ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ಸಮೀಪ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕನೋರ್ವ ತಲೆಸುತ್ತು ಬಂದು ಬಿದ್ದು ಗಾಯಗೊಂಡಿರೋ ಘಟನೆ ನಡೆದಿದೆ. ಹಾಗೆ ರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದಾಗ ಮುಂಡಗೋಡಿನ ನೂತನ ಪಿಎಸ್ ಐ ಪರಶುರಾಮ್, ಖುದ್ದಾಗಿ ನಿಂತು ಗಾಯಾಳುವಿಗೆ ಆಸ್ಪತ್ರೆಗೆ ಸಾಗಿಸಿ ಮಾನವೀಯ ಕಾರ್ಯ ಮಾಡಿದ್ದಾರೆ. ಅಂದಹಾಗೆ, ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕಾರ್ನಳ್ಳಿ ಗ್ರಾಮದ ನಾಗರಾಜ್ ವಡ್ಡರ(47) ಎಂಬುವ ಕಾರ್ಮಿಕ ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ನಿತ್ರಾಣಗೊಂಡು ಕುಸಿದು ಬಿದ್ದಿದ್ದಾರೆ. ಹೀಗಾಗಿ ಕಾರ್ಮಿಕ ನಾಗರಾಜ್...
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: ಮುಂಡಗೋಡ ಸುದ್ದಿ
ಸಾಲಗಾಂವ್ ಬಾಣಂತಿದೇವಿ ಕೆರೆಯಲ್ಲಿ ಹರಕೆಯ ರೂಪದಲ್ಲಿ ತೇಲುತ್ತವೆ ಕಂದಮ್ಮಗಳು..! ಹೆತ್ತಮ್ಮಗಳ ಕಂಗಳಲ್ಲಿ ಆನಂದಬಾಷ್ಪ, ಹೇ ತಾಯೇ ಕಾಪಾಡಮ್ಮ..!!
ಇದು ಅಕ್ಷರಶಃ ಭಕ್ತಿಯ ಪರಾಕಾಷ್ಟೆ. ದೇವರ ಸನ್ನಿದಾನದ ಮಹತ್ವ ಸಾರುವ ಅದ್ಭುತ ಸೇವೆ. ಇಲ್ಲಿ ಹಸುಗೂಸುಗಳು ಕೆರೆಯ ನೀರಲ್ಲಿ ತೇಲುತ್ತವೆ. ಒಂಬತ್ತು ತಿಂಗಳು ಹೊತ್ತು ಹೆತ್ತ ಕಂದಮ್ಮಗಳನ್ನು ಹೆತ್ತ ತಾಯಿಯೇ ಕೆರೆಯ ನೀರಲ್ಲಿ ಹಾಕಿ ನಿರುಮ್ಮಳವಾಗಿ “ಅವ್ವಾ ನನ್ನ ಕಂದನನ್ನು ನಿನ್ನ ಮಡಿಲಲ್ಲಿ ಹಾಕಿದ್ದೇನೆ ರಕ್ಷಿಸುವ ಭಾರವು ನಿನ್ನದೇ ತಾಯಿ” ಅಂತಾ ಅಂಗಲಾಚುತ್ತಾಳೆ. ಆ ಹೆತ್ತ ತಾಯಿ ಕಣ್ಣಲ್ಲಿ ಆನಂದ ಬಾಷ್ಪಗಳು ಸುರಿಯುತ್ತವೆ. ಬಾಣಂತಿದೇವಿಯ ಮಡಿಲಲ್ಲಿ ತನ್ನ ಕಂದಮ್ಮನನ್ನು ಹಾಕಿ ಕೃತಾರ್ಥಳಾದ ಧನ್ಯತಾ ಭಾವ ಆ...
ಸಾಲಗಾಂವ್ ಬಾಣಂತಿದೇವಿ ಜಾತ್ರೆಯಲ್ಲಿ “ಕಲರ್ ಕಲರ್ ಬಾಲ್” ದಂಧೆಯದ್ದೇ ಕಾರುಬಾರು.. ಸಿಂಗಂ ಸಾಹೇಬ್ರೇ ಗಮನಿಸಿ..!
ಮುಂಡಗೋಡ ತಾಲೂಕಿನ ಸಾಲಗಾಂವ್ ಬಾಣಂತಿದೇವಿ ಜಾತ್ರೆ ವಿದ್ಯುಕ್ತ ಚಾಲನೆ ಪಡೆದುಕೊಂಡಿದೆ. ಇವತ್ತಿಂದ ಮೂರು ದಿನ ಜಾತ್ರೆಯ ಸದ್ದು ಗದ್ದಲ ಇದ್ದೇ ಇರತ್ತೆ. ಅದ್ರ ಜೊತೆ ಜಾತ್ರೆಯ ಅಂಗಳದಲ್ಲಿ ಅನಧಿಕೃತವಾಗಿ ನಡೆಯುವ ಅಡ್ಡ ದಂಧೆಗಳೂ ಕೂಡ ಹುಟ್ಟಿಕೊಂಡು ಜಾತ್ರೆಗೆ ಬರುವ ಸಭ್ಯಸ್ಥರಿಗೆ ಮಾರಕವಾಗ್ತಿವೆ. ಬಹುಶಃ ಖಾಕಿ ಪಡೆಗೆ ಇದೇಲ್ಲ ಗೊತ್ತಿದೆಯೋ ಇಲ್ವೊ ನಮಗಂತೂ ಗೊತ್ತಿಲ್ಲ. ಆದ್ರೆ, ಜಾತ್ರೆಗೆ ಹೋದ ಅನೇಕ ಜನ ಸಭ್ಯಸ್ಥರು ಅಲ್ಲಿನ “ಅಂಧಾ” ಗೇಮ್ ನೋಡಿ ವಿಡಿಯೋ ಕಳಿಹಿಸಿ “ಪಬ್ಲಿಕ್ ಫಸ್ಟ್” ಗೆ ಮಾಹಿತಿ...
ಹುನಗುಂದ ಸೊಸೈಟಿಯ 3 ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟ, ಜಾತ್ಯಾತೀತ ಒಕ್ಕೂಟದ ಅಭ್ಯರ್ಥಿಗಳಿಗೆ ಗೆಲುವು, 9 ಸದಸ್ಯರ ಅವಿರೋಧ ಆಯ್ಕೆ..!
ಮುಂಡಗೋಡ ತಾಲೂಕಿನ ಹುನಗುಂದ ವೀರೇಶ್ವರ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಚುನಾವಣೆ ನಡೆಯಿತು. ಒಟ್ಟೂ 12 ಸದಸ್ಯ ಬಲದ ಸಹಕಾರ ಸಂಘಕ್ಕೆ ಈಗಾಗಲೇ 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು ಮೂರು ಸ್ಥಾನಗಳಿಗೆ ಚುನಾವಣೆ ನಡೆಯಿತು. ಜಾತ್ಯಾತೀತ ಒಕ್ಕೂಟದ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಶಾಲಿಯಾದ್ರು. ಅದ್ರಲ್ಲಿ ಅರಷಿಣಗೇರಿಯ ಇಬ್ಬರು ಹಾಗೂ ಹುನಗುಂದದ ಓರ್ವ ಸದಸ್ಯರು ಚುನಾಯಿತರಾದ್ರು. ಇನ್ನು ಹುನಗುಂದ, ಅತ್ತಿವೇರಿ, ಅಗಡಿ, ಅರಷಿಣಗೇರಿ, ಹುಲಿಹೊಂಡ ಗ್ರಾಮಗಳನ್ನೊಳಗೊಂಡ ಸೊಸೈಟಿಗೆ ನೂತನವಾಗಿ ಆಯ್ಕೆಗೊಂಡಿರೋ ಸದಸ್ಯರ ಪಟ್ಟಿ ಈ...
ಟಿಬೇಟಿಯನ್ ಕಾಲೋನಿಗೆ ಮಕ್ಕಳ ಪ್ರವಾಸಕ್ಕೆಂದು ಬಂದಿದ್ದ ಬಸ್ ಗೆ ಬೈಕ್ ಡಿಕ್ಕಿ, ಇಬ್ಬರಿಗೆ ಗಾಯ
ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ಹತ್ತಿರ ಬಸ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರಿಗೆ ಗಾಯವಾಗಿದೆ. ಗೋವಾ ದಿಂದ ವಾಪಾಸ್ ಹಿಂತಿರುಗಿ ಬರುತ್ತಿದ್ದ ಬೈಕ್ ಸವಾರರಿಬ್ಬರು ಶಾಲಾ ಪ್ರವಾಸಕ್ಕೆಂದು ಬಂದಿದ್ದ KSRTC ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ 108 ಅಂಬ್ಯುಲೆನ್ಸ್ ಹಾಗೂ ಸಿಬ್ಬಂದಿಗಳಾದ ಧನರಾಜ್ ಸಿ ತುರ್ತು ವೈದ್ಯಕೀಯ ತಂತ್ರಜ್ಞ ಹಾಗೂ ಚಾಲಕ ಶ್ರೀಧರ್ ಸವಾರರಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಓರಿಸ್ಸಾ ಹಾಗೂ...
ಅನಧೀಕೃತ ಇಟ್ಟಿಗೆ ಭಟ್ಟಿಯ ನೀರಿನ ತೊಟ್ಟಿಗೆ ಬಿದ್ದು ಬಲಿಯಾಯ್ತು ಮೂರು ವರ್ಷದ ಪುಟ್ಟ ಕಂದಮ್ಮ..!
ಮುಂಡಗೋಡ ತಾಲೂಕಿನಲ್ಲಿ ಅನಧೀಕೃತ ಇಟ್ಟಿಗೆ ಭಟ್ಟಿಗಳ ಹಾವಳಿಗೆ ಕಡಿವಾಣ ಹಾಕ್ತಿನಿ ಅಂತ ಜಿದ್ದಿಗೆ ಬಿದ್ದಿದ್ದ ಮಾನ್ಯ ತಹಶೀಲ್ದಾರ್ ಸಾಹೇಬ್ರು ಅದ್ಯಾಕೋ ಏನೋ ಗಪ್ ಚುಪ್ ಆಗಿದ್ದಾರೆ. ಹೀಗಾಗಿನೇ ಮುಂಡಗೋಡ ತಾಲೂಕಿನಲ್ಲಿ ಸದ್ಯ ಮತ್ತದೇ ಅನಧೀಕೃತ ಇಟ್ಟಿಗೆ ಭಟ್ಟಿಗಳ ಭರಪೂರ ದಂಧೆ ಶುರುವಾಗಿದೆ. ಹೆಜ್ಜೆಗೊಂದರಂತೆ ಭಟ್ಟಿಗಳು ಜನ್ಮತಾಳುತ್ತಿವೆ. ಅದ್ರ ಜೊತೆ ನಡೆಯಬಾರದ ಬಹುದೊಡ್ಡ ದುರಂತವೊಂದು ಲಕ್ಕೊಳ್ಳಿಯ ಅನಧೀಕೃತ ಇಟ್ಟಿಗೆ ಭಟ್ಟಿಯಲ್ಲಿ ನಡೆದು ಹೋಗಿದೆ. ಇಂತದ್ದೇ ಇಟ್ಟಿಗೆ ಭಟ್ಟಿಯೊಂದರಲ್ಲಿ ಕಾರ್ಮಿಕರ ಪುಟ್ಟ ಮಗು ಅಮಾನುಷವಾಗಿ ಬಲಿಯಾಗಿದೆ. ಅದು ಮೂರು...
ಬಾಚಣಕಿ ವಿದ್ಯಾರ್ಥಿನಿ ಜನಪದ ಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ..! ಗ್ರಾಮಸ್ಥರ ಹರ್ಷ
ಮುಂಡಗೋಡ ತಾಲೂಕಿನ ಬಾಚಣಕಿಯ ಗ್ರಾಮೀಣ ಪ್ರತಿಭೆಯೊಂದು ಸಾಧನೆ ಮಾಡಿದೆ. ಜನಪದ ಗೀತಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡದು ಮುಂಡಗೋಡ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಅಂದಹಾಗೆ ಬಾಚಣಕಿ ಗ್ರಾಮದ ಅನುಪಮ ನಾಗಪ್ಪ ಕೊಂಡಿಕೊಪ್ಪ ಎಂಬುವವಳೆ ಸಾಧನೆಗೈದ ವಿದ್ಯಾರ್ಥಿನಿ. ಸದ್ಯ ಮುಂಡಗೋಡ ಲೊಯೊಲಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿನಿ ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ವಿಭಾಗ ಮಟ್ಟದಲ್ಲಿಯೂ ಪ್ರಶಸ್ತಿ ಪಡೆದು ಸದ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು. ಇಂದು ಬೆಂಗಳೂರಿನ ಕ್ರೈಸ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ...
ಇಂದೂರಿನ ವ್ಯಕ್ತಿಯಿಂದ ನಿವೇಶನ ಸಕ್ರಮ ಹೆಸರಲ್ಲಿ ಅಕ್ರಮ..! ತಹಶೀಲ್ದಾರ್ ಹೆಸರು ಬಳಸಿ ದಂಧೆ ಆರೋಪ..!!
ಮುಂಡಗೋಡ ತಾಲೂಕಿನ ಇಂದೂರಿನ ವ್ಯಕ್ತಿಯೋರ್ವ ತಹಶೀಲ್ದಾರ್ ಹೆಸರಲ್ಲಿ ಹಣ ವಸೂಲಿ ದಂಧೆ ಶುರುವಿಟ್ಟಿದ್ದಾನೆ ಆತನಿಂದ ಸಾರ್ವಜನಿಕರು ಎಚ್ಚರದಿಂದ ಇರಿ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ಎಚ್ಚರಿಸಿದ್ದಾರೆ. ಇಂದೂರು ಗ್ರಾಮದ ಹಜರತ್ ಅಲಿ ಬಾಷಾಸಾಬ ಜಾತಗಾರ, ಎಂಬುವವನೇ ಸದ್ಯ ವಂಚಿಸಿರೋ ಆರೋಪ ಹೊತ್ತಿದ್ದು. ಇಂದೂರ ಗ್ರಾಮದ ಮನೆಗಳ ನಿವೇಶನ ಸಕ್ರಮ ಮಾಡುವ ಕುರಿತಾಗಿ 4 ಜನ ಸಾರ್ವಜನಿಕರಿಂದ ತಲಾಟಿ, ಕಂದಾಯ ನಿರೀಕ್ಷಕ ಮತ್ತು ತಹಶೀಲ್ದಾರ್ ಹೆಸರು ದುರುಪಯೋಗ ಮಾಡಿ, ಸುಳ್ಳು ಹೇಳಿ, ಹಣ ವಸೂಲಿ ಮಾಡಿದ್ದಾನೆ ಅಂತಾ ಖುದ್ದು...
ಮುಂಡಗೋಡ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ..!
ಮುಂಡಗೋಡ ಪಟ್ಟಣದ ಹೊರವಲಯದ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಬೈಕ್ ಸವಾರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಹೆಸರು ಇನ್ನೂ ತಿಳಿದು ಬಂದಿಲ್ಲ. ಮುಂಡಗೋಡ ಶಿರಸಿ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲೇ ಗಾಯಗೊಂಡು ಬಿದ್ದಿದ್ದ ಎನ್ನಲಾಗಿದೆ. ಹೀಗಾಗಿ ಇದೇ ವೇಳೆ ದಾರಿಹೋಕರು ಗಮನಿಸಿ ತಕ್ಷಣವೇ 108 ಅಂಬ್ಯಲೆನ್ಸ್ ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್, ಹಾಗೂ ಚಾಲಕ...
ಮುಂಡಗೋಡಿನಲ್ಲಿ ಶ್ರೀಗಂಧ ಕಳ್ಳತನ ಮಾಡಿದ್ದ ಖತರ್ನಾಕ ಗ್ಯಾಂಗ್ ಆರೆಸ್ಟ್..!
ಮುಂಡಗೋಡ ಹಾಗೂ ಮಂಚಿಕೇರಿ ಅರಣ್ಯ ಅಧಿಕಾರಿಗಳ ಬ್ರಿಲ್ಲಿಯಂಟ್ ಕಾರ್ಯಾಚರಣೆ ಸಕ್ಸೆಸ್ ಆಗಿದೆ. ಪರಿಣಾಮ ಖತರ್ನಾಕ ಅರಣ್ಯ ರಾಬರಿ ಗ್ಯಾಂಗ್ ಅಂದರ್ ಆಗಿದೆ. ಅಕ್ಟೋಬರ್ 7 ರ ಆಸುಪಾಸಿನಲ್ಲಿ ಮುಂಡಗೋಡ ತಾಲೂಕಿನ ಹಲವು ಕಡೆ ನಡೆದಿದ್ದ ಶ್ರೀಗಂಧ ಮರ ಕಳ್ಳತನ ಕೇಸಿನಲ್ಲಿ ಬೇಕಾಗಿದ್ದ ಅರಣ್ಯ ಸ್ಮಗ್ಲಿಂಗ್ ಕ್ರಿಮಿಗಳನ್ನು ಬಹುತೇಕ ಅಂದರ್ ಮಾಡಲಾಗಿದೆ. ದೂರದ ಮದ್ಯ ಪ್ರದೇಶದಿಂದ ಬಂದು ಪಟ್ಟಣಗಳು, ಹಳ್ಳಿಗಳ ಹೊರಗೆ ಟೆಂಟ್ ಹಾಕಿ ಸಂಚು ರೂಪಿಸೋ ಭಯಾನಕ ಸ್ಮಗ್ಲಿಂಗ್ ಪಡೆಯನ್ನ ಮೊದಲ ಬಾರಿಗೆ ಹೆಡೆಮುರಿ ಕಟ್ಟಲಾಗಿದೆ. ಅಷ್ಟಕ್ಕೂ...









