ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದಲ್ಲಿ ಮಾನಸಿಕ ವೇದನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಾಳಾ ಗ್ರಾಮದ ಗಂಗವ್ವ ಕೋಂ ಇಂದ್ರಪ್ಪ ಇಂಗಳೆ (60), ಎಂಬುವವಳೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ ಇವಳು ಕಳೆದ 17 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವಳು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜ. 19 ರಂದು ಬೆಳಿಗ್ಗೆ, ಮನೆಯಲ್ಲಿ ತಂದಿಟ್ಟಿದ್ದ ಅಡಿಕೆ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥಳಾಗಿದ್ದಳು. ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ...
Top Stories
ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!
ಮನೆಯಲ್ಲಿ ಮಲಗಿದ್ದವನನ್ನು ಕರೆದು ರಾಡ್, ತಲ್ವಾರನಿಂದ ಹಲ್ಲೆ..!
ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಮುಂಡಗೋಡಿನ ಈ ಮೂವರಿಗೂ “ಪ್ರಶಸ್ತಿಯ ಗರಿ”..!
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಮಹದೇವ ಸಾಹುಕಾರ್ ಪರಮಾಪ್ತನ ಭೀಕರ ಹತ್ಯೆ..!
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ..! ಅಷ್ಟಕ್ಕೂ, ಪೊಲೀಸ್ ಅಧಿಕಾರಿಯ ಮಗಳಿಗೆ ಏನಾಯ್ತು..?
ಇದು “ಜಬರ್ದಸ್ತ್ ಜಮಖಂಡಿ”ಯ ಮರ್ಡರ್ ಮಿಸ್ಟರಿ..! “ಮಾಯಾಂಗನೆ”ಯ ನೆರಳಲ್ಲಿ ನಡೆದಿತ್ತು ಆ ಭೀಕರ ಹತ್ಯೆ..!
ಇಂದ್ರಾ ನಗರದ ಮೆಹೆಬೂಬ್ ಅಲಿ ಜಮಖಂಡಿ ಮರ್ಡರ್ ಕೇಸ್ ಆರೋಪಿಗಳಿಗೆ ಶಿಕ್ಷೆ ಪ್ರಕಟ..! ಓರ್ವನಿಗೆ ಜೀವಾವಧಿ ಶಿಕ್ಷೆ..!
ಶಿಗ್ಗಾವಿ BEO ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ಚಿಗಳ್ಳಿಯ ಪ್ರಸನ್ನ ಜಾಧವ್ ವಿಧಿವಶ, ಹಲವರ ಸಂತಾಪ..!
ಡ್ರಗ್ಸ್ ದಂಧೆ ಮಾಡುತಿದ್ದ 9 ದಂಧೆಕೋರರ ಬಂಧನ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ..!
ಮುಂಡಗೋಡ ತಾಲೂಕು ಸೇರಿ ಜಿಲ್ಲೆಯ ಹಲವು ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ..!
ನಾಳೆ ಮುಂಡಗೋಡ ತಾಲೂಕಿನಲ್ಲೂ ಶಾಲೆಗಳಿಗೆ ಮಳೆಯ ರಜೆ..!
ಮುಂಡಗೋಡ ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ “ಮಳೆಯ” ರಜೆ..!
School holiday News; ಭಾರಿ ಮಳೆ ಹಿನ್ನೆಲೆ; ಜಿಲ್ಲೆಯ 10 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ..!
ಯಲ್ಲಾಪುರ ಬಳಿ ಭೀಕರ ಅಪಘಾತ, ನಿಂತಿದ್ದ ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು, 7 ಜನರಿಗೆ ಗಂಭೀರ ಗಾಯ..!
ಶಿಗ್ಗಾವಿಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ..!
ಹೆಂಡತಿಯ ಅಪ್ಪ, ತಮ್ಮನ ಕಾಟ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮುಂಡಗೋಡ ಕಾಳಗನಕೊಪ್ಪದ ವ್ಯಕ್ತಿ..!
ಲೊಯೋಲಾ ಪ್ರೌಢಶಾಲೆಯ ಶಿಕ್ಷಕ ವಿನಾಯಕ್ ಶೇಟ್ ನಾಪತ್ತೆ, ಹುಡುಕಿ ಕೊಡುವಂತೆ ಪತ್ನಿಯಿಂದ ಮುಂಡಗೋಡ ಠಾಣೆಯಲ್ಲಿ ದೂರು..!
ಕಾರವಾರ ಶಾಸಕ ಸತೀಶ್ ಶೈಲ್ ಮನೆ ಮೇಲೆ ಇಡಿ ದಾಳಿ, ದಾಖಲೆ ಪರಿಶೀಲನೆ..!
ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿನ ಇಬ್ಬರ ಬಂಧನ..!
Category: ಮುಂಡಗೋಡ ಸುದ್ದಿ
ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಭೀತಿ, ಬಿಕೋ ಅಂತಿವೆ ರಸ್ತೆಗಳು..!
ಮುಂಡಗೋಡ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರೋ ಟಿಬೇಟಿಯನ್ ಕಾಲೋನಿಗಳಲ್ಲಿ ಕೋವಿಡ್ ಸದ್ಯ ಮತ್ತೆ ತನ್ನ ಅಟ್ಟಹಾಸ ಶುರು ಮಾಡಿದೆ.. ಹೀಗಾಗಿ, ಸದ್ಯ ಕಾಲೋನಿಯಲ್ಲಿ ಬಹುತೇಕ ಸ್ತಬ್ದ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲ ವಾರದ ಹಿಂದೆ ಮೊದಲೇಲ್ಲ ವಾರಕ್ಕೆ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದ್ರೆ ಸದ್ಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ಇಲ್ಲಿ ಈಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅರ್ಧಶತಕ ದಾಟಿದೆ. ಅದ್ರಲ್ಲೂ ಟಿಬೇಟಿಯನ್ ಕಾಲೋನಿಯ STS ಶಾಲೆಯಲ್ಲಿ 16 ವಿದ್ಯಾರ್ಥಿಗಳಿಗೆ ಪಾಸಿಟಿವ್ ದೃಢಪಟ್ಟಿರೋದು...
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಹನುಮಾಪುರ ಗ್ರಾ. ಪಂಚಾಯತಿ..!
ಮುಂಡಗೋಡ: ತಾಲೂಕಿನ ಹನುಮಾಪುರ ಗ್ರಾಮ ಪಂಚಾಯತಿಯಲ್ಲಿ ಶನಿವಾರ ರಾತ್ರಿ ಎಂಟು ಗಂಟೆ ಯಾದ್ರೂ ಗ್ರಾಮ ಪಂಚಾಯತದ ಎದುರಿಗೆ ಏರಿಸಿದ್ದ ರಾಷ್ಟ್ರಧ್ವಜವನ್ನು ಇಳಿಸದೇ, ಗ್ರಾ.ಪಂ. ಸಿಬ್ಬಂದಿ ಅಗೌರವ ತೋರಿದ ಘಟನೆ ನಡೆದಿದೆ. ಪ್ರತಿ ದಿನದ ಬೆಳಿಗ್ಗೆ ರಾಷ್ಟ್ರಧ್ವಜವನ್ನು ಏರಿಸಿ, ಸೂರ್ಯಾಸ್ತದ ವೇಳೆಗೆ ಇಳಿಸಬೇಕೆಂಬ ನಿಯಮವಿದೆ. ಆದರೆ, ರಾಷ್ಟ್ರಧ್ವಜವನ್ನು ಪ್ರತಿದಿನ ಇಳಿಸುವ ಬದಲು, ಕೆಲವು ಸಿಬ್ಬಂದಿಗಳು ಬೆಳಿಗ್ಗೆ ಏರಿಸಿ ಹಾಗೆ ಬಿಡುತ್ತಾರಂತೆ. ಹನುಮಾಪುರ ಗ್ರಾ.ಪಂ.ದಲ್ಲಿಯೂ ಶನಿವಾರ ರಾತ್ರಿ ಎಂಟು ಗಂಟೆಯಾದರೂ, ರಾಷ್ಟ್ರಧ್ವಜವನ್ನು ಇಳಿಸಿಲ್ಲ. ಈ ಬಗ್ಗೆ ಗ್ರಾಮಸ್ಥರು ಮೊಬೈಲ್ ನಲ್ಲಿ...
ಮುಂಡಗೋಡಿನಲ್ಲಿ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ..!
ಮುಂಡಗೋಡಿನಲ್ಲಿ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ..! ಮುಂಡಗೋಡ: ಪಟ್ಟಣದ ಲೊಯೊಲಾ ವಿಕಾಸ ಕೇಂದ್ರದ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಂಡಗೋಡ ಮತ್ತು ಹಳಿಯಾಳ ಭಾಗದ ಬಂಜಾರಾ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದ್ರು. ವಿಶೇಷ ಜನಪದ ಗೀತೆಗಳನ್ನು ವಾದ್ಯ ಸಮೇತ ಹಾಡಿ ರಂಜಿಸಿದ್ರು, ಪಾರಂಪರಿಕ ಸೊಗಡಿನ ಗೀತ ನೃತ್ಯಗಳನ್ನು ಪ್ರದರ್ಶಿಸಿದ್ರು. ಈ ವೇಳೆ ತೀರ್ಪುಗಾರರಾಗಿ ಖ್ಯಾತ ಬಂಜಾರಾ ಕಲಾವಿದರು ಆಗಮಿಸಿದ್ದರು. ಸ್ಥಳೀಯ ಬಂಜಾರಾ ಸಮಾಜದ ಮುಖಂಡರುಗಳು, ಕಲಾಭಿಮಾನಿಗಳು ಹಾಜರಿದ್ದರು.
ಮುಂಡಗೋಡಿಗೆ ಅಪರೂಪದ ಅತಿಥಿಯ ಆಗಮನ, ರಕ್ಷಣೆ..!
ಮುಂಡಗೋಡಿಗೆ ಅಪರೂಪದ ಅತಿಥಿಯ ಆಗಮನ, ರಕ್ಷಣೆ..! ಮುಂಡಗೋಡ: ಪಟ್ಟಣದ BSNL ವಸತಿ ಸಮುಚ್ಛಯದ ಮಹಡಿ ಮೇಲೆ ಇಂದು ಅಪರೂಪದ ಅತಿಥಿಯೊಂದು ಆಗಮಿಸಿತ್ತು. BSNL ವಸತಿ ಸಮುಚ್ಚಯದ ಟೇರೇಸಿನ ಮೇಲೆ ಕಣಜ ಗೂಬೆ (Barn owl) ಪ್ರತ್ಯಕ್ಷವಾಗಿತ್ತು. ಅಪರೂಪದ ಈ ಪಕ್ಷಿಯನ್ನು ಕಂಡ ಸ್ಥಳೀಯರು ಆಶ್ಚರ್ಯಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರು. ಮಾಹಿತಿ ಪಡೆದು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಶ್ರೀಧರ ಬಜಂತ್ರಿ ಅಪರೂಪದ ಕಣಜ ಗೂಬೆಯನ್ನು ರಕ್ಷಿಸಿದ್ರು. ಹಾಗೆ ರಕ್ಷಿಸಿದ ಕಣಜ ಗೂಬೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು...
108 ಅಂಬ್ಯುಲೆನ್ಸ್ ನಲ್ಲೆ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!
ಮುಂಡಗೋಡ: ತಾಲೂಕಿನ ಕರವಳ್ಳಿ ಗ್ರಾಮದ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಗೆ ಅಂತಾ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಾಗಿದ್ದ ಕರವಳ್ಳಿಯ ಜ್ಯೋತಿ ಅಜಿತ್ ಕುಮಾರ್ ಕಾಂಬಳೆ ಎಂಬುವ ಮಹಿಳೆಗೆ ಪರೀಕ್ಷಿಸಿದ್ದ ವೈದ್ಯರು, ಹೇರಿಗೆ ನಂತರ ಮಗುವಿಗೆ NICU ಅವಶ್ಯಕತೆ ಇರೋ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ರೆಫರ್ ಮಾಡಿದ್ರು. ಹೀಗಾಗಿ ಮುಂಡಗೋಡಿನ 108 ಅಂಬ್ಯುಲೆನ್ಸ್ ಮೂಲಕ ಹುಬ್ಬಳ್ಳಿಗೆ ಹೋಗುತ್ತಿದ್ದಾಗ, ಮಾರ್ಗಮದ್ಯೆ ಹೇರಿಗೆ ನೋವು ಹೆಚ್ಚಾದಾಗ ಅಂಬ್ಯುಲೆನ್ಸ್ ನಲ್ಲೇ ಸುರಕ್ಷಿತ ವಾಗಿ ಹೆರಿಗೆ ಮಾಡಿಸಲಾಗಿದೆ....
ಸಾಲಗಾಂವ್ ನಲ್ಲಿ ಕೋವಿಡ್ ಸ್ಫೋಟ, ತಾಲೂಕಿನಲ್ಲಿ ಇಂದು 24 ಪಾಸಿಟಿವ್..!
ಮುಂಡಗೋಡ: ತಾಲೂಕಿನಲ್ಲಿ ಇಂದು 24 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಅಂತಾ ಅರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸಾಲಗಾಂವ ಗ್ರಾಮ ಒಂಚಾಯತಿ ವ್ಯಾಪ್ತಿ ಒಂದರಲ್ಲೇ ಬರೋಬ್ಬರಿ 10 ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಇನ್ನುಳಿದಂತೆ, ಮುಂಡಗೋಡ ಪಟ್ಟಣದಲ್ಲಿ-2, ಟಿಬೇಟಿಯನ್ ಕ್ಯಾಂಪ್ STS ಶಾಲೆಯ 5 ವಿದ್ಯಾರ್ಥಿಗಳು ಸೇರಿದಂತೆ- 6, ಕಾತೂರ- 1, ಇಂದೂರ- 2, ಪಾಳಾ- 1, ಕಲಕೇರಿ – 1, ಸಾಲಗಾಂವ್- 10 ರಾಮಾಪುರ 1 ಪ್ರಕರಣ ದೃಢಪಟ್ಟಿದೆ.
ಇದು 108 ಅಂಬ್ಯುಲೆನ್ಸ್ ಸಿಬ್ಬಂದಿಗಳ ಮನದಾಳ, ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ಹೇಳಿದ್ದಿಷ್ಟು..!
ಮುಂಡಗೋಡ: ಪಟ್ಟಣದ ನಿವೃತ್ತ ನೌಕರರ ಸಭಾಭವನದಲ್ಲಿ ಇಂದು 108 ಅಂಬ್ಯುಲೆನ್ಸ್ ನೌಕರರ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ್ರು. ರಾಜ್ಯ ಮಟ್ಟದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ್ರು. ಸರ್ಕಾರಕ್ಕೆ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿದ್ರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ್ ಹಳ್ಳೂರು ಮಾತನಾಡಿ, 2016 ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 150 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಹಾಗೆ ವಜಾ ಮಾಡಿರೋ ಸಿಬ್ಬಂದಿಗಳನ್ನು ಪುನಃ ಕರ್ತವ್ಯಕ್ಕೆ ನೇಮಕ ಮಾಡಿಕೊಳ್ಳಬೇಕು, ಅಲ್ದೇ, ಹಳೆಯ ಸಿಬ್ಬಂದಿಗಳ ವೇತನ ತಾರತಮ್ಯ ಸರಿಪಡಿಸಬೇಕು...
ನಂದಿಕಟ್ಟಾದಲ್ಲಿ ನಾಯಿ ದಾಳಿಗೆ ಕೋತಿ ಮರಿ ಬಲಿ, ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಾಯಿಗಳ ದಾಳಿಗೆ ತುತ್ತಾಗಿ ಕೋತಿ ಮರಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಮರದ ಮೇಲೆ ಆಟವಾಡುತ್ತಿದ್ದ ಕೋತಿ ಮರಿ ಕೈ ತಪ್ಪಿ ಕೆಳಗೆ ಬಿದ್ದ ಕೂಡಲೇ ಅಲ್ಲೇ ಇದ್ದ ನಾಯಿಗಳ ಹಿಂಡು ದಾಳಿ ಮಾಡಿ ಕೋತಿ ಮರಿಯನ್ನು ಕೊಂದು ಹಾಕಿವೆ. ಹೀಗಾಗಿ ಗ್ರಾಮಸ್ಥರು ಸಾವನ್ನಪ್ಪಿದ ಕೋತಿ ಮರಿಗೆ ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತಿಮ ಸಂಸ್ಕಾರ ನಡೆಸಿದ್ರು. ಈ ವೇಳೆ ಗ್ರಾಮದ ಹಲವರು ಭಾಗವಹಿಸಿದ್ದರು.
ಮುಂಡಗೋಡ ಲೊಯೋಲಾ ಬಳಿ ಮಹಿಳೆಗೆ ವಾಹನ ಡಿಕ್ಕಿ, ಸ್ಥಳದಲ್ಲೇ ಮಹಿಳೆ ಸಾವು..!
ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಶಾಲೆಯ ಹತ್ತಿರ ಭಾರೀ ದುರ್ಘಟನೆ ನಡೆದಿದೆ. ಪಾದಾಚಾರಿ ಮಹಿಳೆಯೋರ್ವಳಿಗೆ ಮಾರುತಿ ಇಕೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕರಗಿನಕೊಪ್ಪ ಗ್ರಾಮದ ಲೋಕವ್ವ ಧರ್ಮಣ್ಣ ಲಮಾಣಿ(50) ಅಪಘಾತದಲ್ಲಿ ಮೃತಪಟ್ಟ ಮಹಿಳೆಯಾಗಿದ್ದಾಳೆ. ಶಿರಸಿ ಕಡೆಯಿಂದ ಬರುತ್ತಿದ್ದ ಮಾರುತಿ ಇಕೊ ವಾಹನ, ಮುಂಡಗೋಡ ಕಡೆಯಿಂದ ಕಾಲ್ನಡಿಗೆಯಲ್ಲೇ ಬರುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಫುಲ್ ಟ್ರಾಫಿಕ್ ಜಾಮ್..!...