲೆಸುತ್ತು ಬಂದು ಬಿದ್ದು ಗಾಯಗೊಂಡಿರೋ ಘಟನೆ ನಡೆದಿದೆ. ಹಾಗೆ ರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದಾಗ ಮುಂಡಗೋಡಿನ ನೂತನ ಪಿಎಸ್ ಐ ಪರಶುರಾಮ್, ಖುದ್ದಾಗಿ ನಿಂತು ಗಾಯಾಳುವಿಗೆ ಆಸ್ಪತ್ರೆಗೆ ಸಾಗಿಸಿ ಮಾನವೀಯ ಕಾರ್ಯ ಮಾಡಿದ್ದಾರೆ. ಅಂದಹಾಗೆ, ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕಾರ್ನಳ್ಳಿ ಗ್ರಾಮದ ನಾಗರಾಜ್ ವಡ್ಡರ(47) ಎಂಬುವ ಕಾರ್ಮಿಕ ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ನಿತ್ರಾಣಗೊಂಡು ಕುಸಿದು ಬಿದ್ದಿದ್ದಾರೆ. ಹೀಗಾಗಿ ಕಾರ್ಮಿಕ ನಾಗರಾಜ್...
ಸಾಲಗಾಂವ್ ಬಾಣಂತಿದೇವಿ ಕೆರೆಯಲ್ಲಿ ಹರಕೆಯ ರೂಪದಲ್ಲಿ ತೇಲುತ್ತವೆ ಕಂದಮ್ಮಗಳು..! ಹೆತ್ತಮ್ಮಗಳ ಕಂಗಳಲ್ಲಿ ಆನಂದಬಾಷ್ಪ, ಹೇ ತಾಯೇ ಕಾಪಾಡಮ್ಮ..!!
ಇದು ಅಕ್ಷರಶಃ ಭಕ್ತಿಯ ಪರಾಕಾಷ್ಟೆ. ದೇವರ ಸನ್ನಿದಾನದ ಮಹತ್ವ ಸಾರುವ ಅದ್ಭುತ ಸೇವೆ. ಇಲ್ಲಿ ಹಸುಗೂಸುಗಳು ಕೆರೆಯ ನೀರಲ್ಲಿ ತೇಲುತ್ತವೆ. ಒಂಬತ್ತು ತಿಂಗಳು ಹೊತ್ತು ಹೆತ್ತ ಕಂದಮ್ಮಗಳನ್ನು ಹೆತ್ತ ತಾಯಿಯೇ ಕೆರೆಯ ನೀರಲ್ಲಿ ಹಾಕಿ ನಿರುಮ್ಮಳವಾಗಿ “ಅವ್ವಾ ನನ್ನ ಕಂದನನ್ನು ನಿನ್ನ ಮಡಿಲಲ್ಲಿ ಹಾಕಿದ್ದೇನೆ ರಕ್ಷಿಸುವ ಭಾರವು ನಿನ್ನದೇ ತಾಯಿ” ಅಂತಾ ಅಂಗಲಾಚುತ್ತಾಳೆ. ಆ ಹೆತ್ತ ತಾಯಿ ಕಣ್ಣಲ್ಲಿ ಆನಂದ ಬಾಷ್ಪಗಳು ಸುರಿಯುತ್ತವೆ. ಬಾಣಂತಿದೇವಿಯ ಮಡಿಲಲ್ಲಿ ತನ್ನ ಕಂದಮ್ಮನನ್ನು ಹಾಕಿ ಕೃತಾರ್ಥಳಾದ ಧನ್ಯತಾ ಭಾವ ಆ...
ಸಾಲಗಾಂವ್ ಬಾಣಂತಿದೇವಿ ಜಾತ್ರೆಯಲ್ಲಿ “ಕಲರ್ ಕಲರ್ ಬಾಲ್” ದಂಧೆಯದ್ದೇ ಕಾರುಬಾರು.. ಸಿಂಗಂ ಸಾಹೇಬ್ರೇ ಗಮನಿಸಿ..!
ಮುಂಡಗೋಡ ತಾಲೂಕಿನ ಸಾಲಗಾಂವ್ ಬಾಣಂತಿದೇವಿ ಜಾತ್ರೆ ವಿದ್ಯುಕ್ತ ಚಾಲನೆ ಪಡೆದುಕೊಂಡಿದೆ. ಇವತ್ತಿಂದ ಮೂರು ದಿನ ಜಾತ್ರೆಯ ಸದ್ದು ಗದ್ದಲ ಇದ್ದೇ ಇರತ್ತೆ. ಅದ್ರ ಜೊತೆ ಜಾತ್ರೆಯ ಅಂಗಳದಲ್ಲಿ ಅನಧಿಕೃತವಾಗಿ ನಡೆಯುವ ಅಡ್ಡ ದಂಧೆಗಳೂ ಕೂಡ ಹುಟ್ಟಿಕೊಂಡು ಜಾತ್ರೆಗೆ ಬರುವ ಸಭ್ಯಸ್ಥರಿಗೆ ಮಾರಕವಾಗ್ತಿವೆ. ಬಹುಶಃ ಖಾಕಿ ಪಡೆಗೆ ಇದೇಲ್ಲ ಗೊತ್ತಿದೆಯೋ ಇಲ್ವೊ ನಮಗಂತೂ ಗೊತ್ತಿಲ್ಲ. ಆದ್ರೆ, ಜಾತ್ರೆಗೆ ಹೋದ ಅನೇಕ ಜನ ಸಭ್ಯಸ್ಥರು ಅಲ್ಲಿನ “ಅಂಧಾ” ಗೇಮ್ ನೋಡಿ ವಿಡಿಯೋ ಕಳಿಹಿಸಿ “ಪಬ್ಲಿಕ್ ಫಸ್ಟ್” ಗೆ ಮಾಹಿತಿ...
ಹುನಗುಂದ ಸೊಸೈಟಿಯ 3 ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟ, ಜಾತ್ಯಾತೀತ ಒಕ್ಕೂಟದ ಅಭ್ಯರ್ಥಿಗಳಿಗೆ ಗೆಲುವು, 9 ಸದಸ್ಯರ ಅವಿರೋಧ ಆಯ್ಕೆ..!
ಮುಂಡಗೋಡ ತಾಲೂಕಿನ ಹುನಗುಂದ ವೀರೇಶ್ವರ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಚುನಾವಣೆ ನಡೆಯಿತು. ಒಟ್ಟೂ 12 ಸದಸ್ಯ ಬಲದ ಸಹಕಾರ ಸಂಘಕ್ಕೆ ಈಗಾಗಲೇ 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು ಮೂರು ಸ್ಥಾನಗಳಿಗೆ ಚುನಾವಣೆ ನಡೆಯಿತು. ಜಾತ್ಯಾತೀತ ಒಕ್ಕೂಟದ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಶಾಲಿಯಾದ್ರು. ಅದ್ರಲ್ಲಿ ಅರಷಿಣಗೇರಿಯ ಇಬ್ಬರು ಹಾಗೂ ಹುನಗುಂದದ ಓರ್ವ ಸದಸ್ಯರು ಚುನಾಯಿತರಾದ್ರು. ಇನ್ನು ಹುನಗುಂದ, ಅತ್ತಿವೇರಿ, ಅಗಡಿ, ಅರಷಿಣಗೇರಿ, ಹುಲಿಹೊಂಡ ಗ್ರಾಮಗಳನ್ನೊಳಗೊಂಡ ಸೊಸೈಟಿಗೆ ನೂತನವಾಗಿ ಆಯ್ಕೆಗೊಂಡಿರೋ ಸದಸ್ಯರ ಪಟ್ಟಿ ಈ...
ಟಿಬೇಟಿಯನ್ ಕಾಲೋನಿಗೆ ಮಕ್ಕಳ ಪ್ರವಾಸಕ್ಕೆಂದು ಬಂದಿದ್ದ ಬಸ್ ಗೆ ಬೈಕ್ ಡಿಕ್ಕಿ, ಇಬ್ಬರಿಗೆ ಗಾಯ
ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ಹತ್ತಿರ ಬಸ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರಿಗೆ ಗಾಯವಾಗಿದೆ. ಗೋವಾ ದಿಂದ ವಾಪಾಸ್ ಹಿಂತಿರುಗಿ ಬರುತ್ತಿದ್ದ ಬೈಕ್ ಸವಾರರಿಬ್ಬರು ಶಾಲಾ ಪ್ರವಾಸಕ್ಕೆಂದು ಬಂದಿದ್ದ KSRTC ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ 108 ಅಂಬ್ಯುಲೆನ್ಸ್ ಹಾಗೂ ಸಿಬ್ಬಂದಿಗಳಾದ ಧನರಾಜ್ ಸಿ ತುರ್ತು ವೈದ್ಯಕೀಯ ತಂತ್ರಜ್ಞ ಹಾಗೂ ಚಾಲಕ ಶ್ರೀಧರ್ ಸವಾರರಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಓರಿಸ್ಸಾ ಹಾಗೂ...









