Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಸಿದ್ದಪ್ಪ ಹಡಪದ್ ಗೆ ಟಿಕೆಟ್ ನೀಡುವಂತೆ ಒತ್ತಾಯ: ಸಚಿವ ಹೆಬ್ಬಾರ್ ರನ್ನು ಭೇಟಿ ಮಾಡಿದ ಹುನಗುಂದ ಮುಖಂಡರು..!

ಸಿದ್ದಪ್ಪ ಹಡಪದ್ ಗೆ ಟಿಕೆಟ್ ನೀಡುವಂತೆ ಒತ್ತಾಯ: ಸಚಿವ ಹೆಬ್ಬಾರ್ ರನ್ನು ಭೇಟಿ ಮಾಡಿದ ಹುನಗುಂದ ಮುಖಂಡರು..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಮುಖಂಡರು ಹಾಗೂ ಗ್ರಾಮದ ನೂರಾರು ಜನ ಬಿಜೆಪಿ ಕಾರ್ಯಕರ್ತರು ಇಂದು ಯಲ್ಲಾಪುರಕ್ಕೆ ತೆರಳಿ, ಸಚಿವ ಶಿವರಾಮ್ ಹೆಬ್ಬಾರ್ ರವರನ್ನು ಭೇಟಿಯಾಗಿದ್ರು. ಮುಂಬರುವ ಜಿಲ್ಲಾಪಂಚಾಯತಿ ಚುನಾವಣೆಗೆ ಇಂದೂರು ಜಿ ಪಂ ಕ್ಷೇತ್ರದಿಂದ ಹುನಗುಂದ ಗ್ರಾಮದ ಸಿದ್ದಪ್ಪ ಹಡಪದ್ ರವರಿಗೇ ಅಭ್ಯರ್ಥಿಯನ್ನಾಗಿಸಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಿದ್ದಪ್ಪ ಹಡಪದ್ ರವರು ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೇ ಕಳೆದ ಎರಡು ಬಾರಿ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋತಿದ್ದಾರೆ. ಇಂದೂರು ಕ್ಷೇತ್ರದಲ್ಲಿ ಸಿದ್ದಪ್ಪ ಹಡಪದ್...

Post
ಮುಂಡಗೋಡ ಬಿಜೆಪಿಯಲ್ಲೀಗ “ಜಂಪಿಂಗ್” ಪರ್ವ ಶುರು..! ಒಳಗೊಳಗೇ ನಡೀತಿದೆ ಭಾರೀ ಮಸಲತ್ತು..!!

ಮುಂಡಗೋಡ ಬಿಜೆಪಿಯಲ್ಲೀಗ “ಜಂಪಿಂಗ್” ಪರ್ವ ಶುರು..! ಒಳಗೊಳಗೇ ನಡೀತಿದೆ ಭಾರೀ ಮಸಲತ್ತು..!!

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಸ್ಪೋಟಕ ಬದಲಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಆಗೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಕಳಾಹೀನವಾಗಿರೋ “ಕೈ” ಪಾಳಯಕ್ಕೆ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಘಟಾನುಘಟಿಗಳೇ ಹಾರಲು ತುದಿಗಾಲಲ್ಲಿ ನಿಂತಿದ್ದಾರೆ. ಅಂತಹದ್ದೊಂದು ಬಾತ್ಮಿ ಕ್ಷೇತ್ರದ ಬಿಜೆಪಿ ಪಾಲಿಗೆ ಖಂಡಿತ ಪೂರಕವಾಗಿಲ್ಲ. ಬದಲಾಗಿ ಇಲ್ಲಿನ ಬಿಜೆಪಿಗೆ “ಅದೇನೋ ಕಾದಿದೆ” ಅನ್ನೋ ಸ್ಪಷ್ಟ ಸೂಚನೆಗಳು ಕಾಣಸಿಗ್ತಿವೆ. ಆಂತರಿಕ ಕುದಿ… ನಿಜ, ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ. ಇಡೀ ಕ್ಷೇತ್ರದಲ್ಲಿ ಆಂತರಿಕ ಬೆಗುದಿ ಅನ್ನೋದು ಬಹುಶಃ ಯಾರೂ...

Post
ಇದು ಉತ್ತರ ಕನ್ನಡದ ಹೆಮ್ಮೆ..! ಪ್ರತಿಷ್ಠಿತ ನಾಸಾಗೆ ಕನ್ನಡ ಕುವರನ ಆಯ್ಕೆ..!!

ಇದು ಉತ್ತರ ಕನ್ನಡದ ಹೆಮ್ಮೆ..! ಪ್ರತಿಷ್ಠಿತ ನಾಸಾಗೆ ಕನ್ನಡ ಕುವರನ ಆಯ್ಕೆ..!!

ಸಿದ್ದಾಪುರ: ಹಂಟ್ಸ್‌ವಿಲ್ ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ (UAH) ಇಬ್ಬರು ಡಾಕ್ಟರೇಟ್ ವಿದ್ಯಾರ್ಥಿಗಳು ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು​ ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FINESST) ಅನುದಾನದಲ್ಲಿ  NASA ಫ್ಯೂಚರ್​ ಇನ್​ವೆಸ್ಟಿಗೇಟರ್​ ಪ್ರಶಸ್ತಿಗೆ  ಭಾಜನವಾಗಿದೆ. ಕ್ಯಾಥರೀನ್ ಡೇವಿಡ್ಸನ್ ಮತ್ತು ದಿನೇಶ (ದಿನೇಶ್) ವಸಂತ ಹೆಗಡೆ ತಲಾ 135000 ಅಮೇರಿಕನ್​ ಡಾಲರ್ ಅನ್ನು ​ ಸ್ಟೈಫಂಡ್ , ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಲು...

Post
ಮುಂಡಗೋಡ ತೃಪ್ತಿ ವೈನ್ ಶಾಪ್ ನಲ್ಲಿ ಕಳ್ಳರ ಕೈಚಳಕ, ಪೊಲೀಸರು ದೌಡು..!

ಮುಂಡಗೋಡ ತೃಪ್ತಿ ವೈನ್ ಶಾಪ್ ನಲ್ಲಿ ಕಳ್ಳರ ಕೈಚಳಕ, ಪೊಲೀಸರು ದೌಡು..!

ಮುಂಡಗೋಡ: ಪಟ್ಟಣದ ತೃಪ್ತಿ ವೈನ್ ಶಾಪ್ ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ತಡರಾತ್ರಿ ಅಂಗಡಿಯ ಮೇಲ್ಚಾವಣಿಯ ಹೆಂಚು ತೆರೆದು ಒಳನುಗ್ಗಿ ಕಳ್ಳತನ ಮಾಡಿರೋ ಖದೀಮರು ವೈನ್ ಶಾಪ್ ನಲ್ಲಿದ್ದ ಹಣ ಸೇರಿದಂತೆ ಮದ್ಯದ ಬಾಟಲ್ ಗಳನ್ನೂ ಕದ್ದೋಯ್ದಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕಳ್ಳತನವಾದ ಹಣವೆಷ್ಟು..? ಯಾವ್ಯಾವ ವಸ್ತುಗಳನ್ನು ಎಗರಿಸಲಾಗಿದೆ ಅನ್ನೋ ಬಗ್ಗೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇನ್ನೇನು ಕೆಲವೇ ಹೊತ್ತಲ್ಲಿ ಕಳ್ಳತನದ ಅಸಲೀ ಮಾಹಿತಿಗಳು ಹೊರಬರಲಿದೆ.

Post
ಬಾಚಣಕಿ ತಾಪಂ ಕ್ಷೇತ್ರಕ್ಕೆ ಮೊನ್ಸಿ ಥಾಮಸ್ ಗೆ “ಕೈ” ಬಲ..? ತೆರೆಮರೆಯಲ್ಲೇ ನಡೀತಿದೆ ಕಸರತ್ತು..!

ಬಾಚಣಕಿ ತಾಪಂ ಕ್ಷೇತ್ರಕ್ಕೆ ಮೊನ್ಸಿ ಥಾಮಸ್ ಗೆ “ಕೈ” ಬಲ..? ತೆರೆಮರೆಯಲ್ಲೇ ನಡೀತಿದೆ ಕಸರತ್ತು..!

ಮುಂಡಗೋಡ: ಜಿಲ್ಲಾ ಪಂಚಾಯತ ತಾಲೂಕಾ ಪಂಚಾಯತ ಚುನಾವಣೆ ಕಾವು ಮತ್ತೆ ಏರ ತೊಡಗಿದೆ‌. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ತುದಿಗಾಲಲ್ಲಿ ನಿಂತಿದೆ ಅನ್ನೋ ಸಂಗತಿ ಹೊರಬೀಳುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಮತ್ತೆ ಒಳಗೊಳಗೆ ಚುನಾವಣೆಯ ಪೀಕಲಾಟಗಳು ಶುರುವಾಗಿವೆ. ಅದರ ಭಾಗವಾಗಿ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಬಾಚಣಕಿ ತಾಪಂ ಕ್ಷೇತ್ರದಲ್ಲಿ ಟಿಕೆಟ್ ಹಂಬಲಗಳು ಎರಡೂ ಕ್ಷೇತ್ರದಲ್ಲಿ ಚಾಲ್ತಿ ಪಡೆದುಕೊಂಡಿವೆ. ಕಾಂಗ್ರೆಸ್ ಗೆ ಮೊನ್ಸಿ..! ಬಾಚಣಕಿ ತಾಪಂ ಕ್ಷೇತ್ರ ಬಾಚಣಕಿ, ನ್ಯಾಸರ್ಗಿ, ಅರಷಿಣಗೇರಿ, ಮಜ್ಜಿಗೇರಿ...

Post
ಹುಲಿ ವೇಷದ ಕಂದಾಚಾರದಲ್ಲಿ ಪುಟ್ಟ ಕಂದಮ್ಮಗಳ ಶೋಷಣೆ ಎಷ್ಟು ಸರಿ..? ಅಧಿಕಾರಿಗಳೇ ಒಂದಿಷ್ಟು ಗಮನಹರಿಸಿ..!

ಹುಲಿ ವೇಷದ ಕಂದಾಚಾರದಲ್ಲಿ ಪುಟ್ಟ ಕಂದಮ್ಮಗಳ ಶೋಷಣೆ ಎಷ್ಟು ಸರಿ..? ಅಧಿಕಾರಿಗಳೇ ಒಂದಿಷ್ಟು ಗಮನಹರಿಸಿ..!

ಮುಂಡಗೋಡ: “ಮೊಹರಂ” ಇದು ಬಹುತೇಕ ಹಿಂದು ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸಲ್ಪಡೋ ಹಬ್ಬ. ಈ ಹಬ್ಬ ಬಂತು ಅಂದ್ರೆ ಸಾಕು ತಾಲೂಕಿನಲ್ಲಿ ಕೆಲವು ಮೂಢ ನಂಬಿಕೆಗಳೂ ಕೂಡ ಜೊತೆ ಜೊತೆಯಾಗೇ ಜಾರಿಯಾಗುತ್ತಿವೆ. ಪ್ರತೀ ವರ್ಷವೂ ಈ ಹಬ್ಬದಲ್ಲಿ ಅದೊಂದು ಪದ್ದತಿ ನಿಜಕ್ಕೂ ಪ್ರಜ್ಞಾವಂತರಿಗೆ ಒಂದಿಷ್ಟು ಆತಂಕ ಮೂಡಿಸಿದೆ. ಹುಲಿವೇಷ..! ಅಸಲು, ಮೊಹರಂ ಬಂತು ಅಂದ್ರೆ ತಾಲೂಕಿನಲ್ಲಿ ಅದೊಂದು ಪದ್ದತಿ ಇವತ್ತಿಗೂ ಜಾರಿಯಲ್ಲಿದೆ. ಪಂಜಾಗಳಿಗೆ ಹರಕೆ ಹೊರುವ ಭಕ್ತರು ಹರಕೆ ಈಡೇರಿದ ಮೇಲೆ ಹುಲಿವೇಷ ಹಾಕುತ್ತಾರೆ. ಮೈಗೇಲ್ಲ ಬಣ್ಣದಿಂದ ಹುಲಿಯ...

Post
ಇವ್ರೇನು “ಯಮದೂತರಾ..? ತಮ್ಮ ಆಸ್ಪತ್ರೆಯ ತ್ಯಾಜ್ಯವನ್ನು ನ್ಯಾಸರ್ಗಿ ರಸ್ತೆಗೆ ಎಸಿತಾರಲ್ಲ, ನಾಚಿಕೆಯಾಗಲ್ವಾ..?

ಇವ್ರೇನು “ಯಮದೂತರಾ..? ತಮ್ಮ ಆಸ್ಪತ್ರೆಯ ತ್ಯಾಜ್ಯವನ್ನು ನ್ಯಾಸರ್ಗಿ ರಸ್ತೆಗೆ ಎಸಿತಾರಲ್ಲ, ನಾಚಿಕೆಯಾಗಲ್ವಾ..?

ಮುಂಡಗೋಡ: ಪಟ್ಟಣದ ಅಯ್ಯಪ್ಪ ದೇವಸ್ಥಾನದ ಹತ್ತಿರ ನ್ಯಾಸರ್ಗಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಭಯದಲ್ಲೇ ಓಡಾಡುವ ಪರಿಸ್ಥಿತಿ ಇದೆ‌. ಯಾಕಂದ್ರೆ, ಇಲ್ಲಿ ಅದ್ಯಾರೋ ಮತಿಹೀನ ಆಸ್ಪತ್ರೆಯವರು ತಮ್ಮ ಆಸ್ಪತ್ರೆಯ ತ್ಯಾಜ್ಯಗಳನ್ನು ತಂದು ಎಲ್ಲೆಂದರಲ್ಲಿ ಬಿಸಾಡಿ ಹೋಗ್ತಿದಾರೆ. ಹೊಟ್ಟೆಗೇನು ಸೆಗಣಿ ತಿಂತಾರಾ..? ಹಾಗಂತ, ಇಲ್ಲಿನ ರಸ್ತೆಯಲ್ಲಿ ತಿರುಗಾಡೋ ನ್ಯಾಸರ್ಗಿಯ ಜನ ಆಕ್ರೋಶ ವ್ಯಕ್ತ ಪಡಿಸ್ತಿದಾರೆ. ಯಾಕಂದ್ರೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಳಸಿದ ಸಿರೀಂಜ್, ಸೂಜಿಗಳು ಸೇರಿದಂತೆ ಔಷಧಿಯ ಖಾಲಿ ಬಾಟಲ್ ಗಳನ್ನು ಇಲ್ಲಿ ತಂದು ಎಸೆದು ಹೋಗಲಾಗ್ತಿದೆ. ಹಾಗಿದ್ದಾಗ, ಅದ್ಯಾವ ವೈದ್ಯ...

Post
ರಸ್ತೆಯ ಅವ್ಯವಸ್ಥೆ ಕಣ್ಣಾರೆ ಕಂಡ PWD ಇಂಜಿನೀಯರ್..! ಫಿಲ್ಡಿಗೆ ಇಳಿದೇ ಬಿಟ್ರು ಸಾಹೇಬ್ರು..!!

ರಸ್ತೆಯ ಅವ್ಯವಸ್ಥೆ ಕಣ್ಣಾರೆ ಕಂಡ PWD ಇಂಜಿನೀಯರ್..! ಫಿಲ್ಡಿಗೆ ಇಳಿದೇ ಬಿಟ್ರು ಸಾಹೇಬ್ರು..!!

ಮುಂಡಗೋಡ; ತಾಲೂಕಿನ ವಡಗಟ್ಟಾ ಅಗಡಿ ರಸ್ತೆ, ಹುನಗುಂದದ ದೇಶಪಾಂಡೆ ನಗರದಲ್ಲಿ ನಡೆದಾಡಲೂ ಆಗದ ಸ್ಥಿತಿಯಲ್ಲಿದೆ, PWD ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ವಹಿಸ್ತಿದ್ದಾರೆ ಅನ್ನೋ ಸುದ್ದಿ ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಕಟಿಸುತ್ತಿದ್ದಂತೆ PWD ಇಂಜಿನೀಯರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಬೆಳಿಗ್ಗೆ ರಸ್ತೆಯ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯ ಕುರಿತು ವಿಸ್ತೃತ ವರದಿ ಪ್ರಕಟವಾಗಿತ್ತು. ವರದಿ ಪ್ರಸಾರವಾದ ಅರ್ಧ ಗಂಟೆಯಲ್ಲೇ ಅಧಿಕಾರಿಗಳು ಬೇಟಿ ನೀಡಿ, ರಸ್ತೆಯ ಅವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದಾರೆ. ಇನ್ನು PWD ಇಂಜಿನೀಯರ್...

Post
ಮುಂಡಗೋಡ PWD “ಪ್ಯಾಚ್ ಪೇಮೆಂಟ್” ನಲ್ಲಿ ಹಡಾಲೆದ್ದು ಹೋದ ರಸ್ತೆಗಳೆಷ್ಟು..? ಇಂಜಿನೀಯರ್ ಎಲ್ಲಿದ್ದೀಯಪ್ಪಾ..?

ಮುಂಡಗೋಡ PWD “ಪ್ಯಾಚ್ ಪೇಮೆಂಟ್” ನಲ್ಲಿ ಹಡಾಲೆದ್ದು ಹೋದ ರಸ್ತೆಗಳೆಷ್ಟು..? ಇಂಜಿನೀಯರ್ ಎಲ್ಲಿದ್ದೀಯಪ್ಪಾ..?

ಮುಂಡಗೋಡ; ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ಅನ್ನೋದು ಇದೆಯಾ ಅಥವಾ ಬೀಗ ಜಡಕೊಂಡು ಎಲ್ಲಾದ್ರೂ ಹಾಳಾಗಿ ಹೋಗಿದೆಯಾ..? ಇಂತಹದ್ದೊಂದು ಪ್ರಶ್ನೆ ಮುಂಡಗೋಡ ತಾಲೂಕಿನ ಮಂದಿ ಕೇಳ್ತಿದಾರೆ. ಯಾಕಂದ್ರೆ ತಾಲೂಕಿನ ಬಹುತೇಕ ರಸ್ತೆಗಳ ಸ್ಥಿತಿ ಹಡಾಲೆದ್ದು ಹೋಗಿದೆ. ಆದ್ರೆ, PWD ಅನ್ನೋ ಇಲಾಖೆಯ ಅಧಿಕಾರಿಗಳು ಮಾತ್ರ ಅದೇಲ್ಲೋ ಹೋಗಿ ಗಡದ್ದಾಗಿ ನಿದ್ದೆ ಮಾಡ್ತಿದಾರೆ. ವಡಗಟ್ಟಾ- ಅಗಡಿ ರಸ್ತೆ ಕತೆ..! ನಿಜ, ಈ ಲೋಕೋಪಯೋಗಿ ಇಲಾಖೆಯ ಅಡಿಯಲ್ಲೇ ಬರುವ ವಡಗಟ್ಟಾ-ಅಗಡಿ ರಸ್ತೆ, ಹುನಗುಂದದ ದೇಶಪಾಂಡೆ ನಗರದ ಹತ್ತಿರ ಹದಗೆಟ್ಟು ಹಳ್ಳ ಹಿಡಿದಿದೆ....

Post
ಸಮುದ್ರದಲ್ಲಿ ಮುಳುಗಿ ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಸಾವು..!

ಸಮುದ್ರದಲ್ಲಿ ಮುಳುಗಿ ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಸಾವು..!

ಕುಮಟಾ: ಸಮುದ್ರದಲ್ಲಿ ಮುಳುಗಿ ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳ ಸಾವು ಕಂಡ ಘಟನೆ ತಾಲೂಕಿನ ಬಾಡ ಬೀಚ್ ನಲ್ಲಿ ನಡೆದಿದೆ‌. ದಾವಣಗೇರೆ ಮೂಲದ ಮೇಘ ಎಂ(24) ಹಾಗೂ ರೇಣುಕಾ ಪ್ರಸಾದ್ (24) ಮೃತ ವಿದ್ಯಾರ್ಥಿಗಳು. ಇಂಜಿನಿಯರಿಂಗ್ ವಿದ್ಯಾಭ್ಯಾಸ ಈ ವರ್ಷ ಮುಗಿದಿತ್ತು. ಹೀಗಾಗಿ, ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಾಗ ದುರ್ಘಟನೆ ನಡೆದಿದೆ‌. ಮೇಘಾ ಮೃತದೇಹ ಸಿಕ್ಕಿದ್ದು, ರೇಣುಕಾ ಪ್ರಸಾದ್ ದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ‌. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

error: Content is protected !!