Home ಅಪಘಾತ

Category: ಅಪಘಾತ

Post
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!

ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!

Car Accident; ಮುಂಡಗೋಡ ತಾಲೂಕಿನ ಸನವಳ್ಳಿ ಬಳಿ ಕಾರ್ ಅಪಘಾತವಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರ್ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಪಲ್ಟಿಯಾಗಿದೆ. ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು,ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬವೇ ತುಂಡಾಗಿ ಬಿದ್ದಿದೆ. ಬಂಕಾಪುರ ರಸ್ತೆಯ ಸನವಳ್ಳಿ ಬಳಿ ಘಟನೆ ನಡೆದಿದ್ದು, ಸೋಮವಾರ ರಾತ್ರಿ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ. ಆದ್ರೆ, ಕಾರು ಯಾರದ್ದು,.? ಅದ್ರಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ರು..? ಘಟನೆಯಲ್ಲಿ ಯಾರಿಗಾದ್ರೂ ಅನಾಹುತವಾಗಿದೆಯಾ..? ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಮುಂಡಗೋಡ ಪೊಲೀಸರು...

Post
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!

ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!

Terrible Fire Accident; ಮುಂಡಗೋಡ ತಾಲೂಕಿನ ಹನಮಾಪುರದಲ್ಲಿ ಭಯಾನಕ ಘಟನೆ ನಡೆದಿದೆ. ಒಬ್ಬಂಟಿಯಾಗಿ ಬದುಕುತ್ತಿದ್ದ 70 ವರ್ಷದ ವೃದ್ದೆಯೊಬ್ಬರ ಮನೆ ಬೆಂಕಿಗೆ ಆಹುತಿಯಾಗಿದ್ದು, ಆ ಮನೆಯ ಕಿಚ್ಚಿನಲ್ಲೇ ಮನೆಯ ಯಜಮಾನಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ‌. ಪಕೀರವ್ವ ರಾಮಣ್ಣ ಆಲೂರು(70), ಬೆಂಕಿಯಲ್ಲಿ ಬೆಂದವರಾಗಿದ್ದು, ಭಾರೀ ಸುಟ್ಟ ಗಾಯಗಳೊಂದಿಗೆ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ವೃದ್ದೆ ಸಾವನ್ನಪ್ಪಿದ್ದಾರೆ ಅಂತಾ ಮಾಹಿತಿ ಬಂದಿದೆ....

Post
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!

ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!

Crime News; ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಇಡೀ ಕಾಲೇ ಕಟ್ ಆಗಿರೋ ಭೀಕರ ಘಟನೆ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ ಸಮೀಪದ ಗದ್ದೆಯಲ್ಲಿ ನಡೆದಿದೆ. ಮುಂಡಗೋಡ ತಹಶೀಲ್ದಾರ ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂಲತಃ ಮಲವಳ್ಳಿ ಗ್ರಾಮದ ತುಕಾರಾಂ ಹನ್ಮಂತಪ್ಪ ಪಾಟೀಲ್(38) ಎಂಬುವವರೇ ಭೀಕರ ಘಟನೆಯಲ್ಲಿ ತಮ್ಮ ಬಲಗಾಲು ಕಳೆದುಕೊಂಡಿದ್ದಾರೆ‌. ಇಂದು ತಮ್ಮ ಗದ್ದೆಯಲ್ಲಿ ಟ್ರಾಕ್ಟರ್ ರೂಟರ್ ನಿಂದ ಹೊಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ, ಆಕಸ್ಮಿಕವಾಗಿ ಕಾಲು ರೂಟರ್ ನಲ್ಲಿ...

Post
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!

ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!

Accident News; ಮುಂಡಗೋಡ ಹುಬ್ಬಳ್ಳಿ ರಸ್ತೆಯ, ವಡಗಟ್ಟಾ ಸಮೀಪದ ತಡಸ ತಾಯವ್ವನ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಹಲವರಿಗೆ ಗಾಯವಾಗಿರೋ ಘಟನೆ ನಡೆದಿದೆ‌. ಇನ್ನಷ್ಟು ಮಾಹಿತಿ ಬರಬೇಕಿದೆ.. ಅಪಡೇಟ್ ಮಾಡಲಾಗುವುದು.

Post
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!

ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!

 Car Accident; ಮುಂಡಗೋಡ ಹೊರವಲಯದ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಭಯಾನಕ ಕಾರ್ ಅಪಘಾತವಾಗಿದೆ. ಪವಾಡಸದೃಷ ರೀತಿಯಲ್ಲಿ ಕಾರ್ ಚಾಲಕ ಬಚಾವ್ ಆಗಿದ್ದಾನೆ. ಕಲಘಟಗಿ ಕಡೆಯಿಂದ ಬರುತ್ತಿದ್ದ ಬ್ರಿಜಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ. ಏನಿಲ್ಲವೆಂದರೂ 30 ಮೀಟರ್ ದೂರದವರೆಗೂ ರಸ್ತೆ ಬದಿಯಲ್ಲಿ ಪಲ್ಟಿ ಹೊಡೆಯುತ್ತಾ ಹೋಗಿರೋ ಕಾರ್ ತೋಟದ ಬೇಲಿಯ ಬಳಿ ಪಲ್ಟಿ ಹೊಡೆದು ನಿಂತಿದೆ. ಇನ್ನು ಚಾಲಕ ಮುಂಡಗೋಡಿನ ಸಂದೇಶ ಕೋಕರೆ ಎಂಬುವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ...

Post
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!

ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!

Accident News; ಮುಂಡಗೋಡ ತಾಲೂಕಿನ ಸನವಳ್ಳಿ ಪ್ಲಾಟ್ ಹತ್ತಿರ ಕಾರ್ ಹಾಗೂ ಬೈಕ್ ನಡುವೆ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಯಾರು ಅನ್ನೋದು ಇನ್ನೂ ಗುರುತು ಸಿಕ್ಕಿಲ್ಲ. ಸದ್ಯ ಗಾಯಗೊಂಡವರನ್ನು ಮುಂಡಗೋಡ ತಾಲೂಕಾಸ್ಪತ್ರೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

Post
ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!

ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!

Accident News; ಮುಂಡಗೋಡ ತಾಲೂಕಿನ ಹಳೂರು ಹಾಗೂ ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೊಇ ನಡುವೆ ಅಪಘಾತವಾಗಿದೆ. ಪರಿಣಾಮ ಐವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಹಳೂರಿನಿಂದ ಕ್ಯಾಸನಕೇರಿಗೆ ಹೋಗುವ ಮಾರ್ಗದಲ್ಲಿ ಓವರ್ ಟೇಕ್ ಮಾಡಲು ಹೋಗಿ ಇಂತಹದ್ದೊಂದು ಅಪಘಾತವಾಗಿದೆ ಅಂತಾ ತಿಳಿದು ಬಂದಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!

ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!

Yallapur Accident News; ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಸಮೀಪದ ಯಲ್ಲಾಪುರ ಹುಬ್ಬಳ್ಳಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ KSRTC ಬಸ್‌ ಡಿಕ್ಕಿ ಹೊಡೆದ ಪರಿಣಾಮ, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ನೀಲವ್ವಾ (38), ಗಿರಿಜವ್ವಾ (43) ಹಾಗೂ ಇನ್ನೋರ್ವ ಪುರುಷ ಎಂದು ಗುರುತಿಸಲಾಗಿದ್ದು, ಪುರುಷನ ಗುರುತು ಇನ್ನೂ ಪತ್ತೆಯಾಗಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಬಾಗಲಕೋಟೆ ಜಿಲ್ಲೆಯ ಅಮ್ಮನಗುಡ್ಡದಿಂದ ಮಂಗಳೂರಿಗೆ ಹೊರಟಿತ್ತು ಎನ್ನಲಾಗಿದೆ. ಹೆದ್ದಾರಿ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಕೇರಳ ಮೂಲದ ಲಾರಿಗೆ ಬಸ್ ಡಿಕ್ಕಿಯಾಗಿದೆ....

Post
ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿ,ಇಂದೂರಿನ ದಂಪತಿ ಸೇರಿ ಮೂವರಿಗೆ  ಗಾಯ..!

ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿ,ಇಂದೂರಿನ ದಂಪತಿ ಸೇರಿ ಮೂವರಿಗೆ ಗಾಯ..!

Accident News; ಮುಂಡಗೋಡ ತಾಲೂಕಿನ ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ದಂಪತಿ ಸೇರಿ ಮೂವರಿಗೆ ಗಾಯವಾಗಿದೆ. ಇಂದೂರು ಗ್ರಾಮದ ಶರಣು ನಿಂಗಯ್ಯ ಸುರಗಿಮಠ್ ಹಾಗೂ ಇವರ ಪತ್ನಿ ಸುಪ್ರೀತ ಸುರಗಿಮಠ ಎಂಬುವವರಿಗೆ ಗಾಯವಾಗಿದೆ. ಹುನಗುಂದದ ಪೊಸ್ಟಮೆನ್ ಸುನಿಲ್ ಹರಿಜನ್ ಎಂಬುವವರಿಗೂ ಗಾಯವಾಗಿದೆ.  ಗಾಯಾಳಯಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!

ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!

Soldier Dies News; ರಸ್ತೆ ಅಪಘಾತದಲ್ಲಿ ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾವು ಕಂಡ ಘಟನೆ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪ್ರಭುನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ 4(A)ನಲ್ಲಿ ನಡೆದಿದೆ. ಖಾನಾಪುರ ತಾಲೂಕಿನ ಸೂರಜ್ ದ್ರೌಪದ್ಕರ್ (29) ಎಂಬುವನೇ ಮೃತ ಯೋಧನಾಗಿದ್ದಾನೆ. ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗುದ್ದಿದ‌ ಪರಿಣಾಮ, ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ತೀವ್ರ ರಕ್ತಸ್ರಾವ ಹಿನ್ನೆಲೆ ಸ್ಥಳದಲ್ಲೇ ಯೋಧ ಸೂರಜ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಖಾನಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾನಾಪುರ...