Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!

ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್..! ದಿ. ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಅಧಿಕಾರಿ..!

  ಮುಂಡಗೋಡ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಆಗಿ ಮಂಜುನಾಥ್ ಗೌಡರ್ ಬರಲಿದ್ದಾರೆ‌. ಈ ಹಿಂದೆ ಪಿಎಸ್ ಐ ಆಗಿದ್ದ ಯಲ್ಲಾಲಿಂಗ್ ಕುನ್ನೂರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಂಜುನಾಥ್ ಗೌಡರ್ ನಿಯುಕ್ತಿಗೊಂಡಿದ್ದಾರೆ‌. ಅಸಲು, ಕಳೆದ ಕೆಲವೇ ತಿಂಗಳುಗಳ ಹಿಂದೆ ಮುಂಡಗೋಡ ಠಾಣೆಗೆ ಎರಡನೇ ಬಾರಿಗೆ ಪಿಎಸ್ಐ ಆಗಿ ಯಲ್ಲಾಲಿಂಗ್ ಕುನ್ನೂರ್ ವರ್ಗಾವಣೆಯಾಗಿ ಯಲ್ಲಾಪುರದಿಂದ ಬಂದಿದ್ದರು.ಆದ್ರೆ, ತೀವ್ರ ಅನಾರೋಗ್ಯದಿಂದ ಬಳಲಿದ ಅವ್ರು ಕಳೆದ ಮಂಗಳವಾರ ನಿಧನರಾಗಿದ್ದರು. ಹೀಗಾಗಿ, ಖಾಲಿ ಇದ್ದ ಹುದ್ದೆಗೆ ಮಂಜುನಾಥ್ ಗೌಡರ್ ರನ್ನು ನೇಮಕಗೊಳಿಸಿ ಪಶ್ಚಿಮ...

Post
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!

ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ವಿಧಿವಶ..! 33 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸೂಪರ್ ಕಾಪ್..!

ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರು ವಿಧಿವಶರಾಗಿದ್ದಾರೆ ಅನ್ನೋ ಶಾಕಿಂಗ್ ಮಾಹಿತಿ ಸಿಕ್ಕಿದೆ‌. 33 ವರ್ಷ ವಯಸ್ಸಿನ ಅವ್ರು ಈಗ್ಗೆ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ರು. ಹೀಗಾಗಿ, ಅವ್ರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರೆಳೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ಮುಂಡಗೋಡಿಗೆ ಎರಡನೇ ಬಾರಿಗೆ ಪಿಎಸ್ಐ ಆಗಿ ವರ್ಗಾವಣೆಗೊಂಡು ಬಂದಿದ್ದ, ಯಲ್ಲಾಲಿಂಗ್ ಕುನ್ನೂರ್ ಜನಾನುರಾಗಿಯಾಗಿದ್ದರು. ಅದಕ್ಕೂ ಮೊದಲು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ...

Post
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!

ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಹೊರಬೀಡುವಿನಂದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಮನೆಗಳ್ಳನ ಬಂಧನ..!

ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಹೊರಬೀಡು ದಿನದಂದು ಪಟ್ಟಣದ ಅಂಬೇಡ್ಕರ್ ಓಣಿಯ ಬಸವರಾಜ ಮಲ್ಲಪ್ಪ ಚಲವಾದಿ ಎಂಬುವವರ ಮನೆ ಕಳ್ಳತನ ಮಾಡಿದ್ದ, ಅಂತರ ಜಿಲ್ಲಾ ಕಳ್ಳನನ್ನು ಹೆಡೆ ಮುರಿಕಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದ ಹೊನ್ನಹಳ್ಳಿಯ, ಮಂಜುನಾಥ ಬಸವಂತಪ್ಪ ನಾಯಕ (34) ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಜನೆವರಿ 27 ರಂದು ಮಂಗಳವಾರ ಹೋರಬೀಡುವಿನ ದಿನ, ಮುಂಡಗೋಡ ಪಟ್ಟಣದ ಅಂಬೇಡ್ಕರ ಓಣಿಯಲ್ಲಿರುವ ಮನೆಯ ಮುಂದಿನ ಬಾಗಿಲನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಒಡೆದು ತೆಗೆದು ಒಳಗಡೆ...

Post
ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!

ತಟ್ಟಿಹಳ್ಳಿ ಶಿವಾನಂದನ ಹತ್ಯೆಗೆ ಸಜ್ಜಾಗಿದ್ದವನ ಹೆಸರು ಶಿವರಾಜ್.. ಅಷ್ಟಕ್ಕೂ ಆತ 3ನೇ ಹೆಂಡತಿಯ ಮೊದಲನೇ ಗಂಡನ ಮಗ..!

ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ಗುರುವಾರ  ಸಂಜೆ ನಡೆದ ಭೀಕರ ಹತ್ಯೆ ಯತ್ನ ಕೇಸಿನ ಅಸಲೀಯತ್ತು ಬಟಾಬಯಲಾಗಿದೆ. ಅಂದಹಾಗೆ, ಅಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದವನ ಹೆಸರು ಶಿವಾನಂದ ರಾಮಣ್ಣ ಗುಡಿಯಾಳ, ವಯಸ್ಸು 48 ವರ್ಷ. ಅಷ್ಟಕ್ಕೂ, ಹಾಗೆ ರಕ್ತದ ಮಡುವಿನಲ್ಲಿ ಬೀಳುವಂತೆ ಕತ್ತಿಗೆ ಬಲವಾಗಿ ಮಚ್ಚಿನಿಂದ ಕತ್ತರಿಸಿದ್ದವನ ಹೆಸರು ಶಿವರಾಜ್ ಕಲಕಟ್ಟಿ..!       ಅನುಮಾನದ ಪಿಶಾಚಿ..! ಅಸಲು, ಮುಂಡಗೋಡ ತಾಲೂಕಿನ ತಟ್ಟಿಹಳ್ಳಿ ಗ್ರಾಮದ ಲಾರಿಚಾಲಕ ಶಿವಾನಂದ ರಾಮಣ್ಣ ಗುಡಿಯಾಳ(48) ಈ ಹಿಂದೆ ಎರಡೆರಡು ಮದುವೆಯಾಗಿದ್ದ. ಆದ್ರೆ, ಇಬ್ಬರು...

Post
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!

ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!

ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ವ್ಯಕ್ತಿಯೋರ್ವನ ಮೇಲೆ ಆತನ ಮಗನಿಂದಲೇ ಭೀಕರ ಹತ್ಯೆಗೆ ಯತ್ನ ನಡೆದಿದೆ. ಪರಿಣಾಮ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಹಲ್ಲೆ ನಡೆಸಿದ ಶಿವರಾಜ ಪರಾರಿಯಾಗಿದ್ದಾನೆ‌. ಇನ್ನು ನಾಗಮ್ಮ ಎಂಬುವವಳನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ‌. ಶಿವಾನಂದ (47) ಎಂಬುವವನ ಮೇಲೆ ಭೀಕರ ಹತ್ಯೆಗೆ ಯತ್ನ ನಡೆದಿದೆ. ಮಗನಿಂದಲೇ ಕಂದಲಿಯಿಂದ ಹಿಂದಿನಿಂದ ಬಂದು ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹತ್ಯೆಗೆ ಯತ್ನ ನಡೆದಿದೆ. ಸದ್ಯ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ...

Post
ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ

ಕಾತೂರು ನಾಗನೂರು ರಸ್ತೆಯಲ್ಲಿ ಬೈಕುಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರಿಗೆ ಗಾಯ

ಮುಂಡಗೋಡ ತಾಲೂಕಿನ ಕಾತೂರು ಬಳಿ ಬೈಕುಗಳ‌ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ‌. ಪರಿಣಾಮ ಇಬ್ಬರೂ ಬೈಕ್ ಸವಾರರಿಗೆ ಗಾಯವಾಗಿದೆ. ಕಾತೂರು- ನಾಗನೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಬೈಕ್ ಗಳ ನಡುವೆ ಡಿಕ್ಕಿಯಲ್ಲಿ ಇಬ್ಬರಿಗೂ ಗಾಯವಾಗಿದೆ. ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!

ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ತಪ್ಪಿದ ಭಾರೀ ಅನಾಹುತ..!

 ಕಬ್ಬು ತುಂಬಿದ ಟ್ರಾಕ್ಟರ್ ಟ್ರೈಲರ್ ನ ಕೊಂಡಿ ಕಳಚಿ, ಹಿಂಬದಿಗೆ ಚಲಿಸಿ ಪಲ್ಟಿಯಾದ ಘಟನೆ ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯ ಪೊಸ್ಟ್ ಆಫೀಸ್ ಬಳಿ ನಡೆದಿದೆ. ರಸ್ತೆಯಲ್ಲೇ ಕಬ್ಬು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಬ್ಬಿನ ಅಡಿ ಎರಡು ಮೂರು ಬೈಕ್ ಗಳು ಸಿಲುಕಿಕೊಂಡಿರೋ ಸಾಧ್ಯತೆ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಅಂದಹಾಗೆ, ಡಬಲ್ ಟ್ರೈಲರ್ ನಲ್ಲಿ ಕಬ್ಬು ತುಂಬಿಕೊಂಡು ಸಾಗುವ ಟ್ರಾಕ್ಟರ್, ಯಲ್ಲಾಪುರ ರಸ್ತೆಯ ಮಸೀದಿ ಬಳಿಯಲ್ಲಿ ಚಲಿಸುತ್ತಿದ್ದಾಗ ಟ್ರೈಲರ್ ನ...

Post
ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!

ತಟ್ಟಿಹಳ್ಳಿ ಬಳಿ ಕಾರ್, ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿ, ಕಾರ್ ಪಲ್ಟಿ, ಮಗುವಿಗೆ ಗಾಯ..!

 ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿ ಸಮೀಪ, ತಟ್ಟಿಹಳ್ಳಿ ಬಳಿ ಕಾರ್ ಹಾಗೂ ಟ್ರಾಕ್ಟರ್ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದೆ. ಕಾರಲ್ಲಿದ್ದ ಒಂದು ಪುಟ್ಟ ಮಗುವಿಗೆ ಸಣ್ಣಪುಟ್ಟ ಗಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡಿನಿಂದ ಯಲ್ಲಾಪುರಕ್ಕೆ ತೆರಳುವ ಕಾರು ಹಾಗೂ ಯಲ್ಲಾಪುರ ಕಡೆಯಿಂದ ಮುಂಡಗೋಡಿನ ಕಡೆಗೆ ಬರುತ್ತಿದ್ದ ಟ್ರಾಕ್ಟರ್ ಗೆ ಮುಖಾಮುಕಿ ಡಿಕ್ಕಿಯಾಗಿದೆ. ಡಿಕ್ಕಿಯಾದ ಕಾರು ಸಿನಿಮಿಯ ರೀತಿಯಲ್ಲಿ ಪಲ್ಟಿಯಾಗಿದೆ. ಯಾವುದೇ ಪ್ರಾಣಾಪಾಯ ಆಗಿರೋ ಮಾಹಿತಿ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್...

Post
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!

ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!

 ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲನಿಯ ಟಿಬೇಟಿಗನೊಬ್ಬ ಡಿಜಿಟಲ್ ವಂಚಕರ ಜಾಲದಲ್ಲಿ ಅನಾಮತ್ತಾಗಿ ತಗಲಾಕ್ಕೊಂಡಿದ್ದಾನೆ. ಮುಂಬೈ ಪೊಲೀಸರ ಹೆಸರಿನಲ್ಲಿ ಬಂದ ಅದೊಂದು ವಾಟ್ಸ್ ಆಪ್ ಕರೆಗೆ ಥರಗುಟ್ಟಿ, ಬರೋಬ್ಬರಿ 1.61 ಕೋಟಿ ರೂಪಾಯಿಯನ್ನು ಅನಾಮತ್ತಾಗಿ ಕಳೆದುಕೊಂಡಿದ್ದಾನೆ. ಎಲ್ಲಾ ಕಳೆದುಕೊಂಡ ಮೇಲೆ ಸೈಬರ್ ಪೊಲೀಸರ ಮೊರೆ ಹೋಗಿದ್ದಾನೆ. ಪಾಪ, ಪೊಲೀಸ್ರು ಅದೇಷ್ಟೇ ಬಡಕೊಂಡ್ರೂ, ಇಂತಹ ವಂಚಕರ ಜಾಲದಲ್ಲಿ ನಿತ್ಯವೂ ಸಿಲುಕಿ ಒದ್ದಾಡುವವರ ಸಾಲಿನಲ್ಲಿ ಮತ್ತೊಬ್ಬ ನಿವೃತ್ತ ಟಿಬೇಟಿಯನ್ ಶಿಕ್ಷಕ ಸೇರಿಕೊಂಡಿದ್ದಾನೆ. ಆತ ಕ್ಯಾಂಪ್ ನಂಬರ್ 8 ರ ನಿವಾಸಿ..!...

Post
ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!

ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!

 ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭಾರೀ ಬೆಂಕಿ ಅವಘಡವಾಗಿದೆ. ಮನೆ ಮುಂದೆ ನಿಲ್ಲಿಸಿಟ್ಟಿದ್ದ ಆಟೋದ ಸಿಲಿಂಡರ್ ಸ್ಪೋಟವಾಗಿ ಬೆಂಕಿಯಿಂದ ಹೊತ್ತಿಉರಿದಿದೆ. ಮನೆಗೂ ಬೆಂಕಿ ತಗುಲಿ ಹಾನಿಯಾಗಿದೆ. ವೀರಭದ್ರಪ್ಪ ಹಡಪದ್ ಎಂಬುವವರಿಗೆ ಸೇರಿದ ಆಟೋ ರಿಕ್ಷಾಗೆ ಮಂಗಳವಾರ ಬೆಳಿಗ್ಗೆ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ತಗುಲಿದೆ. ಬೆಂಕಿಯ ರಭಸಕ್ಕೆ ಧಗ ಧಗನೇ ಹೊತ್ತಿ ಉರಿದಿದೆ, ಮನೆಗೂ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಣಾಪಾಯಗಳು ಸಂಭವಿಸಿಲ್ಲ.