Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಹುನಗುಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಶಾಲಾ ಪ್ರಾರಂಭೋತ್ಸವ”

ಹುನಗುಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಶಾಲಾ ಪ್ರಾರಂಭೋತ್ಸವ”

ಮುಂಡಗೋಡ: ತಾಲೂಕಿನ ಹುನಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು. ಕೋವಿಡ್ ಸಂಕಷ್ಟದಿಂದ ಈಗಷ್ಟೆ ಹೊರ ಬಂದಿರೋ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್ ಲೈನ್ ಶಿಕ್ಷಣ ಪ್ರಾರಂಭವಾಗುತ್ತಿದೆ. ಅಲ್ದೆ, ಚಂದನ ವಾಹಿನಿಯ ಸಂವೇದ ಕಾರ್ಯಕ್ರಮದ ಮೂಲಕ ಇಂದಿನಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ತರಗತಿಗಳು ಪ್ರಾರಂಭವಾಗುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಶಿಕ್ಷಕರು ಈಗಾಗಲೇ ಕಳಿಸಿರೋ ಮಾರ್ಗಸೂಚಿಗಳನ್ನು ಪಾಲಿಸಿ ಪಾಠ ಕೇಳಬೇಕು ಅಂತಾ ಶಿಕ್ಷಕರು ತಿಳಿಸಿದ್ದಾರೆ.

Post
ಸಚಿವ ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ..!!

ಸಚಿವ ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ..!!

ಅದ್ಯಾಕೋ ಗೊತ್ತಿಲ್ಲ, ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ಅವ್ರು ಯಾವ ಪಕ್ಷದಲ್ಲಿದ್ದಾರೆ..? ಯಾವ ಹುದ್ದೆಯಲ್ಲಿದ್ದಾರೆ..? ಅಂತೇಲ್ಲ ನೋಡಿ ಬಕೀಟು ಹಿಡಿಯೋ ಸಲುವಾಗಿ ಹೊಗಳುವ, ಅಥವಾ ಅವ್ರಿಂದ ಬೆನ್ನು ತಟ್ಟಿಸಿಕೊಳ್ಳೊ ಇರಾದೆಯ ಜಾಯಮಾನವಂತೂ ನಮಗೆ ಖಂಡಿತ ಇಲ್ಲ. ಆದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ್ ಹೆಬ್ಬಾರ್ ಒಬ್ಬ ಉತ್ತುಂಗದ ಮಾನವೀಯ ಮೌಲ್ಯಗಳನ್ನ ಮೈಗೂಡಿಸಿಕೊಂಡ ಪಕ್ಷಾತೀತ ನಾಯಕನಾಗಿ ಕಾಣ್ತಾರೆ. ಆ ಕಾರಣಕ್ಕೆ ಅವ್ರನ್ನ ಬಹುಶಃ ಕಾಂಗ್ರೆಸ್ಸಿನ ಅದೇಷ್ಟೋ ಕಾರ್ಯಕರ್ತರೂ ಇಷ್ಟ ಪಡ್ತಾರೆ. ಅಹಂ ಸುಳಿಯಲ್ಲ..! ನಿಜ, ಶಿವರಾಮ್ ಹೆಬ್ಬಾರ್,...

Post
ಕಳ್ಳತನದ ಆರೋಪ ಹೊರಿಸಿದ ಮನೆ ಮಾಲೀಕ..! ಗೋವಾಕ್ಕೆ ದುಡಿಯಲು ಹೋಗಿದ್ದ ಮೂವರೂ ಹೆಣವಾದರು..!! ಅಯ್ಯೋ ವಿಧಿಯೇ..!

ಕಳ್ಳತನದ ಆರೋಪ ಹೊರಿಸಿದ ಮನೆ ಮಾಲೀಕ..! ಗೋವಾಕ್ಕೆ ದುಡಿಯಲು ಹೋಗಿದ್ದ ಮೂವರೂ ಹೆಣವಾದರು..!! ಅಯ್ಯೋ ವಿಧಿಯೇ..!

ಕಾರವಾರ: ಕರ್ನಾಟಕದಿಂದ ಹೊಟ್ಟೆ ಪಾಡಿಗಾಗಿ ದುಡಿಯಲು ಗೋವಾಕ್ಕೆ ಹೋಗಿದ್ದ ಒಂದೇ ಕುಟುಂಬದ ಮೂವರು ಗೋವಾದಲ್ಲೇ ನೇಣಿಗೆ ಶರಣಾಗಿರೋ ಮನಕಲುಕುವ ಘಟನೆ ನಡೆದಿದೆ. ಗೋವಾದ ಜುವಾರಿ ನಗರದ ಎಂಇಎಸ್ ಕಾಲೇಜಿನ ಆವರಣದ ಬಾಡಿಗೆ ಮನೆಯೊಂದರಲ್ಲಿ ಘಟನೆ ನಡೆದಿದ್ದು ಇಡೀ ಗೋವಾ ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ. ಹೊಟ್ಟೆಪಾಡಿಗಾಗಿ ಹೋಗಿದ್ರು..! ಕಳೆದ ಹಲವು ವರ್ಷಗಳಿಂದೇ ಕೂಲಿ ಮಾಡಿ ಬದುಕುವ ಉದ್ದೇಶದಿಂದ ಗೋವಾದಲ್ಲೇ ಬದುಕು ಸಾಗಿಸುತ್ತಿದ್ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಗ್ರಾಮದ ಹುಲಗಪ್ಪ ಅಂಬಿಗೇರ(35), ಪತ್ನಿ ದೇವಮ್ಮ ಅಂಬಿಗೇರ(28) ಹಾಗೂ...

Post
ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ..? ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳಿಂದ ಎಸಿಗೆ ಮನವಿ..!

ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ..? ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳಿಂದ ಎಸಿಗೆ ಮನವಿ..!

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲ ನಿವಾಸಿಗಳು ಶಿರಸಿ ಉಪ ವಿಭಾಗಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ್ದಾರೆ. ತಮಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ವಾಪಸ್ ಕೊಡಿಸುವಂತೆ ಕೋರಿ ಶಿರಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದಾರೆ‌. ಮನವಿಯಲ್ಲೇನಿದೆ..? ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51(1-18-0) ರಲ್ಲಿ 16 ನಿವೇಶನಗಳನ್ನ ಹಂಚಿತ್ತು. ಹಾಗೆ ಹಂಚಿದ್ದ ನಿವೇಶನಗಳನ್ನು ಪಕ್ಕದ ಜಮೀನು ಅಂದ್ರೆ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ...

Post
ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ: ಗಂಭೀರ ಗಾಯ..!

ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ: ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ಅಗಡಿ ಸಮೀಪದ ಶಾಂತಾ ದುರ್ಗಾ ರೈಸ್ ಮಿಲ್ ಬಳಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ಶಿಗ್ಗಟ್ಟಿ ಗ್ರಾಮದ ಶೇಖಪ್ಪಾ ಲಮಾಣಿ ಗಾಯಗೊಂಡ ಬೈಕ್ ಸವಾರ ಅಂತಾ ತಿಳಿದು ಬಂದಿದೆ. ಬೈಕ್ ನ ಹಿಂದಿನ ಗಾಲಿ ಪಂಕ್ಚರ್ ಆಗಿದ್ದ ಕಾರಣಕ್ಕೆ ಸ್ಕಿಡ್ ಆಗಿ ಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಹೀಗಾಗಿ, ಸ್ಥಳೀಯರು ಕೂಡಲೇ ಅಂಬ್ಯುಲೆನ್ಸ್ ತರಿಸಿ ಗಾಯಗೊಂಡ ಬೈಕ್ ಸವಾರನನ್ನು ಕಲಘಟಗಿ ತಾಲೂಕಾ ಆಸ್ಪತ್ರೆಗೆ...

Post
ನಂದಿಕಟ್ಟಾ ಭಾಗದಲ್ಲಿ ಕೈಗೆಟುಕದ “ಕರೆಂಟು”..! ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣವೇ ಕಗ್ಗಂಟು..!!

ನಂದಿಕಟ್ಟಾ ಭಾಗದಲ್ಲಿ ಕೈಗೆಟುಕದ “ಕರೆಂಟು”..! ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣವೇ ಕಗ್ಗಂಟು..!!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಜನ ಕಂಗಾಲಾಗಿದ್ದಾರೆ. ನಿತ್ಯವೂ ಇಲ್ಲಿನ ಜನ್ರು ಕತ್ತಲೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಮನೆಯಲ್ಲೇ ಕುಳಿತು ಆನ್ ಲೈನ್ ಕ್ಲಾಸ್ ಗಾಗಿ ಕಾಯ್ತಿರೊ ಮಕ್ಕಳ ಗೋಳು ಹೇಳತೀರದ್ದು. ಯಾಕಂದ್ರೆ ಇಲ್ಲಿ ಕರೇಂಟೇ ಇರಲ್ಲ. ಕಣ್ಣಾ ಮುಚ್ಚಾಲೆ..! ನಿಜ, ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದೇನು ಸಮಸ್ಯೆಯೋ ಗೊತ್ತಿಲ್ಲ. ಇಲ್ಲಿ ವಿದ್ಯುತ್ ಬಹುತೇಕ ಇರೋದೇ ಇಲ್ಲ. ಐದು ನಿಮಿಷ ಬಂದ್ರೆ, ಮತ್ತೆ ಒಂದು ಗಂಟೆ ಕರೇಂಟು ಕೈ ಕೊಡುತ್ತದೆ. ಪ್ರತೀ ಕ್ಷಣವೂ ಕಣ್ಣಾ‌ಮುಚ್ಚಾಲೆ...

Post
ಅಬ್ಬಾ..!! ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಹೇಗೆ ನೆಲಸಮಗೊಳಿಸಿದ್ರು ಗೊತ್ತಾ..?

ಅಬ್ಬಾ..!! ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಹೇಗೆ ನೆಲಸಮಗೊಳಿಸಿದ್ರು ಗೊತ್ತಾ..?

ಮುಂಡಗೋಡ: ತಾಲೂಕಿನ ಓಣಿಕೇರಿ ಗ್ರಾಮದ ಜನ ಇವತ್ತು ಒಂದು ಕ್ಷಣ ರೋಮಾಂಚಕ ಅನುಭವ ಪಡೆದುಕೊಂಡ್ರು. ಗ್ರಾಮದಲ್ಲಿ ಕುಡಿಯುವ ನೀರು ಸರಭರಾಜು ಮಾಡುವ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ನೆಲಸಮಗೊಳಿಸಲಾಯಿತು‌. ಹೌದು, ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ಸುಮಾರು 8ರಿಂದ 10 ವರ್ಷ ಹಳೆಯ, ಸಂಪೂರ್ಣ ಶಿಥಿಲಗೊಂಡಿದ್ದ ಕುಡಿಯುವ ನೀರಿನ ಟ್ಯಾಂಕ್ ಇತ್ತು. ನೀರಿನ ಟ್ಯಾಂಕ್ ಸಂಪೂರ್ಣವಾಗಿ ಶಿಥಿಲಗೊಂಡಿದ್ದ ಕಾರಣ ನೀರಿನ ಟ್ಯಾಂಕ್ ಪಕ್ಕದ ಮನೆಯ ಮಾಲೀಕರಾದ ರವಿ ಸಹದೇವಪ್ಪ ಸುಭಾಂಜಿ ಅವರ ಮನೆ ಮೇಲೆ ಯಾವುದೇ ಕ್ಷಣದಲ್ಲಾದ್ರೂ ಬಿದ್ದು...

Post
ಚವಡಳ್ಳಿ ರಸ್ತೆಯ ಗುಂಡಿ ಮುಚ್ಚಲು ಎದ್ದು ಬಂದ ಅಧಿಕಾರಿಗಳು..! ತುಂಬಾ ಥ್ಯಾಂಕ್ಸ್ ಅಂದ ಗ್ರಾಮಸ್ಥರು..!!

ಚವಡಳ್ಳಿ ರಸ್ತೆಯ ಗುಂಡಿ ಮುಚ್ಚಲು ಎದ್ದು ಬಂದ ಅಧಿಕಾರಿಗಳು..! ತುಂಬಾ ಥ್ಯಾಂಕ್ಸ್ ಅಂದ ಗ್ರಾಮಸ್ಥರು..!!

ಮುಂಡಗೋಡ:ತಾಲೂಕಿನ ಚೌಡಳ್ಳಿ, ಕ್ಯಾಸನಕೇರಿ ರಸ್ತೆಯ ಅದ್ವಾನಕ್ಕೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಲೇಟ್ ಆದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕವನ್ನೇ ಬಂದ್ ಮಾಡಿದ್ದ ಚೌಡಳ್ಳಿ ರಸ್ತೆಗೆ ತೆಪೆ ಹಚ್ಚಲಾಗಿದೆ. ಅಂದಹಾಗೆ, ಇದು ಪಬ್ಲಿಕ್ ಫಸ್ಟ್ ಬಿಗ್ ಇಂಪ್ಯಾಕ್ಟ್.. ಆಕ್ರೋಶದ ಕಟ್ಟೆಯೊಡೆದಿತ್ತು..! ಹೌದು, ಮುಂಡಗೋಡ ತಾಲೂಕಿನ ಚೌಡಳ್ಳಿ, ಮಲವಳ್ಳಿ, ಲಕ್ಕೊಳ್ಳಿ, ಕ್ಯಾಸನಕೇರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಯಲ್ಲಿ ನೀರಾವರಿ ಯೋಜನೆಗಾಗಿ ಪೈಪಲೈನ್ ಕಾಮಗಾರಿ ಮಾಡಲಾಗಿತ್ತು. ಪೈಪಲೈನ್ ಅಳವಡಿಸಲು ರಸ್ತೆಯಲ್ಲೇ ಗುಂಡಿ ತೆಗೆದು ಪೈಪಲೈನ್ ಜೋಡಿಸಲಾಗಿತ್ತು. ಆದ್ರೆ ಹಾಗೆ...

Post
ಸಚಿವ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ..! 1ರೂ.ಪರಿಹಾರ ಕೋರಿ ಮೊಕದ್ದಮೆ ದಾಖಲಿಸಿದ ನಟ..!! ಏನಿದು ಕತೆ..?

ಸಚಿವ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ..! 1ರೂ.ಪರಿಹಾರ ಕೋರಿ ಮೊಕದ್ದಮೆ ದಾಖಲಿಸಿದ ನಟ..!! ಏನಿದು ಕತೆ..?

ಬೆಂಗಳೂರು: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟನಲ್ಲಿ ಚಿತ್ರ ನಟ ಚೇತನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಕೇವಲ 1 ರೂ. ಕೇಸ್.. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಸಚಿವ ಹೆಬ್ಬಾರ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಕೇವಲ ಒಂದು ರೂಪಾಯಿ ಮಾನನಷ್ಟ ಪರಿಹಾರ ಕೋರಿ ನಟ ಚೇತನ್ ಮೊಕದ್ದಮೆ ದಾಖಲಿಸಿದ್ದಾರೆ. ಏನಿದು ವಿವಾದ..? ಇತ್ತಿಚೆಗೆ ನಟ ಚೇತನ್ ಬ್ರಾಹ್ಮಣರ ವಿರುದ್ಧ ಮಾತನಾಡಿದ್ರು ಅಂತಾ ಸಚಿವ ಶಿವರಾಮ್ ಹೆಬ್ಬಾರ್...

Post
ಕಾರವಾರ ಕದಂಬ ನೌಕಾನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವರ ವೈಮಾನಿಕ ವೀಕ್ಷಣೆ..!

ಕಾರವಾರ ಕದಂಬ ನೌಕಾನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವರ ವೈಮಾನಿಕ ವೀಕ್ಷಣೆ..!

ಕಾರವಾರ: ಭಾರತೀಯ ಐಎನ್‍ಎಸ್ ಕದಂಬ ನೌಕಾನೆಲೆಗೆ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿ ಸೀಬರ್ಡ್ ಯೋಜನೆಯ ಎರಡನೇ ಹಂತದ ಯೋಜನೆಯ ಬಗ್ಗೆ ಪರಿವಿಕ್ಷಣೆ ಮಾಡಿದ್ದಾರೆ. ಗೋವಾ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಕಾರವಾರದ ಅರಗಾದಲ್ಲಿರುವ ಐಎನ್‍ಎಸ್ ಕದಂಬ ನೌಕಾನೆಲೆಗೆ ಗುರುವಾರ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ಆಗಮಿಸಿದರು. ವೆಸ್ಟರ್ನ್ ನೇವಲ್ ಕಮಾಂಡ್ ಫ್ಲಾಗ್ ಆಫೀಸರ್ ಆಗಿರುವ ಕಮಾಂಡಿಂಗ್ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಹಾಗೂ ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್...

error: Content is protected !!