ಮುಂಡಗೋಡ: ಪಟ್ಟಣದ ತೃಪ್ತಿ ವೈನ್ ಶಾಪ್ ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ತಡರಾತ್ರಿ ಅಂಗಡಿಯ ಮೇಲ್ಚಾವಣಿಯ ಹೆಂಚು ತೆರೆದು ಒಳನುಗ್ಗಿ ಕಳ್ಳತನ ಮಾಡಿರೋ ಖದೀಮರು ವೈನ್ ಶಾಪ್ ನಲ್ಲಿದ್ದ ಹಣ ಸೇರಿದಂತೆ ಮದ್ಯದ ಬಾಟಲ್ ಗಳನ್ನೂ ಕದ್ದೋಯ್ದಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕಳ್ಳತನವಾದ ಹಣವೆಷ್ಟು..? ಯಾವ್ಯಾವ ವಸ್ತುಗಳನ್ನು ಎಗರಿಸಲಾಗಿದೆ ಅನ್ನೋ ಬಗ್ಗೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇನ್ನೇನು ಕೆಲವೇ ಹೊತ್ತಲ್ಲಿ ಕಳ್ಳತನದ ಅಸಲೀ ಮಾಹಿತಿಗಳು ಹೊರಬರಲಿದೆ.
Top Stories
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!
Category: ಅಪರಾಧ ಜಗತ್ತು
ಇಬ್ಬರು ಅಂತರ್ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿದ ಮುಂಡಗೋಡ ಪೊಲೀಸ್ರು..!
ಮುಂಡಗೋಡ: ಅವ್ರು ದೇವಸ್ಥಾನ, ಒಂಟಿ ಮನೆಗಳನ್ನು ಗುಡಿಸಿ ಗುಂಡಾಂತರ ಮಾಡೋ ಮಹಾನ್ ಖದೀಮರು, ಅವಕಾಶ ಸಿಕ್ರೆ ರಾಬರಿ ಮಾಡಿ ಬಾಚಿಕೊಂಡು ಹೋಗೋ ಖತರ್ನಾಕ ಕಿರಾತಕರು, ಆದ್ರೆ ಈಗ ಮುಂಡಗೋಡ ಪೊಲೀಸರ ಕೈಗೆ ತಗಲಾಕ್ಕೊಂಡು ಬಿಟ್ಟಿದ್ದಾರೆ. ತಾಲೂಕಿನ ಮಂದಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ದೇವರನ್ನೇ ಬಿಡದವರು..! ಯಸ್, ಇವ್ರು ಅಕ್ಷರಶಃ ಅಂತರ್ ಜಿಲ್ಲಾ ಪ್ರೊಫೆಷನಲ್ ಕಳ್ಳರು. ಮುಂಡಗೋಡ ತಾಲೂಕಿನಲ್ಲಿ ದೇವಸ್ಥಾನ, ಮನೆ ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಆದ್ರೆ ನಸೀಬು...
ಸವಣೂರಿನಲ್ಲಿ ನಿನ್ನೆ ನಡೆದ ಮರ್ಡರನ ಎದೆ ನಡುಗಿಸುವ ರಣಭೀಕರ ದೃಷ್ಯ..!
ಸವಣೂರು: ಇಲ್ಲಿನ ಕಾರಡಗಿ ಕ್ರಾಸ್ ಬಳಿ ನಿನ್ನೆ ರವಿವಾರ, ನಡು ರಸ್ತೆಯಲ್ಲೇ ನಡೆದಿದ್ದ ರೌಡಿಶೀಟರ್ ಬರ್ಬರ ಹತ್ಯೆಯ ಭಯಾನಕ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಚ್ಚು ಹಾಗೂ ಕೊಡಲಿಯಿಂದ ಮನಸೊಯಿಚ್ಚೆ ಹೊಡೆದು ಕೊಂದು ಹಾಕಿದ್ದಾರೆ ಕೊಲೆ ಪಾತಕಿಗಳು. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಾರಡಗಿ ಕ್ರಾಸ್ ಬಳಿ ನಿನ್ನೆ ಸಂಜೆ ನಡೆದಿದ್ದ ಘಟನೆಯಲ್ಲಿ, ಅನ್ವರ ಶೇಕ್ ಅಲಿಯಾಸ್ ಹಜರತ್ ಅಲಿ ಮೂಮಿನ್ ಎಂಬುವ 40 ವರ್ಷ ವಯಸ್ಸಿನ ರೌಡಿಶೀಟರ್ ಬರ್ಬರ ಹತ್ಯೆಯಾಗಿದ್ದ. ಇಮ್ರಾನ್ ಚೌದರಿ (28) ಹಾಗೂ...
ಹಾಡಹಗಲೇ ನಡುರಸ್ತೆಯಲ್ಲೇ ಬಿತ್ತು ರೌಡಿಶೀಟರ್ ಹೆಣ..! ಭೀಕರ ಹತ್ಯೆ ಕಂಡು ಬೆಚ್ಚಿಬಿದ್ದ ಸವಣೂರಿನ ಜನ..!!
ಸವಣೂರು: ನಡು ರಸ್ತೆಯಲ್ಲೇ ಹಾಡಹಗಲೇ ರೌಡಿಶೀಟರ್ ನ ಬರ್ಬರ ಹತ್ಯೆಯಾಗಿದೆ. ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಾರಡಗಿ ಕ್ರಾಸ್ ಬಳಿ ಘಟನೆ ನಡೆದಿದೆ. ಅನ್ವರ ಶೇಕ್ ಅಲಿಯಾಸ್ ಹಜರತ್ ಅಲಿ, ಅಲಿಯಾಸ್ ಟೈಗರ್ ರಪೀಕ್, ಮಾಮಿನ್ (40) ಬರ್ಬರವಾಗಿ ಹತ್ಯೆಯಾಗಿರೋ ರೌಡಿಶೀಟರ್. ಗೋವಾದಲ್ಲಿ ವಾಸವಾಗಿದ್ದ ರೌಡಿಶೀಟರ್ ನನ್ನು ಇಮ್ರಾನ್ ಎನ್ನುವ 28 ವರ್ಷದ ವ್ಯಕ್ತಿ, ಭೀಕರವಾಗಿ ನಡುರಸ್ತೆಯಲ್ಲೇ ಅಟ್ಟಾಡಿಸಿ ಹತ್ಯೆ ಮಾಡಿದ್ದಾನೆ ಅಂತಾ ತಿಳಿದು ಬಂದಿದೆ. ಮೃತ ರೌಡಿಶೀಟರ್ ಹಪ್ತಾ...
ಹೊನ್ನಾವರದಲ್ಲಿ ಶಂಕಿತ ಭಯೋತ್ಪಾದಕನ ಬಂಧನ; ಇಂದು ಕೋರ್ಟ್ ಗೆ ಹಾಜರು ಪಡಿಸಲಿರೋ ಪೊಲೀಸರು..!
ಹೊನ್ನಾವರ: ತಾಲೂಕಿನ ಮಂಕಿ ಗ್ರಾಮದಲ್ಲಿ ನಿನ್ನೆ ಬಂಧಿಸಿದ್ದ ಶಂಕಿತ ಭಯೋತ್ಪಾದಕನನ್ನು ಇಂದು ಪೊಲೀಸರು, ಹೊನ್ನಾವರ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿರೋ ಮಾಹಿತಿ ಲಭ್ಯವಾಗಿದೆ. ಜುಫ್ರಿ ಜವಾಹರ್ ದಾಮೂದಿ ಎನ್ನುವವನನ್ನ ನಿನ್ನೆ NIA ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಐಸೀಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಜುಫ್ರಿ, ಐಸೀಸ್ ಮಾಸಿಕ ಪತ್ರಿಕೆ “ವಾಯ್ಸ್ ಆಫ್ ಹಿಂದ್” ನ್ನು ದಕ್ಷಿಣ ಭಾರತದಲ್ಲಿ ಭಾಷಾಂತರ ಮಾಡುತ್ತಿದ್ದ. ಸಾಮಾಜಿಕ ಜಾಲತಾಣ ಮೂಲಕ ಯುವಕರಿಗೆ ಪ್ರಚೋದನೆ ಕೊಡುತ್ತಿದ್ದ. ಹೀಗಾಗಿ, ಖಚಿತ...
ಆ ಯುವಕನನ್ನು ಬರ್ಬರವಾಗಿ ಕೊಂದು ಬೀಸಾಕಿ ಹೋದ್ರಾ ಹಂತಕರು..?
ಶಿಗ್ಗಾವಿ: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯೋರ್ವನ ಕೊಲೆ ಮಾಡಿ ಶವ ಬೀಸಾಕಿರೋ ಘಟನೆ ನಡೆದಿದೆ. ಉಮೇಶ್ ನಂದೇಣ್ಣವರ್(32) ಎಂಬುವವನೇ ಕೊಲೆಯಾಗಿದ್ದ ವ್ಯಕ್ತಿಯಾಗಿದ್ದು. ಹಿರೇಬೆಂಡಿಗೇರಿ ಗ್ರಾಮದ ಹೊರವಲಯದ ಬೆಳಗಲಿ ರಸ್ತೆಯ ಜಮೀನಿನಲ್ಲಿ ಕೊಲೆ ಮಾಡಿರೋ ದುಷ್ಕರ್ಮಿಗಳು, ಶವ ಎಸೆದು ಹೋಗಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದಾದ ಸಾಧ್ಯತೆಯಿದ್ದು, ತಡಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ಬಂಧಿತ ಆರೋಪಿಗಳು ಇವರೇ ನೋಡಿ..!
ಮುಂಡಗೋಡ: ತಾಲೂಕಿನ ಸಾಲಗಾಂವ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ಲ ನಿಂದ ಸಾಲಗಾಂವ್ ಗ್ರಾಮಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಮುಂಡಗೋಡ ಪಿಐ ಪ್ರಭುಗೌಡ ಹಾಗೂ ಬಸವರಾಜ್ ಮಬನೂರು ಹಾಗೂ ಮತ್ತವರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ತಾಲೂಕಿನ ಸಾಲಗಾಂವ್ ಗ್ರಾಮದ ಗಂಗಪ್ಪ ಮಾಯಪ್ಪ ಪರಸಣ್ಣನವರ್, ಹಾನಗಲ್ಲಿನ ಇಮ್ರಾನ್ ಮಕ್ಬುಲ್ ಅಹ್ಮದ್ ಬ್ಯಾಡಗಿ,...
ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ನಾಲ್ವರ ಬಂಧನ..!
ಮುಂಡಗೋಡ: ತಾಲೂಕಿನ ಸಾಲಗಾಂವ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ಲ ನಿಂದ ಸಾಲಗಾಂವ್ ಗ್ರಾಮಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಮುಂಡಗೋಡ ಖಡಕ್ ಪಿಎಸ್ ಐ ಬಸವರಾಜ್ ಮಬನೂರು ಹಾಗೂ ಮತ್ತವರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಾಯಕ್ಕೆ ಹಾಜರು ಪಡಿಸಿದ್ದಾರೆ. ತಾಲೂಕಿನ ಸಾಲಗಾಂವ್ ಗ್ರಾಮದ ಗಂಗಪ್ಪ ಮಾಯಪ್ಪ ಪರಸಣ್ಣನವರ್, ಹಾನಗಲ್ಲಿನ ಇಮ್ರಾನ್ ಮಕ್ಬುಲ್ ಅಹ್ಮದ್ ಬ್ಯಾಡಗಿ,...
ಕಾತೂರು ಬಳಿ ಲಾರಿ ಚಾಲಕನನ್ನು ಅಪಹರಿಸಿ 22 ಸಾವಿರ ಹಣ ದೋಚಿದ ಖದೀಮರು..!
ಮುಂಡಗೋಡ: ತಾಲೂಕಿನ ಕಾತೂರು ಸಮೀಪದಲ್ಲಿ ಲಾರಿ ಚಾಲಕನನ್ನು ಅಪಹರಿಸಿ ಅವನಲ್ಲಿದ್ದ 22 ಸಾವಿರ ಹಣ ದೋಚಿಕೊಂಡು ಹೋದ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಅಬ್ದುಲ್ ಪೀರಸಾಬ್ ಶೇಖ್ ಎಂಬುವ ಲಾರಿ ಚಾಲಕನೇ ಹಣ ಕಳೆದುಕೊಂಡವನಾಗಿದ್ದಾನೆ. ಹುಬ್ಬಳ್ಳಿಯಿಂದಲೇ ಬೊಲೆರೋ ವಾಹನದಲ್ಲಿ ಹಿಂಬಾಲಿಸಿದ್ದ ನಾಲ್ಕು ಜನ ದುಷ್ಕರ್ಮಿಗಳು, ಲಾರಿ ಚಾಲಕ ಮೂತ್ರ ವಿಸರ್ಜನೆಗೆಂದು ಲಾರಿ ನಿಲ್ಲಿಸಿದಾಗ ಏಕಾಏಕಿ ಬಂದು ಅಟ್ಯಾಕ್ ಮಾಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ತಮ್ಮ ಬೊಲೆರೋ ವಾಹನದಲ್ಲೇ ಲಾರಿ ಚಾಲಕನನ್ನು...
ಪಾತಕ ಲೋಕದ ಸುಳಿಯಲ್ಲಿ ಮುಂಡಗೋಡ..? ಅಷ್ಟಕ್ಕೂ ಎತ್ತ ಸಾಗ್ತಿದೆ ನಮ್ಮೂರು..?
ಮುಂಡಗೋಡಿನಲ್ಲಿ ರವಿವಾರ ಭೀಕರ ಹತ್ಯೆಯಾಗಿದೆ. ಯುವಕನೋರ್ವನ ಪ್ರಾಣ, ಹಂತಕರ ರಕ್ತದಾಹಕ್ಕೆ ಬಲಿಯಾಗಿದೆ. ಪೊಲೀಸರೂ ಒಂದರ್ಥದಲ್ಲಿ ದಿಗಿಲಿಗೆ ಬೀಳುವಂತಾಗಿದೆ. ಅಸಲು, ಮುಂಡಗೋಡಿನ ಪರಿಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟು ಹೋಯ್ತಾ..? ಈ ಪ್ರಶ್ನೆ ತಾಲೂಕಿನ ಪ್ರತಿಯೊಬ್ಬ ನಾಗರೀಕನಿಗೂ ಆತಂಕ ತಂದಿಟ್ಟಿದೆ. ಅದ್ಯಾಕೋ ಗೊತ್ತಿಲ್ಲ, ನಂಗೆ ಈ ಕ್ರೈಂ ವರದಿ ಮಾಡೋಕೆ ಮನಸ್ಸೇ ಬರ್ಲಿಲ್ಲ.. ಈ ಮರ್ಡರ್ ವಿಷಯವಾಗಿ ಏನೂ ಬರಿಯೋದೇ ಬೇಡ ಅಂತಾ ಅನಕೊಂಡಿದ್ದೆ, ಯಾಕ್ ಗೊತ್ತಾ..? ಒಂದು ಕಾಲದಲ್ಲಿ ಮುಂಡಗೋಡ ತಾಲೂಕು ಹೇಗಿತ್ತು..? ಈಗ ಹೇಗಾಗಿದೆ..? ಅಯ್ಯೋ, ನೆನಪಿಸಿಕೊಂಡ್ರೆ...








