ಸವಣೂರು: ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಉಪವಿಭಾಗದ ಎಇಇ ನಿಂಬಣ್ಣ ಹೊಸಮನಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾಮಗಾರಿಯ ಹಣ ಬಿಡುಗಡೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟು ಅಧಿಕಾರಿ ತಗಲಾಕ್ಕೊಂಡಿದ್ದಾರೆ. ಲಚ್ಚಪ್ಪ ದುರ್ಗಪ್ಪ ಕನವಳ್ಳಿ ಎಂಬುವವರಿಂದ ಅವರಿಂದ ರೂ 40, ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟು, ರೂ 30 ಸಾವಿರ ಹಣವನ್ನು ಸ್ವೀಕರಿಸುವಾಗ, ಹಾವೇರಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.. ಅಂದಹಾಗೆ, ಲಚ್ಚಪ್ಪ ದುರ್ಗಪ್ಪ ಕನವಳ್ಳಿ RDPR ಸವಣೂರು ಉಪವಿಭಾಗ ವ್ಯಾಪ್ತಿಯಲ್ಲಿ 2 ಕಾಮಗಾರಿಗಳನ್ನು...
Top Stories
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಕಾಲೇ ಕಟ್, ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಭೀಕರ ಘಟನೆ..!
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
ಮುಂಡಗೋಡಿನ ಹಿರಿಯ ರಥಶಿಲ್ಪಿ ವಿರೂಪಾಕ್ಷಪ್ಪ ಬಡಿಗೇರ ನಿಧನ…!
ಮುಂಡಗೋಡ ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಕುನ್ನೂರ್ ನಿಧನ..!
ಮಳಗಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಶಿರಸಿ ಹುಬ್ಬಳ್ಳಿ KSRTC ಬಸ್, ತಪ್ಪಿದ ಅನಾಹುತ..!
ಪಾಳಾದಲ್ಲಿ KSRTC ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಬಸ್ ಗಾಗಿ ಬಸ್ ತಡೆದು ಪ್ರತಿಭಟನೆ..!
ತಡಸ ತಾಯವ್ವ ದೇವಸ್ಥಾನದ ಬಳಿ ಕ್ರೂಸರ್ ವಾಹನ ಪಲ್ಟಿ ಹಲವರಿಗೆ ಗಾಯ..!
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ..!
KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!
ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!
ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!
ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!
ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!
Category: ಅಪರಾಧ ಜಗತ್ತು
ಹಾನಗಲ್ ಬಳಿಯ ಜಿಗಳಿಕೊಪ್ಪದಲ್ಲಿ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ, ಬೆಚ್ಚಿಬಿದ್ದ ಗ್ರಾಮಸ್ಥರು..!
ಬೆಳ್ಳಂಬೆಳಿಗ್ಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಜಿಗಳಿಕೊಪ್ಪ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಮಾಡಿ, ಚಾಪೆ, ಹಾಗೂ ರಗ್ಗಿನಲ್ಲಿ ಸುತ್ತಿ ಗೋವಿನಜೋಳದ ಜಮೀನಿನಲ್ಲಿ ಬಿಸಾಕಿ ಹೋಗಿದ್ದಾರೆ ದುಷ್ಕರ್ಮಿಗಳು. ಮೃತ ವ್ಯಕ್ತಿ ಸುಮಾರು 35 ವರ್ಷ ಪ್ರಾಯದವನಾಗಿದ್ದು, ಯಾರು, ಎಲ್ಲಿಯವನು ಅನ್ನೊ ಮಾಹಿತಿ ಇನ್ನೂ ಸಿಕ್ಕಿಲ್ಲ. ಗುಪ್ತಾಂಗಕ್ಕೆ ಹೊಡೆದು ಕೊಲೆ..! ಇನ್ನು ಅದೇಲ್ಲೊ ಕೊಲೆ ಮಾಡಿ, ಶವವನ್ನು ಚಾಪೆಯಲ್ಲಿ ಸುತ್ತಿ, ಜಿಗಳಿಕೊಪ್ಪ ಗ್ರಾಮದ ಹೊರವಲಯದಲ್ಲಿ ಬೀಸಾಕಿ ಹೋಗಿರೋ ಶವದ ಮುಖ, ತಲೆ ಹಾಗೂ ಗುಪ್ತಾಂಗಕ್ಕೆ ಏಟುಗಳು ಬಿದ್ದು...
ರೈಲಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ, ಕಾರವಾರ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ..!
ಕಾರವಾರ: ಕೇರಳಕ್ಕೆ ಅಕ್ರಮವಾಗಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಕಾರವಾರ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳ ಎಕ್ಸ್ ಪ್ರೆಸ್ ರೈಲಿನಲ್ಲಿ ದಾಖಲೆ ರಹಿತ ಹಣ ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಮಹಾರಾಷ್ಟ್ರ ಮೂಲದ ವಿಕಾಸ್ ರಮೇಶ್ ದೋಕಲೆ ಬಂಧಿತ ವ್ಯಕ್ತಿಯಾಗಿದ್ದು, ಬಂಧಿತನಿಂದ ದಾಖಲೆ ರಹಿತ ರೂ.20,09,720 ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ದಿಂದ ಕೇರಳಕ್ಕೆ ಹಣ ಕೊಂಡೊಯ್ಯುತಿದ್ದನು ಎನ್ನಲಾಗಿದ್ದು, ರೈಲ್ವೆ ಪೊಲೀಸರಿಂದ ಕಾರವಾರ ನಗರ ಠಾಣೆ ಪೊಲೀಸರಿಗೆ ಪ್ರಕರಣ ಹಸ್ತಾಂತರವಾಗಿದೆ.
8 ವರ್ಷದ ಹಿಂದೆ ಅಪಘಾತಪಡಿಸಿ ಎಸ್ಕೇಪ್ ಆಗಿದ್ದ ಆರೋಪಿ ಆರೆಸ್ಟ್, ತಲೆನೋವಾಗಿದ್ದ ಕೇಸ್ ಬೇಧಿಸಿದ ಹಳಿಯಾಳ ಪೊಲೀಸ್ರು..!
ಹಳಿಯಾಳ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಅಪಘಾತ ಪಡಿಸಿ ಓರ್ವನ ಸಾವಿಗೆ ಕಾರಣನಾಗಿದ್ದ ಆರೋಪಿ ಚಾಲಾಕಿ ಚಾಲಕನೊಬ್ಬ ಬರೋಬ್ಬರಿ ಎಂಟು ವರ್ಷಗಳ ನಂತ್ರ ಅರೆಸ್ಟ್ ಆಗಿದ್ದಾನೆ. ಭರ್ಜರಿ ಕಾರ್ಯಾಚರಣೆ ನಡೆಸಿರೊ ಹಳಿಯಾಳ ಪೊಲೀಸರು ಆರೋಪಿಯನ್ನು ಬೆಳಗಾವಿಯ ಸವದತ್ತಿಯಲ್ಲಿ ಪತ್ತೆ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಹೀಗಾಗಿ, ಹಳಿಯಾಳ ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣವೊಂದು ಇದೀಗ ಬಯಲಾಗಿದೆ. ಪಂಚಪ್ಪ ಅಯ್ಯಪ್ಪ ಪವಾಡಿ ಎಂಬುವವನನ್ನ ಎಳೆದು ತರಲಾಗಿದೆ. 2014 ರಲ್ಲಿ..! ಅಂದಹಾಗೆ, 31.10.2014 ರಲ್ಲಿ, ಅಂದ್ರೆ ಎಂಟು ವರ್ಷಗಳ ಹಿಂದೆ, ಹಳಿಯಾಳದ ಯಲ್ಲಾಪುರ...
ಶಿರಸಿ ಸಬ್ ಜೈಲಿನಿಂದ ರಾಬರಿ ಗ್ಯಾಂಗ್ ನ ಆರೋಪಿ ಗ್ರೇಟ್ ಎಸ್ಕೇಪ್..! ಜೈಲಾಧಿಕಾರಿಯ “ಕಡ್ಲೆ” ಪುರಾಣವಾ ಇದು..?
ಯಲ್ಲಾಪುರ ಪೊಲೀಸರು ಬಂಧಿಸಿದ್ದ ರಾಬರಿ ಗ್ಯಾಂಗ್ ನ ಆರೋಪಿಯೊಬ್ಬ ಜೈಲಿನಿಂದಲೇ ಎಸ್ಕೇಪ್ ಆಗಿದ್ದಾನೆ. ಶಿರಸಿ ಸಬ್ ಜೈಲಿನ ಅಧಿಕಾರಿಗಳ ನಿರ್ಲಕ್ಷದಿಂದ ಇವತ್ತು ಬೆಳ್ಳಂ ಬೆಳಿಗ್ಗೆ ಜೈಲಿನಿಂದಲೇ ಕಾಲ್ಕಿತ್ತಿದ್ದಾನೆ. ಅಂದಹಾಗೆ, ಶಿರಸಿ ಸಬ್ ಜೈಲಿನ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದ್ರೋ ಏನೋ ಗೊತ್ತಿಲ್ಲ. ಯಲ್ಲಾಪುರ ಪೊಲೀಸರ ಶ್ರಮವನ್ನೇಲ್ಲ ನೀರಲ್ಲಿ ಹೋಮ ಹಾಕಿದಂತೆ ಮಾಡಿದ್ದಾರೆ. ಆತ ಪ್ರಕಾಶ್ ಸಿದ್ದಿ..! 24 ವರ್ಷ ವಯಸ್ಸಿನ ಪ್ರಕಾಶ್ ಕ್ರಷ್ಣಾ ಸಿದ್ದಿ ಎಂಬುವ ಆರೋಪಿ ಇವತ್ತು ಬೆಳಿಗ್ಗೆ 8.45 ರ ಸುಮಾರಿಗೆ ಜೈಲಿನಿಂದಲೇ...
ಮುಂಡಗೋಡಿನಲ್ಲೊಂದು ಅಮಾನುಷ ಘಟನೆ..! ಹಸುಗೂಸನ್ನು ರಸ್ತೆಯಲ್ಲಿ ಎಸೆದು ಹೋದ್ಲಾ ಮಾಹಾತಾಯಿ?
ಮುಂಡಗೋಡ ಪಟ್ಟಣದ ಹೊರವಲಯದ ನೂರಾನಿ ಗಲ್ಲಿಯ ಹತ್ತಿರ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಯಾರೋ ಆಗಷ್ಟೇ ಹೆರಿಗೆ ಮಾಡಿಸಿ, ಅಥವಾ ಗರ್ಭಪಾತ ಮಾಡಿಸಿ ಬಾಕ್ಸ್ ನಲ್ಲಿ ಶಿಶುವನ್ನು ಎಸೆದು ಹೋಗಿದ್ದಾರೆ. ರಕ್ತಸಿಕ್ತವಾಗಿದ್ದ ಶಿಶುವನ್ನು ನಾಯಿಗಳು ಎಳೆದಾಡಿ ಕಚ್ಚಿ ಹಾಕಿವೆ. ಹೀಗಾಗಿ, ಶಿಶು ಮರಣಹೊಂದಿದ್ದು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದೆ. ಅಬಾರ್ಷನ್ ಮಾಡಿದ್ರಾ..? ಅಸಲು, ರಸ್ತೆಯ ಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದ ಶಿಶುವನ್ನು ನೋಡಿದ್ರೆ, ಅಬಾರ್ಷನ್ ಮಾಡಿಸಿರಬಹುದಾ ಅನ್ನೋ ಅನುಮಾನವಿದೆ. ಅಲ್ಲದೆ, ಅನೈತಿಕತೆಗೆ ಹುಟ್ಟಿದ ಬೇಡವಾದ ಕಂದಮ್ಮನನ್ನು ಹೀಗೆ ಅಮಾನುಷವಾಗಿ...
ಮಳಗಿ ಟ್ರಾಕ್ಟರ್ ಪಲ್ಟಿ, ಕಾಲೇಜಿನ ಅತಿಥಿ ಉಪನ್ಯಾಸಕನ ಮೇಲೆ ಕೇಸು, ಹಾಗಿದ್ರೆ ಯಾರು ಈತ ಗೊತ್ತಾ..?
ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ಟ್ರಾಕ್ಟರ್ ಪಲ್ಟಿಯಾದ ಘಟನೆಗೆ ಸಂಬಂಧಿಸಿದಂತೆ ಟ್ರಾಕ್ಟರ್ ಚಾಲಕನ ಮೇಲೆ ಕೇಸು ದಾಖಲಾಗಿದೆ. ಮಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕನ ಮೇಲೆ ಕೇಸು ಜಡಿಯಲಾಗಿದೆ. ಮಹೇಂದ್ರ ಫಕ್ಕೀರಪ್ಪ ಬನವಾಸಿ ಎಂಬುವ ಶಿಕ್ಷಕನೇ ಈ ಘಟನೆಯ ಪ್ರಮುಖ ಆರೋಪಿಯಾಗಿದ್ದಾನೆ. ಅಂದಹಾಗೆ, ನಿನ್ನೆ ಮಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಪಿಕ್ನಿಕ್ ಗೆ ಅಂತಾ ಹೊರಟಿದ್ದ ವಿದ್ಯಾರ್ಥಿಗಳು ಅಪಘಾತಕ್ಕೀಡಾಗಿ ಆಸ್ಪತ್ರೆ ಪಾಲಾಗಿದ್ರು. ಅದ್ರಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಕಾವ್ಯ ಬರಮಪ್ಪ ಬ್ಯಾಡಗಿ(17) ಚಿಕಿತ್ಸೆ ಫಲಿಸದೇ...
ಮಳಗಿ ಟ್ರಾಕ್ಟರ್ ಪಲ್ಟಿ, ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು, ಅಷ್ಟಕ್ಕೂ ಈ ಸಾವಿಗೆ ಯಾರು ಹೊಣೆ..? ಪ್ರಿನ್ಸಿಪಾಲಾ..? ಅಥವಾ ಅತಿಥಿ ಶಿಕ್ಷಕನಾ..?
ಮುಂಡಗೋಡ ತಾಲೂಕಿನ ಮಳಗಿಯಲ್ಲಿ ವಿದ್ಯಾರ್ಥಿಗಳನ್ನು ಪಿಕ್ ನಿಕ್ ಗೆ ಕರೆದೊಯ್ಯುತ್ತಿದ್ದ ಟ್ರಾಕ್ಟರ್ ಪಲ್ಟಿಯಾದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಶಿರಸಿ TSS ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮಳಗಿ ಸಮೀಪದ ಕಲ್ಲಹಕ್ಕಲ ಗ್ರಾಮದ ಕಾವ್ಯ ಬರಮಪ್ಪ ಬ್ಯಾಡಗಿ(17) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಟ್ರಾಕ್ಟರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಕಾವ್ಯಾಗೆ ಗಂಭೀರ ಗಾಯವಾಗಿತ್ತು. ಹೀಗಾಗಿ, ಶಿರಸಿಯ TSS ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕಾವ್ಯಾ ಮೃತಪಟ್ಟಿದ್ದಾಳೆ ಅಂತಾ ಮಾಹಿತಿ ಲಭ್ಯವಾಗಿದೆ. ಇನ್ನು ಮೃತ ವಿದ್ಯಾರ್ಥಿನಿಯ...
ಬಾಚಣಕಿ ಡ್ಯಾಂ ನಲ್ಲಿ ಭಾರೀ ದುರಂತ, ನೀರಲ್ಲಿ ಮುಳುಗಿ ಇಬ್ಬರು ಲಾಮಾಗಳ ದಾರುಣ ಸಾವು..!
ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಭಾರೀ ದುರಂತ ಸಂಭವಿಸಿದೆ. ಈಸಲು ತೆರಳಿದ್ದ ಇಬ್ಬರು ಟಿಬೇಟಿಯನ್ ಬೌದ್ದ ಸನ್ಯಾಸಿಗಳು ನೀರು ಪಾಲಾಗಿದ್ದಾರೆ. ಇಬ್ಬರೂ ಬಾಚಣಕಿ ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಬೆಳಿಗ್ಗೆಯಿಂದಲೇ ಬಾಚಣಕಿ ಜಲಾಶಯಕ್ಕೆ ಈಸಲು ಬಂದಿದ್ದ ಬೌದ್ದ ಸನ್ಯಾಸಿಗಳು ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಈ ವೇಳೆ ಟಿಬೇಟಿಯನ್ ಲಾಮಾಗಳು ಶವಗಳನ್ನು ಪೊಲೀಸರಿಗೆ ಗೊತ್ತಾಗದಂತೆ ಎಸ್ಕೇಪ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಆದ್ರೆ ಸ್ಥಳೀಯರು ಗಮನಿಸಿ ಮುಂಡಗೋಡ ಪೋಲಿಸರ ಗಮನಕ್ಕೆ ತಂದಿದ್ದಾರೆ. ಹೀಗಾಗಿ, ಸದ್ಯ ಒಂದು ಶವ ಬಾಚಣಕಿ...
ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಪ್ರೇಮಿಗಳು, ಒಂದೇ ಕುಣಿಕೆಗೆ ಕೊರಳೊಡ್ಡಿದ ಯುವಕ, ಯುವತಿ
ಧಾರವಾಡ: ಲಾಡ್ಜ್ ನಲ್ಲಿ ಪ್ರೇಮಿಗಳು ನೇಣಿಗೆ ಶರಣಾಗಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬಸ್ ಸ್ಟಾಂಡ್ ಪಕ್ಕದ ಲಾಡ್ಜ್ ನಲ್ಲಿ ಘಟನೆ ನಡೆದಿದೆ. ಮಧ್ಯಾಹ್ನದ ವೇಳೆಗೆ ಯುವಕ ಯುವತಿ ಲಾಡ್ಜ್ ಗೆ ತೆರಳಿದ್ದರು ಎನ್ನಲಾಗಿದೆ. ಸಂಜೆ ಲಾಡ್ಜ್ ರೂಮಿನಿಂದ ಹೊರ ಬರದೇ ಇದ್ದಾಗ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿಗಳು ಬಾಗಿಲು ತೆರೆದು ನೋಡಿದ್ದಾರೆ. ಈ ವೇಳೆ ಪ್ರೇಮಿಗಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡಿರೋ ಪ್ರೇಮಿಗಳ ಹೆಸರು, ವಿಳಾಸದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದ್ರೆ,...









