ಮುಂಡಗೋಡ: ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಟಾಪಿಸುವಂತೆ ಇಂದು ಮುಂಡಗೋಡಿನ ರಾಯಣ್ಣ ಅಭಿಮಾನಿ ಬಳಗದಿಂದ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಳೆದ ಹಲವು ವರ್ಷಗಳಿಂದ ಪಟ್ಟಣದ ಯಲ್ಲಾಪುರ-ಬಂಕಾಪುರ ರಸ್ತೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಸ್ತೆ ಅಂತಾ ನಾಮಕರಣ ಮಾಡಲಾಗಿದೆ. ಆ ಕುರಿತು ಪಟ್ಟಣ ಪಂಚಾಯತಿಯಲ್ಲಿ ದಾಖಲಾಗಿದೆ. ಆದ್ರೆ ತಾಲೂಕಿನ ಸುಮಾರು 50 ಕಿಮಿ ವ್ಯಾಪ್ತಿಯಲ್ಲಿ ಎಲ್ಲಿಯೂ ರಾಯಣ್ಣನ ಮೂರ್ತಿ ಪ್ರತಿಷ್ಟಾಪನೆಯಾಗಿಲ್ಲ. ಹೀಗಾಗಿ, ಪಟ್ಟಣದ ಕಂಬಾರಗಟ್ಟಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು, ಮುಂದಿನ ಪೀಳಿಗೆಗೆ ರಾಯಣ್ಣನವರ...
Top Stories
ಜನ-ಧನ್ ಅಕೌಂಟ್ಗೆ ಮರು ಕೆವೈಸಿ : ಸೆ.30ಕ್ಕೆ ಡೆಡ್ಲೈನ್ ಫಿಕ್ಸ್ ಮಾಡಿದೆ RBI, ಅಪ್ಡೇಟ್ ಮಾಡುವುದು ಹೇಗೆ..?
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಬಂಕಾಪುರ್ ರಸ್ತೆ ಹೆಬ್ಬಾರ ನಗರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ..!
ತುಮಕೂರಲ್ಲಿ 20 ನವಿಲುಗಳ ಧಾರುಣ ಸಾವು..!
ಮೈಸೂರು ದಸರಾ ಜಂಬೂ ಸವಾರಿ: ಗಜಪಡೆಯ 14 ಆನೆಗಳ ಸಂಪೂರ್ಣ ಮಾಹಿತಿ ಹೀಗಿದೆ..!
ಆ.8 ರಿಂದ 14ರ ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಸಪ್ತರಥೋತ್ಸವ..!
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತಲೆಗೆ ರಾಡ್ನಿಂದ ಹೊಡೆದು ಮಹಿಳೆಯ ಕೊಲೆ..!
ಆರ್ಬಿಐ ರೆಪೋ ದರ ಶೇ.5.5ರಲ್ಲಿ ಸ್ಥಿರ; ನಿಮ್ಮ ಲೋನ್ EMI ಹೊರೆ ಇಳಿಸಲು ಈ ವಿಧಾನ ಅನುಸರಿಸಿ..!
ಚಿನ್ನದ ಬೆಲೆ ಸತತ ಏರಿಕೆ: ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?
ಕೊಪ್ಪ ಬಳಿ ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿ,ಇಂದೂರಿನ ದಂಪತಿ ಸೇರಿ ಮೂವರಿಗೆ ಗಾಯ..!
ಜಿ.ಪಂ ಸಿಇಒ ದಿಲೀಷ್ ರಿಂದ ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಜೆಜೆಎಮ್ ಕಾಮಗಾರಿ ಪರಿಶೀಲನೆ..!
ಬೈಕ್ ಅಪಘಾತ, ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾ*ವು..!
ಕಾತೂರು| ಓರಲಗಿ ಗದ್ದೆಯ ಪೈಪಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ..!
ಸತತ 7 ದಿನ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ಬರೆದ ರೆಮೋನಾ ಪಿರೇರಾ..!
ಧರ್ಮಸ್ಥಳ ಶವ ಪ್ರಕರಣ; SIT ತನಿಖೆ ಉದ್ದೇಶ ಸತ್ಯ ಹೊರ ಬರಲಿ ಎಂಬುದಷ್ಟೆ, ಕಾರವಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ..!
‘ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ..ʼ ; ಹನುಮಂತ ದೇವರ ಕಾರ್ಣಿಕ..!
ಮುಂಡಗೋಡ ತಾಲೂಕಾಸ್ಪತ್ರೆ ಆವರಣದಲ್ಲೇ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ..! ಕ್ಯಾಂಟೀನ್, ಜನೌಷಧಿ ಕೇಂದ್ರದಲ್ಲಿ ಏನದು ಸಮಸ್ಯೆ..?
ಇಸ್ರೋ-ನಾಸಾ ಜಂಟಿ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ..!
ಆಕಸ್ಮಿಕವಾಗಿ ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!
Category: ಉತ್ತರ ಕನ್ನಡ
ಇದು ಮುಂಡಗೋಡ ಪುಟಾಣಿಗಳ ಪವರ್ ಫುಲ್ ಸ್ಟೆಪ್..!
ಮುಂಡಗೋಡ; ಪಟ್ಟಣದಲ್ಲಿ ರವಿವಾರ 75 ನೇ ಸ್ವಾತಂತ್ರ ದಿನಾಚರಣೆ ಸಂಭ್ರಮ ಜೋರಾಗಿತ್ತು.. ಇಲ್ಲಿನ ಪ್ರತೀ ಗಲ್ಲಿಗಳಲ್ಲೂ ಭಾರತ ಮಾತೆಯ ತ್ರಿವರ್ಣಧ್ವಜ ರಾರಾಜಿಸುತ್ತಿತ್ತು.. ಪಟ್ಟಣದ ಸಂಘಸಂಸ್ಥೆಗಳು ವಿಶೇಷವಾಗಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದ್ರು..ಇನ್ನು ಸ್ವಾತಂತ್ರ ದಿನಾಚರಣೆ ನಿಮಿತ್ತ ಮುಂಡಗೋಡಿನ ಪುಟ್ಟ ಪುಟಾಣಿ ಮಕ್ಕಳು ದೇಶಭಕ್ತಿಗೀತೆಗೆ ಹೆಜ್ಜೆ ಹಾಕಿದ್ದಾರೆ.. ಸ್ವಾತಂತ್ರ ಸಂಭ್ರಮದ ಕ್ಷಣಗಳನ್ನು ವಿನೂತನ ಡ್ಯಾನ್ಸ್ ಮಾಡುವ ಮೂಲಕ ದೇಶಭಕ್ತಿಯ ಕಂಪು ಹರಿಸಿದ್ದಾರೆ.. ಹಾಗಾದ್ರೆ ಆ ಸಕತ್ ಸ್ಟೆಪ್ ಹೇಗಿದೆ ಗೊತ್ತಾ.. ನೀವೂ ನೋಡಿ..
ಮುಂಡಗೋಡಿನಲ್ಲಿ ಸಂಗೊಳ್ಳಿ ರಾಯಣ್ಣನ ಜನ್ಮದಿನದ ಸಂಭ್ರಮ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ರಾಯಣ್ಣ ಅಭಿಮಾನಿಗಳ ಸಂಘದಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮ ದಿನ ಆಚರಿಸಲಾಯಿತು. ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ರಾಯಣ್ಣನವರ ಶೌರ್ಯ ಹಾಗೂ ಬಲಿದಾನವನ್ನು ಸ್ಮರಿಸಲಾಯಿತು. ರಾಯಣ್ಣನವರ ಪರವಾಗಿ ಘೋಷಣೆ ಕೂಗಿ ಅಭಿಮಾನಿಗಳು ಸಂಭ್ರಮಿಸಿದ್ರು.
ಹುನಗುಂದದಲ್ಲಿ ರಾಯಣ್ಣ ಬಾಯ್ಸ್ ನಿಂದ ಸಂಭ್ರಮದ ಧ್ವಜಾರೋಹಣ..!
ಮುಂಡಗೋಡ; ತಾಲೂಕಿನ ಹುನಗುಂದ ಗ್ರಾಮದಲ್ಲಿ ರಾಯಣ್ಣ ಬಾಯ್ಸ್ ವತಿಯಿಂದ ಸಂಭ್ರಮದ ಧ್ವಜಾರೋಹಣ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ರು. ಹುನಗುಂದದ ಮುಖ್ಯ ಸರ್ಕಲ್ ನಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಅಲ್ದೇ ಸರ್ಕಲ್ ನಲ್ಲಿ ಇರುವ ಧ್ವಜಸ್ತಂಭದ ಮೇಲೆ ಭಗವಾ ಧ್ವಜವನ್ನೂ ಹಾರಿಸಲಾಯಿತು. ಈ ವೇಳೆ ಗ್ರಾಮದ ರಾಯಣ್ಣ ಬಾಯ್ಸ್ ಸೇರಿದಂತೆ ಹಲವರು ಭಾಗಿಯಾಗಿದ್ರು.
ಭಲೇ ಬಹಾದ್ದೂರ್..! ಒಂದೇ ನಿಮಿಷದಲ್ಲಿ 100 ಅಡಿ ದೂರ ಟ್ರಾಕ್ಟರ್ ಎಳೆದ ಪೈಲ್ವಾನ್..!
ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ನಾಗರ ಪಂಚಮಿ ಪ್ರಯುಕ್ತ ಖಾಲಿ ಟ್ರಾಕ್ಟರ್ ಇಂಜಿನ್ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಯಲ್ಲಪ್ಪ ಫಕ್ಕೀರಪ್ಪ ತುಳಜಾನವರ್ ಎಂಬುವ ಯುವಕ, ಕೇವಲ ಒಂದು ನಿಮಿಷದಲ್ಲಿ100 ಅಡಿ ದೂರ ಟ್ರಾಕ್ಟರ್ ಎಳೆದು ಸಾಹಸ ತೋರಿಸಿದ್ರು. ಹೀಗಾಗಿ, ಗ್ರಾಮಸ್ಥರ ಸಂಭ್ರಮಕ್ಕೆ ಕಾರಣರಾದ್ರು. ಜಯಶಾಲಿ ಯುವಕನಿಗೆ ಕೊಪ್ಪ ಗ್ರಾಮಸ್ಥರು ಸನ್ಮಾನಿಸಿ ಬಹುಮಾನ ನೀಡಿದ್ರು.
ಇಬ್ಬರು ಅಂತರ್ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿದ ಮುಂಡಗೋಡ ಪೊಲೀಸ್ರು..!
ಮುಂಡಗೋಡ: ಅವ್ರು ದೇವಸ್ಥಾನ, ಒಂಟಿ ಮನೆಗಳನ್ನು ಗುಡಿಸಿ ಗುಂಡಾಂತರ ಮಾಡೋ ಮಹಾನ್ ಖದೀಮರು, ಅವಕಾಶ ಸಿಕ್ರೆ ರಾಬರಿ ಮಾಡಿ ಬಾಚಿಕೊಂಡು ಹೋಗೋ ಖತರ್ನಾಕ ಕಿರಾತಕರು, ಆದ್ರೆ ಈಗ ಮುಂಡಗೋಡ ಪೊಲೀಸರ ಕೈಗೆ ತಗಲಾಕ್ಕೊಂಡು ಬಿಟ್ಟಿದ್ದಾರೆ. ತಾಲೂಕಿನ ಮಂದಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ದೇವರನ್ನೇ ಬಿಡದವರು..! ಯಸ್, ಇವ್ರು ಅಕ್ಷರಶಃ ಅಂತರ್ ಜಿಲ್ಲಾ ಪ್ರೊಫೆಷನಲ್ ಕಳ್ಳರು. ಮುಂಡಗೋಡ ತಾಲೂಕಿನಲ್ಲಿ ದೇವಸ್ಥಾನ, ಮನೆ ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಆದ್ರೆ ನಸೀಬು...
ಎಸ್.ಎಸ್.ಎಲ್.ಸಿ ಫಲಿತಾಂಶ: ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್..!
ಶಿರಸಿ: ಇಂದು ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಸಿದ್ದಾಪುರದ ಪ್ರಶಾಂತಿ ವಿದ್ಯಾನಿಕೇತನದಲ್ಲಿ ಓದುತ್ತಿರೋ ವಿದ್ಯಾರ್ಥಿನಿ ಹೇಮಾ ಉಮೇಶ ಹೆಗಡೆ ಹಾಗೂ ಸಿದ್ದಾಪುರದ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ಎಸ್.ಎನ್.ಸುನೈ ಮತ್ತು ರೇಷ್ಮಾ ಹೆಗಡೆ 625 ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಒಬ್ಬ ವಿದ್ಯಾರ್ಥಿನಿ 625 ಅಂಕ ಗಳಿಸಿ ಸಾಧನೆ ಮಾಡಿದ್ದಳು. ಆದರೆ ಈ ಬಾರಿ...
ಹೊನ್ನಾವರದಲ್ಲಿ ಶಂಕಿತ ಭಯೋತ್ಪಾದಕನ ಬಂಧನ; ಇಂದು ಕೋರ್ಟ್ ಗೆ ಹಾಜರು ಪಡಿಸಲಿರೋ ಪೊಲೀಸರು..!
ಹೊನ್ನಾವರ: ತಾಲೂಕಿನ ಮಂಕಿ ಗ್ರಾಮದಲ್ಲಿ ನಿನ್ನೆ ಬಂಧಿಸಿದ್ದ ಶಂಕಿತ ಭಯೋತ್ಪಾದಕನನ್ನು ಇಂದು ಪೊಲೀಸರು, ಹೊನ್ನಾವರ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿರೋ ಮಾಹಿತಿ ಲಭ್ಯವಾಗಿದೆ. ಜುಫ್ರಿ ಜವಾಹರ್ ದಾಮೂದಿ ಎನ್ನುವವನನ್ನ ನಿನ್ನೆ NIA ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಐಸೀಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಜುಫ್ರಿ, ಐಸೀಸ್ ಮಾಸಿಕ ಪತ್ರಿಕೆ “ವಾಯ್ಸ್ ಆಫ್ ಹಿಂದ್” ನ್ನು ದಕ್ಷಿಣ ಭಾರತದಲ್ಲಿ ಭಾಷಾಂತರ ಮಾಡುತ್ತಿದ್ದ. ಸಾಮಾಜಿಕ ಜಾಲತಾಣ ಮೂಲಕ ಯುವಕರಿಗೆ ಪ್ರಚೋದನೆ ಕೊಡುತ್ತಿದ್ದ. ಹೀಗಾಗಿ, ಖಚಿತ...
ಇಂದೂರಿನಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟ ಅರಣ್ಯ ಇಲಾಖೆ..!
ಮುಂಡಗೋಡ: ತಾಲೂಕಿನ ಇಂದೂರು ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರೋ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಿದೆ. ಇಂದೂರು ಹೊರವಲಯದ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಭಟ್ಕಳದಲ್ಲಿ ಮತ್ತೆ NIA ದಾಳಿ; ಶಂಕಿತ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ..!
ಭಟ್ಕಳ: ಪಟ್ಟಣದಲ್ಲಿ ಮತ್ತೆ ಎನ್ಐಎ ದಾಳಿ ನಡೆದಿದೆ. ಭಯೋತ್ಪಾದನೆ ನಂಟಿನ ಆರೋಪದಡಿ ಇಲ್ಲಿನ ಉಮರ್ ಸ್ಟ್ರೀಟ್, ತೆಂಗಿನಗುಂಡಿ, ಸಾಗರ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿರೋ NIA ತಂಡ ಮೂವರನ್ನು ವಶಕ್ಕೆ ಪಡೆದಿದೆ. ಈ ಹಿಂದೆ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ಕೃತ್ಯದಲ್ಲಿ ತೋಡಗಿದ್ದವನ ಸಹೋದರನನ್ನು NIA ಟೀಂ ವಶಕ್ಕೆ ಪಡೆದ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯ ಉನ್ನತಾಧಿಕಾರಿಗಳ ಜತೆ ಗುಪ್ತವಾಗಿ ದಾಳಿ ನಡೆಸಿರುವ ಎನ್‌ಐಎ ವಶಕ್ಕೆ ಪಡೆದಿರುವ ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ಇನ್ನು, ಇಂತಹದ್ದೊಂದು ದಾಳಿ ವೇಳೆ ಜಿಲ್ಲಾ...