ಮುಂಡಗೋಡ ಸಮೀಪದ ಕರಗಿನಕೊಪ್ಪ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರಗೆ ರವಾನಿಸಲಾಗಿದೆ. ತಾಲೂಕಿನ ಮೂಡಸಾಲಿ ಗ್ರಾಮದ ಜಗದೀಶ ಪಕ್ಕೀರಪ್ಪ ಪಾಟೀಲ್ (52) ಎಂಬುವ ಬೈಕ್ ಸವಾರನೇ ಗಂಭೀರ ಗಾಯಗೊಂಡಿದ್ದಾನೆ. ಈತ ಮುಂಡಗೋಡಿನಿಂದ ಮೂಡಸಾಲಿಗೆ ಮತ್ತೋರ್ವ ವ್ಯಕ್ತಿ ಕೇದಾರಲಿಂಗ್ ಹನ್ಮಂತಪ್ಪ ಬೆಡಸಗಾವ್ ಎಂಬುವವರ ಜೊತೆ ಬೈಕ್ ಮೇಲೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಹೀಗಾಗಿ, ಮತ್ತೋರ್ವನಿಗೂ ಸಣ್ಣಪುಟ್ಟ ಗಾಯವಾಗಿದೆ. ಇದೇ ವೇಳೆ ವಕೀಲ ಗುಡ್ಡಪ್ಪ ಕಾತೂರ ಅದೇ ಮಾರ್ಗದಲ್ಲಿ ಬರುತ್ತಿದ್ದಾಗ ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ...
Top Stories
ಜಸ್ಟ್ ಅದೊಂದು ವಾಟ್ಸಾಪ್ ಕಾಲ್, ಈ ಟಿಬೇಟಿಗನಿಂದ ಆ ವಂಚಕರು ದೋಚಿದ್ದು ಬರೋಬ್ಬರಿ 1 ಕೋಟಿ 61 ಲಕ್ಷ..!
ಪ.ಜಾತಿ, ಪಂಗಡ ಯೋಜನೆಗಳಲ್ಲಿ 100% ಗುರಿ ಸಾಧಿಸಲು ಅಧಿಕಾರಿಗಳಿಗೆ ಡೀಸಿ ಕಟ್ಟುನಿಟ್ಟಿನ ಸೂಚನೆ..!
ಪೌರಕಾರ್ಮಿಕರಿಗೆ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ..!
ಪೊಲೀಸ್ ಇಲಾಖೆ ವತಿಯಿಂದ ಪ್ರತಿ ತಿಂಗಳು ಪ.ಜಾತಿ ಪಂಗಡದವರ ಕುಂದುಕೊರತೆ ಸಭೆ: ಎಸ್ಪಿ ದೀಪನ್
ಖಾಸಗಿ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ನಕಲಿ ವೈದ್ಯರು ಕಂಡುಬಂದಲ್ಲಿ ಕಠಿಣ ಕ್ರಮ: ಡೀಸಿ ಖಡಕ್ ಎಚ್ಚರಿಕೆ..!
ಉತ್ತರ ಕನ್ನಡದಲ್ಲಿ ಹೊಸ ವರ್ಷ ಆಚರಣೆಗೆ ಡೀಸಿ ರೂಲ್ಸ್: ಈ ಸೂಚನೆ ಪಾಲಿಸಲೇಬೇಕು ಅಂದ್ರು ಜಿಲ್ಲಾಧಿಕಾರಿ..!
ಹುಬ್ಬಳ್ಳಿಯ ಅಂಚಟಗೇರಿ ಬಳಿ ಭೀಕರ ಅಪಘಾತ- ತಂದೆ, ಎರಡು ಮಕ್ಕಳು ದುರಂತ ಸಾವು..!
ಹುನಗುಂದದಲ್ಲಿ ಬೆಂಕಿ ಅವಘಡ, ಸಿಲಿಂಡರ ಸ್ಪೋಟಗೊಂಡು ಹೊತ್ತಿಉರಿದ ಆಟೋ ರಿಕ್ಷಾ, ಮನೆಗೂ ಹಾನಿ..!
ಚಿಗಳ್ಳಿ ಪ್ರೌಢಶಾಲಾ ಆವರಣದಲ್ಲಿ ಡಿ.26 ರಂದು ಧರಣಿ ಸತ್ಯಾಗ್ರಹಕ್ಕೆ ವಿರೋಧ, ಮನವಿ ಅರ್ಪಣೆ..!
ಇಂದೂರು ಸೊಸೈಟಿಯ ನೂತನ ಕಛೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿದ ಶಾಸಕ ಶಿವರಾಮ್ ಹೆಬ್ಬಾರ್..!
ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!
ತಡಸ ತಾಯವ್ವನ ದೇವಸ್ಥಾನ ಬಳಿ ಭೀಕರ ಕಾರು ಅಪಘಾತ, ಮುಂಡಗೋಡ ತಹಶೀಲ್ದಾರ ಕಚೇರಿಯ ಓರ್ವ ತಲಾಟಿ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ..!
ಎಚ್ಚರ, ಎಚ್ಚರ..! ತಡಸ ತಾಯವ್ವನ ದೇವಸ್ಥಾನದ ಸಮೀಪ ಚಿರತೆ ಪ್ರತ್ಯಕ್ಷ..!
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
Category: ಅಪಘಾತ
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ತಾಲೂಕಿನ ಕಾತೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಂದಿಪುರದಲ್ಲಿ ಮತ್ತೊಂದು ವಿದ್ಯುತ್ ದುರಂತ ಸಂಭವಿಸಿದೆ. ಅನಧೀಕೃತವಾಗಿ ವಿದ್ಯುತ್ ಕಂಬಕ್ಕೆ ವೈಯರ್ ಮೂಲಕ ಸಂಪರ್ಕ ಪಡೆದಿದ್ದ ಸಂದರ್ಭದಲ್ಲಿ ಕಟ್ ಆಗಿ ಬಿದ್ದಿದ್ದ ವೈಯರ್ ತುಳಿದು, 60 ವರ್ಷದ ವ್ಯಕ್ತಿಯೊಬ್ಬ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ನಂದಿಪುರದ ಶಿವಪ್ಪ ನಾಗಪ್ಪ ವಡ್ಡರ್ (60) ವಿದ್ಯುತ್ ಆಘಾತದಿಂದ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ನಿನ್ನೆ ಬೆಳಿಗ್ಗೆ ಮನೆಯಿಂದ ಗದ್ದೆಗೆ ತೆರಳಿದ್ದ. ಆದ್ರೆ, ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಗದ್ದೆಗೆ...
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಶುಂಠಿ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಕೂಲಿ ಕಾರ್ಮಿಕನೋರ್ವ ವಿದ್ಯುತ್ ಗೆ ಬಲಿಯಾಗಿ, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ, ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಡೆದಿದೆ. ಅಂದಹಾಗೆ, ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಬಸವರಾಜ್ ಚಂದ್ರಪ್ಪ ಹರಿಜನ್ (22) ವಿದ್ಯುತ್ ದುರಂತದಲ್ಲಿ ಜೀವ ಕಳೆದುಕೊಂಡ ನತದೃಷ್ಟನಾಗಿದ್ದಾನೆ. ಹರೀಶ್ ರಾಮಣ್ಣ ಹರಿಜನ್ ಗಾಯಗೊಂಡವನಾಗಿದ್ದಾನೆ ಪಾಳಾ ಗ್ರಾಮದ ಮೂಕಪ್ಪ ಹರಿಜನ್ ಎಂಬಾತ, ಓಣಿಕೇರಿ ಗ್ರಾಮದಲ್ಲಿ ಬೇರೋಬ್ಬರ ಜಮೀನನ್ನು ಲಾವಣಿ ಮೇಲೆ ಪಡೆದು ಶುಂಠಿ ಕೃಷಿ ಮಾಡುತ್ತಿದ್ದಾರೆ. ಹೀಗಾಗಿ, ಇಂದು ಶುಂಠಿ...
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಮುಂಡಗೋಡ ತಾಲೂಕಿನ ಮಳಗಿ ಬಳಿ ಚಲಿಸುತ್ತಿದ್ದ KSRTC ಬಸ್ ಮೇಲೆ ಮರ ಬಿದ್ದಿದೆ. ಪರಿಣಾಮ್ ಬಸ್ ಜಖಂ ಗೊಂಡಿದ್ದು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ, ಹುಬ್ಬಳ್ಳಿ ಶಿರಸಿ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಮಳಗಿ ಭಾಗದಲ್ಲಿ ಸಂಜೆಯಿಂದ ಭಾರಿ ಪ್ರಮಾಣದ ಗಾಳಿ ಬೀಸಿದೆ. ಮಳೆಗಾಳಿಯ ಪರಿಣಾಮ ರಸ್ತೆ ಬದಿಯ ಮರ ಉರುಳಿ ಬಿದ್ದಿದೆ. ಅದೇ ವೇಳೆ ರಸ್ತೆ ಮೇಲೆ ಸಂಚರಿಸುತ್ತಿದ್ದ KSRTC ಬಸ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಪದರಯಾಣಿಕರಿಗೆ ಯಾವುದೇ ಪ್ತಾಣಾಪಾಯವಾಗಿಲ್ಲ. ನಂತರ ಸ್ಥಳೀಯರು ಹಾಗೂ...
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ಬ್ರೇಕಿಂಗ್ ಬೆಳಗಾವಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಘನಘೋರ ದುರಂತ. ಚಲಿಸುತ್ತಿದ್ದ ಕಾರಿನ ಮೇಲೆ ಮುಗುಚಿ ಬಿದ್ದ ಲಾರಿ. ಕಾರಿನಲ್ಲೇ ಸಿಲುಕಿ ಹಾಕಿ ಒದ್ದಾಡುತ್ತಿರುವ ಇಬ್ಬರು. ಬೆಳಗಾವಿ ನಗರ ಹೊರ ವಲಯದ ಕೆಎಲ್ಇ ಆಸ್ಪತ್ರೆ ಬಳಿ ಘಟನೆ. ಕಾರಿನಲ್ಲಿದ್ದವರನ್ನ ಹೊರ ತೆಗೆಯಲು ಹರಸಾಹಸ ಪಡುತ್ತಿರುವ ಸಾರ್ವಜನಿಕರು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹಾವೇರಿ; ಬೆಂಗಳೂರಿನಿಂದ ಹಾವೇರಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯವಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹಿರಿಯೂರು ಬಳಿ ರೆಸ್ಟ್ ವೇಳೆ ದ್ವಿಚಕ್ರ ವಾಹನ ಸವಾರನೋರ್ವ ರುದ್ರಪ್ಪ ಲಮಾಣಿ ಅವರಿಗೆ ಡಿಕ್ಕಿ ಹೊಡೆದು ತಲೆಗೆ, ಮೂಗಿಗೆ ಗಾಯಗಳು ಆಗಿವೆ ಎಂದು ಲಮಾಣಿ ಅವರನ್ನು ದಾವಣಗೆರೆ ಎಸ್ ರಸ್ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ಬಳಿ ನಡೆದಿದ್ದ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಾರವಾರದ ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ್ ಇಡೀ ಪ್ರಕರಣದ ಬಗ್ಗೆ ವಿಸ್ತೃತ ದೂರು ನೀಡಿದ್ದಾರೆ. ಘಟನೆ ನಡೆದದ್ದೇ ಬೇರೆ, ಕೇಸು ದಾಖಲಾಗಿದ್ದೇ ಬೇರೆ, ಇನ್ಶ್ಯೂರನ್ಸ್ ಹಣಕ್ಕಾಗಿ ಇಲ್ಲಿ ಇಡೀ ಕೇಸನ್ನೇ ಉಲ್ಟಾ ಪಲ್ಟಾ ಮಾಡಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ದೇ ಈ ಕುರಿತು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಾಗಿ, ಈ ಕೇಸು ಮುಂಡಗೋಡ ಪೊಲೀಸರಿಗೆ ಬಹುತೇಕ...
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಭೀಕರ ದುರಂತ, ಟಿಪ್ಪರ್ ಅಡಿ ಸಿಲುಕಿ ಪಾದಾಚಾರಿಯ ದೇಹವೇ ಛಿದ್ರ, ಛಿದ್ರ..!
ಮುಂಡಗೋಡಿನ ಶಿವಾಜಿ ಸರ್ಕಲ್ ನಲ್ಲಿ ಕಂಡೂ ಕೇಳರಿಯದ ಭಯಾನಕ ಘಟನೆ ನಡೆದು ಹೋಗಿದೆ. ಟಿಪ್ಪರ್ ಹಿಂಬದಿಯ ಗಾಲಿಗೆ ಸಿಲುಕಿದ ಪಾದಾಚಾರಿ ವ್ಯಕ್ತಿಯೋರ್ವನ ದೇಹ ಛಿದ್ರ ಛಿದ್ರಗೊಂಡಿದೆ. ಘಟನೆಯ ಭಯಾನಕತೆಗೆ ಜನ ಬೆಚ್ಚಿ ಬಿದ್ದಿದ್ದಾರೆ. ಆದ್ರೆ, ಹೀಗೆ ದಾರುಣ ಸಾವು ಕಂಡಿರೋ ವ್ಯಕ್ತಿ ಯಾರು..? ಎಲ್ಲಿಯವನು ಅನ್ನೋದು ಇನ್ನು ತಿಳಿದು ಬಂದಿಲ್ಲ.. ಅಂದಹಾಗೆ, ಸಂಜೆ ಶಿವಾಜಿ ಸರ್ಕಲ್ ನಲ್ಲಿ ಘಟನೆ ನಡೆದಿದೆ. ಟಿಪ್ಪರ್ ಹಿಂಬದಿಯ ಚಕ್ರಕ್ಕೆ ಸಿಲುಕಿರೋ ಪಾದಾಚಾರಿ ಸ್ಥಳದಲ್ಲೇ ಚಿದ್ರ ಚಿದ್ರಗೊಂಡಿದ್ದಾನೆ. ದೇಹದ ಬಹುತೇಕ ಭಾಗ...
ಸಾಲಗಾಂವ್ ಕೆರೆಯಲ್ಲಿ ಮೀನು ಹಿಡಿಯಲು ಇಳಿದಿದ್ದವ ಹೆಣವಾದ..!
ಮೀನು ಹಿಡಿಯಲು ಕೆರೆಗೆ ಇಳಿದಿದ್ದ ವ್ಯಕ್ತಿಯೋರ್ವ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಾಲಗಾಂವ್ ಕೆರೆಯಲ್ಲಿ ನಡೆದಿದೆ. ಗ್ರಾಮಸ್ಥರ ಸಹಕಾರದಿಂದ ಮುಂಡಗೋಡ ಪಿಎಸ್ಐ ಪರಶುರಾಮ್ ಮಿರ್ಜಿಗಿ ಕೆರೆಯಲ್ಲಿ ಇಳಿದು ವ್ಯಕ್ತಿಯ ಶವ ಹೊತೆಗೆದಿದ್ದಾರೆ. ಗುಡ್ಡಪ್ಪ ಜಾಡರ್(58) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಈತ ಇಂದು ಮೀನು ಹಿಡಿಯಲು ಕೆರೆಯಲ್ಲಿ ಇಳಿದಿದ್ದ. ಈ ವೇಳೆ ಕೆರೆಯ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಹೀಗಾಗಿ, ಸುದ್ದಿ ತಿಳಿದ ಪಿಎಸ್ಐ ಸ್ಥಳಕ್ಕೆ ಧಾವಿಸಿ ಶವ ಹೊರತೆಗೆದಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ...
ಯಲ್ಲಾಪುರ ಅರಬೈಲು ಘಟ್ಟದಲ್ಲಿ ಭೀಕರ ಅಪಘಾತ, 10 ಜನ ಸ್ಥಳದಲ್ಲೇ ಸಾವು..! 15 ಜನರಿಗೆ ಗಾಯ..!
ಯಲ್ಲಾಪುರದ ಅರಬೈಲು ಘಟ್ಟದ ಗುಳ್ಳಾಪುರ ಬಳಿ ಭೀಕರ ಅಪಘಾತವಾಗಿದೆ. ತರಕಾರಿ ಸಾಗಿಸುತ್ತಿದ್ದ ಅಶೋಕ ಲೈಲ್ಯಾಂಡ್ ವಾಹನ ರಸ್ತೆಬದಿಯ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿದೆ. ಪರಿಣಾಮ 10 ಜನ ಸ್ಥಳದಲ್ಲೇ ಸಾವು ಕಂಡಿದ್ದಾರೆ, 15 ಜನರಿಗೆ ಗಾಯವಾಗಿದೆ. ಇದ್ರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮೃತರೇಲ್ಲರೂ ಹಾವೇರಿ ಜಿಲ್ಲೆಯ ಸವಣೂರಿನವರು ಎನ್ನಲಾಗಿದ್ದು. ಕುಮಟಾಗೆ ತರಕಾರಿ ಸಾಗಿಸುತ್ತಿದ್ದರು ಎನ್ನಲಾಗಿದೆ. 15 ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅದ್ರಲ್ಲಿ ಹಲವರ ಸ್ಥಿತಿ ಗಂಭಿರವಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ...









