ಮುಂಡಗೋಡ: ತಾಲೂಕಿನ ಇಂದಿರಾನಗರ ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಮುಂಡಗೋಡ ಗಾಂಧಿ ನಗರದ ದುರ್ಗಪ್ಪ ಕೊರವರ್(25) ಎಂದು ಗುರುತಿಸಲಾಗಿದೆ. ಮತ್ತೋರ್ವ ಓಣಿಕೇರಿ ಗ್ರಾಮದವನು ಅಂತಾ ಮಾಹಿತಿ ಲಭ್ಯವಾಗಿದೆ. ಅಪಘಾತ ನಡೆದ ಕೆಲವೇ ಹೊತ್ತಲ್ಲಿ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: ಉತ್ತರ ಕನ್ನಡ
108 ಅಂಬ್ಯುಲೆನ್ಸ್ ನಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಡ್ಡಿಗೇರಿ ಮಹಿಳೆ..!
ಮುಂಡಗೋಡ: ತಾಲೂಕಿನ ಬಡ್ಡಿಗೇರಿ ಕ್ರಾಸ್ ಬಳಿ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಡ್ಡಿಗೇರಿಯ ಸೋನುಬಾಯಿ ಜುಮ್ಮು ತೋರವತ್ ಎಂಬ ಮಹಿಳೆಯೇ ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಗೆ ಅಂತಾ ಸೋಮವಾರ ರಾತ್ರಿ ಮುಂಡಗೋಡ ತಾಲೂಕಾಸ್ಪತ್ರೆಗೆ 108 ಅಂಬ್ಯಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾಗ ದಾರಿಮದ್ಯೆ ಹೆರಿಗೆ ನೋವು ತೀವ್ರವಾಗಿದೆ. ಹೀಗಾಗಿ ಅಂಬ್ಯುಲೆನ್ಸ್ ನಲ್ಲೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಳ್ಳಲಾಗಿದೆ. 108 ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ, ಚಾಲಕ ಪ್ರಕಾಶ್ ಬಾಗೇವಾಡಿ, ಆಶಾ ಕಾರ್ಯಕರ್ತೆ...
ಇಂದೂರಿನಲ್ಲಿ ಆಕಸ್ಮಿಕ ಅಗ್ನಿ ಅವಘಡ, ಸುಟ್ಟು ಕರಕಲಾದ ಭತ್ತದ ಬಣವಿ..!
ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ಆಕಸ್ಮಿಕವಾಗಿ ಭತ್ತದ ಬಣ್ಣವಿಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ಮೌಲ್ಯದ ಭತ್ತ ಸುಟ್ಟು ಕರಕಲಾದ ಘಟನೆ ನಡೆದಿದೆ. ಚಂದ್ರಶೇಖರ್ ಅರ್ಕಸಾಲಿ ಎಂಬುವ ರೈತರಿಗೆ ಸೇರಿದ ಒಂದೂವರೇ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತದ ಬಣವಿಗೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗಲಿದ್ದು ಧಗ ಧಗನೆ ಹೊತ್ತಿ ಉರಿದಿದೆ. ಆಗ ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಆಗಬಹುದಾದ ಮತ್ತಷ್ಟು ಹಾನಿಯನ್ನು ತಪ್ಪಿಸಿದ್ದಾರೆ. ಈ ಘಟನೆಯಲ್ಲಿ ಸುಮಾರು 50 ಸಾವಿರ ರೂ. ಮೌಲ್ಯದ ಭತ್ತ...
ಅಂಬೇಡ್ಕರರಿಗೆ ಅವಮಾನ ಹಿನ್ನೆಲೆ: ಮುಂಡಗೋಡಿನಲ್ಲಿ ನ್ಯಾಯಾಧೀಶರ ಪ್ರತಿಕೃತಿ ದಹಿಸಿ ಆಕ್ರೋಶ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟ ಇಂದು ಸಿಡಿದೆದ್ದಿದ್ದವು. ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಡಾ.ಅಂಬೇಡ್ಕರರಿಗೆ ಅವಮಾನ ಮಾಡಿರೋ ಹಿನ್ನೆಲೆಯಲ್ಲಿ ಆ ನ್ಯಾಯಾಧೀಶರನ್ನು ವಜಾ ಮಾಡುವಂತೆ ಆಗ್ರಹಿಸಿ ಪ್ರತಿಭಟಿಸಿದ್ರು. ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡಾ ರವರ ಪ್ರತಿಕೃತಿ ದಹಿಸಿ ಆಕ್ರೊಶ ಹೊರಹಾಕಿದ್ರು. ಈ ವೇಳೆ ದಲಿತ ಸಂಘಟನೆಗಳು ತಾಲೂಕಿನ ಬಹುತೇಕ ಎಲ್ಲಾ ಮುಖಂಡರು ಹಾಜರಿದ್ದರು.
ಹುನಗುಂದ ರೈತರ ಜಮೀನುಗಳಿಗೆ ರಸ್ತೆಯ ಸಮಸ್ಯೆ, ಅಧಿಕಾರಿಗಳ ಭೇಟಿ..!
ಹುನಗುಂದ ರೈತರ ಜಮೀನುಗಳಿಗೆ ರಸ್ತೆಯ ಸಮಸ್ಯೆ, ಅಧಿಕಾರಿಗಳ ಭೇಟಿ..! ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ಶಾಶ್ವತ ರಸ್ತೆಯ ಸಮಸ್ಯೆ ಎದುರಾಗಿದೆ. ಹೀಗಾಗಿ ತಹಶೀಲ್ದಾರ ಕಾರ್ಯಾಲಯಕ್ಕೆ ಗ್ರಾಮದ ರೈತರು ಮನವಿ ಸಲ್ಲಿಸಿರೊ ಹಿನ್ನೆಲೆಯಲ್ಲಿ, ಇಂದು ಹುನಗುಂದ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ರಸ್ತೆಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ರು. ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ರೈತರೊಂದಿಗೆ ಚರ್ಚಿಸಿದ್ರು. ಸದ್ಯ ಕಬ್ಬಿನ ಕಟಾವು ಮಾಡಿ ಕಬ್ಬು ಸಾಗಿಸಲು ರಸ್ತೆಯ ಸಮಸ್ಯೆ...
ಮುಂಡಗೋಡಿನಲ್ಲಿ ಅನಾರೋಗ್ಯಕ್ಕೀಡಾಗಿ ಬಳಲುತ್ತಿದ್ದ ಕರು ರಕ್ಷಿಸಿದ ಯುವಕರು..!
ಮುಂಡಗೋಡಿನಲ್ಲಿ ಅನಾರೋಗ್ಯಕ್ಕೀಡಾಗಿ ಬಳಲುತ್ತಿದ್ದ ಕರು ರಕ್ಷಿಸಿದ ಯುವಕರು..! ಮುಂಡಗೋಡ: ಪಟ್ಟಣದ ಶಿವಾಜಿ ವೃತ್ತದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿ ಅಸ್ವಸ್ಥಗೊಂಡು ಬಿದ್ದು ಒದ್ದಾಡುತ್ತಿದ್ದ ಆಕಳ ಕರುವನ್ನು ಯುವಕರು ಆರೈಕೆ ಮಾಡಿದ್ದಾರೆ. ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಕರುವಿಗೆ ಪಶುವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ತನ್ನ ಕಂದನಿಗೆ ತೀವ್ರ ಅನಾರೋಗ್ಯವಾಗಿದೆ ಅಂದು ಅರಿತ ಆಕಳು ಕರುವಿಗಾಗಿ ಗೋಳಾಡುತ್ತಿದ್ದ ದೃಷ್ಯ ಕಂಡು ಬಂತು.. ಈ ವೇಳೆ ಯುವಕರ ಮಾನವೀಯ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.
ಮತ್ತೆ ಕೊರೋನಾ ಅಟ್ಟಹಾಸ, ತಾಲೂಕಿನಲ್ಲಿ ಇಂದಿನ ಪಾಸಿಟಿವ್ ಕೇಸ್ ಎಷ್ಟು..? ವಿದ್ಯಾರ್ಥಿಗಳ ಪಾಲು ಎಷ್ಟು..!
ಮುಂಡಗೋಡ: ತಾಲೂಕಿನಲ್ಲಿ ಶುಕ್ರವಾರ ಕೊರೋನಾ ಮತ್ತೆ ಅಟ್ಟಹಾಸ ಮೆರೆದಿದೆ. ಇಂದು ಬರೋಬ್ಬರಿ 138 ಪಾಸಿಟಿವ್ ದೃಢ ಪಟ್ಟಿದೆ. ಅಚ್ಚರಿಯ ಸಂಗತಿಯೆಂದ್ರೆ, ಇಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಬಹುಪಾಲು ವಿದ್ಯಾರ್ಥಿಗಳದ್ದೇ ಆಗಿದೆ. ಇಂದು ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೊಂದೇ ಕಾಲೇಜಿನಲ್ಲಿ ಬರೋಬ್ಬರಿ 27 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಅದ್ರಂತೆ ಇನ್ನು ಹಲವು ಶಾಲೆಗಳು, ಕಾಲೇಜುಗಳಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಪಾಲಕರಿಗೆ ಆತಂಕ ತಂದಿಟ್ಟಿದೆ. ಇನ್ನು, ತಾಲೂಕಿನ ಬಹುತೇಕ ಶಾಲೆಗಳಲ್ಲಿ ಕೋವಿಡ್ ಪರೀಕ್ಷೆ...
ಮುಂಡಗೋಡಿನಲ್ಲಿ ಸಿ.ಎಸ್.ಸಿ ಸೆಂಟರ್ ಓಪನ್..!
ಮುಂಡಗೋಡಿನಲ್ಲಿ ಸಿ.ಎಸ್.ಸಿ ಸೆಂಟರ್ ಓಪನ್..! ಮುಂಡಗೋಡ: ಪಟ್ಟಣದ ನೆಹರು ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಂಡಗೋಡದ ಕಾರ್ಯಕ್ಷೇತ್ರದಲ್ಲಿ ಗುರುವಾರ ಸಿ.ಎಸ್.ಸಿ ಸೆಂಟರ್ ಉದ್ಘಾಟಿಸಲಾಯಿತು.
ಹನುಮಾಪುರ ಕಾಳಿಕಾಮಠದ ಉತ್ತರಾಧಿಕಾರಿ ನೇಮಕಕ್ಕೆ ವಿರೋಧ, ತಹಶೀಲ್ದಾರರಿಗೆ ಮನವಿ..!
ಹನುಮಾಪುರ ಕಾಳಿಕಾಮಠದ ಉತ್ತರಾಧಿಕಾರಿ ನೇಮಕಕ್ಕೆ ವಿರೋಧ, ತಹಶೀಲ್ದಾರರಿಗೆ ಮನವಿ..! ಮುಂಡಗೋಡ: ತಾಲೂಕಿನ ಹನುಮಾಪುರ ಕಾಳಿಕಾದೇವಿ ಮಠದ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ವಿರೋಧ ವ್ಯಕ್ತ ಪಡಿಸಿ ಭಕ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ರು. ಮಠದಲ್ಲಿ ಭಾರೀ ಅವ್ಯವಹಾರದ ವಾಸನೆ ಬರ್ತಿದೆ. ಮಠದ ಆಸ್ತಿ ಕಬಳಿಸಲು ಹುನ್ನಾರ ನಡೀತಿದೆ. ಉತ್ತರಾಧಿಕಾರಿ ಮಠದ ಹಣ, ಒಡವೆ ಕದ್ದುಕೊಂಡು ರಾತ್ರೊ ರಾತ್ರಿ ನಾಪತ್ತೆಯಾಗಿದ್ದಾರೆ. ಅವರ ಕುರಿತು ಈಗಾಗಲೇ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದಾಗ ರಾಜಕೀಯ ಒತ್ತಡದಿಂದ ಕೇಸು ದಾಖಲಾಗದಂತೆ ನೋಡಿಕೊಂಡಿದ್ದಾರೆ. ಹಿಗಾಗಿ, ಇದ್ರಲ್ಲಿ...
ತಾಲೂಕಿನಲ್ಲಿ ಗುರುವಾರ 64 ಜನರಿಗೆ ಕೋವಿಡ್ ಸೋಂಕು..!
ಮುಂಡಗೋಡ : ತಾಲೂಕಿನಲ್ಲಿ ಗುರುವಾರ 64 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಮಳಗಿ ಪಂಚವಟಿಯ ಜವಾಹರ ನವೋದಯ ಶಾಲೆಯ 18 ವಿದ್ಯಾರ್ಥಿಗಳಿಗೆ ಮತ್ತೆ ಸೋಂಕು ದೃಢ ಪಟ್ಟಿದೆ. ಹೀಗಾಗಿ ಮತ್ತೆ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ಅದ್ರಂತೆ, ತಾಲೂಕಿನ ಬಹುತೇಕ ಶಾಲಾ ಕಾಲೇಜುಗಳಲ್ಲೂ ಕೊರೊನಾ ಆತಂಕ ಶುರುವಾಗಿದೆ. ಬಡ್ಡಿಗೇರಿ ಸರಕಾರಿ ಶಾಲೆ, ಲೊಯೋಲಾ ಪಿ.ಯು. ಕಾಲೇಜು, ಕಾತೂರ ಸರಕಾರಿ ಶಾಲೆ, ಲೊಯೋಲಾ ಕೇಂದ್ರೀಯ ವಿದ್ಯಾಲಯ, ಮುರಾರ್ಜಿ ವಸತಿ...









