Home ಅಪರಾಧ ಜಗತ್ತು

Category: ಅಪರಾಧ ಜಗತ್ತು

Post
ವರೂರು ಬಳಿ ಸರಣಿ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ..!

ವರೂರು ಬಳಿ ಸರಣಿ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ..!

 ಹುಬ್ಬಳ್ಳಿ ಸಮೀಪದ ವರೂರಿನ ವಿಆರ್ ಎಲ್ ಬಳಿ ರಾ.ಹೆದ್ದಾರಿ 4 ರಲ್ಲಿ, ಭೀಕರ ಸರಣಿ ಅಪಘಾತವಾಗಿದೆ‌. ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯವಾಗಿದೆ. ವರೂರಿನ VRL ಬಳಿ, ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ಕಂಡು ಮೃತ ವ್ಯಕ್ತಿಯನ್ನು ನೋಡಲು ಬಂದ ಐವರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಹೀಗಾಗಿ ಐವರಿಗೆ ಗಂಭೀರ ಗಾಯವಾಗಿದೆ. ಇದ್ರಲ್ಲಿ ಗಾಯಾಳುವನ್ನು ಸಾಗಿಸಲು ಬಂದಿದ್ದ ಅಂಬ್ಯುಲೆನ್ಸ್ ಸಿಬ್ಬಂದಿಗೂ ಗಾಯವಾಗಿದೆ....

Post
ಕೆಂದಲಗೇರಿಯಲ್ಲಿ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರು ವಶಕ್ಕೆ..!

ಕೆಂದಲಗೇರಿಯಲ್ಲಿ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರು ವಶಕ್ಕೆ..!

ಮುಂಡಗೋಡ: ತಾಲೂಕಿನ ಕೆಂದಲಗೇರಿಯಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಇಸ್ಪೀಟು ಆಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು, ಐವರ ಮೇಲೆ ಕೇಸು ದಾಖಲಿಸಲಾಗಿದೆ. ನಾಗರಾಜ ಹನುಮಂತ ಚವ್ಹಾಣ(45), ಆಶೋಕ ನಿಂಗಪ್ಪ ಮಂಜಣ್ಣನವರ್(28), ಫಕ್ಕೀರಾ ಸಾಕಪ್ಪ ಕಟ್ಟಿಮನಿ(30), ರುದ್ರಪ್ಪ ತಂದೆ ಗುಳುವಪ್ಪ ಸುಣಗಾರ(38) ಹಾಗೂ ಅಲಿ ಹುಸನ್‌ ಸಾಬ ಮುಜಾವರ್(35) ಎಂಬುವವರ ಮೇಲೆ ಕೇಸು ದಾಖಲಿಸಲಾಗಿದೆ. ಇದ್ರಲ್ಲಿ ಮೂವರು ಆರೋಪಿಗಳು ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ, ಇನ್ನುಳಿದವರು ಪರಾರಿಯಾಗಿದ್ದಾರೆ.

Post
ನ್ಯಾಸರ್ಗಿಯಲ್ಲಿ ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಓಸಿ ಅಡ್ಡೆಯ ಮೇಲೆ ಪೊಲೀಸರ ದಾಳಿ, ಓರ್ವ ವಶಕ್ಕೆ..!

ನ್ಯಾಸರ್ಗಿಯಲ್ಲಿ ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಓಸಿ ಅಡ್ಡೆಯ ಮೇಲೆ ಪೊಲೀಸರ ದಾಳಿ, ಓರ್ವ ವಶಕ್ಕೆ..!

ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದ ತಂಡ ದಾಳಿ ಮಾಡಿದೆ. ಮಟ್ಕಾ ದಂಧೆ ನಡೆಸುತ್ತಿದ್ದ ಓರ್ವನನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ ಪೊಲೀಸ್ರು. ನ್ಯಾಸರ್ಗಿಯ ಪ್ರಕಾಶ ಉದಯ ಹರಿಜನ(32) ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ. ಈತ ನ್ಯಾಸರ್ಗಿ ಗ್ರಾಮದ ಕಲಿಯಮ್ಮಾ ದೇವಸ್ಥಾನದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓಸಿ ಬರೆಯುತ್ತಿದ್ದ, ಅದೇ ವೇಳೆ ದಾಳಿ ಮಾಡಿರೋ ಪಿಐ ಸಿದ್ದಪ್ಪ ಸಿಮಾನಿ ಮತ್ತವರ ತಂಡ, ಮಟ್ಕಾ ನಡೆಸುತ್ತಿದ್ದವರ ಛಳಿ ಬಿಡಿಸಿದೆ. ದಾಳಿ ವೇಳೆ...

Post
ಪತಿಯ ಕಿರುಕುಳ ಆರೋಪ, ಬಾಚಣಕಿಯಲ್ಲಿ 6 ತಿಂಗಳ ಗರ್ಭಿಣಿ ನೇಣಿಗೆ ಶರಣು..!

ಪತಿಯ ಕಿರುಕುಳ ಆರೋಪ, ಬಾಚಣಕಿಯಲ್ಲಿ 6 ತಿಂಗಳ ಗರ್ಭಿಣಿ ನೇಣಿಗೆ ಶರಣು..!

ಮುಂಡಗೋಡ: ತಾಲೂಕಿನ ಬಾಚಣಕಿಯಲ್ಲಿ ಆರು ತಿಂಗಳ ಗರ್ಭಿಣಿ ನೇಣಿಗೆ ಶರಣಾಗಿರೋ ಘಟನೆ ನಡೆದಿದೆ. ಚೇತನಾ ಗುತ್ತೆಪ್ಪ ಸಣ್ಣಮನಿ(32) ನೇಣಿಗೆ ಶರಣಾದ ಗರ್ಭಿಣಿಯಾಗಿದ್ದು ಪತಿಯ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರೋ ಆರೋಪ ಕೇಳಿ ಬಂದಿದೆ. ಪತಿ ಗುತ್ತೆಪ್ಪ ಸಣ್ಣಮನಿ ಎಂಬುವವನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ಮಕ್ಕಳ ತಾಯಿಯಾಗಿದ್ದ ಚೇತನಾ, ಈಗ ಮತ್ತೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಆದ್ರೆ ಪತಿ ಗುತ್ತೆಪ್ಪ ಮಾನಸಿಕ ಹಾಗೂ ದೈಹಿಕ ಕಿರುಕುಳ‌ನೀಡುತ್ತಿದ್ದ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಆರೋಪಿಸಲಾಗಿದ್ದು,...

Post
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಗೋಮಾಂಸ ಸಾಗಿಸುತ್ತಿದ್ದ ವಾಹನ ಸಮೇತ, ಓರ್ವ ವಶಕ್ಕೆ..!

ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಗೋಮಾಂಸ ಸಾಗಿಸುತ್ತಿದ್ದ ವಾಹನ ಸಮೇತ, ಓರ್ವ ವಶಕ್ಕೆ..!

ಮುಂಡಗೋಡ:ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ಬೆಳ್ಳಂ ಬೆಳಿಗ್ಗೆ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದೆ. ಅಕ್ರಮವಾಗಿ ಬಂಕಾಪುರದಿಂದ ಗೋಮಾಂಸ ಸಾಗಾಟ ಮಾಡುತ್ತಿದ್ದ ಓಮಿನಿ ವಾಹನ ಸಮೇತ ಓರ್ವ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಟಿಬೇಟಿಯನ್ ಕಾಲೋನಿಗೆ..? ಇಂದು ಬೆಳಿಗ್ಗೆ, ಹಾವೇರಿ ಜಿಲ್ಲೆಯ ಬಂಕಾಪುರದಿಂದ ಓಮಿನಿ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದಲ್ಲಿ ಬಂಕಾಪುರ ರಸ್ತೆಯಲ್ಲಿ ದಾಳಿ ಮಾಡಿರೋ ಪೊಲೀಸರು, ಬರೋಬ್ಬರಿ 2 ಕ್ವಿಂಟಾಲ್ ಗೋಮಾಂಸ ವಶಕ್ಕೆ ಪಡೆಸಿಕೊಂಡಿದ್ದಾರೆ. ಜೊತೆಗೆ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಿ ಸಮೇತ...

Post
40 ದಿನದ ಕಂದಮ್ಮನನ್ನೇ ಕೊಲೆ ಮಾಡಲು ಯತ್ನಿಸಿದ್ಲಾ ತಾಯಿ, ಆಸ್ಪತ್ರೆ ಕಿಟಕಿಯಿಂದ ಎಸೆದ ಮಗು ಏನಾಯ್ತು..?

40 ದಿನದ ಕಂದಮ್ಮನನ್ನೇ ಕೊಲೆ ಮಾಡಲು ಯತ್ನಿಸಿದ್ಲಾ ತಾಯಿ, ಆಸ್ಪತ್ರೆ ಕಿಟಕಿಯಿಂದ ಎಸೆದ ಮಗು ಏನಾಯ್ತು..?

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಪಹರಣವಾಗಿದೆ ಅಂತಾ ಸುಳ್ಳು ಕತೆ ಕಟ್ಟಿದ್ದ ಚಾಲಾಕಿ ಹೃದಯಹೀನ ತಾಯಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕಳ್ಳತನದ ಡ್ರಾಮಾ..? ಕಳೆದ ಸೋಮವಾರ ಕಿಮ್ಸ್ ನಲ್ಲಿ ಮಗುವಿನ ಕಳ್ಳತನವಾಗಿದೆ, ಯಾರೋ ಮಗುವನ್ನು ನನ್ನ ಕೈಯಿಂದ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ ಅಂತಾ ದೂರು ನೀಡಿದ್ದಳು ಮಗುವಿನ ತಾಯಿ. ಹೀಗಾಗಿ, ಪ್ರಕರಣ ಭಾರೀ ಸದ್ದು ಮಾಡಿತ್ತು. ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ವಿದ್ಯಾನಗರ ಠಾಣೆಯ ಪೊಲೀಸರಿಗೆ, ಮಗು ಕಾಣೆಯಾದ ಮರುದಿನವೇ...

Post
ಪಂಪಸೆಟ್ ಕೇಬಲ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ..!

ಪಂಪಸೆಟ್ ಕೇಬಲ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ..!

ಬನವಾಸಿ: ಪಂಪಸೆಟ್ ಗೆ ಅಳವಡಿಸಿದ್ದ ವಿದ್ಯುತ್ ಕೇಬಲ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬನವಾಸಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮತ್ತಿಹಳ್ಳಿಯ ಸೋಮಪ್ಪ ನೀಲಪ್ಪ ಒಡೆಯನಪುರ(28), ಬೆಟಕೆರೂರು ಗ್ರಾಮದ ಶಿವರಾಜ್ ಗುತ್ಯಪ್ಪ ಮಂತಿಕೊಪ್ಪ(22) ಎಂಬುವ ಆರೋಪಿಗಳನ್ನು ಬಂಧಿಸಲಾಗಿದೆ. ದಿನಾಂಕ: 16-06-2022 ರಂದು ಶಿರಸಿ ತಾಲೂಕ ಮೊಗವಳ್ಳಿ ಗ್ರಾಮದ ಸದಾನಂದ ಮಾದೇವ ಹಳ್ಳಕೊಪ್ಪ ಎಂಬುವವರ ಜಮೀನಿನ ಪಕ್ಕದಲ್ಲಿರುವ ವರದಾ ನದಿಯಿಂದ ಮೋಟಾರ ಮಶೀನ್ ಮೂಲಕ ನೀರನ್ನು ಉಪಯೋಗಿಸಿಕೊಳ್ಳಲು ಸುಮಾರು 250 ಅಡಿ ಉದ್ದದ ಮೋಟಾರ...

Post
ಕಲಕೇರಿ ಬಳಿ ಬೈಕ್-ಟಿಪ್ಪರ್ ನಡುವೆ ಮುಖಾಮುಕಿ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ..!

ಕಲಕೇರಿ ಬಳಿ ಬೈಕ್-ಟಿಪ್ಪರ್ ನಡುವೆ ಮುಖಾಮುಕಿ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ಕಲಕೇರಿ ಬ್ರಿಡ್ಜ್ ಬಳಿ ರಸ್ತೆ ಅಪಘಾತವಾಗಿದೆ. ಬೈಕ್ ಹಾಗೂ ಟಿಪ್ಪರ್ ನಡುವೆ ಮುಖಾಮುಕಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕರಗಿನಕೊಪ್ಪ ತಾಂಡಾದ ಶಿವಾಜಿ ನಾಗಪ್ಪ ಲಮಾಣಿ(32) ಎಂಬುವ ಯುವಕನೇ ಗಂಭೀರ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಕಟ್ಟಿಗೆ ತುಂಬಿಕೊಂಡು ಹೊರಟಿದ್ದ ಟಿಪ್ಪರ್, ಬೈಕ್ ಗೆ ಡಿಕ್ಕಿಯಾಗಿದೆ‌. ಪರಿಣಾಮ ಬೈಕ್ ನಲ್ಲಿದ್ದ ಶಿವಾಜಿಗೆ ಗಂಭೀರ ಗಾಯವಾಗಿದ್ದು ಕಾಲು ಕಟ್ ಆಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ....

Post
ಕಾರವಾರ ರೈಲ್ವೆ ಪೊಲೀಸರ ಕಾರ್ಯಾಚರಣೆ, 2 ಕೋಟಿ ಹವಾಲ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ..!

ಕಾರವಾರ ರೈಲ್ವೆ ಪೊಲೀಸರ ಕಾರ್ಯಾಚರಣೆ, 2 ಕೋಟಿ ಹವಾಲ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ..!

ಕಾರವಾರ: ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಹವಾಲ ಹಣ ಸಾಗಟ ಮಾಡುತ್ತಿದ್ದ ಆರೋಪಿಯನ್ನು ಕಾರವಾರ ರೈಲ್ವೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಕಾರವಾರ ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ದಾಳಿ ನಡೆಸಿರೋ ಪೊಲೀಸರು, ಮುಂಬೈನಿಂದ ಮಂಗಳೂರಿಗೆ ಹವಾಲ ಹಣ ಸಾಗಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಅಲಿಯಾಸ ಚೇನ್ ಸಿಂಗ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆತನಿಂದ ಎರಡು ಕೋಟಿ ಹಣ ವಶಕ್ಕೆ ಪಡೆದಿದ್ದಾರೆ. ಕಾರವಾರ ಗ್ರಾಮೀಣ ಠಾಣೆಗೆ ಆರೋಪಿಯನ್ನು ರೈಲ್ವೇ ಪೊಲೀಸರು...

Post
ಕೌಟುಂಬಿಕ ಕಲಹ ಹಿನ್ನೆಲೆ, ಕಲ್ಲಿನಿಂದ ಜಜ್ಜಿ ಅಣ್ಣ ತಂಗಿಯ ಬರ್ಬರ ಹತ್ಯೆ..!

ಕೌಟುಂಬಿಕ ಕಲಹ ಹಿನ್ನೆಲೆ, ಕಲ್ಲಿನಿಂದ ಜಜ್ಜಿ ಅಣ್ಣ ತಂಗಿಯ ಬರ್ಬರ ಹತ್ಯೆ..!

ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಕಲ್ಲಿನಿಂದ ಜಜ್ಜಿ ಅಣ್ಣ ಹಾಗೂ ತಂಗಿಯ ಬರ್ಭರ ಹತ್ಯೆ ಮಾಡಿರೊ ಘಟನೆ, ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ರಾಜಶ್ರೀ ಶಂಕರಗೌಡ ಬಿರಾದಾರ್ (40), ನಾನಾಗೌಡ ಯರಗಲ್ (45) ಕೊಲೆಗೀಡಾದ ಅಣ್ಣ ಹಾಗೂ ತಂಗಿಯಾಗಿದ್ದಾರೆ. ರಾಜಶ್ರೀ ಪತಿ ಶಂಕರಗೌಡ ಹಾಗೂ ಇತರರು ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ. ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ಹೊರ ಭಾಗದಲ್ಲಿ ಘಟನೆ ನಡೆದಿದೆ‌. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!