Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಅರಶಿಣಗೇರಿ ವ್ಯಕ್ತಿ, ಹುಬ್ಬಳ್ಳಿ ತಾಲೂಕಿನ ಹಳ್ಯಾಳದಲ್ಲಿ ಭೀಕರ ಹತ್ಯೆ, ಮೊನ್ನೆಯಷ್ಟೆ ಮತದಾನಕ್ಕೆ ಬಂದಿದ್ದ ಶರೀಫಸಾಬ್ ಕೊಲೆಯಾಗಿದ್ದು ಯಾಕೆ..?

ಅರಶಿಣಗೇರಿ ವ್ಯಕ್ತಿ, ಹುಬ್ಬಳ್ಳಿ ತಾಲೂಕಿನ ಹಳ್ಯಾಳದಲ್ಲಿ ಭೀಕರ ಹತ್ಯೆ, ಮೊನ್ನೆಯಷ್ಟೆ ಮತದಾನಕ್ಕೆ ಬಂದಿದ್ದ ಶರೀಫಸಾಬ್ ಕೊಲೆಯಾಗಿದ್ದು ಯಾಕೆ..?

ಹುಬ್ಬಳ್ಳಿ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ವ್ಯಕ್ತಿಯನ್ನು ಹುಬ್ಬಳ್ಳಿ ಸಮೀಪದ ಹಳ್ಯಾಳ ಗ್ರಾಮದಲ್ಲಿ ಭೀಕರ ಕೊಲೆ ಮಾಡಲಾಗಿದೆ. ತಲೆ ಮೇಲೆ ಪಾಟಿ ಗಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಅರಶಿಣಗೇರಿಯ ಶರೀಫ್ ಸಾಬ್ ಮಾಬುಸಾಬ್ ಕಮಡೊಳ್ಳಿ ಎಂಬುವವನನ್ನು ಭೀಕರವಾಗಿ ಕೊಂದು ಹಾಕಲಾಗಿದೆ. ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಯನ್ನು ಶಶಿಧರ ಚೆನ್ನೋಜಿ ಅಂತಾ ತಿಳಿದು ಬಂದಿದೆ. ಹಳ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕೊಠಡಿಯಲ್ಲಿ ಕೊಲೆ ಮಾಡಲಾಗಿದೆ. ಅಂದಹಾಗೆ,...

Post
ಕೊಪ್ಪ, ಹುನಗುಂದದಲ್ಲಿ ಸಂಭ್ರಮದ ಬಸವ ಜಯಂತಿ, ಕೊಪ್ಪದಲ್ಲಿ 12 ಅಡಿ ಬಸವೇಶ್ವರ ಪುತ್ಥಳಿ ಪ್ರತಿಷ್ಟಾಪನೆ..!

ಕೊಪ್ಪ, ಹುನಗುಂದದಲ್ಲಿ ಸಂಭ್ರಮದ ಬಸವ ಜಯಂತಿ, ಕೊಪ್ಪದಲ್ಲಿ 12 ಅಡಿ ಬಸವೇಶ್ವರ ಪುತ್ಥಳಿ ಪ್ರತಿಷ್ಟಾಪನೆ..!

ಮುಂಡಗೋಡ ತಾಲೂಕಿನಲ್ಲಿ ಸಂಭ್ರಮದ ಬಸವ ಜಯಂತಿ ಆಚರಿಸಲಾಯಿತು. ತಾಲೂಕಿನ ಇಂದೂರು ಕೊಪ್ಪ ಗ್ರಾಮದಲ್ಲಿ ಬಸವೇಶ್ವರರ ನೂತನ ಪುತ್ಥಳಿ ಪ್ರತಿಷ್ಟಾಪಿಸಲಾಯಿತು. ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರರ 12 ಅಡಿಯ ಪುತ್ಥಳಿ ಅನಾವರಣ ಮಾಡಲಾಯಿತು‌. ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಪ್ರಾರಂಭವಾದ ಬಸವ ಜಯಂತಿ ಹಾಗೂ ಪುತ್ಥಳಿ ಪ್ರತಿಷ್ಟಾಪನೆ ಕಾರ್ಯದಲ್ಲಿ ಗ್ರಾಮಸ್ಥರು ಭಾಗಿಯಾಗಿದ್ರು. ಹುನಗುಂದದಲ್ಲಿ..! ಇನ್ನು ತಾಲೂಕಿನ ಹುನಗುಂದದಲ್ಲಿ ಬಸವೇಶ್ವರ ಜಯಂತಿಯ ಅಂಗವಾಗಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಅಲಂಕೃತಗೊಂಡ ಚಕ್ಕಡಿಗಳಲ್ಲಿ ಬಸವೇಶ್ವರ ರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಈ...

Post
ಹೃದಯಾಘಾತದಿಂದ ಹುನಗುಂದದ ಮತ್ತೋರ್ವ ಯುವಕ ಸಾವು, ಒಂದೇ ದಿನ ಇಬ್ಬರು ಯುವಕರ ಸಾವು..! ಗ್ರಾಮದಲ್ಲಿ ಸೂತಕದ ಛಾಯೆ..!!

ಹೃದಯಾಘಾತದಿಂದ ಹುನಗುಂದದ ಮತ್ತೋರ್ವ ಯುವಕ ಸಾವು, ಒಂದೇ ದಿನ ಇಬ್ಬರು ಯುವಕರ ಸಾವು..! ಗ್ರಾಮದಲ್ಲಿ ಸೂತಕದ ಛಾಯೆ..!!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮಕ್ಕೆ ಈ ಅಮವಾಸ್ಯೆ ಅಕ್ಷರಶಃ ಕರಾಳ ಅಮವಾಸ್ಯೆ ಆದಂತಾಗಿದೆ. ಇವತ್ತೊಂದೇ ದಿನ ಗ್ರಾಮದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ತುಮಕೂರು ಸಮೀಪ ಯುವಕನೋರ್ವ ಆಕಸ್ಮಿಕವಾಗಿ ಸಾವನ್ನಪ್ಪಿದ್ದರೆ, ಆತನ ಶವಸಂಸ್ಕಾರಕ್ಕೆ ಬಂದು ಹೆಂಡತಿ ಮನೆಗೆ ತೆರಳಿದ್ದ ಮತ್ತೋರ್ವ ಯುವಕ ಹೃದಯಾಘಾತದಿಂದ ಸಂಜೆ ಮೃತಪಟ್ಟಿದ್ದಾನೆ. ಹೀಗಾಗಿ, ಹುನಗುಂದ ಗ್ರಾಮದಲ್ಲಿ ಅಕ್ಷರಶಃ ಸೂತಕದ ವಾತಾವರಣ ನಿರ್ಮಾಣವಾಗಿದೆ. ಗಂಗಾಧರ ಸಂಗಪ್ಪ ಬಗಡಗೇರಿ(38) ಇವತ್ತು ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈತ ನಿನ್ನೆಯಷ್ಟೇ ಮೃತಪಟ್ಟಿದ್ದ ಹುನಗುಂದ ಗ್ರಾಮದ ಸ್ನೇಹಿತ ರಾಜು...

Post
ಕೊನೆಗೂ ಮತದಾನಕ್ಕೆ ಒಪ್ಪಿಕೊಂಡ ಬಸಾಪುರ ಗ್ರಾಮಸ್ಥರು, ಶಿರಸಿ ಎಸಿ ಭರವಸೆ ಬಳಿಕ ಮತಗಟ್ಟೆಗೆ ಎಂಟ್ರಿ..!

ಕೊನೆಗೂ ಮತದಾನಕ್ಕೆ ಒಪ್ಪಿಕೊಂಡ ಬಸಾಪುರ ಗ್ರಾಮಸ್ಥರು, ಶಿರಸಿ ಎಸಿ ಭರವಸೆ ಬಳಿಕ ಮತಗಟ್ಟೆಗೆ ಎಂಟ್ರಿ..!

 ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಾಪುರ ಗ್ರಾಮಸ್ಥರು ಕೊನೆಗೂ ಮತದಾನಕ್ಕೆ ಒಪ್ಪಿಕೊಂಡಿದ್ದಾರೆ. ವಿವಿಧ ಬೇಡಿಕೆಗೆ ಆಗ್ರಹಿಸಿ ಇಡೀ ಗ್ರಾಮಕ್ಕೆ ಗ್ರಾಮವೇ ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ ಮಾಡಿದ್ರು‌. ಹೀಗಾಗಿ, ಪಬ್ಲಿಕ್ ಫಸ್ಟ್ ನ್ಯೂಸ್ ಈ ಕುರಿತು ವಿಸ್ತೃತ ವರದಿ ಬಿತ್ತರಿಸಿತ್ತು. ಬೆಳಿಗ್ಗೆಯಿಂದಲೂ ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿ, ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರು, ತಹಶೀಲ್ದಾರ್ ಮುಖಾಂತರ ಮನವಿ ಅರ್ಪಿಸಿದ್ದರು. ಆದ್ರೆ, ತಹಶೀಲ್ದಾರ್ ಸಾಹೇಬ್ರು ಗ್ರಾಮಸ್ಥರ ಮನವಿ ಸ್ವೀಕರಿಸಿ ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿ...

Post
ಕಾಂಗ್ರೆಸ್ ಕುತಂತ್ರದಿಂದ ಮತ ಪಡೆಯಲು ಹಣ ಹಂಚಿಕೆ ಮಾಡುತ್ತಿದೆಯಂತೆ- ರೂಪಾಲಿ ನಾಯ್ಕ್

ಕಾಂಗ್ರೆಸ್ ಕುತಂತ್ರದಿಂದ ಮತ ಪಡೆಯಲು ಹಣ ಹಂಚಿಕೆ ಮಾಡುತ್ತಿದೆಯಂತೆ- ರೂಪಾಲಿ ನಾಯ್ಕ್

  ಮುಂಡಗೋಡ: ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೂ ಕುತಂತ್ರದಿಂದ ಮತ ಪಡೆಯಲು ಹಣ ಹಂಚಿಕೆ ಮಾಡುತ್ತಿದೆ ಅಂತಾ ಜನರು ಮಾತಾಡಿಕೊಳ್ತಿದಾರೆ. ಗ್ಯಾರಂಟಿಗಿಂತ ಬದುಕಿಗೆ ಸ್ವಾಸ್ಥ್ಯ ಮುಖ್ಯ. ಗ್ಯಾರಂಟಿಯಿಂದ ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ. ವಿಧಾನಸಭಾ ಚುನಾವಣೆಯ ತಂತ್ರವನ್ನೇ ಲೋಕಸಭಾ ಚುನಾವಣೆಯಲ್ಲಿ ಮಾಡುತ್ತಿದ್ದಾರೆ. ಇವುಗಳನ್ನು ಜನರು ನಂಬುವುದಿಲ್ಲ. ವಿಶ್ವೇಶ್ವರ ಹೆಗಡೆ ಕಾಗೇರಿಯವರು 3 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು. ಶನಿವಾರ ತಾಲೂಕು ಬಿಜೆಪಿ ಕಚೇರಿಯಲ್ಲಿ...

Post
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಕಾಂಗ್ರೆಸ್ ರಾಜಕಾರಣಕ್ಕೆ ಬಳಸಿಕೊಳ್ಳಲ್ಲ: ಕೈ ಸಮಾವೇಶದ ತಯಾರಿ ವೀಕ್ಷಿಸಿ ದೇಶಪಾಂಡೆ ಹೇಳಿಕೆ

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಕಾಂಗ್ರೆಸ್ ರಾಜಕಾರಣಕ್ಕೆ ಬಳಸಿಕೊಳ್ಳಲ್ಲ: ಕೈ ಸಮಾವೇಶದ ತಯಾರಿ ವೀಕ್ಷಿಸಿ ದೇಶಪಾಂಡೆ ಹೇಳಿಕೆ

ಮುಂಡಗೋಡ: ಪ್ರಜ್ವಲ್ ರೇವಣ್ಣನವರ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳಲ್ಲ ಅಂತಾ ಮುಂಡಗೋಡಿನಲ್ಲಿ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ತಿಳಿಸಿದ್ರು. ಅವ್ರು, ಮುಂಡಗೋಡ ತಾಲೂಕು ಕ್ರೀಡಾಂಗಣದಲ್ಲಿ ನಾಳೆ ಶುಕ್ರವಾರ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದ ತಯಾರಿ ಕುರಿತು ವೀಕ್ಷಿಸಿ ಗುರುವಾರ ಸಂಜೆ ಮಾತನಾಡಿದ್ರು. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ರು. ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಎಸ್ ಐಟಿಯನ್ನು  ರಚನೆ ಮಾಡಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದರು. ಇನ್ನು ಶುಕ್ರವಾರ ನಡೆಯಲಿರೋ ಕಾಂಗ್ರೆಸ್ ಸಮಾವೇಶದಲ್ಲಿ ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ...

Post
ಹುನಗುಂದ ಗ್ರಾಪಂ ಮಾಜಿ ಸದಸ್ಯ ಮೌಲಾಸಾಬ್ ಗೋರಿ ಬೈಕ್ ಅಪಘಾತದಲ್ಲಿ ಸಾವು..! ಹಲವರ ಕಂಬನಿ

ಹುನಗುಂದ ಗ್ರಾಪಂ ಮಾಜಿ ಸದಸ್ಯ ಮೌಲಾಸಾಬ್ ಗೋರಿ ಬೈಕ್ ಅಪಘಾತದಲ್ಲಿ ಸಾವು..! ಹಲವರ ಕಂಬನಿ

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೌಲಾಸಾಬ್ ಮಹ್ಮದಸಾಬ್ ಗೋರಿ (42) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಸಮೀಪ ಸಂಭವಿಸಿರೋ ಬೈಕ್ ಅಪಘಾತದಲ್ಲಿ ರವಿವಾರ ನಿಧನರಾಗಿದ್ದಾರೆ. ಹುನಗುಂದ ಗ್ರಾಮ ಪಂಚಾಯತಿಯ ಸದಸ್ಯರಾಗಿ ಆಯ್ಕೆಯಾಗಿದ್ದ ಮೌಲಾಸಾಬ್ ತಮ್ಮ ಅವಧಿಯಲ್ಲಿ ಜನಮನ್ನಣೆ ಗಳಿಸಿಕೊಂಡಿದ್ರು. ಹೀಗಾಗಿ, ಮೌಲಾಸಾಬರ ನಿಧನಕ್ಕೆ ಗ್ರಾಮಸ್ಥರು, ವಿವಿಧ ಸಮಾಜದ ಮುಖಂಡರು ಕಂಬನಿ ಮಿಡಿದಿದ್ದಾರೆ.

Post
ಮುಂಡಗೋಡ ತಾಲೂಕಿನಲ್ಲಿ ಭಾರಿ ಮಳೆ ಗಾಳಿಗೆ ಅವಾಂತರ, ಸಿಡಿಲಿನ ಅರ್ಭಟಕ್ಕೆ ಮರಕ್ಕೆ ಬೆಂಕಿ, ಧರೆಗುರುಳಿದ ಮರಗಳು, ರಸ್ತೆ ಬಂದ್..!

ಮುಂಡಗೋಡ ತಾಲೂಕಿನಲ್ಲಿ ಭಾರಿ ಮಳೆ ಗಾಳಿಗೆ ಅವಾಂತರ, ಸಿಡಿಲಿನ ಅರ್ಭಟಕ್ಕೆ ಮರಕ್ಕೆ ಬೆಂಕಿ, ಧರೆಗುರುಳಿದ ಮರಗಳು, ರಸ್ತೆ ಬಂದ್..!

 ಮುಂಡಗೋಡ ತಾಲೂಕಿನಾಧ್ಯಂತ ಭಾರೀ ಮಳೆಯಾಗಿದೆ. ಬಿರುಗಾಳಿ ಸಮೇತ ಒನಮದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಅಲ್ಲಿ ಅನಾಹುತಗಳಾಗಿವೆ. ಮಳೆ ಗಾಳಿಗೆ ಹಲವು ಕಡೆ ಮರಗಳು ಧರೆಗುರುಳಿವೆ ಪರಿಣಾಮ ಕೆಲವು ರಸ್ತೆ ಸಂಚಾರಕ್ಕೂ ಅಡಚಣೆಯಾಗಿದೆ. ರಸ್ತೆ ಬಂದ್..! ಮುಂಡಗೋಡ ಕಲಘಟಗಿ ರಸ್ತೆಯಲ್ಲಿ ಮಳೆಗಾಳಿಗೆ ಎರಡು ಕಡೆ ಮರಗಳು ನೆಲಕ್ಕುರುಳಿದ್ದು ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಅದ್ರಂತೆ, ಮುಂಡಗೋಡ ಪಟ್ಟಣದ ಹಲವು ಕಡೆ ಮರಗಳು ಧರೆಗುರುಳಿದೆ. ಹೀಗಾಗಿ, ಕೆಲವುವಕಡೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಜ್ಜಿಗೇರಿಯಲ್ಲಿ ಮನೆಗಳಿಗೆ...

Post
ಮುಂಡಗೋಡ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ..!

ಮುಂಡಗೋಡ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ..!

ಮುಂಡಗೋಡ ಬಿಜೆಪಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಹಾಗೂ ಎಪ್ರೀಲ್ 29 ರಂದು ಅಂಕೋಲದಲ್ಲಿ ನಡೆಯುವ ಯುವಶಕ್ತಿ ಸಮಾವೇಶದಲ್ಲಿ ಭಾಗಿಯಾಗುವ ಬಗ್ಗೆ ಸಭೆ ನಡೆಸಿ ಚರ್ಚಿಸಲಾಯಿತು.   ಈ ವೇಳೆ ಮುಂಡಗೋಡ ಮಂಡಲದ ಅಧ್ಯಕ್ಷ ಮಂಜುನಾಥ ಪಾಟೀಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮ ಕುಮಾರ್ ನಾಯ್ಕ್, ನಿಕಟಪೂರ್ವ ರೈತ ಮೋರ್ಚಾ ಅಧ್ಯಕ್ಷ ಮಹೇಶ ಹೊಸಕೊಪ್ಪ, ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಟಣಕೇದಾರ, ಮಂಡಲದ ಪ್ರಧಾನ...

Post
ಮುಂಡಗೋಡ ಚುನಾವಣಾ ಚೆಕ್ ಪೋಸ್ಟ್ ಗಳಲ್ಲಿ ಸೌಕರ್ಯಗಳೇ ಇಲ್ಲ..! ರಣ ಬಿಸಿಲಲ್ಲೇ ಬಸವಳಿತಿದ್ದಾರೆ ಸಿಬ್ಬಂದಿಗಳು..!!

ಮುಂಡಗೋಡ ಚುನಾವಣಾ ಚೆಕ್ ಪೋಸ್ಟ್ ಗಳಲ್ಲಿ ಸೌಕರ್ಯಗಳೇ ಇಲ್ಲ..! ರಣ ಬಿಸಿಲಲ್ಲೇ ಬಸವಳಿತಿದ್ದಾರೆ ಸಿಬ್ಬಂದಿಗಳು..!!

ಮುಂಡಗೋಡ ತಾಲೂಕಿನಲ್ಲಿ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಅದ್ರಂತೆ ಮತದಾನಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನೂ ಅಧಿಕಾರಿಗಳು ಮಾಡಿಕೊಳ್ತಿದಾರೆ. ಚುನಾವಣಾಧಿಕಾರಿಗಳ ನಿರ್ದೇಶನದಂತೆ ಎಲ್ಲಾ ಕಾರ್ಯಗಳೂ ನಡಿತಿವೆ. ಅದರ ಭಾಗವಾಗಿ, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ತಾಲೂಕಿನ ಎಲ್ಲಾ ಗಡಿಗಳಲ್ಲೂ ಚೆಕ್ ಪೊಸ್ಟ್ ಗಳನ್ನು ತೆರೆಯಲಾಗಿದೆ. ಆದ್ರೆ, ಹಾಗೆ ತೆರೆಯಲಾಗಿರೋ ಚೆಕ್ ಪೊಸ್ಟ್ ಗಳು ಬಹುತೇಕ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸ್ತಿವೆ. ರಣ ಬಿಸಿಲಲ್ಲೇ ಕರ್ತವ್ಯ..! ಅಂದಹಾಗೆ, ತಾಲೂಕಿನ ಗಡಿಗಳಲ್ಲಿ ತೆರೆಯಲಾಗಿರೊ ಚೆಕ್ ಪೊಸ್ಟ್ ಗಳಲ್ಲಿ ಸಿಬ್ಬಂದಿಗಳು ಕೆಲಸ ನಿರ್ವಹಿಸೋದೇ...

error: Content is protected !!