Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಸನವಳ್ಳಿಯ ಬಡವರ ನಿವೇಶನ ಅತಿಕ್ರಮಣ ಪ್ರಕರಣ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಕ್ರಮ..!

ಸನವಳ್ಳಿಯ ಬಡವರ ನಿವೇಶನ ಅತಿಕ್ರಮಣ ಪ್ರಕರಣ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಕ್ರಮ..!

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51ರಲ್ಲಿ ಹಂಚಿದ್ದ 16 ನಿವೇಶನಗಳನ್ನು ಪಕ್ಕದ ಜಮೀನಿನ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳಕ್ಕೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನಾಲಾದ ಜಮೀನಿನ ಅಳತೆ ಮಾಡಿ, ಅಲ್ಲಿನ ನಿವಾಸಿಗಳಿಗೆ ನ್ಯಾಯ ಒದಗಿಸಿ ಕೊಡುವ...

Post
ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ನಾಲ್ವರ ಬಂಧನ..!

ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ನಾಲ್ವರ ಬಂಧನ..!

ಮುಂಡಗೋಡ: ತಾಲೂಕಿನ ಸಾಲಗಾಂವ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ಲ ನಿಂದ ಸಾಲಗಾಂವ್ ಗ್ರಾಮಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಮುಂಡಗೋಡ ಖಡಕ್ ಪಿಎಸ್ ಐ ಬಸವರಾಜ್ ಮಬನೂರು ಹಾಗೂ ಮತ್ತವರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಾಯಕ್ಕೆ ಹಾಜರು ಪಡಿಸಿದ್ದಾರೆ. ತಾಲೂಕಿನ ಸಾಲಗಾಂವ್ ಗ್ರಾಮದ ಗಂಗಪ್ಪ ಮಾಯಪ್ಪ ಪರಸಣ್ಣನವರ್, ಹಾನಗಲ್ಲಿನ ಇಮ್ರಾನ್ ಮಕ್ಬುಲ್ ಅಹ್ಮದ್ ಬ್ಯಾಡಗಿ,...

Post
ಕಾತೂರು ಬಳಿ ಲಾರಿ ಚಾಲಕನನ್ನು ಅಪಹರಿಸಿ 22 ಸಾವಿರ ಹಣ ದೋಚಿದ ಖದೀಮರು..!

ಕಾತೂರು ಬಳಿ ಲಾರಿ ಚಾಲಕನನ್ನು ಅಪಹರಿಸಿ 22 ಸಾವಿರ ಹಣ ದೋಚಿದ ಖದೀಮರು..!

ಮುಂಡಗೋಡ: ತಾಲೂಕಿನ ಕಾತೂರು ಸಮೀಪದಲ್ಲಿ ಲಾರಿ ಚಾಲಕನನ್ನು ಅಪಹರಿಸಿ ಅವನಲ್ಲಿದ್ದ 22 ಸಾವಿರ ಹಣ ದೋಚಿಕೊಂಡು ಹೋದ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಅಬ್ದುಲ್ ಪೀರಸಾಬ್ ಶೇಖ್ ಎಂಬುವ ಲಾರಿ ಚಾಲಕನೇ ಹಣ ಕಳೆದುಕೊಂಡವನಾಗಿದ್ದಾನೆ. ಹುಬ್ಬಳ್ಳಿಯಿಂದಲೇ ಬೊಲೆರೋ ವಾಹನದಲ್ಲಿ ಹಿಂಬಾಲಿಸಿದ್ದ ನಾಲ್ಕು ಜನ ದುಷ್ಕರ್ಮಿಗಳು, ಲಾರಿ ಚಾಲಕ ಮೂತ್ರ ವಿಸರ್ಜನೆಗೆಂದು ಲಾರಿ ನಿಲ್ಲಿಸಿದಾಗ ಏಕಾಏಕಿ ಬಂದು ಅಟ್ಯಾಕ್ ಮಾಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ತಮ್ಮ‌ ಬೊಲೆರೋ ವಾಹನದಲ್ಲೇ ಲಾರಿ ಚಾಲಕನನ್ನು...

Post
ಪಾಳಾ ಬಳಿ ಬಸ್- ಲಾರಿ ನಡುವೆ ಮುಖಾಮುಕಿ ಡಿಕ್ಕಿ..!

ಪಾಳಾ ಬಳಿ ಬಸ್- ಲಾರಿ ನಡುವೆ ಮುಖಾಮುಕಿ ಡಿಕ್ಕಿ..!

ಮುಂಡಗೋಡ: ತಾಲೂಕಿನ ಪಾಳಾ ಬಳಿಯ ಗೋಟಗೋಡಿಕೊಪ್ಪ ಕ್ರಾಸ್ ಬಳಿ KSRTC ಬಸ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಸಾವು, ನೋವು ಸಂಭವಿಸಿಲ್ಲ. ಲಾರಿ ಚಾಲಕನ ನಿರ್ಲಕ್ಷದಿಂದಲೇ ಅಪಘಾತವಾಗಿದೆ ಅಂತಾ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದು, ಮು‌ಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Post
ಅಧಿಕಾರ ಕೊಟ್ರೆ ನಿಭಾಯಿಸ್ತಿನಿ, ಇಲ್ಲಾಂದ್ರೆ ಶಾಸಕನಾಗೇ ಕೆಲಸ ಮುಂದುವರೀಸ್ತಿನಿ; ಮಾಜಿ ಸಚಿವ ಹೆಬ್ಬಾರ್

ಅಧಿಕಾರ ಕೊಟ್ರೆ ನಿಭಾಯಿಸ್ತಿನಿ, ಇಲ್ಲಾಂದ್ರೆ ಶಾಸಕನಾಗೇ ಕೆಲಸ ಮುಂದುವರೀಸ್ತಿನಿ; ಮಾಜಿ ಸಚಿವ ಹೆಬ್ಬಾರ್

ಮುಂಡಗೋಡ: ಬಿಜೆಪಿ ನಂಗೆ ಒಂದು ವರ್ಷ ಐದು ತಿಂಗಳ ಕಾಲ ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು ಹೀಗಾಗಿ, ನಾನು ನನ್ನ ಪಕ್ಷಕ್ಕೆ, ಕ್ಷೇತ್ರದ ಮತದಾರನಿಗೆ ಯಾವಾಗ್ಲೂ ಚಿರ ಋಣಿಯಾಗಿರ್ತೆನೆ ಅಂತಾ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ರು. ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವ್ರು, ನನ್ನ ಕ್ಷೇತ್ರದ ಜನರ ಸೇವೆ ಮಾಡಲು ಅನುವು ಮಾಡಿ ಕೊಟ್ಟಿದ್ದ ಯಡಿಯೂರಪ್ಪನವರಿಗೆ ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆ ತಿಳಿಸಿದ್ರು. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ..! ಇನ್ನು, ನೂತನ ಸಚಿವ ಸಂಪುಟದಲ್ಲಿ ಮತ್ತೆ...

Post
ನಾನೀಗ ಮಾಜೀ ಸಚಿವನಾಗಿಬಿಟ್ಟೆ..! ಪಬ್ಲಿಕ್ ಫಸ್ಟ್ ಗೆ ಹೆಬ್ಬಾರ್ ಫಸ್ಟ್ ರಿಯಾಕ್ಷನ್..!!

ನಾನೀಗ ಮಾಜೀ ಸಚಿವನಾಗಿಬಿಟ್ಟೆ..! ಪಬ್ಲಿಕ್ ಫಸ್ಟ್ ಗೆ ಹೆಬ್ಬಾರ್ ಫಸ್ಟ್ ರಿಯಾಕ್ಷನ್..!!

ಮುಂಡಗೋಡ: “ಸಿಎಂ ರಾಜೀನಾಮೆ ನೀಡ್ತಿದಾರೆ, ಹೀಗಾಗಿ ನಾನೂ ಈಗ ಮಾಜಿ ಸಚಿವನಾಗಿಬಿಟ್ಟೆ‌‌..! ಹೀಗಂತ ಸಚಿವ ಶಿವರಾಂ ಹೆಬ್ಬಾರ್ ಬೇಸರದ ನುಡಿ ಹಂಚಿಕೊಂಡ್ರು. “ಪಬ್ಲಿಕ್ ಫಸ್ಟ್ ನ್ಯೂಸ್” ಜೊತೆ ಎಕ್ಸ್ ಕ್ಲೂಸಿವ್ ಆಗಿ ಮೊದಲ ಪ್ರತಿಕ್ರಿಯೆ ನೀಡಿದ ಸಚಿವ ಶಿವರಾಮ್ ಹೆಬ್ಬಾರ್ ಭಾವುಕರಾದಂತೆ ಕಂಡ್ರು, ರಾಜ್ಯ ರಾಜಕೀಯದಲ್ಲಿ ಇಂದು ನಡೆದ ಮಹತ್ತರ ಬೆಳವಣಿಗೆ ಕುರಿತು ಬಹುಶಃ ಸಚಿವ ಶಿವರಾಮ್ ಹೆಬ್ಬಾರ್ ರವರಿಗೂ ಬೇಸರವಾಗಿರೋದು ಅವ್ರ ಮಾತುಗಳಲ್ಲಿ ಕಂಡು ಬಂತು. ಮುಂದೇನು..? ಸಿಎಂ ಯಡಿಯೂರಪ್ಪ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ....

Post
ನಂದಿಕಟ್ಟಾದಲ್ಲಿ ತಾಯಿಯ ಸೀರೆಯಿಂದಲೇ ನೇಣಿಗೆ ಶರಣಾದ ಯುವಕ..!

ನಂದಿಕಟ್ಟಾದಲ್ಲಿ ತಾಯಿಯ ಸೀರೆಯಿಂದಲೇ ನೇಣಿಗೆ ಶರಣಾದ ಯುವಕ..!

ಮುಂಡಗೋಡ: ಮಾನಸಿಕ ಖಿನ್ನತೆಗೆ ಒಳಗಾದ ಯುವಕನೊಬ್ಬ ತಾಯಿಯ ಸೀರೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಡೆದಿದೆ. ಅಮಿತ್ ಬಸವರಾಜ್ ಲೋಹಾರ್ (20) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತಾಯಿಯ ಸೀರೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post
ಇಂದೂರು ಕ್ಷೇತ್ರಕ್ಕೆ ಮತ್ತೊಂದು ಹೊಸಮುಖ..! ಠಕ್ಕರ್ ಕೊಡೋಕೆ ರೆಡಿಯಾಗ್ತಿದೆ “ಯುವ ಪಡೆ”

ಇಂದೂರು ಕ್ಷೇತ್ರಕ್ಕೆ ಮತ್ತೊಂದು ಹೊಸಮುಖ..! ಠಕ್ಕರ್ ಕೊಡೋಕೆ ರೆಡಿಯಾಗ್ತಿದೆ “ಯುವ ಪಡೆ”

ರಾಜಕಾರಣ ಅಂದ್ರೆನೇ ಹಾಗೆ, ಇಲ್ಲಿ ಯಾವಾಗ ಯಾರು, ಯಾರ್ ಕಾಲ್ ಎಳಿತಾರೋ ಗೊತ್ತೇ ಆಗಲ್ಲ. ಎದುರು ಆಡೋ ಮಾತು ಒಂದಾದ್ರೆ, ತಲೇಲಿ ತಿರುಗಿಸೋ ಲೆಕ್ಕಾಚಾರವೇ ಮತ್ತೊಂದಿರತ್ತೆ. ಇಲ್ಲಿ ಬೆಳಿಗ್ಗೆ ಹೀರೋ ಅನ್ನಿಸಿಕೊಂಡವನು, ಸಂಜೆಯಾಗ್ತಿದ್ದಂತೆ ಜೀರೋ ಆಗಿರ್ತಾನೆ. ಹಾಗೇ, ಜೀರೋ ಆಗಿದ್ದವನು ಏಕಾಏಕಿ ಹೀರೋ ಆಗಿ ಪಟ್ಟಕ್ಕೇರಿರ್ತಾನೆ. ಇಲ್ಲಿ ಎಲ್ಲವೂ ಅವರವರ ಬೌದ್ದಿಕ ತಾಕತ್ತಿನ ಮೇಲೆಯೇ ಡಿಸೈಡ್ ಆಗತ್ತೆ. ಅದಿರಲಿ. ಮತ್ತಷ್ಟು ಟೈಮ್ ಸಿಕ್ತು..! ಸದ್ಯ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಚುನಾವಣೆ ಕಾವು ಏರತೊಡಗಿದೆ. ಕೊರೋನಾ ಆತಂಕದ...

Post
ಪಾತಕ ಲೋಕದ ಸುಳಿಯಲ್ಲಿ ಮುಂಡಗೋಡ..? ಅಷ್ಟಕ್ಕೂ ಎತ್ತ ಸಾಗ್ತಿದೆ ನಮ್ಮೂರು..?

ಪಾತಕ ಲೋಕದ ಸುಳಿಯಲ್ಲಿ ಮುಂಡಗೋಡ..? ಅಷ್ಟಕ್ಕೂ ಎತ್ತ ಸಾಗ್ತಿದೆ ನಮ್ಮೂರು..?

ಮುಂಡಗೋಡಿನಲ್ಲಿ ರವಿವಾರ ಭೀಕರ ಹತ್ಯೆಯಾಗಿದೆ. ಯುವಕನೋರ್ವನ ಪ್ರಾಣ, ಹಂತಕರ ರಕ್ತದಾಹಕ್ಕೆ ಬಲಿಯಾಗಿದೆ. ಪೊಲೀಸರೂ ಒಂದರ್ಥದಲ್ಲಿ ದಿಗಿಲಿಗೆ ಬೀಳುವಂತಾಗಿದೆ. ಅಸಲು, ಮುಂಡಗೋಡಿನ ಪರಿಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟು ಹೋಯ್ತಾ..? ಈ ಪ್ರಶ್ನೆ ತಾಲೂಕಿನ ಪ್ರತಿಯೊಬ್ಬ ನಾಗರೀಕನಿಗೂ ಆತಂಕ ತಂದಿಟ್ಟಿದೆ‌.  ಅದ್ಯಾಕೋ ಗೊತ್ತಿಲ್ಲ, ನಂಗೆ ಈ ಕ್ರೈಂ ವರದಿ ಮಾಡೋಕೆ ಮನಸ್ಸೇ ಬರ್ಲಿಲ್ಲ.. ಈ ಮರ್ಡರ್ ವಿಷಯವಾಗಿ ಏನೂ ಬರಿಯೋದೇ ಬೇಡ ಅಂತಾ ಅನಕೊಂಡಿದ್ದೆ, ಯಾಕ್ ಗೊತ್ತಾ..? ಒಂದು ಕಾಲದಲ್ಲಿ ಮುಂಡಗೋಡ ತಾಲೂಕು ಹೇಗಿತ್ತು..? ಈಗ ಹೇಗಾಗಿದೆ..? ಅಯ್ಯೋ, ನೆನಪಿಸಿಕೊಂಡ್ರೆ...

Post
ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ: ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳ ಪ್ರತಿಭಟನೆ..!

ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ: ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳ ಪ್ರತಿಭಟನೆ..!

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲ ನಿವಾಸಿಗಳು ಇಂದು ಸಿಡಿದೆದ್ದಿದ್ದಾರೆ. ತಮಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ವಾಪಸ್ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ತಹಶೀಲ್ದಾರರಿಗೆ ಮತ್ತೊಮ್ಮೆ ಮನವಿ ನೀಡಿದ್ದಾರೆ. ಬಡವರ ಸೂರು ಕಸಿದುಕೊಂಡ್ರಾ.? ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51ರಲ್ಲಿ 16 ನಿವೇಶನಗಳನ್ನ ಹಂಚಿತ್ತು. ಹಾಗೆ ಹಂಚಿದ್ದ ನಿವೇಶನಗಳನ್ನು ಪಕ್ಕದ ಜಮೀನು ಅಂದ್ರೆ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ...

error: Content is protected !!