ಮುಂಡಗೋಡ ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಶಶಿಧರ್ ಪರವಾಪುರ ರಾಜೀನಾಮೆ ನೀಡಿದ್ದಾರೆ. ಶಿರಸಿ ಉಪವಿಭಾಗಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರೋ ಶಶಿಧರ್ ಮುಂದಿನ 15 ತಿಂಗಳ ಅವಧಿಗೆ ನೂತನ ಅಧ್ಯಕ್ಷರನ್ನು ನೇಮಿಸುವ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದಹಾಗೆ, ಕಳೆದ ಒಂದು ವರ್ಷದಿಂದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಶಿಧರ್ ಕಾರ್ಯನಿರ್ವಹಿಸಿದ್ದರು. ಒಳಗಿನ ಒಪ್ಪಂದದಂತೆ, ಒಂದು ವರ್ಷದ ನಂತರ ಅಧಿಕಾರ ಬಿಟ್ಟುಕೊಡುವ ಮಾತಾಗಿತ್ತು. ಹೀಗಾಗಿ, ಒಂದು ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಮಂಗಳವಾರ ರಾಜೀನಾಮೆ ನೀಡಿದ್ದಾರೆ....
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: ಮುಂಡಗೋಡ ಸುದ್ದಿ
ಮುಂಡಗೋಡ ಸಂತೆ ಮಾರುಕಟ್ಟೆ ಬಳಿ ಶ್ರೀಗಂಧದ ಮರ ಕಳ್ಳತನಕ್ಕೆ ವಿಫಲ ಯತ್ನ..!
ಮುಂಡಗೋಡ ಪಟ್ಟಣದ ಸಂತೆ ಮಾರುಕಟ್ಟೆ ಹತ್ತಿರ ಶ್ರೀಗಂಧ ಮರ ಕಳ್ಳತನ ವಿಫಲ ಯತ್ನ ನಡೆದಿದೆ. ಎಸ್.ನಾರಾಯಣರಾವ್ ಎಂಬುವವರ ಮನೆ ಆವರಣದಲ್ಲಿ ಘಟನೆ ನಡೆದಿದ್ದು ಮರ ಕಡಿದು ಸಾಗಿಸಲಾಗದೇ ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ. ಅಂದಹಾಗೆ, ಇದೇ ಸ್ಥಳದಲ್ಲಿ ಈ ಹಿಂದೆಯೂ ಶ್ರೀಗಂಧದ ಮರಗಳ ಕಳ್ಳತನದ ವಿಫಲ ಯತ್ನಗಳು ನಡೆದಿತ್ತು. ಆದ್ರೆ, ಇವತ್ತು ನಡೆದಿರೋ ಘಟನೆ ಖಚಿತತೆಯಿಂದಲೇ ಕಳ್ಳರು ಬಂದು, ಇನ್ನೇನು ಸಾಗಿಸುವ ಹಂತದಲ್ಲಿ ಅರ್ದಕ್ಕೆ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ....
ಕಾತೂರು ಅರಣ್ಯ ವಲಯದ RFO ಮಂಜುನಾಥ್ ನಾಯ್ಕ್ ಎತ್ತಂಗಡಿ, ವೀರೇಶ್ ಈಗ ನೂತನ RFO..!
ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ವಲಯದ RFO ಮಂಜುನಾಥ್ ನಾಯ್ಕ್ ರನ್ನು ವರ್ಗಾವಣೆ ಮಾಡಲಾಗಿದೆ. ಯಲ್ಲಾಪುರದ ಇಡಗುಂದಿ ಅರಣ್ಯ ವಲಯಕ್ಕೆ ನಿಯುಕ್ತಿ ಮಾಡಲಾಗಿದ್ದು ಇವ್ರ ಜಾಗಕ್ಕೆ ಅಂದ್ರೆ ಕಾತೂರು ಅರಣ್ಯ ವಲಯಕ್ಕೆ ವೀರೇಶ್ ಎಂಬುವವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಮುಂಡಗೋಡ ಪ.ಪಂಚಾಯತಿಯ ಮುಚ್ಚಂಡಿ ಸಾಹೇಬ್ರು ವರ್ಗವಾಗಿ 20 ದಿನ ಆಯ್ತು..! ಆದ್ರೂ ಇಲ್ಲೇ ಇದಾರಲ್ರಿ..? ಅದ್ಯಾರ ಕೃಪೆ..?
ಮುಂಡಗೋಡ ಪಟ್ಟಣ ಪಂಚಾಯತಿಯ ಬಿಲ್ ಕಲೆಕ್ಟರ್ ಮಂಜುನಾಥ್ ಮುಚ್ಚಂಡಿ ಅಂತೂ ಇಂತೂ ಟ್ರಾನ್ಸಪರ್ ಆಗಿದ್ದಾರೆ. ಜುಲೈ 31 ರಂದೇ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದ್ದರೂ ಸಾಹೇಬ್ರು ಮಾತ್ರ ಇನ್ನೂ ಜಾಗ ಕದಲಿಸಿಲ್ಲ. ಅದ್ಯಾರ ಕೃಪೆಯೋ ಅಥವಾ, ತಮಗಿರೋ ಭಾರೀ ಪ್ರಭಾವ ಬಳಸಿ ಇಲ್ಲೇ ಮುಂದುವರಿಯೋ ಮಹಾ ಪ್ಲ್ಯಾನೋ ಯಾರಂದ್ರೆ ಯಾರಿಗೂ ಅರ್ಥವಾಗಿಲ್ಲ. ಹೀಗಾಗಿ, ಸಾರ್ವಜನಿಕ ವಲಯದಲ್ಲಿ ಇದು ಭಾರೀ ಚರ್ಚೆಗೆ ಕಾರಣವಾಗ್ತಿದೆ. ಗುಸು, ಗುಸು ಪಿಸು, ಪಿಸು ನಡೀತಿದೆ..! ಅಸಲು, ಸಾಕಷ್ಟು ಆಕ್ರೋಶಗಳು, ಆರೋಪಗಳು ಮಾರ್ದನಿಸಿದ ಹಿನ್ನೆಲೆಯಲ್ಲಿ, ಮುಚ್ಚಂಡಿ...
ಶಿಡ್ಲಗುಂಡಿ ಬಸ್ ಸ್ಟಾಪ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ! ಯಾರಿಗಾದ್ರೂ ಈತನ ಗುರುತು ಇದ್ರೆ ಮಾಹಿತಿ ನೀಡಿ..
ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಗ್ರಾಮದ ಬಸ್ ಸ್ಟಾಪ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 60-65 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು ಯಾರಿಗಾದ್ರೂ ಈತನ ಬಗ್ಗೆ ಗುರುತು ಇದ್ರೆ ಮುಂಡಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. ಮುಂಡಗೋಡ ಪೊಲೀಸ್ ಠಾಣೆ ಫೋನ್ ನಂಬರ್ 08301 222211 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕ್ರೈ ಪಿಎಸ್ಐ ಹೆಚ್.ಬಿ.ಕುಡುಗುಂಟಿ ತಿಳಿಸಿದ್ದಾರೆ
ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷೆ ಜಯಸುಧಾ ಭೋವಿಗೆ ಮೊದಲ ದಿನವೇ ಹೈಕೋರ್ಟ್ ಶಾಕ್..! ಮೀಸಲಾತಿಗೆ ತಡೆಯಾಜ್ಞೆ..!
ಮುಂಡಗೋಡ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಜಯಸುಧಾ ಭೋವಿ ಆಯ್ಕೆಯಾಗಿದ್ದಾರೆ. ಆದ್ರೆ, ಅಧ್ಯಕ್ಷರಾದ ಮೊದಲ ದಿನವೇ ಶಾಕ್ ಎದುರಾಗಿದೆ. ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಗೆ, ಮಾನ್ಯ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಅದರ ವಿರುದ್ಧ ನಾಲ್ವರು ಪಟ್ಟಣ ಪಂಚಾಯತಿ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ, ವಿಚಾರಣೆ ನಡಸಿರೊ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ. ಹೀಗಾಗಿ, ಅಧ್ಯಕ್ಷ ಪದವಿಗೇರಿದ್ರೂ ಜಯಸುಧಾ ಭೋವಿ ಮೇಡಂ ಸದ್ಯ ಕೋರ್ಟ್...
ಮುಂಡಗೋಡ ಪಟ್ಟಣ ಪಂಚಾಯತಿಗೆ ಅಚ್ಚರಿಯ ಅಧ್ಯಕ್ಷರಾಗಿ ಜಯಸುಧಾ ಭೋವಿ..!
ಮುಂಡಗೋಡ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಜಯಸುಧಾ ಭೋವಿ ಆಯ್ಕೆಯಾಗಿದ್ದಾರೆ. ಅಚ್ಚರಿಯೆಂಬಂತೆ ಕೊನೆ ಕ್ಷಣದಲ್ಲಿ ಅಧ್ಯಕ್ಷ ಪದವಿ ಗಿಟ್ಟಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ರಹಿಮಾಬಾನು ಕುಂಕೂರ್ ನಿರಾಯಾಸವಾಗಿ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ, ಮುಂಡಗೋಡ ಪಟ್ಟಣ ಪಂಚಾಯತಿ ಕಾಂಗ್ರೆಸ್ ನೆರಳಲ್ಲಿ, ಶಿವರಾಮ್ ಹೆಬ್ಬಾರ್ ಬೆಂಬಲಿಗರ ಪಾಲಾಗಿದೆ. ಅಸಲು, ಅಧ್ಯಕ್ಷ ಸ್ಥಾನ ಜಯಸುಧಾ ಭೋವಿಯವರಿಗೆ ದಕ್ಕಿದ್ದೇ ರೋಚಕ ಎಂಬಂತಾಗಿದೆ. ಮೊನ್ನೆ ಯಿಂದಲೂ ಆಯ್ಕೆ ಕಸರತ್ತು ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿತ್ತು. ಇವತ್ತು ಬೆಳಗಿನವರೆಗೂ ಕಸುಮಾ ನಾಗಭೂಷಣ ಹಾವಣಗಿಯವ್ರೇ ಕೈ ಪಡೆಯ...
ಯಮರೂಪಿ ರಸ್ತೆ ಗುಂಡಿಗಳಿಗೆ ತೆಪೆ ಹಾಕಲು ಬಂದ್ರು ಅಧಿಕಾರಿಗಳು..! ಇದು ಪಬ್ಲಿಕ್ ಫಸ್ಟ್ ಇಂಪ್ಯಾಕ್ಟ್..!
ಮುಂಡಗೋಡ ಹೊರ ವಲಯದ ಮಹಾಲೆ ಮಿಲ್ ಹತ್ತಿರ PWD ಅಧಿಕಾರಿಗಳು ಬಂದಿಳಿದಿದ್ದಾರೆ. ನಿನ್ನೆಯಷ್ಟೇ ರಸ್ತೆಯಲ್ಲಿ ಬಾಯ್ತೆರೆದಿರೋ ಯಮರೂಪಿ ಗುಂಡಿಗಳ ಬಗ್ಗೆ ಪಬ್ಲಿಕ್ ಫಸ್ಟ್ ನ್ಯೂಸ್ ಪ್ರತ್ಯಕ್ಷ ವರದಿ ಬಿತ್ತರಿಸಿತ್ತು. ಈ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಾಗ್ತಿದೆ. ವಾಹನ ಸವಾರರಿಗೆ ತಾತ್ಕಾಲಿಕವಾಗಿ ಕೊಂಚ ಸಮಾಧಾನ ಸಿಕ್ಕಂತಾಗಿದೆ. ಅಂದಹಾಗೆ, ಇದು ಪಬ್ಲಿಕ್ ಫಸ್ಟ್ ನ್ಯೂಸ್ ಇಂಪ್ಯಾಕ್ಟ್..! ನಿಜ, ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ. ಪ್ರತೀ ವರ್ಷದ ಮಳೆಗಾಲ ಬಂತಂದ್ರೆ ಸಾಕು ಈ ರಸ್ತೆಯಲ್ಲಿ ಜಸ್ಟ್ ನಡೆದಾಡಲೂ...
ಮುಂಡಗೋಡ ಮಹಾಲೆ ಮಿಲ್ ಬಳಿ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಗಂಭೀರ..!ಹೊಸ ಓಣಿಯ ಈ ಯುವಕನ ಸ್ಥಿತಿಗೆ ಕಾರಣ ಯಾರು..?
ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಮಹಾಲೆ ಮಿಲ್ ಹತ್ತಿರ ಭೀಕರ ಅಪಘಾತವಾಗಿದೆ. PWD ಇಲಾಖೆಯ ಬೇಜವಾಬ್ದಾರಿ ಹಾಗೂ ಸರ್ಕಾರದ ಖಬರಗೇಡಿತನಕ್ಕೆ ಈ ರಸ್ತೆ ಅನ್ನೋದು ಯಮರೂಪಿಯಾಗಿದೆ. ನಿತ್ಯವೂ ಹಲವರು ಇಲ್ಲಿ ಎದ್ದು, ಬಿದ್ದು ಓಡಾಡುವಂತಾಗಿದೆ. ಅಂತದ್ದರಲ್ಲಿ ಇವಾಗ ಮತ್ತೊಂದು ಅಪಘಾತಕ್ಕೆ ಇದೇ ರಸ್ತೆಯ ಗುಂಡಿಗಳು ಕಾರಣವಾಗಿವೆ. ಅಂದಹಾಗೆ, ಮುಂಡಗೋಡ ಪಟ್ಟಣದ ಹೊರ ವಲಯದ ಮಹಾಲೆ ಮಿಲ್ ಬಳಿ ರಸ್ತೆ ಗುಂಡಿಗೆ ಬೈಕ್ ಸವಾರನೊಬ್ಬ ಬಿದ್ದಿದ್ದಾನೆ. ಹೀಗಾಗಿ, ಗಂಭೀರ ಗಾಯಗೊಂಡಿರೋ ಬೈಕ್ ಸವಾರನನ್ನು ಸ್ಥಳೀಯರು 108 ಅಂಬ್ಯುಲೆನ್ಸ್ ಮೂಲಕ...
ಅಕ್ರಮ ಗೋ ಸಾಗಾಟ, ಮುಂಡಗೋಡ ಪೊಲೀಸ್ರ ಭರ್ಜರಿ ರೈಡ್: ಆರು ಜಾನುವಾರು ರಕ್ಷಣೆ..!
ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಟಾಟಾ ಎಸ್ ನಲ್ಲಿ ಸಾಗಿಸುತ್ತಿದ್ದ 6 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಥೇಟು ಸಿನಿಮಾ ಸ್ಟೈಲಿನಲ್ಲೇ ಚೇಸ್ ಮಾಡಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ತಾಲೂಕಿನ ಬಡ್ಡಿಗೇರಿಯಿಂದ ಹಾನಗಲ್ಲಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಟಾಟಾ ಎಸ್ ನಲ್ಲಿ ಆರು ಜಾನುವಾರುಗಳನ್ನು ಅಮಾನುಷವಾಗಿ ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಅಲರ್ಟ್ ಆಗಿದ್ದಾರೆ. ಹಾನಗಲ್ಲಿನ ಕಡೆಗೆ ವಾಹನ ಹೊರಟಿದೆ ಅನ್ನೊ ಮಾಹಿತಿ ತಿಳಿದ ಪೊಲೀಸ್ರು, ಪಟ್ಟಣದ ಹೊರ ವಲಯದ...









