ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಭಾರತೀಯರ ಹತ್ಯಾಕಾಂಡಕ್ಕೆ ಪ್ರತಿಕಾರದಲ್ಲಿ, ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯ “ಆಪರೇಷನ್ ಸಿಂಧೂರ” ಹೆಸರಿನ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯ ಖುರೇಷಿ ಬೆಳಗಾವಿಯ ಸೊಸೆಯಾಗಿದ್ದು, ಈಗ ಭಾಥದ ಹೆಮ್ಮೆಯಾಗಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನ ಜಗತ್ತಿಗೆ ಬಿಚ್ಚಿಟ್ಟಿದ್ದ ಕರ್ನಲ್ ಸೋಫೀಯಾ ಕುರೆಷಿ, ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಸೋಫೀಯಾ ಪತಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು...
Top Stories
ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!
ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!
ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!
ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!
‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ..!
ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?
ಇಸ್ರೋ-ನಾಸಾ ಜಂಟಿ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ..!
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!
ಕಾತೂರು ಪ್ರೌಢಶಾಲೆಯಲ್ಲಿ ಆ “ಹುಡುಗ”ನ ಭಯಕ್ಕೆ, ತರಗತಿಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿಗಳು..! ದೈರ್ಯ ತುಂಬಿದ ಪಿಐ ರಂಗನಾಥ್..!
ಚಿಗಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ರಹೀಮಾಬಿ ಮಕ್ತೇಸರ್, ಉಪಾಧ್ಯಕ್ಷರಾಗಿ ರತ್ನವ್ವ ಅವಿರೋಧ ಆಯ್ಕೆ..!
ಇಸ್ಪೀಟು ಅಡ್ಡೆಯ ಮೇಲೆ ಭರ್ಜರಿ ದಾಳಿ ಕೇಸ್..! ಮುಂಡಗೋಡ ಪೊಲೀಸ್ರಿಗೆ ಬಂದಿತ್ತು ಅದೊಂದು ಪೋನ್ ಕಾಲ್, ಬೆನ್ನತ್ತಿ ಹೋದವರದ್ದೇ ರೋಚ”ಕತೆ”..!
ಶಿರಸಿ ಬಳಿ ಹೋಂ ಸ್ಟೇಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಬಂಧನ, ಬಂಧಿತರು ಯಾರ್ಯಾರು ಗೊತ್ತಾ..? ವಿವರ ಇಲ್ಲಿದೆ ನೋಡಿ..!
ವಾಯುಭಾರ ಕುಸಿತ ಹಿನ್ನೆಲೆ; ಜು.29 ರವರೆಗೆ ಅತೀ ಭಾರೀ ಮಳೆ ಮುನ್ಸೂಚನೆ..!
ಶಿರಸಿ ಡಿವೈಎಸ್ಪಿ ನೇತೃತ್ವದಲ್ಲಿ ಭರ್ಜರಿ ದಾಳಿ, ಇಸ್ಪೀಟು ಆಟದಲ್ಲಿ ತೊಡಗಿದ್ದ 19 ಜನರ ಬಂಧನ, ಸಿಕ್ಕ ಹಣವೆಷ್ಟು..? ಹಾವೇರಿ ವೈದ್ಯನ ರೆಸಾರ್ಟಿನಲ್ಲಿ ದಂಧೆ..!?
ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ..!
ಅರಣ್ಯದಲ್ಲಿ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚನೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ..!
ಕೋರ್ಟ್ ಆವರಣದಲ್ಲೇ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾಪಿ ಪತಿ..!
ಉತ್ತರ ಕನ್ನಡ; ಗುಡ್ಡ ಕುಸಿತ, ಕಡಲುಕೊರೆತ ತಡೆಗೆ 800 ಕೋಟಿ ಅನುದಾನ- ಸಚಿವ ಕೃಷ್ಣ ಬೈರೇಗೌಡ
Category: ರಾಜ್ಯ
ಬಿಜೆಪಿ ಮುಖಂಡ, ಶಾಸಕ, ಜನಾರ್ದನರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷ ಪ್ರಕಟ..! ಓಬಳಾಪುರಂ ಮೈನಿಂಗ್ ಕೇಸಲ್ಲಿ ರೆಡ್ಡಿ ಅಪರಾಧಿ..!
ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಅಪರಾಧಿ ಎಂದು ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ. ಹೀಗಾಗಿ, ಗಾಲಿ ಜನಾರ್ಧನ ರೆಡ್ಡಿ ಇನ್ನಿಲ್ಲದ ಸಂಕಷ್ಟ ಶುರುವಾಗಿದ್ದು, ಏಳು ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. ಓಬಳಾಪುರಂ ಮೈನಿಂಗ್ ಕಂಪನಿ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಅಪರಾಧಿ ಎಂದು ವಿಶೇಷ ನ್ಯಾಯಾಲಯ ಹೇಳಿದೆ. 2008ರಿಂದ 2013ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿತ್ತು. ಜನಾರ್ಧನ ರೆಡ್ಡಿ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಅವರನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ, ಏಳು...
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಶಿಸ್ತು ಸಮಿತಿ 6 ವರ್ಷಗಳ ಕಾಲ ಉಚ್ಚಾಟನೆ ಮಾಡುತ್ತಿದ್ದಂತೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಮೇಲೆ ನನ್ನ ಪೂಜ್ಯ ತಂದೆಯ ಮೇಲೆ ಮಾತಾಡಿದರು ಸಹ ನಾನು ಕೇಂದ್ರದ ವರಿಷ್ಟರಿಗೆ ಬಸನಗೌಡ ಪಾಟೀಲ ಯತ್ನಾಳರ ಮೇಲೆ ದೂರು ಕೊಟ್ಟಿಲ್ಲ ಎಂದು ಹೇಳಿದ್ದಾರೆ. ವಿಜಯೇಂದ್ರ ಹೇಳಿದ್ದಿಷ್ಟು..! ಭಾರತೀಯ ಜನತಾ ಪಾರ್ಟಿ, ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆಯನ್ನು ಪಡೆದಿರುವ ರಾಜಕೀಯ ಪಕ್ಷ, ಸಂಘ...
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಕಾನೂನು ಜಾರಿ, ಬಲವಂತದ ವಸೂಲಾತಿ, ಹಿಂಸೆ ನೀಡಿದ್ರೆ ಜಾಮೀನು ರಹಿತ ಕೇಸ್..!
ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದ್ದು, ಆದೇಶದ ಮುಖ್ಯಾಂಶಗಳು ಹೀಗಿವೆ. ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಯಾವುದೇ ಭದ್ರತೆ ಪಡೆಯಬಾರದು....
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ, ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆ, ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ..!
ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು,ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ,ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ ಕೈ ಸಾಲ ಪಡೆಯುವ ಪದ್ಧತಿ ರೂಢಿಯಲ್ಲಿದೆ.ಬಹುತೇಕರು ಪಡೆದ ಸಾಲವನ್ನು ವಾಪಸ್ಸು ನೀಡುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಸಾಮಾಜಿಕ,ವೈಯಕ್ತಿಕ ಅಥವಾ ಉತ್ಪಾದಕವಲ್ಲದ ಕಾರ್ಯಗಳಿಗಾಗಿ...
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ವಿಧಿವಶರಾದ ಹಿನ್ನೆಲೆಯಲ್ಲಿ ರಾಜ್ಯಾಧ್ಯಂತ ಇಂದು ಶುಕ್ರವಾರ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ, ಶುಕ್ರವಾರ ರಾಜ್ಯದ ಶಾಲಾ ಕಾಲೇಜುಗಳು ಸೇರಿ ಸರ್ಕಾರಿ ಕಚೇರಿಗಳು ತೆರೆದಿರುವುದಿಲ್ಲ ಅಂತಾ ಸರ್ಕಾರ ಆದೇಶ ಹೊರಡಿಸಿದೆ.
ಲಾಡ್ಜ್ ನಲ್ಲಿ ಶವವಾಗಿ ಸಿಕ್ರು ತಹಶೀಲ್ದಾರ್..! ಸಾವಿನ ಸುತ್ತ ಹಲವು ಅನುಮಾನ..?
ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ತೀರ್ಥಹಳ್ಳಿ ತಹಶೀಲ್ದಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಗದಗ ಮೂಲದ ಜಕ್ಕಣ್ಣಗೌಡರ್(56) ಮೃತ ತಹಶೀಲ್ದಾರರಾಗಿದ್ದಾರೆ. ಜಕ್ಕಣ್ಣಗೌಡರ್ ಅವರು ಬೆಂಗಳೂರಿಗೆ ಅ.14ರಂದು ಹೋಗೊದ್ದರು. ಖಾಸಗಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಆದ್ರೆ, ನಿನ್ನೆ ರಾತ್ರಿ 9ರ ಸುಮಾರಿಗೆ ಅವರು ಲಾಡ್ಜ್ ರೂಮ್‌ನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಗದಗ ಮೂಲದ 56 ವರ್ಷದ ಜಕ್ಕಣ್ಣ ಗೌಡರ್, ಕೋರ್ಟ್ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದು, ಅ.14ರಂದು ಖಾಸಗಿ ಲಾಡ್ಜ್ ಬುಕ್ ಮಾಡಿದ್ದರು. ಆದ್ರೆ, ನಿನ್ನೆ ಬೆಳಗ್ಗೆಯಿಂದ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು...
ನವೆಂಬರ್ 13 ರಂದು ರಾಜ್ಯದ ಶಿಗ್ಗಾವಿ ಸೇರಿ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ..!
ನವದೆಹಲಿ: ರಾಜ್ಯದಲ್ಲಿ ಖಾಲಿ ಇರುವ 3 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗವು ನಿರ್ಧರಿಸಿದೆ. ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶವು ಪ್ರಕಟವಾಗಲಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರ, ಇ.ತುಕಾರಾಂ ರಾಜೀನಾಮೆಯಿಂದ ತೆರವಾಗಿರುವ ಸಂಡೂರು ಕ್ಷೇತ್ರ, ಬಸವರಾಜ್ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.
ನಾಳೆ ರವಿವಾರ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹಡಪದ ಅಪ್ಪಣ್ಣ ಜಯಂತಿ ಉತ್ಸವ- ಸರ್ವರಿಗೂ ಆಮಂತ್ರಣ ಕೋರಿದ ರಾಜ್ಯಾಧ್ಯಕ್ಷ
ಮುಂಡಗೋಡ: ನಾಳೆ ರವಿವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಆಚರಿಸಿಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಮಾರಂಭದಲ್ಲಿ ಭಾಗಿಯಾಗಲಿದ್ದು, ರಾಜ್ಯದ ಹಡಪದ ಅಪ್ಪಣ್ಣವರ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ವನವಿ ಮಾಡಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರವಿವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ, ತಂಗಡಗಿಯ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ...
ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ, ದರ್ಶನ್ ಪ್ರಕರಣದಲ್ಲಿ ಆರೋಪಿ ಅಷ್ಟೆ ಅಪರಾಧಿ ಅಲ್ಲ: ದರ್ಶನ್ ಬಗ್ಗೆ ಮೌನ ಮುರಿದ ಸುಮಲತಾ ಅಂಬರೀಶ್
ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ, ದರ್ಶನ್ ಪ್ರಕರಣದಲ್ಲಿ ಆರೋಪಿ ಅಷ್ಟೆ ಇನ್ನು ಯಾವುದು ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ. ದರ್ಶನ್ ನಿರಾಪರಾಧಿ ಎಂದು ಸಾಬೀತುಪಡಿಸಿ ಹೊರ ಬರುತ್ತಾರೆ. ದರ್ಶನ್ ಬಗ್ಗೆ ಪೋಸ್ಟ್ ಹಾಕಿದ ಮಾಜಿ ಸಂಸದೆ ಸುಮಲತಾ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೊನೆಗೂ ಮೌನ ಮುರಿದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಘಟನೆ ಬಗ್ಗೆ ಸುದೀರ್ಘ ಮಾಹಿತಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿರುವ ಸುಮಲತಾ ಅಂಬರೀಶ್, ರೇಣುಕಾಸ್ವಾಮಿ ಕೊಲೆಗೆ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ...