Home ಅಪಘಾತ

Category: ಅಪಘಾತ

Post
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?

ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?

 ಮುಂಡಗೋಡ ತಾಲೂಕಿನಾಧ್ಯಂತ ಸೋಮವಾರ ಸುರಿದ ಭಾರೀ ಮಳೆಗೆ ವಿಪರೀತ ಅವಾಂತರಗಳು ಸೃಷ್ಟಿಯಾಗಿವೆ. ಸೋಮವಾರದಿಂದ ತಾಲೂಕಿನ ಹಲವು ಕಡೆ ಕೆಲ ದುರಂತಗಳೂ ನಡೆದಿವೆ. ಅತ್ತಿವೇರಿ ಗೌಳಿ ದಡ್ಡಿ ಬಳಿ ಹಾಗೂ ಶಿರಸಿ ರಸ್ತೆಯ ಹಿರೇಹಳ್ಳಿ ಬಳಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಗೌಳಿಗರ ಹದಿನೈದಕ್ಕೂ ಹೆಚ್ಚು ಎಮ್ಮೆಗಳು ನೀರು ಪಾಲಾಗಿವೆ ಅನ್ನೋ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಕೆಲವು ಎಮ್ಮೆಗಳ‌ ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಹಲವು ಎಮ್ಮೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ ಅಂತಾ ಹೇಳಲಾಗಿದೆ. ಅತ್ತಿವೇರಿ ಗೌಳಿದಡ್ಡಿಯಲ್ಲಿ..! ಅಂದಹಾಗೆ, ಸೋಮವಾರ...

Post
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ

ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ

 ಮುಂಡಗೋಡ ತಾಲೂಕಿನ ಸಾಲಗಾವಿಯಲ್ಲಿ ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಸಾಲಗಾವಿಯ ತುಂಬರ್ಗಿ ರಸ್ತೆಯಲ್ಲಿರೋ ಗೌಡನಕಟ್ಟಿ ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಾಲಕನ ಶವ ಹೊರ ತೆಗೆದಿದ್ದಾರೆ. ಅಂದಹಾಗೆ, ಸಾಲಗಾಂವ್ ಗ್ರಾಮದ ಪರಶುರಾಮ ಹನ್ಮಂತಪ್ಪ ದುರಮುರ್ಗಿ (15) ಎಂಬುವ ಒಂಬತ್ತನೇ ತರಗತಿ ವಿದ್ಯಾರ್ಥಿಯೇ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈತ ನಿನ್ನೆ ಮದ್ಯಾಹ್ನದಿಂದಲೇ ಮನೆಯಿಂದ ಹೊರಟವನು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ, ಗಾಬರಿಗೊಂಡ ಪೋಷಕರು ಎಲ್ಲ ಕಡೆ ಹುಡುಕಿದ್ದಾರೆ. ಸಿಗದೇ ಇದ್ದಾಗ...

Post
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!

ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!

ಮುಂಡಗೋಡ: ಮಳೆಯ ಅರ್ಭಟ ನೋಡಲು ಹೋದ ಒಂಬತ್ತನೇ ತರಗತಿಯ ಬಾಲಕನೋರ್ವ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಮುಂಡಗೋಡ ತಾಲೂಕಿನ ಸಾಲಗಾಂವ್ ಸಮೀಪದ ತುಂಬರ್ಗಿ ರಸ್ತೆಯಲ್ಲಿರೋ ಗೌಡನಕಟ್ಟಿ ಕೆರೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಾಲಗಾಂವ್ ಗ್ರಾಮದ ಪರಶುರಾಮ ಹನ್ಮಂತಪ್ಪ ದುರಮುರ್ಗಿ (15) ಎಂಬುವ ಒಂಬತ್ತನೇ ತರಗತಿ ವಿದ್ಯಾರ್ಥಿಯೇ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಈತ ನಿನ್ನೆ ಮದ್ಯಾಹ್ನದಿಂದಲೇ ಮನೆಯಿಂದ ಹೊರಟವನು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ, ಗಾಬರಿಗೊಂಡ ಪೋಷಕರು ಎಲ್ಲ ಕಡೆ ಹುಡುಕಿದ್ದಾರೆ. ಸಿಗದೇ ಇದ್ದಾಗ ರಾತ್ರಿ ಮುಂಡಗೋಡ ಠಾಣೆಗೆ ಬಂದು...

Post
ರಾತ್ರಿಯಿಡೀ ಸುರಿದ ಮಳೆ: ಚರಂಡಿಯಲ್ಲಿ ಕೊಚ್ಚಿ ಹೋದ ಬಾಲಕ..!

ರಾತ್ರಿಯಿಡೀ ಸುರಿದ ಮಳೆ: ಚರಂಡಿಯಲ್ಲಿ ಕೊಚ್ಚಿ ಹೋದ ಬಾಲಕ..!

 ಹಾವೇರಿ ಜಿಲ್ಲೆಯಾದ್ಯಂತ ರಾತ್ರಿ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಹಾವೇರಿ ನಗರದಲ್ಲಿ ಇರುವ ಹತ್ತಾರು ರಸ್ತೆಗಳು ಕೆರೆಯಂತಾಗಿವೆ. ಹೀಗಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಾಲಕನೋರ್ವ ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಘಟನೆ ನಡೆದಿದೆ. ಹಾವೇರಿ ಎಸ್.ಪಿ ಕಚೇರಿ ಮುಂಭಾಗದಲ್ಲಿಯೇ ಘಟನೆ ನಡೆದಿದ್ದು, ನೀವೆದನ್ ಬಸವರಾಜ್ ಗುಡಗೇರಿ (12) ಕೊಚ್ಚಿ ಹೋದ ಬಾಲಕನಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಬಾಲಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಬಾಲಕನ ಸಂಬಂಧಿಗಳಿಂದ...

Post
ಮೀನು ಹಿಡಿಯಲು ಹೋದ ಇಬ್ಬರು ನೀರುಪಾಲು..!

ಮೀನು ಹಿಡಿಯಲು ಹೋದ ಇಬ್ಬರು ನೀರುಪಾಲು..!

ಶಿಗ್ಗಾವಿ: ಮೀನು ಹಿಡಿಯಲು ಹೋಗಿದ್ದ ಇಬ್ಬರು ವ್ಯಕ್ತಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಶಿಗ್ಗಾವಿ ಪಟ್ಟಣದ ಹಿರೇಕೆರೆಯಲ್ಲಿ ಮಂಗಳವಾರ ಸಂಜೆ ಜರುಗಿದೆ. ಮೃತ ವ್ಯಕ್ತಿಗಳನ್ನ ಶಿಗ್ಗಾವಿ ಪಟ್ಟಣದ ಸಾಲಗೇರಿ ಓಣಿಯ ಹಜರತ ಅಲಿ ಇಬ್ರಾಹಿಂ ಮುಕ್ಕೇರಿ (27), ಅಕ್ಸರ್ ಹಿಮಾಮ್ ಖಾಸೀಮ್ ಸುಲ್ತಾನಖಾನವರ (35) ಎಂದು ಗುರುತಿಸಲಾಗಿದೆ. ಮೀನು ಹಿಡಿಯುವಾಗ ಆಯತಪ್ಪಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿಗಳ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದು ಮೃತ ವ್ಯಕ್ತಿಗಳ...

Post
ಸಿಂಗನಳ್ಳಿಯ ಹುಲಿಹೊಂಡ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ, ಐದು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ..!

ಸಿಂಗನಳ್ಳಿಯ ಹುಲಿಹೊಂಡ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ, ಐದು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ..!

ಮುಂಡಗೋಡ; ಕರಡಿ ದಾಳಿಯಿಂದ ಯುವಕನೋರ್ವನಿಗೆ ಗಂಭೀರ ಗಾಯವಾದ ಘಟನೆ, ಮುಂಡಗೋಡ ತಾಲೂಕಿನ ಕಾತೂರ ಪಂಚಾಯತ್ ವ್ಯಾಪ್ತಿಯ ಸಿಂಗನಹಳ್ಳಿ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ. ವಿಪರ್ಯಾಸ ಅಂದ್ರೆ ಐದು ದಿನಗಳ ಹಿಂದೆ ನಡೆದಿದೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಮು ಜಾನು ಕೋಕರೆ(31) ಕರಡಿ ದಾಳಿಗೊಳಗಾದ ವ್ಯಕ್ತಿಯಾಗಿದ್ದಾನೆ. ಕಳೆದ ಐದು ದಿನಗಳ ಹಿಂದೆ ಕರಡಿ ದಾಳಿಯಾಗಿತ್ತು. ಈ ವೇಳೆ ವ್ಯಕ್ತಿಯ ತಲೆಗೆ ಕಚ್ಚಿ ತೀವ್ರ ಗಾಯಗೊಳಿಸಿತ್ತು. ದುರಂತ ಅಂದ್ರೆ ಇಷ್ಟೊಂದು ಗಾಯವಾಗಿದ್ರೂ ಈ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗಲೇ...

Post
ಮೂಡಸಾಲಿಯಲ್ಲಿ ರೈತನ‌ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!

ಮೂಡಸಾಲಿಯಲ್ಲಿ ರೈತನ‌ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡಸಿ ಗಾಯಗೊಳಿಸಿದ ಘಟನೆ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ನಡೆದಿದೆ. ರಾಮಕೃಷ್ಣ ದುರ್ಗಪ್ಪ ಲಕ್ಮಾಪುರ (45)ಎಂಬವನೆ ಗಾಯಗೊಂಡ ರೈತನಾಗಿದ್ದಾನೆ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಹಿಂದಿನಿಂದ ಬಂದ ಕರಡಿಯೊಂದು ದಾಳಿ ನಡೆಸಿ ಹಿಂಬದಿ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ರೈತ ತೀವ್ರ ಚೀರಾಟ ನಡೆಸಿದಾಗ ಕರಡಿ ಅಲ್ಲಿಂದ ಓಡಿ ಹೋಗಿದೆ. ಗಾಯಗೊಂಡ ರೈತನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Post
ಧಾರವಾಡದ ವಿವಿಧೆಡೆ ಭಾರೀ ಮಳೆ: ಸಿಡಿಲಿಗೆ ಓರ್ವ ರೈತ ಬಲಿ..!

ಧಾರವಾಡದ ವಿವಿಧೆಡೆ ಭಾರೀ ಮಳೆ: ಸಿಡಿಲಿಗೆ ಓರ್ವ ರೈತ ಬಲಿ..!

ಧಾರವಾಡ ತಾಲೂಕಿನ ಹಲವೆಡೆ ಭಾನುವಾರ ಭರ್ಜರಿ ಮಳೆಯಾಗಿದ್ದು, ಸಿಡಿಲಿಗೆ ಓರ್ವ ರೈತ ಬಲಿಯಾಗಿರುವ ಘಟನೆ ಧಾರವಾಡ ತಾಲೂಕಿನ ಹನುಮನಹಾಳ ಗ್ರಾಮದಲ್ಲಿ ನಡೆದಿದೆ. ಭೀಮನಗೌಡ ಮಲ್ಲನಗೌಡ ಪಾಟೀಲ (65) ಎಂಬುವವರೇ ಸಿಡಿಲಿಗೆ ಬಲಿಯಾದವರು. ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ತಮ್ಮ ಹೊಲಕ್ಕೆ ಹೋಗಿ ಶೇಂಗಾ ಸೋಸುವ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ವಿಪರೀತ ಮಳೆಯಾಗಲು ಆರಂಭಿಸಿದ್ದರಿಂದ ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ಮರಳಿ ಮನೆ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಗರಗ...

Post
ಊಟ ಮಾಡಿ ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ರೂಲರ್.! ಇಬ್ಬರು ದಾರುಣ ಸಾವು

ಊಟ ಮಾಡಿ ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ರೂಲರ್.! ಇಬ್ಬರು ದಾರುಣ ಸಾವು

ಹಾವೇರಿ; ಊಟ ಮಾಡಿ ರಸ್ತೆಯ ಪಕ್ಕದಲ್ಲಿ ಮಲಗಿದವರ ಮೇಲೆ ರೋಡ್ ರೂಲರ್ ಹರಿದು ಇಬ್ಬರು ಕಾರ್ಮಿಕರ ಸಾವು ಕಂಡ ದಾರುಣ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನಲ್ಲಿ ನಡೆದಿದೆ. ಸಿದ್ದು(24), ಪ್ರೀತಮ್ ( 25) ರೂಲರ್ ಅಡಿಗೆ ಸಿಲುಕಿ ಸಾವು ಕಂಡ ದುರ್ಧೈವಿಗಳು. ಮೊಟೇಬೆನ್ನೂರಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು, ಮಾಧ್ಯಾಹ್ನದ ವೇಳೆ ಊಟ ಮಾಡಿ ರೂಲರ್ ಪಕ್ಕದಲ್ಲಿ ಮಲಗಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಬೇಟಿ ನೀಡಿ,...

error: Content is protected !!