ಮುಂಡಗೋಡ ಪಟ್ಟಣದ ಹೊರವಲಯದ ಅಯ್ಯಪ್ಪ ದೇವಸ್ಥಾನದ ಬಳಿ ಭೀಕರ ಬೈಕ್ ಅಪಘಾತವಾಗಿದೆ. ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದಾನೆ. ನ್ಯಾಸರ್ಗಿ ಗ್ರಾಮದ ಕಿರಣ್ ಫಕ್ಕೀರಪ್ಪ ಮೇದಾರ್ (25) ಗಂಭೀರ ಗಾಯಗೊಂಡಿರೊ ವ್ಯಕ್ತಿಯಾಗಿದ್ದಾನೆ. ಗಾಯಾಳುವನ್ನು ಸೂಕ್ತ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗೆ ಪ್ರಥಮ ಚಿಕಿತ್ಸೆ ಕೊಟ್ಟು 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ಕಾತೂರು ಅರಣ್ಯಾಧಿಕಾರಿಗಳ ಭರ್ಜರಿ ದಾಳಿ, ಜಿಂಕೆ ಚರ್ಮ, ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಐವರು ಅಂದರ್..!
ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!
ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!
ಶಿರಸಿ ಎಸಿ ಕಾವ್ಯಾರಾಣಿ ವರ್ಗಾವಣೆಗೆ ಹಲವರ ಆಕ್ರೋಶ, ಆದೇಶ ರದ್ದುಗೊಳಿಸುವಂತೆ ಶೇಖರ್ ಲಮಾಣಿ ಆಗ್ರಹ..!
ಅಗಡಿ ಶ್ರೀಗಂಧ ತುಂಡುಗಳು ಸಿಕ್ಕ ಕೇಸ್, ಕಚೇರಿಗೇ ಬಂದ್ರೂ ಆರೋಪಿಯನ್ನ ಬಿಟ್ಟು ಕಳಿಸಿದ್ರಾ ಅಧಿಕಾರಿಗಳು..? RFO ಕಚೇರಿಯಿಂದಲೇ ಆರೋಪಿ ಮತ್ತೆ ಎಸ್ಕೇಪ್..!
ಅಗಡಿಯಲ್ಲಿ ಅರಣ್ಯ ಅಧಿಕಾರಿಗಳ ಭರ್ಜರಿ ದಾಳಿ, 60 ಕೆಜಿಗೂ ಹೆಚ್ಚು ಶ್ರೀಗಂಧದ ಮರದ ತುಂಡುಗಳು ವಶಕ್ಕೆ, ಆರೋಪಿ ಪರಾರಿ..!
ಚಿಗಳ್ಳಿ ಪ್ರೌಢಶಾಲೆಯ ಶಿಕ್ಷಕ ದಾಸಪ್ಪ, ಸಸ್ಪೆಂಡ್..! ಹಲವು ದಿನಗಳ ಗುದುಮುರುಗಿ ಬಳಿಕ ಶಿರಸಿ ಡಿಡಿಪಿಐ ಖಡಕ್ ಆದೇಶ..!
ಮುಂಡಗೋಡ ಮಾದರಿ ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ..! ಮೊಮ್ಮಕ್ಕಳು, ಮಗನೊಂದಿಗೆ ಸಾವು ಕಂಡ ತಂದೆ..!
ಮುಂಡಗೋಡ ಪೊಲೀಸರ ತಡರಾತ್ರಿ ಕಾರ್ಯಾಚರಣೆ..! “ಚರಸ್” ದಂಧೆಯಲ್ಲಿ ತೊಡಗಿದ್ದ ಇಂಜಿನೀಯರ್ ಅಂದರ್..!
ಸನವಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್, ತುಂಡಾಗಿ ಬಿದ್ದ ವಿದ್ಯುತ್ ಕಂಬ..!
ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!
ಹನುಮಾಪುರದಲ್ಲಿ ಭೀಕರ ಬೆಂಕಿ ಅವಘಡ..! ಬೆಂಕಿಯಲ್ಲಿ ಮನೆಯ ಸಮೇತ ಬೆಂದು ಹೋದ ವೃದ್ದೆ..!
ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇದೇಂಥ ಸ್ಥಿತಿ..? ಈ ಮಕ್ಕಳಿಗೆ ನುಸಿ ತುಂಬಿರೋ ದವಸದ ಆಹಾರವೇ ಗತಿಯಾ..?
ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ, RTI ಹೆಸ್ರಲ್ಲಿ ಈ ವಂಚಕ ಪಡೆ ಮಾಡಿದ್ದೇನು..?
ಸಾಲಬಾಧೆ, ಬಾಚಣಕಿಯಲ್ಲಿ ನೇಣಿಗೆ ಶರಣಾದ ಅನ್ನದಾತ..! ತನ್ನ ದನದ ಕೊಟ್ಟಿಗೆಯಲ್ಲೇ ಆತ್ಮಹತ್ಯೆ..!
ಅಭಿಮಾನಿಗಳ ನೆಚ್ಚಿನ “ಹೈಸ್ಪೀಡ್ ಮಣಿ” ಟಗರು ಅಕಾಲಿಕ ಸಾವು..! ಸಾವಿರಾರು ಅಭಿಮಾನಿಗಳ ಕಂಬನಿ..!
ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
Category: ಅಪಘಾತ
ಇಂದೂರಿನ 8 ನಂ. ಕ್ಯಾಂಪ್ ಕ್ರಾಸ್ ಬಳಿ ಪಾದಾಚಾರಿಗೆ ಅಪರಿಚಿತ ಬೈಕ್ ಡಿಕ್ಕಿ, ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಇಂದೂರ ಬಳಿಯ 8 ನಂಬರ್ ಟಿಬೇಟಿಯನ್ ಕ್ಯಾಂಪ್ ಕ್ರಾಸ್ ಬಳಿ ಪಾದಾಚಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ಪಾದಾಚಾರಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಸಂಜು ಸುರಕೋಡ (35) ಗಂಭೀರ ಗಾಯಗೊಂಡಿರೋ ವ್ಯಕ್ತಿಯಾಗಿದ್ದಾನೆ. ರಾತ್ರಿ ವೇಳೆ ವೇಗವಾಗಿ ಬಂದಿರೋ ಅಪರಿಚಿತ ಬೈಕ್ ಪಾದಾಚಾರಿ ವ್ಯಕ್ತಿಗೆ ಡಿಕ್ಕಿಯಾಗಿದೆ ಅನ್ನೊ ಮಾಹಿತಿ ಬಂದಿದೆ. ಅಫಘಾತವಾದ ತಕ್ಷಣವೇ ಸ್ಥಳೀಯರು 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟಪ್ರಭಾ ನದಿಯಲ್ಲಿ ಮುಂಡಗೋಡಿನ ನಾಲ್ವರು ಯುವಕರ ಸಾವು ಕೇಸ್, ಚಿಕಿತ್ಸೆ ಫಲಿಸದೇ ಮತ್ತೋರ್ವ ಯುವಕ ಸಾವು..!
ಮುಂಡಗೋಡ: ತಾಲೂಕಿನ ಶಿರಗೇರಿ ಗ್ರಾಮದ ಯುವಕರು, ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ನೀರಲ್ಲಿ ಮುಳುಗಿ ತೀವ್ರ ಅಸ್ವಸ್ಥ ಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ತಾಲೂಕಿನ ಶಿರಗೇರಿ ಗ್ರಾಮದ ರಾಮಚಂದ್ರ ಜೋರೆ ಎಂಬುವನೆ ಸಾವನ್ನಪ್ಪಿದ ಮತ್ತೋರ್ವ ಯುವಕನಾಗಿದ್ದು, ನಿನ್ನೆ ಶುಕ್ರವಾರ ದುಪದಾಳ ಗ್ರಾಮದ ಸನಿಹ ಘಟಪ್ರಭಾ ನದಿಯಲ್ಲಿ 6ಜನ ಸ್ನೇಹಿತರು ಈಜಲು ಇಳಿದಿದ್ದರು ಈ ವೇಳೆ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು ಮತ್ತಿಬ್ಬರು...
ಘಟಪ್ರಭಾ ನದಿಯಲ್ಲಿ ಭೀಕರ ದುರಂತ, ಮುಂಡಗೋಡಿನ ನಾಲ್ವರು ಯುವಕರು ನದಿಯಲ್ಲಿ ಮುಳುಗಿ ಸಾವು..!
ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ಭಾರೀ ಅನಾಹುತ ಸಂಭವಿಸಿದೆ.. ಘಟಪ್ರಭಾ ನದಿಯಲ್ಲಿ ಮುಳುಗಿ ಮುಂಡಗೋಡ ತಾಲೂಕಿನ ನಾಲ್ವರು ಯುವಕರು ದಾರುಣ ಸಾವು ಕಂಡಿದ್ದಾರೆ. ಇಬ್ಬರು ಗಂಭೀರವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮುಂಡಗೋಡ ತಾಲೂಕಿನ ಸಿರಿಗೇರಿ ಗ್ರಾಮದ ಸಂತೋಷ ಬಾಬು ಎಡಗೆ(19), ಅಜಯ್ ಬಾಬು ಜೋರೆ (19), ಕೃಷ್ಣ ಬಾಬು ಜೋರೆ (19), ಆನಂದ್ ವಿಷ್ಣು ಕೋಕರೆ (20) ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನು ಘಟನೆಯಲ್ಲಿ ರಾಮಚಂದ್ರ ವಿಷ್ಣು ಕೋಕರೆ, ವಿಠ್ಠಲ್ ಜಾನು ಕೋಕರೆ ನೀರಲ್ಲಿ ಮುಳುಗಿ...
ಅಯ್ಯೋ ವಿಧಿಯೇ..! ಆಟೋ ಡಿಕ್ಕಿಯಾಗಿ ನಾಲ್ಕು ತಿಂಗಳ ಗರ್ಭಿಣಿ ದಾರುಣ ಸಾವು..!
ಅಂಕೋಲಾ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿ ಮಹಿಳೆಯೋರ್ವಳಿಗೆ ರಿಕ್ಷಾ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾವಿಕೇರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಶೋಭಾ ಗೋಪಾಲ ನಾಯಕ (28) ಎಂಬಾಕೆಯೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ, ಮೃತ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಈಕೆ ಪತಿಯ ಜೊತೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಆಟೋ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬದಿಗೆ ಬಂದು ಅಪಘಾತ ಪಡಿಸಿದ್ದಾನೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ...
ಭಾರೀ ಮಳೆ: ಸಿಡಿಲಿನ ರಭಸಕ್ಕೆ ಮನೆಯ ಮೇಲ್ಚಾವಣಿ ಕುಸಿತ: ಇಬ್ಬರು ಮಹಿಳೆಯರ ದಾರುಣ ಸಾವು..!
ಬಾಗಲಕೋಟೆ: ಸಿಡಿಲಿನ ಹೊಡೆತಕ್ಕೆ ಮನೆಯ ಮಣ್ಣಿನ ಮೇಲ್ಛಾವಣಿ ಕುಸಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು ಕಂಡ ದಾರುಣ ಘಟನೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಡೆದಿದೆ. ನೆನ್ನೆ ರಾತ್ರಿ 11.30 ಸುಮಾರಿಗೆ ನಡೆದ ಘಟನೆ ಇದಾಗಿದ್ದು, ಯಂಕುಬಾಯಿ ಕುಲಕರ್ಣಿ (79), ಶಾರದಾ ಪತ್ತಾರ (61) ಮೃತ ದುರ್ದೈವಿಗಳು. ಅಂದಹಾಗೆ, ದಿನಂಪ್ರತಿ ಯಂಕುಬಾಯಿ ಕುಲಕರ್ಣಿ ಅವ್ರ ಮನೆಯಲ್ಲೇ ಶಾರದಾ ಪತ್ತಾರ ಮಲಗುತ್ತಿದ್ರು. ನಿನ್ನೆ ಸುರಿದ ಭಾರೀ ಮಳೆ ಹಾಗೂ ಸಿಡಿಲಿನ ರಭಸಕ್ಕೆ ಮನೆಗೆ ಹಾನಿಯಾಗಿದ್ದು, ಮಣ್ಣಿನ ಮೇಲ್ಛಾವಣಿ ಕುಸಿದಿದೆ....
ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!
ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಹತ್ತಿರ ಅಪಘಾತವಾಗಿದೆ. ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಮುಂಡಗೋಡಿನ ತೇಜಸ್ (26) ಎಂಬುವ ಯುವಕನೇ ಗಾಯಗೊಂಡಿದ್ದು, ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನ್ಯಾಸರ್ಗಿ ಡ್ಯಾಂ ನಲ್ಲಿ ಮಗನ ಎದುರೇ ತಂದೆ ಸಾವು, ನೀರಲ್ಲಿ ಈಜಲು ಹೋದವ ಹೆಣವಾದ..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಡ್ಯಾಂ ನಲ್ಲಿ ಈಜಲು ನೀರಿಗೆ ಇಳಿದಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಪುಟ್ಟ ಮಗನ ಕಣ್ಣೇದುರೇ ತಂದೆ ನೀರಲ್ಲಿ ಮುಳುಗಿ ಸಾವು ಕಂಡಿದ್ದು ಧಾರುಣವಾಗಿದೆ. ಲಕ್ಷ್ಮಣ ಭೀಮಣ್ಣ ಬೋವಿ (42) ಈಜಲು ಹೋಗಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇವನು ಮದ್ಯಾನ ನ್ಯಾಸರ್ಗಿ ಡ್ಯಾಂ ನಲ್ಲಿ ಸ್ನಾನ ಮಾಡಲೆಂದು, ಮಗನ ಬಳಿ ಬಟ್ಟೆ ಕೊಟ್ಟು ನೀರಿಗೆ ಇಳಿದಿದ್ದ ಎನ್ನಲಾಗಿದೆ. ಈ ವೇಳೆ ನೀರಲ್ಲಿ ಈಜಾಡುತ್ತಿರುವಾಗಲೇ ನಾಪತ್ತೆಯಾಗಿದ್ದಾನೆ. ಹೀಗಾಗಿ ತಂದೆ ನೀರಲ್ಲಿ ಕಣ್ಮರೆಯಾಗುತ್ತಲೇ ಆತಂಕಗೊಂಡ ಮಗ ಸ್ಥಳೀಯರಿಗೆ...
ಗಾಜೀಪುರ ಬಳಿ ಭೀಕರ ಅಪಘಾತ, ಚಿಗಳ್ಳಿಯ ಓರ್ವ ಯುವಕ ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಗಡಿಭಾಗ ಹಾಗೂ ಹಾನಗಲ್ ತಾಲೂಕಿನ ಗಾಜೀಪುರ ಬಳಿ ಭೀಕರ ಅಪಘಾತವಾಗಿದೆ. ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಚಿಗಳ್ಳಿಯ ಯುವಕನೋರ್ವ ಸ್ಥಳದಲ್ಲೇ ಮೃತಟ್ಟಿದ್ದಾನೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮುಂಡಗೋಡ ತಾಲೂಕಿನ ಚಿಗಳ್ಳಿಯ ಯಲ್ಲಪ್ಪ ಕಡೆಮನಿ(40) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದು, ಈತ ಇವತ್ತು ತನ್ನ ಅಳಿಯನೊಂದಿಗೆ ಬೈಕ್ ಏರಿ ಹಾನಗಲ್ ಗೆ ಹೋಗಿದ್ದ. ಕೆಲಸ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಹಾನಗಲ್ ತಾಲೂಕಿನ ಗಾಜೀಪುರ ಬಳಿ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಡಿಕ್ಕಿಯ...
ಬಿಜೆಪಿ ಮಹಿಳಾ ಸಮಾವೇಶಕ್ಕೆ ಬಂದಿದ್ದ ಕೇಂದ್ರ ಸಚಿವೆಯ ಕಾರು ಅಪಘಾತ..!
ವಿಜಯಪುರ: ಕೇಂದ್ರ ಸಚಿವೆ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣ ಮಾಡುತ್ತಿದ್ದ ಕಾರು ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಬಳಿ, ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತವಾಗಿದೆ. ಕೇಂದ್ರ ಸಚಿವೆ ಪ್ರಯಾಣ ಮಾಡುತ್ತಿದ್ದ ಕಾರ್ ಹಾಗೂ ಕ್ಯಾಂಟರ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಕೇಂದ್ರ ಸಚಿವರಿಗೆ ಹಾಗೂ ಕಾರ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡ ಕೇಂದ್ರ ಸಚಿವೆ...









