Home ಅಪರಾಧ ಜಗತ್ತು

Category: ಅಪರಾಧ ಜಗತ್ತು

Post
ಮುಂಡಗೋಡ ಪೊಲೀಸಪ್ಪನ ವಿರುದ್ಧ 420 ಕೇಸ್, ಆತ ಹಾಸನದ ಯುವತಿಗೆ ಹಾಕಿದ್ದು, 18 ಲಕ್ಷದ ನಾಮ..!

ಮುಂಡಗೋಡ ಪೊಲೀಸಪ್ಪನ ವಿರುದ್ಧ 420 ಕೇಸ್, ಆತ ಹಾಸನದ ಯುವತಿಗೆ ಹಾಕಿದ್ದು, 18 ಲಕ್ಷದ ನಾಮ..!

ಇದು ಮುಂಡಗೋಡ ಪೊಲೀಸಪ್ಪನ ಘನಂಧಾರಿ ಕೆಲಸ. ಯುವತಿಯೋರ್ವಳಿಗೆ ಅನಾಮತ್ತಾಗಿ ಲಕ್ಷ ಲಕ್ಷ ಹಣ ಮುಂಡಾಮೋಚಿದ ನಯವಂಚಕತನದ ಸ್ಟೋರಿ. ಈತನಿಗೆ ಈ ಹಿಂದೆಯೇ ಇಲ್ಲಿನ ಇಲಾಖೆಯ ಹಿರಿಯರು ಒಂದಿಷ್ಟು ಕಿವಿ ಹಿಂಡಿದ್ದಿದ್ರೆ ಬಹುಶಃ ಇವತ್ತು ಇಡೀ ಇಲಾಖೆಗೆ ಆಗಿರೋ ಮುಜುಗರ ಒಂದಿಷ್ಟು ತಪ್ಪುತ್ತಿತ್ತೋ ಏನೋ. ಆದ್ರೆ, ಯಾರಂದ್ರೆ ಯಾರೂ ಈತನ ಅಡ್ನಾಡಿ ಕೆಲಸಗಳ ವಿರುದ್ಧ ಧನಿ ಎತ್ತಲೇ ಇಲ್ಲ‌. ಹೀಗಾಗಿ ಇವತ್ತು ಅದೊಂದು ಅಮಾಯಕ ಹೆಣ್ಣು ಜೀವ ಮುಂಡಗೋಡ ಠಾಣೆಯ ಮೆಟ್ಟಿಲೇರಿ FIR ದಾಖಲಿಸಿದೆ. ತನಗೆ ಆಗಿರೋ ಅನ್ಯಾಯದ...

Post
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಬಂಧನ! ಯಾಕೆ ಗೊತ್ತಾ..?

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಬಂಧನ! ಯಾಕೆ ಗೊತ್ತಾ..?

ಶಿವಮೊಗ್ಗ : ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಬಂಧನವಾಗಿದೆ. ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿರುವ ಅರುಣ್ ಕುಗ್ವೆ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು, ಮುಂದಿನ 5 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಅರುಣ್ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ, ಇದೇ ಜೂ. 28 ಕ್ಕೆ ಅರುಣ್ ಕುಗ್ವೆ ಮದುವೆ ಫಿಕ್ಸ್ ಆಗಿತ್ತು. ಆದ್ರೆ, ಅದಕ್ಕೂ ಮೊದಲೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ಪೊಲೀಸರಿಂದ ಬಂಧನವಾಗಿದೆ. ಮಹಿಳೆಯೊಬ್ಬರಿಗೆ ಬಳಸಿಕೊಂಡಿರುವ ಆರೋಪ ಹೊತ್ತಿರೋ ಅರುಣ್, ತನಗೆ ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂದು ಮಹಿಳೆ...

Post
ಭಟ್ಕಳದಲ್ಲಿ ಮತ್ತೋರ್ವ ಶಂಕಿತ ಉಗ್ರನಿಗಾಗಿ ATS ಅಧಿಕಾರಿಗಳಿಂದ ಶೋಧ, ಶಂಕಿತನ ಮನೆಗೆ ನೋಟೀಸ್..!

ಭಟ್ಕಳದಲ್ಲಿ ಮತ್ತೋರ್ವ ಶಂಕಿತ ಉಗ್ರನಿಗಾಗಿ ATS ಅಧಿಕಾರಿಗಳಿಂದ ಶೋಧ, ಶಂಕಿತನ ಮನೆಗೆ ನೋಟೀಸ್..!

ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೊಬ್ಬ ಶಂಕಿತ (Suspected Terrorist) ಮಹಾರಾಷ್ಟ್ರದ ಉಗ್ರ ನಿಗ್ರಹ ಪಡೆ (ಎಟಿಎಸ್) ತೀವ್ರ ಶೋಧ ನಡೆಸಿದ್ದು, ಶಂಕಿತ ಉಗ್ರನ ನಿವಾಸಕ್ಕೆ ATS ಅಧಿಕಾರಿಗಳು ನೋಟಿಸ್‌ ಅಂಟಿಸಿದ್ದು, ಶಂಕಿತನ ಬಂಧನಕ್ಕೆ ಉತ್ತರ ಕನ್ನಡ ಪೊಲೀಸರ ಸಹಕಾರ ಕೋರಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಲ ವರ್ಷಗಳ ಹಿಂದೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಭಟ್ಕಳ ಮೂಲದ ವ್ಯಕ್ತಿಯನ್ನು ಜೂನ್ 21ಕ್ಕೆ ಹಾಜರು ಪಡಿಸಲು ಪುಣೆ ಜಿಲ್ಲಾ ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪುಣೆಯ ಅಧಿಕಾರಿಗಳ ತಂಡ ಭಟ್ಕಳದಲ್ಲಿ ತಲಾಶ್...

Post
ಬಿಸಿಯೂಟದ ಸಿಬ್ಬಂದಿ ನೇಮಕಕ್ಕೂ ಫಿಕ್ಸ್ ಆಯ್ತಾ ರೇಟು..? ಮುಂಡಗೋಡ ತುಂಬ, ಪ.ಪಂ. ಸದಸ್ಯೆ ಆಡಿರೋ ಮಾತಿನದ್ದೇ ಘಾಟು..!

ಬಿಸಿಯೂಟದ ಸಿಬ್ಬಂದಿ ನೇಮಕಕ್ಕೂ ಫಿಕ್ಸ್ ಆಯ್ತಾ ರೇಟು..? ಮುಂಡಗೋಡ ತುಂಬ, ಪ.ಪಂ. ಸದಸ್ಯೆ ಆಡಿರೋ ಮಾತಿನದ್ದೇ ಘಾಟು..!

 ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಬಿಸಿಯೂಟದ ನೌಕರಿ ಬಿಕರಿಗಿದೆಯಾ..? ಇಂತಹದ್ದೊಂದು ಅನುಮಾನ ಅದೊಂದು ಆಡಿಯೋ ಕೇಳಿದ ಎಂತವ್ರಿಗೂ ಮೂಡದೇ ಇರಲ್ಲ. ಮುಂಡಗೋಡ ಪಟ್ಟಣ ಪಂಚಾಯತಿಯ ಸದಸ್ಯೆಯೊಬ್ಬರು ಮಾತನಾಡಿದ್ದು ಎನ್ನಲಾದ ಆಡಿಯೋ ಸದ್ಯ ಊರ ತುಂಬಾ ವೈರಲ್ ಆಗಿದೆ. ಖುಲ್ಲಂ ಖುಲ್ಲಾ ದಂಧೆನಾ..? ಅಷ್ಟಕ್ಕೂ, ಪಟ್ಟಣ ಪಂಚಾಯತಿ ವ್ಯಾಪ್ತಿಯ ಎರಡು ಶಾಲೆಗಳಿಗೆ ಅವಶ್ಯವಿರುವ ಬಿಸಿಯೂಟದ ಸಿಬ್ಬಂದಿಯ ನೇಮಕದಲ್ಲಿ ಪಟ್ಟಣ ಪಂಚಾಯತಿಯ ಆ ಸದಸ್ಯೆ ಖುಲ್ಲಂ ಖುಲ್ಲಾ ವ್ಯವಹಾರಕ್ಕೆ ಇಳಿದು ಬಿಟ್ರಾ..? ಬಿಸಿಯೂಟದ ಸಿಬ್ಬಂದಿಗಳ ನೇಮಕಕ್ಕೆ, ಬರೋಬ್ಬರಿ ತಲಾ 50...

Post
ಶಿರಸಿ ದಾಸನಕೊಪ್ಪದಲ್ಲಿ ಭಯೋತ್ಪಾದನೆ ನಂಟು; ಓರ್ವನನ್ನು ವಶಕ್ಕೆ ಪಡೆದ NIA

ಶಿರಸಿ ದಾಸನಕೊಪ್ಪದಲ್ಲಿ ಭಯೋತ್ಪಾದನೆ ನಂಟು; ಓರ್ವನನ್ನು ವಶಕ್ಕೆ ಪಡೆದ NIA

ಶಿರಸಿ: ಭಯೋತ್ಪಾದನೆಯ ನಂಟಿನ ಜಾಲ ಭೇದಿಸಲು ಶಿರಸಿಗೆ ಬಂದಿಳಿದ ಎನ್‌ಐಎ ಅಧಿಕಾರಿಗಳು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ದಾಸನಕೊಪ್ಪದ ಅಬ್ದುಲ್ ಸಕೂರ್ ಎನ್‌ಐಎ ವಶದಲ್ಲಿರುವ ಆರೋಪಿ. ಈತನು ಆನ್ ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್‌ ಪೋರ್ಟನಲ್ಲಿ ನಕಲಿ ದಾಖಲೆ ನೀಡಿರುವ ಆರೋಪವಿತ್ತು. ಈ ನಡುವೆ ದುಬೈನಿಂದ ಬಕ್ರೀದ್ ಹಬ್ಬಕ್ಕೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ದಾಸನಕೊಪ್ಪಕ್ಕೆ ಅಬ್ದುಲ್ ಸಕೂರ್‌ ಆಗಮಿಸಿದ್ದ. ಈ ವೇಳೆ ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಎನ್‌ಐಎ ತಂಡವು...

Post
ದಾಸನಕೊಪ್ಪದ ಕಾಡಲ್ಲಿ ಇಂದೂರು ಹುಡುಗನ ಭಯಾನಕ ಹತ್ಯೆ, ಖಾಸಾ ಗೆಳೆಯನಿಂದ್ಲೇ ಮರ್ಡರ್ ಆದ್ನಾ ಮಲ್ಲಪ್ಪ..?

ದಾಸನಕೊಪ್ಪದ ಕಾಡಲ್ಲಿ ಇಂದೂರು ಹುಡುಗನ ಭಯಾನಕ ಹತ್ಯೆ, ಖಾಸಾ ಗೆಳೆಯನಿಂದ್ಲೇ ಮರ್ಡರ್ ಆದ್ನಾ ಮಲ್ಲಪ್ಪ..?

ಇಂದೂರಿನ ಹುಡುಗನೊಬ್ಬ ಬನವಾಸಿಯ ಕಾಡಲ್ಲಿ ಭಯಾನಕವಾಗಿ ಹತ್ಯೆಯಾಗಿದ್ದಾನೆ.. ಟ್ರ್ಯಾಕ್ಟರ್ ಸಾಲದ ಕಂತು ತುಂಬು ಅಂತಾ ಹೇಳಲು ಹೋದವನು ಹೆಣವಾದ್ನಾ..? ನಂಬಿಗಸ್ಥನಿಂದಲೇ ದ್ರೋಹ ಕಂಡು ಬನವಾಸಿಯ ಕಾಡಲ್ಲಿ ಬೆಂದು ಹೋದ್ನಾ..?ಹೀಗೆ ಕೊಳೆತು ದುರ್ನಾತ ಬೀರುತ್ತಿರೊ ಹುಡುಗನ ಶವದ ಸುತ್ತ ಹಲವು ಪ್ರಶ್ನೆಗಳು ಏಳುತ್ತಿವೆ. ಅಸಲು, ಮಲ್ಲಪ್ಪನ ಖಾಸಾ ಗೆಳೆಯ ಆರೀಫನೇ ಮರ್ಡರ್ ಮಾಡಿದ್ನಾ..? ಗೊತ್ತಿಲ್ಲ. ಆದ್ರೆ, ಅಂತಹ ಅನುಮಾನಗಳು ಬನವಾಸಿ ಪೊಲೀಸರಿಗಿದೆ. ಯಸ್, ಶಿರಸಿ ತಾಲೂಕಿನ ದಾಸನಕೊಪ್ಪ ಸಮೀಪದ ದನಗನಹಳ್ಳಿಯ ಆರೀಫ್ ಹುಸೇನ್ ಬಾಳಂಬೀಡ (30) ಎಂಬಾತ, ಇಂದೂರಿನ...

Post
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಬಾಚಣಕಿ ಸಮೀಪ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!

ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಬಾಚಣಕಿ ಸಮೀಪ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!

ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಓರ್ವ ಆರೋಪಿಯನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಬಾಚಣಕಿ ಸಮೀಪದ ಹುಬ್ಬಳ್ಳಿ ರಸ್ತೆಯಲ್ಲಿ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಅಂದಹಾಗೆ, ಖಾಕಿಗಳ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವನು ಯಲ್ಲಾಪುರದ ಮಚ್ಚಿಗಲ್ಲಿಯ 22 ವರ್ಷದ ರಿಹಾನ್ ಹಸನ್ ಶೇಖ್ ಎಂಬಾತ. ಬರೋಬ್ಬರಿ 2kg ಗಾಂಜಾ..! ಅಂದಹಾಗೆ, ಪಕ್ಕಾ ಮಾಹಿತಿಗಳ ಆಧಾರದಲ್ಲಿ ಅಕ್ರಮಿಯ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಯಲ್ಲಾಪುರದ ಮಚ್ಚಿಗಲ್ಲಿಯ ರಿಹಾನ್...

Post
ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೆಸ್ಟ್, ಕೊಲೆ ಕೇಸಲ್ಲಿ ಬಂಧಿಸಿದ ಪೊಲೀಸರು..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೆಸ್ಟ್, ಕೊಲೆ ಕೇಸಲ್ಲಿ ಬಂಧಿಸಿದ ಪೊಲೀಸರು..!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ ಆರಸ್ಟ್ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನರವರನ್ನ ಬಂಧಿಸಲಾಗಿದೆ. ಮೈಸೂರಿನಲ್ಲಿ ನಟ ದರ್ಶನರವರನ್ನು ಪೊಲೀಸರು ಬಂಧಿಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ಆರೆಸ್ಟ್ ಮಾಡಲಾಗಿದೆ ಅನ್ನೋ ಮಾಹಿತಿ ಬರ್ತಿದೆ.

Post
ಅರಶಿಣಗೇರಿಯ ವ್ಯಕ್ತಿ, ಶಿಗ್ಗಾವಿ ತಾಲೂಕಿನ ಗದ್ದೆಯಲ್ಲಿ ಹೆಣವಾದ, ಈ ಸಾವಿನ ಸುತ್ತ ಅನುಮಾನದ ಹುತ್ತ..!

ಅರಶಿಣಗೇರಿಯ ವ್ಯಕ್ತಿ, ಶಿಗ್ಗಾವಿ ತಾಲೂಕಿನ ಗದ್ದೆಯಲ್ಲಿ ಹೆಣವಾದ, ಈ ಸಾವಿನ ಸುತ್ತ ಅನುಮಾನದ ಹುತ್ತ..!

ಮುಂಡಗೋಡ: ಕೆಲಸಕ್ಕೆಂದು ಹೋಗಿದ್ದ ಅರಶಿಣಗೇರಿಯ ವ್ಯಕ್ತಿಯೋರ್ವ ಹೆಣವಾಗಿದ್ದಾ‌ನೆ. ಶಿಗ್ಗಾವಿ ತಾಲೂಕಿನ ಕುನ್ನೂರು ಬಳಿಯ ಮಮದಾಪುರ ತಾಂಡಾದ ಗದ್ದೆಯಲ್ಲಿ ಶವವಾಗಿದ್ದಾನೆ. ವಿದ್ಯುತ್ ಕಂಬ ಏರಿದ್ದವನಿಗೆ ವಿದ್ಯುತ್ ತಗುಲಿ ಸಾವಿಗೆ ಕಾರಣವಾಗಿದೆ ಅಂತಾ ಹೇಳಲಾಗ್ತಿದೆ. ಆದ್ರೆ, ಕುಟುಂಬಸ್ತರು ಈ ಸಾವಿನಲ್ಲಿ ಅನುಮಾನವಿದೆ ಅಂತಾ ಆರೋಪಿಸುತ್ತಿದ್ದಾರೆ. ಅಂದಹಾಗೆ, ಮೈಲಾರಗೌಡ ನಿಂಗನಗೌಡ ಪಾಟೀಲ್ (36), ಎಂಬುವವನೇ ಸಾವನ್ನಪ್ಪಿರೋ ವ್ಯಕ್ತಿಯಾಗಿದ್ದಾನೆ. ಈತ ನಿನ್ನೆ ಅಂದ್ರೆ ಬುಧವಾರ, ಅರಶಿಣಗೇರಿಯಿಂದ ಮಮದಾಪುರ ಬಳಿಯ ಗದ್ದೆಗೆ ಕೆಲಸಕ್ಕೆಂದು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಅದ್ಯಾವ ಕಾರಣಕ್ಕೊ ಏನೋ ವಿದ್ಯುತ್...

Post
ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ದಂಧೆ, ದೇಶಪಾಂಡೆ ನಗರದಲ್ಲಿ ಓರ್ವನನ್ನು ವಶಕ್ಕೆ ಪಡೆದ್ರಾ ಪೊಲೀಸ್ರು..?

ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ದಂಧೆ, ದೇಶಪಾಂಡೆ ನಗರದಲ್ಲಿ ಓರ್ವನನ್ನು ವಶಕ್ಕೆ ಪಡೆದ್ರಾ ಪೊಲೀಸ್ರು..?

ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ಹಾವಳಿ ಜೋರಾಗಿದೆಯಾ..? ಸಂಜೆ ಮುಂಡಗೋಡ ಪೊಲೀಸರು ಪಟ್ಟಣದ ದೇಶಪಾಂಡೆ ನಗರದಲ್ಲಿ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ ಅನ್ನೊ ಮಾಹಿತಿ ಬಂದಿದೆ. ಪೊಲೀಸರ ವಶದಲ್ಲಿರೋ ಆರೋಪಿಯಿಂದ ಎಷ್ಟು ಹಣ ವಶಕ್ಕೆ ಪಡೆಯಲಾಗಿದೆ..? ವಸ್ತುಗಳು ಏನೇನು..? ಎಲ್ಲ ಮಾಹಿತಿಗಳು ಇನ್ನಷ್ಟೆ ತಿಳಿದು ಬರಬೇಕಿದೆ. ಅಸಲು, ಈ ಕೇಸು ಪೊಲೀಸ್ ಠಾಣೆಯ ಟೇಬಲ್ಲಿನ ಮೇಲೆ ಖಡಕ್ಕಾದ ಪೈಲಾಗಿ ರೂಪಗೊಳ್ಳತ್ತೋ ಅಥವಾ ನಾಮಕೆವಾಸ್ತೆ ಚಕ್ಕಂಬಕ್ಕಳ ಹಾಕಿ ಕೂರೋ ವ್ಯವಸ್ಥೆನಾ ಕಾದು ನೋಡಬೇಕಿದೆ. ಗಣಪತಿ...