Jain Samavesh News: ಐನಾಪುರ(ಚಿಕ್ಕೋಡಿ) ಜೈನ ಸಮುದಾಯ ಬೇಡಿಕೆಗಳನ್ನು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಆದ್ರೆ, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವೃತ ಕೈಗೊಳ್ಳುವುದಾಗಿ ರಾಷ್ಟ್ರ ಸಂತ ಶ್ರೀ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ. ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಈ ಸಮಾವೇಶದಿಂದ ಇನ್ನು ಮುಂದೆ ಸಿದ್ದರಾಮಯ್ಯ ನಿದ್ದೆಗೆ ಭಂಗ...
Top Stories
ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!
ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!
ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!
ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!
‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ..!
ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?
ಇಸ್ರೋ-ನಾಸಾ ಜಂಟಿ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ..!
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!
ಕಾತೂರು ಪ್ರೌಢಶಾಲೆಯಲ್ಲಿ ಆ “ಹುಡುಗ”ನ ಭಯಕ್ಕೆ, ತರಗತಿಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿಗಳು..! ದೈರ್ಯ ತುಂಬಿದ ಪಿಐ ರಂಗನಾಥ್..!
ಚಿಗಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ರಹೀಮಾಬಿ ಮಕ್ತೇಸರ್, ಉಪಾಧ್ಯಕ್ಷರಾಗಿ ರತ್ನವ್ವ ಅವಿರೋಧ ಆಯ್ಕೆ..!
ಇಸ್ಪೀಟು ಅಡ್ಡೆಯ ಮೇಲೆ ಭರ್ಜರಿ ದಾಳಿ ಕೇಸ್..! ಮುಂಡಗೋಡ ಪೊಲೀಸ್ರಿಗೆ ಬಂದಿತ್ತು ಅದೊಂದು ಪೋನ್ ಕಾಲ್, ಬೆನ್ನತ್ತಿ ಹೋದವರದ್ದೇ ರೋಚ”ಕತೆ”..!
ಶಿರಸಿ ಬಳಿ ಹೋಂ ಸ್ಟೇಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಬಂಧನ, ಬಂಧಿತರು ಯಾರ್ಯಾರು ಗೊತ್ತಾ..? ವಿವರ ಇಲ್ಲಿದೆ ನೋಡಿ..!
ವಾಯುಭಾರ ಕುಸಿತ ಹಿನ್ನೆಲೆ; ಜು.29 ರವರೆಗೆ ಅತೀ ಭಾರೀ ಮಳೆ ಮುನ್ಸೂಚನೆ..!
ಶಿರಸಿ ಡಿವೈಎಸ್ಪಿ ನೇತೃತ್ವದಲ್ಲಿ ಭರ್ಜರಿ ದಾಳಿ, ಇಸ್ಪೀಟು ಆಟದಲ್ಲಿ ತೊಡಗಿದ್ದ 19 ಜನರ ಬಂಧನ, ಸಿಕ್ಕ ಹಣವೆಷ್ಟು..? ಹಾವೇರಿ ವೈದ್ಯನ ರೆಸಾರ್ಟಿನಲ್ಲಿ ದಂಧೆ..!?
ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ..!
ಅರಣ್ಯದಲ್ಲಿ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸುವಂತೆ ಸಚಿವ ಈಶ್ವರ ಖಂಡ್ರೆ ಸೂಚನೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ ಕರಾವಳಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ..!
ಕೋರ್ಟ್ ಆವರಣದಲ್ಲೇ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪಾಪಿ ಪತಿ..!
ಉತ್ತರ ಕನ್ನಡ; ಗುಡ್ಡ ಕುಸಿತ, ಕಡಲುಕೊರೆತ ತಡೆಗೆ 800 ಕೋಟಿ ಅನುದಾನ- ಸಚಿವ ಕೃಷ್ಣ ಬೈರೇಗೌಡ
Category: ದೈವ ದರ್ಶನ..
ನಾಲ್ಕೂವರೇ ದಶಕಗಳಿಂದ ಎಣ್ಣೆಇಲ್ಲದೇ ಉರಿಯುತ್ತಿದ್ದ ಚಿಗಳ್ಳಿಯ ದೀಪಗಳು ಆರಿ ಹೋದ್ವಾ..?
ನಿಜ ಈ ಸುದ್ದಿ ಮುಂಡಗೋಡಿಗರ ಪಾಲಿಗೆ ನಿಜಕ್ಕೂ ಬಲೂ ನೋವು, ಅಚ್ಚರಿ, ಆತಂಕ ತರುವಂತದ್ದು. ಯಾಕಂದ್ರೆ, ಕಳೆದ 45 ವರ್ಷಗಳಿಂದ ನಡೆದುಕೊಂಡು ಬಂದಿದ್ದ, ಭಕ್ತಿ ಭಾವುಕತೆಗೆ ಸಾಕ್ಷಿಯಾಗಿದ್ದ ತ್ರಿಮೂರ್ತಿಗಳ ಪ್ರತಿರೂಪದಂತೆ ಇದ್ದ ಆ ದೀಪಗಳು ಆರಿ ಹೋಗಿವೆ ಅನ್ನೋ ಸುದ್ದಿ ಇದೆ. ಆದ್ರೆ, ಖಚಿತತೆಯ ಅವಶ್ಯಕತೆ ಇದೆ. ಮುಂಡಗೋಡ ತಾಲೂಕಿನ ಹೆಮ್ಮೆಯಾಗಿದ್ದ, ಐತಿಹಾಸಿಕ, ಚಿಗಳ್ಳಿಯ ವಿಶ್ವ ವಿಖ್ಯಾತ, ಎಂದೂ ಆರದ ದೀಪಗಳು ಆರಿಹೋದ್ವಾ..? ಇಂತಹದ್ದೊಂದು ಅಚ್ಚರಿಯ, ಆತಂಕದ ಸುದ್ದಿ ಹೊರಬಿದ್ದಿದೆ. ಇವತ್ತು ಅಂದ್ರೆ, ಬುಧವಾರ ಸಂಜೆ ಹೊತ್ತಿನಲ್ಲಿ...
“ಆಕಾಶದತ್ತ ಚಿಗರಿತು ಬೇರು ಮುತ್ತಾತಲೇ ಪರಾಕ್” ದೇವರಗುಡ್ಡ ಮಾಲತೇಶ ಸ್ವಾಮಿಯ ಕಾರ್ಣಿಕ
ಆಕಾಶದತ್ತ ಚಿಗರಿತು ಬೇರು ಮುತ್ತಾತಲೇ ಪರಾಕ್” ಇದು ಪ್ರಸಕ್ತ ವರ್ಷದ ದೇವರಗುಡ್ಡ ಮಾಲತೇಶ ಸ್ವಾಮಿಯ ಕಾರ್ಣಿಕ.. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಸ್ವಾಮಿಯ ದೈವ ವಾಣಿ ಕಾರ್ಣಿಕ ಶುಕ್ರವಾರ ಸಂಜೆ ಜರುಗಿತು. ನಾಗಪ್ಪಜ್ಜ ಉರ್ಮಿ 21 ಅಡಿ ಬಿಲ್ಲನ್ನು ಏರಿ “ಆಕಾಶದತ್ತ ಚಿಗರಿತು ಬೇರು ಮುತ್ತಾತಲೇ ಪರಾಕ್” ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ವಿಜಯದಶಮಿಯ ಮುನ್ನಾದಿನ ಕ್ಷೇತ್ರ ದೇವರಗುಡ್ಡದಲ್ಲಿ ಗೊರವಯ್ಯ ಕಾರ್ಣಿಕ ನುಡಿಯುವ ಸಂಪ್ರದಾಯವಿದೆ. “ದಸರಾ ಸಂದರ್ಭದಲ್ಲಿ ಕಾರ್ಣಿಕ ನುಡಿಯುವ ನಾಗಪ್ಪ ಉರ್ಮಿ 21 ಅಡಿ...
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರದ ಈ ವರ್ಷದ ಕಾರಣೀಕ..!
ಸಂಪಾಯಿತಲೇ ಪರಾಕ್” ಇದು ಪ್ರಸಕ್ತ ವರ್ಷದ ಶ್ರೀ ಕ್ಷೇತ್ರ ಮೈಲಾರಲಿಂಗನ ಕಾರಣಿಕ ನುಡಿ. ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಡೆಂಕನಮರಡಿಯಲ್ಲಿ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗೊರವಯ್ಯ ಕಾರಣೀಕ ನುಡಿದಿದ್ದಾರೆ. ಲಕ್ಷಾಂತರ ಭಕ್ತರ ನಡುವೆ ಸರಸರನೇ ಬಿಲ್ಲನ್ನೇರಿದ ವರ್ಷದ ಭವಿಷ್ಯ ವಾಣಿ ನುಡಿಯುವ ಗೊರವಯ್ಯ ರಾಮಣ್ಣ ಸದ್ದಲೇ ಎನ್ನುತ್ತ ದೇವವಾಣಿ ಎನ್ನಲಾಗುವ ವರ್ಷದ ದೇವವಾಣಿ “ಸಂಪಾಯಿತಲೇ ಪರಾಕ್” ಕಾರ್ಣಿಕದ ನುಡಿ ನುಡಿದರು. ಈ ಭವಿಷ್ಯವಾಣಿ ಆಡಳಿತದ ಏಳುಬೀಳು ಹಾಗೂ ಪ್ರಕೃತಿ ಬದಲಾವಣೆ ಮುನ್ಸೂಚನೆ...
ಸಾಲಗಾಂವ್ ಬಾಣಂತಿದೇವಿ ಕೆರೆಯಲ್ಲಿ ಹರಕೆಯ ರೂಪದಲ್ಲಿ ತೇಲುತ್ತವೆ ಕಂದಮ್ಮಗಳು..! ಹೆತ್ತಮ್ಮಗಳ ಕಂಗಳಲ್ಲಿ ಆನಂದಬಾಷ್ಪ, ಹೇ ತಾಯೇ ಕಾಪಾಡಮ್ಮ..!!
ಇದು ಅಕ್ಷರಶಃ ಭಕ್ತಿಯ ಪರಾಕಾಷ್ಟೆ. ದೇವರ ಸನ್ನಿದಾನದ ಮಹತ್ವ ಸಾರುವ ಅದ್ಭುತ ಸೇವೆ. ಇಲ್ಲಿ ಹಸುಗೂಸುಗಳು ಕೆರೆಯ ನೀರಲ್ಲಿ ತೇಲುತ್ತವೆ. ಒಂಬತ್ತು ತಿಂಗಳು ಹೊತ್ತು ಹೆತ್ತ ಕಂದಮ್ಮಗಳನ್ನು ಹೆತ್ತ ತಾಯಿಯೇ ಕೆರೆಯ ನೀರಲ್ಲಿ ಹಾಕಿ ನಿರುಮ್ಮಳವಾಗಿ “ಅವ್ವಾ ನನ್ನ ಕಂದನನ್ನು ನಿನ್ನ ಮಡಿಲಲ್ಲಿ ಹಾಕಿದ್ದೇನೆ ರಕ್ಷಿಸುವ ಭಾರವು ನಿನ್ನದೇ ತಾಯಿ” ಅಂತಾ ಅಂಗಲಾಚುತ್ತಾಳೆ. ಆ ಹೆತ್ತ ತಾಯಿ ಕಣ್ಣಲ್ಲಿ ಆನಂದ ಬಾಷ್ಪಗಳು ಸುರಿಯುತ್ತವೆ. ಬಾಣಂತಿದೇವಿಯ ಮಡಿಲಲ್ಲಿ ತನ್ನ ಕಂದಮ್ಮನನ್ನು ಹಾಕಿ ಕೃತಾರ್ಥಳಾದ ಧನ್ಯತಾ ಭಾವ ಆ...
ಅತ್ತಿವೇರಿ ಬಸವಧಾಮದಲ್ಲಿ ಉ.ಕ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಯಶಸ್ವಿ..! ಹಸಿರ ಸಿರಿಯ ನಡುವೆ ಭೋರ್ಗರೆದ ವಚನಾಮೃತ..!!
ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ವಚನ ಸಾಹಿತ್ಯ ಪ್ರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿಜಗುಣಾನಂದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಶರಣರ ವಚನಗಳ ಕುರಿತು ಮನಮುಟ್ಟುವ ಹಾಗೆ ವರ್ಣಿಸಿದ್ರು. ನಮ್ಮ ದೇಶದಲ್ಲಿ ಎಲ್ಲರೂ ಬರೀ ದೇವರ ಬಗ್ಗೆ ಮಾತಾಡಿದ್ರು, ಆದ್ರೆ ಬಸವಣ್ಣನವರು ಮಾತ್ರ ಮನುಷ್ಯರ ಬಗ್ಗೆ ಮಾತಾಡಿದ್ರು. ಹೀಗಾಗಿ, ಶರಣರ ವಚನಗಳು ಇಂದಿಗೂ ಜನಸಾಮಾನ್ಯರ ನಡುವೆ ನಿಚ್ಚಳವಾಗಿವೆ ಅಂತಾ ತಿಳಿಸಿದ್ರು....
ದೈವಾಧೀನರಾದ ತಂದೆ ತಾಯಿಗಳ ಮೂರ್ತಿ ಕೆತ್ತಿ, ಮನೆಯಲ್ಲೇ ನಿತ್ಯವೂ ಪೂಜೆ ಮಾಡುವ ಅಪರೂಪದ ಮಗ..!
ರಾಣೇಬೆನ್ನೂರು: ಸದ್ಯ ಜೊತೆಗಿದ್ದ ತಂದೆ ತಾಯಿಗಳನ್ನೇ ಸಾಕಿ ಸಲಹುವುದು ಮಕ್ಕಳಿಗೆ ಬೇಡವಾಗಿದೆ. ಜೀವಂತವಾಗಿದ್ದ ಹೆತ್ತವರನ್ನೇ ವೃದ್ದಾಶ್ರಮಗಳಿಗೆ ಬಿಟ್ಟು ಬಂದು ಲಲ್ಲೆ ಹೊಡೆಯುವ ಅದೇಷ್ಟೋ ಮಕ್ಕಳು ನಮ್ಮ ನಡುವೆ ಇದ್ದಾರೆ. ಇದರ ನಡುವೆ ಎಂದೋ ದಿವಂಗತರಾಗಿ ಹೋದ ತಂದೆ, ತಾಯಿ, ಅಜ್ಜ ಅಜ್ಜಿ ಸೇರಿದಂತೆ ಪೂರ್ವಿಕರನ್ನೇಲ್ಲ ಇಲ್ಲೊಬ್ಬ ಹೃದಯವಂತ ವ್ಯಕ್ತಿ, ಮೂರ್ತಿ ಮಾಡಿಟ್ಟು ನಿತ್ಯವೂ ಪೂಜೆ ಮಾಡ್ತಿದಾರೆ ಅನ್ನೋದು ಅಚ್ಚರಿಯಾದ್ರೂ ಸತ್ಯ. ಹೌದು, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಹೀಗೊಬ್ಬ ಹೃದಯವಂತ ತನ್ನ ಹಿರಿಯರ...
“ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಇದು ಕ್ಷೇತ್ರ ಮೈಲಾರ ಕಾರ್ಣೀಕ..!
ಮೈಲಾರ: “ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್” ಇದು ಪ್ರಸಕ್ತ ವರ್ಷದ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ, ವೃತಾದಾರಿ ಗೊರವಯ್ಯ ನುಡಿದ ಕಾರ್ಣಿಕ ನುಡಿ. ಗೊರವಯ್ಯ ರಾಮಪ್ಪ ಎಂಬುವವರು 14 ಅಡಿ ಎತ್ತರದ ಬಿಲ್ಲನ್ನೇರಿ ಪ್ರಸಕ್ತ ವರ್ಷದ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ. ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಎಂಬ ಕಾರ್ಣಿಕ ವಿಶ್ಲೇಷಣೆ ಮಾಡಲಾಗಿದೆ. ಡೆಂಕಣಮರಡಿಯಲ್ಲಿ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಣೆ...
“ಆಕಾಶದ ಗುಡ್ಡಕ್ಕೆ ಶಿಶು ಏರಿತಲೇ ಪರಾಕ್” ದೇವರಗುಡ್ಡದ ಕಾರಣೀಕ ನುಡಿ..! ಕಾರಣಿಕದ ಅರ್ಥವೇನು ಗೊತ್ತಾ..?
ದೇವರಗುಡ್ಡ: ಐತಿಹಾಸಿಕ ದೇವರಗುಡ್ಡ ಮಾಲತೇಶ ಸ್ಚಾಮಿಯ ಕಾರಣೀಕ ನುಡಿ ಹೊರಬಿದ್ದಿದೆ. “ಅಕಾಶದ ಗುಡ್ಡಕ್ಕೆ ಶಿಶು ಏರಿ ತಲೆ ಪರಾಕ್” ಇದು ಪ್ರಸಕ್ತ ವರ್ಷದ ದೇವರಗುಡ್ಡ ಕಾರಣಿಕ ನುಡಿ. ವೃತಾಧಾರಿ ಗೊರವಯ್ಯ ನಾಗಪ್ಪಜ್ಜ ದುರಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ. ವಿಜಯ ದಶಮಿಯ ಆಯುಧ ಪೂಜೆ ದಿನದಂದು ಪ್ರತಿವರ್ಷ ಕಾರ್ಣಿಕ ನುಡಿವ ಗೊರವಯ್ಯನವರು, ಇಂದು ಬಿಲ್ಲನ್ನೇರಿ ಕಾರಣಿಕ ನುಡಿದಿದ್ದಾರೆ. ಕಾರಣೀಕ ತಾತ್ಪರ್ಯ..! ಅಂದಹಾಗೆ, ಪ್ರತೀ ವರ್ಷ ಆಯುಧ ಪೂಜೆಯ ದಿನ ನುಡಿಯುವ ದೇವರಗುಡ್ಡದ ಕಾರಣೀಕಚನ್ನು ಬಹುತೇಕ ರೈತರ ಕೃಷಿ...
ಸಂತ ಸೇವಾಲಾಲರ ಜನ್ಮಸ್ಥಳದಲ್ಲಿ RSS ಶಿಬಿರಕ್ಕೆ ವಿರೋಧ ಸರಿಯಲ್ಲ, ಬಂಜಾರಾ ಸಮುದಾಯಕ್ಕೆ ಮುಖಂಡ ಶೇಖರ್ ಲಮಾಣಿ ಮನವಿ..!
ಮುಂಡಗೋಡ: ಬಂಜಾರಾ ಸಮುದಾಯದ ಪವಿತ್ರ ಕ್ಷೇತ್ರ ಸಂತ ಶ್ರೀ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪದ ಬಾಯಾಗಢನಲ್ಲಿ RSS ನವರು ನಡೆಸುತ್ತಿರೋ ಶಿಬಿರಕ್ಕೆ ಬಂಜಾರಾ ಸಮುದಾಯದ ಕೆಲವು ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ, ಹೀಗೆ RSS ನ ಶಿಬಿರವನ್ನು ವಿರೋಧಿಸುವುದು ಸರಿಯಲ್ಲ, ಶಿಬಿರ ನಡೆಯುವಂತಾಗಲಿ ಅಂತಾ ಮುಂಡಗೋಡಿನ ಬಂಜಾರಾ ಮುಖಂಡ, ಪಟ್ಟಣ ಪಂಚಾಯತಿ ಸದಸ್ಯ ಶೇಖರ್ ಲಮಾಣಿ ಆಗ್ರಹಿಸಿದ್ದಾರೆ. RSS ಬಗ್ಗೆ ಅರಿವಿದೆ..! ನಮಗೆ RSS ಬಗ್ಗೆ ಅರಿವಿದೆ. ದೇಶಭಕ್ತಿಯನ್ನು ಜಾಗ್ರತಗೊಳಿಸಿ, ಯುವಕರನ್ನು ದೇಶಭಕ್ತಿಯೆಡೆಗೆ ಸಂಘಟಿಸುವುದೇ RSS ಆಗಿದೆ....