ಮುಂಡಗೋಡ ತಾಲೂಕಿನ ಗುಂಜಾವತಿ ಬಳಿ ರವಿವಾರ ಅರಣ್ಯಗಳ್ಳತನದ ವಿಫಲ ಯತ್ನ ನಡೆದಿದೆ. ಮೂರು ಬೆಲೆಬಾಳುವ ಮರಗಳನ್ನ ಕಡಿದು ಸಾಗಾಟ ಮಾಡಲು ಇನ್ನಿಲ್ಲದ ಯತ್ನ ನಡೆಸಿದ್ದಾರೆ ಆಗಂತುಕರು. ಒಂದರ್ಥದಲ್ಲಿ ಮೇಲ್ನೋಟಕ್ಕೆ, ಇದೇಲ್ಲ ಅದ್ಯಾವನೋ ಅಡ್ನಾಡಿ ಹುಂಬ ಅರಣ್ಯ ಭಕ್ಷಾಸುರನ ಫ್ರೀ ಪ್ಲ್ಯಾನ್ಡ್ ಕೃತ್ಯವಾ ಅಂತಾ ಅನಿಸ್ತಿದೆ. ತಮ್ಮ ಅಕ್ರಮಗಳಿಗೆ “ಬಗಣಿ ಗೂಟ” ಇಟ್ಟು ಅಕ್ರಮಗಳ ಬೆನ್ನು ಬಿದ್ದಿದ್ದ ಅರಣ್ಯ ಇಲಾಖೆಯ ದಕ್ಷ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿರೋ ಕೃತ್ಯ ಅನಿಸ್ತಿದೆ. ಕೆಲವು ದಕ್ಷರ ಮೇಲೆ ಕೆಟ್ಟ ಹೆಸರು ತರಲೆಂದೇ ಮಾಡಿರಬಹುದಾದ...
Top Stories
PSI ಮಹಾಂತೇಶ್ ವಾಲ್ಮೀಕಿ ಮುಂಡಗೋಡಿಗೆ ವರ್ಗ..! ವರ್ಗಾವಣೆ ಕ್ಯಾನ್ಸಲ್ ಮಾಡಿಸೋಕೆ ಕಾಣದ ಕೈಗಳ “ಜಂ”ಪಾಠ..! ಛೇ, ಹೀಗೂ ಇದೆಯಾ ವ್ಯವಸ್ಥೆ..?
ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
Category: ಎಡಿಟರ್ ಸ್ಪೀಕ್ಸ್
ಸನವಳ್ಳಿಗಷ್ಟೇ ಸೀಮಿತವಾಯ್ತಾ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧದ ಸಮರ..? ಸಾಹೇಬ್ರೆ, ತಾಲೂಕಿನೆಲ್ಲೆಡೆ ಇದೆ ಅಕ್ರಮ ಭಟ್ಟಿಗಳು..! ಕ್ರಮ ಯಾವಾಗ..?
ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ಹೆಜ್ಜೆಗೊಂದರಂತೆ ಇರೋ ಅಕ್ರಮ ಇಟ್ಟಿಗೆ ಭಟ್ಟಿಗಳ ಮೇಲೆ ತಹಶೀಲ್ದಾರ್ ಶಂಕರ್ ಗೌಡಿ ಸಾಹೇಬ್ರು ಸಮರ ಸಾರಿದ್ದಾರೆ. ನಿನ್ನೆ ಇಡೀ ಸನವಳ್ಳಿಯ ಅಕ್ರಮ ಇಟ್ಟಿಗೆ ಭಟ್ಟಿ ಮಾಲೀಕರಿಗೆ ಛಳಿ ಬಿಡಿಸಿದ್ದಾರೆ. ಹೀಗಾಗಿ, ತಾಲೂಕಿನ ಮಂದಿ ತಹಶೀಲ್ದಾರರ ಖಡಕ್ ಕ್ರಮಕ್ಕೆ ಶ್ಲಾಘನೆ ವ್ಯಕ್ತ ಪಡಿಸ್ತಿದಾರೆ. ನಿಜ..! ತಾಲೂಕಿನ ಸನವಳ್ಳಿಯಲ್ಲಿ ಇಟ್ಟಿಗೆ ಭಟ್ಟಿಗಳ ರಾಜಾರೋಶತನಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದ್ದೇ ಇದೆ. ಅದನ್ನ ಇಡೀ ತಾಲೂಕಿನ ಜನ ಬಯಸಿದ್ರು. ಕಾರಣವೆಂದ್ರೆ, ಅಲ್ಲಿ ಸಾಕಷ್ಟು ಕಾನೂನುಗಳ ಉಲ್ಲಂಘನೆ ಆಗ್ತಿತ್ತು....
ಸನವಳ್ಳಿ ಬಾಲಕರ ಭವಿಷ್ಯಕ್ಕೆ ಬೆಳಕಾದ ಸಚಿವ್ರು..! ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ ಅಲ್ವಾ..? ಸಲಾಂ ಸಾಹೇಬ್ರೇ..!
ನಿಜ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ರಾಜಕೀಯವಾಗಿ ಅದೇನೋ ನಂಗೆ ಗೊತ್ತಿಲ್ಲ. ಆದ್ರೆ ಮಾನವೀಯ ಮೌಲ್ಯಗಳ ವಿಷಯಕ್ಕೆ ಬಂದ್ರೆ ಬಹುಶಃ ಕ್ಷೇತ್ರದಲ್ಲಿ ಮನೆ ಮನೆಗೂ ಶಿವರಾಂ ಹೆಬ್ಬಾರ್ ರವರ ಆಸರೆಯ ಅರಿವು ಇದೆ. ಮನೆ ಮನೆಯಲ್ಲೂ ಸಾಂತ್ವನದ ಕಿರಿಬೆರಳಿನ ಆಸರೆಗಳಿವೆ. ಇವತ್ತೂ ಕೂಡ ಅದೇ ಶಿವರಾಂ ಹೆಬ್ಬಾರ್ ನೊಂದಿದ್ದ ಒಂದಿಡೀ ಕುಟುಂಬಕ್ಕೆ ಕಿರಿಬೆರಳಿನ ಆಸರೆ ನೀಡಿದ್ದಾರೆ. ಬಡಬಾಲಕರ ಭವಿಷ್ಯತ್ತಿಗೆ ಬೆಳಕಾಗಿದ್ದಾರೆ. ಅಸಲು, ನಿನ್ನೆ ಮಂಗಳವಾರ ಪಬ್ಲಿಕ್ ಫಸ್ಟ್ ನ್ಯೂಸ್ ಬಡ ಬಾಲಕರ ಕುರಿತು ವಿಸ್ತೃತ ವರದಿ...
ಸನವಳ್ಳಿಯ ಬಡ ಬಾಲಕರ ಕಷ್ಟಕ್ಕೆ ಹೃದಯವಂತರ ಸ್ಪಂಧನೆ, ಮಾನವೀಯತೆ ತೋರಿದ್ರು ಅಧಿಕಾರಿಗಳು..!
ನಿಜಕ್ಕೂ ನನ್ನ ಕಣ್ಣಂಚಲ್ಲಿ ಹನಿಗಳು ಜಿನುಗುತ್ತಿದೆ. ಸನವಳ್ಳಿಯ ಬಾಲಕರ ಕರುಣಾಜನಕ ಕತೆ ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಪ್ರಸಾರ ಆಗಿದ್ದೇ ತಡ, ಹತ್ತಾರು ಪೋನ್ ಕಾಲ್ ಗಳು, ನೂರಾರು ಮೆಸೇಜ್ ಗಳು, ಅಣ್ಣಾ ಆ ಬಾಲಕರಿಗೆ ನಾವೂ ನಮ್ಮ ಕೈಲಾದಷ್ಟು ಸಹಾಯ ಮಾಡ್ತಿವಿ ದಯವಿಟ್ಟು ಅವ್ರ ಅಕೌಂಟ್ ನಂಬರ್ ಕಳಿಸಿ ಅಂತಾ ಬೆಂಗಳೂರು ಸೇರಿ ರಾಜ್ಯದ ಹಲವೆಡೆಯಿಂದ ಹೃದಯವಂತರು ಕೇಳಿಕೊಳ್ತಿದಾರೆ. ಆ ಬಡ ಬಾಲಕರ ಜೊತೆ ನಾವಿದ್ದೇವೆ ಏನು ಕಳಿಸಬೇಕು ಹೇಳಿ ಕಳಿಸಿ ಕೊಡ್ತಿವಿ ಅಂತಾ ಹೃದಯ...
ನೌಕರರ ವರ್ಗಾವಣೆಯಲ್ಲಿ ಪತಿ, ಪತ್ನಿಯರಿಗಷ್ಟೇ ಅಲ್ಲ ಪೊಲೀಸರಿಗೂ ವಿನಾಯಿತಿ ನೀಡಿ, 16A ತಿದ್ದುಪಡಿ ವಿರುದ್ಧ ಪೊಲೀಸ್ ಪೇದೆಗಳ ಮೂಕರೋಧನ..!
ಇದು ಸರ್ಕಾರಿ ನೌಕರರಿಗೆ ಬಹುದೊಡ್ಡ ಆಘಾತ ಅಂತಲೇ ಹೇಳಲಾಗ್ತಿದೆ. ಅದ್ರಲ್ಲೂ ನಮ್ಮ ರಕ್ಷಣೆಗಾಗಿ ಹಗಲಿರುಳು ರಜೆಯಿಲ್ಲದೇ ದುಡಿಯೋ ಪೊಲೀಸರಿಗೆ ಸರ್ಕಾರದ ಅದೊಂದು ಕಾನೂನು ಇಡಿ ಇಡಿಯಾಗಿ ನೋವು ಮತ್ತು ಆತಂಕಕ್ಕೆ ದೂಡಿದೆ ಅಂತಾ ಖುದ್ದು ಪೊಲೀಸ್ ಇಲಾಖೆಯ ಅಸಂಖ್ಯ ಪೇದೆಗಳು ಅಲವತ್ತುಕೊಂಡಿದ್ದಾರೆ. ರಾಜ್ಯ ಸರ್ಕಾರ ಸದ್ಯ 16 A ಕಾಲಂ ನ್ನು ತಿದ್ದುಪಡಿ ಮಾಡಿರೋದು ಸಾಕಷ್ಟು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ. ಏನದು ತಿದ್ದುಪಡಿ..? ಈ ಹಿಂದೆ 16A ಕಾಲಂ ಅಡಿಯಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಬಲಿಷ್ಟ ಕಾನೂನು...
ಪಾಳಾ ಭಾಗದಲ್ಲಿ ಹೆಜ್ಜೆ ಹೆಜ್ಜೆಗೂ ಮಟ ಮಟ ಮಟ್ಕಾ, ಅಸಲು, ದಂಧೆ ನಡಿತಿರೋದು ಯಾರ ನೆರಳಲ್ಲಿ ಗೊತ್ತಾ..? “ಮಟ್ಕಾಲಿ”ಯ ಅಡ್ಡಕಸುಬಿಗೆ ಶ್ರೀ ರಕ್ಷೆ ಯಾರದ್ದು..?
ಉತ್ತರ ಕನ್ನಡ ಜಿಲ್ಲೆಯಿಂದ ಎಸ್ಪಿಯಾಗಿದ್ದ ಡಾ.ಸುಮನಾ ಪೆನ್ನೇಕರ್ ಮೇಡಂ ವರ್ಗಾವಣೆಯಾದ ಗಳಿಗೆಯಿಂದಲೇ ಅಕ್ರಮ ದಂಧೆಗಳು ಎಲ್ಲೆಂದರಲ್ಲಿ ಮತ್ತೆ ಬಾಲ ಬಿಚ್ಚುತ್ತಿವೆ. ಅದ್ರಂತೆ ಮುಂಡಗೋಡ ತಾಲೂಕಿನಲ್ಲಿ ಈಗ ಮತ್ತೆ ಮಟ್ಕಾ ಅನ್ನೊ ದಂಧೆ ಹೆಜ್ಜೆ ಹೆಜ್ಜೆಗೂ ಬಡವರ ರಕ್ತ ಹೀರುತ್ತಿದೆ. ಅಂದಹಾಗೆ, ಇದು ಉತ್ತರ ಕನ್ನಡಕ್ಕೆ ನೂತನ ಎಸ್ಪಿಯಾಗಿ ಬಂದಿರೋ ಎನ್.ವಿಷ್ಣುವರ್ಧನ್ ಸಾಹೇಬ್ರಿಗೆ “ಪಬ್ಲಿಕ್ ಫಸ್ಟ್” ನೀಡುತ್ತಿರೋ “ಫಸ್ಟ್ ಇನ್ಪರ್ಮೇಶನ್ ರಿಪೋರ್ಟ್” ಅಂದ್ರೆ ಮೊದಲ FIR ಮಟ್ಕಾ ಅಡ್ಡೆಗಳು..! ಎಸ್ಪಿ ಸಾಹೇಬ್ರೆ, ಈಗ್ಗೆ ಒಂದು ವರ್ಷವಾಯ್ತು. ಬಹುತೇಕ ಮುಂಡಗೋಡ...
ಸಂತೋಷ ರಾಯ್ಕರ್ ಜೆಡಿಎಸ್ ಅಭ್ಯರ್ಥಿ ಅಲ್ಲವಂತೆ, ಅಷ್ಟಕ್ಕೂ ಕೋಮಾದಲ್ಲಿರೋ ಪಕ್ಷಕ್ಕೆ ಜೀವ ತುಂಬ್ತಾರಾ ನಾಗೇಶ್ ನಾಯ್ಕ್..?
ಯಲ್ಲಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅನ್ನೋದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷವಾಗಿ ವರ್ಷಗಳೇ ಕಳೆದು ಹೋಗಿದೆ. ಪ್ರತೀ ಚುನಾವಣೆ ಬಂದಾಗಲಷ್ಟೇ ಎಲ್ಲೆಲ್ಲಿಂದಲೋ ಬಂದು ಬ್ಯಾನರು, ಪ್ಲೆಕ್ಸು ಕಟ್ಟುವ ನಾಯಕರುಗಳು ಇನ್ನೇನು ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ನಾಪತ್ತೆಯಾಗುವ ಚಾಳಿ “ಸಂಪ್ರದಾಯ” ಆದಂತೆ ಆಗಿದೆ. ಸದ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರೋ ಈ ಸಂದರ್ಭದಲ್ಲೂ ಮತ್ತದೇ ಸಂಪ್ರದಾಯ ಶುರುವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಪ್ರಸಕ್ತ ಮುಂಡಗೋಡ ಜೆಡಿಎಸ್ ನಲ್ಲಿ ನಡೆಯುತ್ತಿರೋ ವಿದ್ಯಮಾನಗಳು ಅಂತಹದ್ದೊಂದು ಅನುಮಾನಕ್ಕೆ ಕಾರಣವಾಗ್ತಿದೆ. ಅವ್ರು ಸಂತೋಷ ರಾಯ್ಕರ್ ಹೆಚ್ಚೂ...
ಮುಂಡಗೋಡ ಪಿಎಸ್ಐ ಬಸಣ್ಣನ ಎತ್ತಂಗಡಿಗೆ ಪ್ಲ್ಯಾನ್ ರೆಡಿ, ಠಾಣೆಯ ಅಂಗಳದಲ್ಲಿ ಬ್ರೋಕರುಗಳ ಮಸಲತ್ತು ನಿಜಾನಾ..?
ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರ ಎತ್ತಂಗಡಿಗೆ ಅದೊಂದು ಪಡೆ ಸನ್ನದ್ಧವಾಗಿದೆಯಂತೆ. ಅಂತಹದ್ದೊಂದು ರೂಮರ್ರು ತಾಲೂಕಿನ ತುಂಬ ಎದ್ದಿದೆ. ತಮ್ಮ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸ್ತಿಲ್ಲ, ನಮಗೆ ಕಿಮ್ಮತ್ತು ಕೊಡ್ತಿಲ್ಲ ಅಂತಾ ಅದೊಂದು ಟೀಂ ಅದ್ಯಾರ್ಯಾರದ್ದೋ ಕಿವಿ ಕಚ್ಚಿ ಹೆಂಗಾದ್ರೂ ಸರಿ ಪಿಎಸ್ಐರನ್ನ ಇಲ್ಲಿಂದ ಎತ್ತಂಗಡಿ ಮಾಡಿಸಬೇಕು ಅನ್ನೋ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ದಕ್ಷ ಯುವ ಪಡೆ..! ಅಂದಹಾಗೆ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಇವತ್ತಿಗೂ ದಕ್ಷ ಯುವ ಪಡೆ ಇದೆ. ಅದ್ಯಾವನೇ ನಾಗರಿಕ ತನ್ನ ಅಳಲು ತೋಡಿಕೊಳ್ಳಲು ಠಾಣೆಯ ಮೆಟ್ಟಿಲು ಹತ್ತಿದ್ರೆ...
ಕಾತೂರಿನಿಂದ ಹಾನಗಲ್ ಅಡ್ಡೆಗೆ ಸಾಗಿಸಿದ್ದ ಕಟ್ಟಿಗೆ ಕೇಸ್ ತನಿಖೆ ಏನಾಯ್ತು..? ಅಷ್ಟಕ್ಕೂ, ಆ ಕಟ್ಟಿಗೆ ಕಾತೂರಿನ ಆ ಫಾರೆಸ್ಟರನದ್ದಾ..?
ಮುಂಡಗೋಡ: ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯ ಅಧಿಕಾರಿಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ಅಲ್ಲಿನ ಹಲವು ಸಂಗತಿಗಳು ಬಗೆದಷ್ಟು ಹೊರಬೀಳುತ್ತಿವೆ. ಅಸಲು, ಕಾತೂರು ಅರಣ್ಯ ಇಲಾಖೆಯಲ್ಲೇ ಕಾರ್ಯ ನಿರ್ವಹಿಸ್ತಿರೋ ಅವನೊಬ್ಬ ಅಧಿಕಾರಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆ ಅನಾಮತ್ತಾಗಿ ಸೀಜ್ ಆಗಿದೆ. ಅಂದಹಾಗೆ ಇದು ಇವತ್ತಿನ ಮಾತಲ್ಲ. ಸರಿಸುಮಾರು ಕಳೆದ ಎಪ್ರೀಲ್ ಕೊನೆಯ ವಾರದಲ್ಲಿ ನಡೆದಿದ್ದ ಘಟನೆ ಈಗ ಅಕ್ಷರಶಃ ಕೊನೆಯ ಮೊಳೆ ಬೀಳುವ ಹಂತದಲ್ಲಿದೆಯಂತೆ. ಅಷ್ಟಕ್ಕೂ ನಡೆದದ್ದೇನು..? ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆಗೆ...
ಕಾತೂರು ಅರಣ್ಯದ ಆ ಪ್ರದೇಶದಲ್ಲಿ ಸಿಕ್ಕಿದ್ದು 12 ಬುಡುಚಿಗಳಂತೆ..! ಎಲ್ಲದಕ್ಕೂ FIR ಆಗಿದೆಯಂತೆ, ಹಾಗಿದ್ರೆ ಈ ಪ್ರಶ್ನೆಗಳಿಗೆ ಉತ್ತರಿಸೋರ್ಯಾರು RFO ಸಾಹೇಬ್ರೆ..?
ಮುಂಡಗೋಡ: ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಮರಗಳ ಮಾರಣಹೋಮದ ಸುದ್ದಿ ಪಬ್ಲಿಕ್ ಫಸ್ಟ್ ನಲ್ಲಿ ಬಿತ್ತರಿಸಿದ್ದೇ ತಡ, ಕಾತೂರಿನ RFO ಸಾಹೇಬ್ರು ಉರಿದುಬಿದ್ದಿದ್ದಾರಂತೆ. ಅದೇಲ್ಲ ಬುಡುಚಿಗಳು ಹಳೆಯವು, ಅದರ ಮೇಲೆ ಈಗಾಗಲೇ ಕೇಸು ದಾಖಲಿಸಲಾಗಿದೆ ಅಂತೇಲ್ಲ ಬುಸುಗುಟ್ಟಿದ್ದಾರಂತೆ. ಆದ್ರೆ, ಒಂದು ಮಾತ್ರ ಅರ್ಥವಾಗ್ತಿಲ್ಲ. ಈ ಅರಣ್ಯ ಇಲಾಖೆಯ ಅಧಿಕಾರಿಗಳು ಕೇವಲ ಎಫ್ ಐ ಆರ್ ಗಷ್ಟೇ ಸೀಮಿತವಾಗಿಬಿಟ್ರಾ..? ಅಥವಾ ಅರಣ್ಯದಲ್ಲಿ ರಕ್ಷಣೆಯ ಜವಾಬ್ದಾರಿಯನ್ನೇ ಮರೆತ್ರಾ..? ಈ ಪ್ರಶ್ನೆ ಸದ್ಯ ಪರಿಸರ ಪ್ರಿಯರಿಗೆ ಕಾಡ್ತಿದೆ. 12 FIR ಆಗಿದೆಯಂತೆ..! ನಂಗೆ...