Home ಅಪಘಾತ

Category: ಅಪಘಾತ

Post
ಲೊಯೊಲಾ ಕಾಲೇಜು ಬಳಿ ಅಪಘಾತ, ಓರ್ವನಿಗೆ ಗಂಭೀರ ಗಾಯ, ಮನುಷ್ಯತ್ವ ಮರೆತ್ರಾ ಅಂಬ್ಯುಲೆನ್ಸ್ ಸಿಬ್ಬಂದಿ..?

ಲೊಯೊಲಾ ಕಾಲೇಜು ಬಳಿ ಅಪಘಾತ, ಓರ್ವನಿಗೆ ಗಂಭೀರ ಗಾಯ, ಮನುಷ್ಯತ್ವ ಮರೆತ್ರಾ ಅಂಬ್ಯುಲೆನ್ಸ್ ಸಿಬ್ಬಂದಿ..?

ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಕಾಲೇಜು ಬಳಿ KSRTC ಬಸ್ ಗೆ ಲಾರಿಯೊಂದು ಡಿಕ್ಕಿ ಹೊಡೆದು ನಾಪತ್ತೆಯಾಗಿದೆ. ಪರಿಣಾಮ ಬಸ್ ನಲ್ಲಿದ್ದ ಓರ್ವ ವ್ಯಕ್ತಿಗೆ ತೀವ್ರ ಗಾಯವಾಗಿದೆ. ಗುರುವಾರ ನಡುರಾತ್ರಿಯಲ್ಲಿ ಘಟನೆ ನಡೆದಿದ್ದು ಮಂಗಳೂರಿಗೆ ಹೊರಟಿದ್ದ ಬಸ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ‌. ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಭೀಮಪ್ಪ ಮುತ್ತಪ್ಪ ಗಡಾದಿ(34) ತೀವ್ರ ಗಾಯಗೊಂಡಿದ್ದಾನೆ.   ಅಂಬ್ಯುಲೆನ್ಸ್ ಸಿಬ್ಬಂದಿಗೆ ತರಾಟೆ..! ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ....

Post
ಟಿಬೇಟಿಯನ್ ಕಾಲೋನಿಗೆ ಮಕ್ಕಳ ಪ್ರವಾಸಕ್ಕೆಂದು ಬಂದಿದ್ದ ಬಸ್ ಗೆ ಬೈಕ್ ಡಿಕ್ಕಿ, ಇಬ್ಬರಿಗೆ ಗಾಯ

ಟಿಬೇಟಿಯನ್ ಕಾಲೋನಿಗೆ ಮಕ್ಕಳ ಪ್ರವಾಸಕ್ಕೆಂದು ಬಂದಿದ್ದ ಬಸ್ ಗೆ ಬೈಕ್ ಡಿಕ್ಕಿ, ಇಬ್ಬರಿಗೆ ಗಾಯ

ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ಹತ್ತಿರ ಬಸ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರಿಗೆ ಗಾಯವಾಗಿದೆ. ಗೋವಾ ದಿಂದ ವಾಪಾಸ್ ಹಿಂತಿರುಗಿ ಬರುತ್ತಿದ್ದ ಬೈಕ್ ಸವಾರರಿಬ್ಬರು ಶಾಲಾ ಪ್ರವಾಸಕ್ಕೆಂದು ಬಂದಿದ್ದ KSRTC ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ 108 ಅಂಬ್ಯುಲೆನ್ಸ್ ಹಾಗೂ ಸಿಬ್ಬಂದಿಗಳಾದ ಧನರಾಜ್ ಸಿ ತುರ್ತು ವೈದ್ಯಕೀಯ ತಂತ್ರಜ್ಞ ಹಾಗೂ ಚಾಲಕ ಶ್ರೀಧರ್ ಸವಾರರಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಓರಿಸ್ಸಾ ಹಾಗೂ...

Post
ಶಿರಸಿಯ ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಐವರು ನಾಪತ್ತೆ, ಓರ್ವನ ಶವ ಹೊರ ತೆಗೆದ ಅಗ್ನಿಶಾಮಕ ಸಿಬ್ಬಂದಿಗಳು..!

ಶಿರಸಿಯ ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಐವರು ನಾಪತ್ತೆ, ಓರ್ವನ ಶವ ಹೊರ ತೆಗೆದ ಅಗ್ನಿಶಾಮಕ ಸಿಬ್ಬಂದಿಗಳು..!

ಶಿರಸಿಯ ಸಹಸ್ರಲಿಂಗದಲ್ಲಿ ಈಜಲು ಹೋಗಿದ್ದ ಐವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರೋ ಘಟನೆ ನಡೆದಿದೆ. ರವಿವಾರ ರಜೆಯ ಸಲುವಾಗಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಲ್ಲಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಓರ್ವನ ಶವ ಪತ್ತೆಯಾಗಿದೆ. ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್‌ ರೆಹಮಾನ್‌ (44), ರಾಮನಬೈಲಿನ ನಾದಿಯಾ ನೂರ್ ಅಹಮದ್‌ ಶೇಖ್‌ (20), ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಟಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್(22) ಹಾಗೂ ರಾಮನಬೈಲಿನ ವಿದ್ಯಾರ್ಥಿ ಉಮ‌ರ್ ಸಿದ್ದಿಕ್‌ ನಾಪತ್ತೆಯಾಗಿದ್ದಾರೆ. ಇದ್ರಲ್ಲಿ...

Post
ಮಳಗಿ ಧರ್ಮಾ ಜಲಾಶಯದಲ್ಲಿ ಶಿರಸಿಯ ವ್ಯಕ್ತಿ ನೀರುಪಾಲು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ..!

ಮಳಗಿ ಧರ್ಮಾ ಜಲಾಶಯದಲ್ಲಿ ಶಿರಸಿಯ ವ್ಯಕ್ತಿ ನೀರುಪಾಲು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ..!

ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ಈಜಲು ತೆರಳಿದ್ದ ವ್ಯಕ್ತಿಯೋರ್ವ ‌ನೀರು ಪಾಲಾಗಿದ್ದಾನೆ. ನಾಲ್ಕೈದು ಸ್ನೇಹಿತರೊಂದಿಗೆ ಜಲಾಶಯಕ್ಕೆ ಬಂದಿದ್ದ ಶಿರಸಿಯ ವ್ಯಕ್ತಿ ನೀರಲ್ಲಿ ಮುಳುಗಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಲಾಗ್ತಿದೆ. ಶಿರಸಿ ಸಮೀಪದ ಅಂಡಗಿಯ ಅಜೀದ್ ಗುಡೂಸಾಬ್(34) ಎಂಬುವ ವ್ಯಕ್ತಿಯೇ ಜಲಾಶಯದಲ್ಲಿ ನಾಪತ್ತೆಯಾಗಿದ್ದಾನೆ. ಈತ ಇಂದು ಶಿರಸಿಯಿಂದ ತನ್ನ ಸ್ನೇಹಿತರ ಜೊತೆ ಮಳಗಿಯ ಧರ್ಮಾ ಜಲಾಶಯದ ಸೊಬಗು ಸವಿಯಲು ಬಂದಿದ್ದ. ಈ ವೇಳೆ ಈಜಲು ನೀರಿಗೆ ಇಳಿದ ಸಂದರ್ಭದಲ್ಲಿ ನೀರಲ್ಲೇ ನಾಪತ್ತೆಯಾಗಿದ್ದಾನೆ. ಹೀಗಾಗಿ, ತಕ್ಷಣವೇ ಮುಂಡಗೋಡ...

Post
ಮುಂಡಗೋಡ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ..!

ಮುಂಡಗೋಡ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಬೈಕ್ ಸವಾರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಹೆಸರು ಇನ್ನೂ ತಿಳಿದು ಬಂದಿಲ್ಲ. ಮುಂಡಗೋಡ ಶಿರಸಿ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲೇ ಗಾಯಗೊಂಡು ಬಿದ್ದಿದ್ದ ಎನ್ನಲಾಗಿದೆ. ಹೀಗಾಗಿ ಇದೇ ವೇಳೆ ದಾರಿಹೋಕರು ಗಮನಿಸಿ ತಕ್ಷಣವೇ 108 ಅಂಬ್ಯಲೆನ್ಸ್ ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್, ಹಾಗೂ ಚಾಲಕ...

Post
ಶಿರಸಿ ಸಮೀಪ ಭೀಕರ ಅಪಘಾತ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸ್ಥಳದಲ್ಲೇ ಸಾವು..!

ಶಿರಸಿ ಸಮೀಪ ಭೀಕರ ಅಪಘಾತ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸ್ಥಳದಲ್ಲೇ ಸಾವು..!

ಶಿರಸಿ ಸಮೀಪ ಭೀಕರ ಅಪಘಾತವಾಗಿದೆ. ಕಾರು ಹಾಗೂ ಬಸ್ ನಡುವೆ ಡಿಕ್ಕಿಯಾಗಿ, ಮದುವೆಗಾಗಿ ಬಂದಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು ಚಾಲಕ ಸೇರಿ ಒಟ್ಟೂ ಐವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಶಿರಸಿ ತಾಲೂಕಿನ ಬಂಡಲ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವರು ಎಂದು ತಿಳಿದು ಬಂದಿದೆ. ಇವ್ರು ಶಿರಸಿಯಲ್ಲಿ ನಡೆಯುವ ಮದುವೆಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಒಂದೇ ಕುಟುಂಬದ ನಾಲ್ವರು ಹಾಗೂ ಕಾರು ಚಾಲಕ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿರುವರಾಗಿದ್ದಾರೆ. ಅಪಘಾತದಲ್ಲಿ ರಾಮಕೃಷ್ಣ...

Post
ಹಳಿಯಾಳ ತಾಲೂಕಿನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ, ಇಬ್ಬರು ಯುವಕರ ದಾರುಣ ಸಾವು..!

ಹಳಿಯಾಳ ತಾಲೂಕಿನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ, ಇಬ್ಬರು ಯುವಕರ ದಾರುಣ ಸಾವು..!

ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ಯುವಕ ಮಂಜುನಾಥ ಇಂಗಳಗಿ (23) ಎನ್ನುವಾತ ಕಾಳಗಿನಕೊಪ್ಪ ಗ್ರಾಮದಿಂದ ಮುರ್ಕವಾಡಕ್ಕೆ ತೆರಳುವ ರಸ್ತೆ ಮಧ್ಯೆ ಬೆಳಗಿನ ಜಾವ ವಾಕಿಂಗ್ ತೆರಳಿದ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಯುವಕ ಪ್ರಾಣ ಬಿಟ್ಟಿದ್ದು, ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ. ಎರಡನೇ ಘಟನೆಯಲ್ಲಿ ಪಟ್ಟಣದ ಪೋಲಿಸ್ ಠಾಣೆಯ ಅನತಿ ದೂರದಲ್ಲಿರುವ ಕಾರ್ಮೆಲ್ ಶಾಲೆಗೆ ತೆರಳುವ ತಿರುವಿನಲ್ಲಿಯ ರಾಜ್ಯ...

Post
ದಾವಣಗೇರೆ ಸಮೀಪ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು, 7 ಜನರಿಗೆ ಗಂಭೀರ ಗಾಯ..!

ದಾವಣಗೇರೆ ಸಮೀಪ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು, 7 ಜನರಿಗೆ ಗಂಭೀರ ಗಾಯ..!

ದಾವಣಗೆರೆ ನಗರ ಹೊರಭಾಗದ ರಾ.ಹೆದ್ದಾರಿ 48 ರಲ್ಲಿ ಭೀಕರ ಅಪಘಾತವಾಗಿದೆ. ಕಾರ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿರುವ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಳು ಜನರಿಗೆ ಗಂಭೀರ ಗಾಯವಾಗಿದೆ. ಓವರ್ ಟೇಕ್ ಮಾಡುತ್ತಿದ್ಧಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಕಾರ್ ಡಿಕ್ಕಿಯಾಗಿದೆ. ಪರಿಣಾಮ ಕಾರ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಹಾವೇರಿ ರಾಣೆಬೆನ್ನೂರು ಮೂಲದ ಅರುಣಕುಮಾರ್ ಶೆಟ್ಟರ್ ಹಾಗೂ ವಿಜಯಕ್ಕ ಶೆಟ್ಟರ್ ಮೃತ ದುರ್ದೈವಿಗಳು. ಇನ್ನುಳಿದಂತೆ...

Post
ಕಾತೂರಿನ ಅಟ್ಟಣಗಿ ಬಳಿ ಬೈಕ್ ಅಪಘಾತ, ತಾಯಿ ಮಗನಿಗೆ ಗಂಭೀರ ಗಾಯ..!

ಕಾತೂರಿನ ಅಟ್ಟಣಗಿ ಬಳಿ ಬೈಕ್ ಅಪಘಾತ, ತಾಯಿ ಮಗನಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಕಾತೂರು ಉಮ್ಮಚಗಿ ರಸ್ತೆಯ ಅಟ್ಟಣಗಿ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ತಾಯಿ‌ ಮಗನಿಗೆ ಗಂಭೀರ ಗಾಯವಾಗಿದೆ. ಹಿಂದಿನಿಂದ ಬೈಕ್ ಗೆ ಲಾರಿ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಅಂತಾ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಅಟ್ಟಣಗಿ ಗ್ರಾಮದ ಶಿವಪುತ್ರ ರಾಮಣ್ಣ ಹೋತ್ನಳ್ಳಿ (45) ಹಾಗೂ ಆತನ ತಾಯಿ ದೇವಕ್ಕ ರಾಮಣ್ಣ ಹೋತ್ನಳ್ಳಿ(70) ಗಾಯಗೊಂಡಿದ್ದಾರೆ. ಇನ್ನು, ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ ಸಿಬ್ಬಂದಿ, ವೈದ್ಯಕೀಯ ತಂತ್ರಜ್ಞ ಧನರಾಜ್ ಮತ್ತು ಚಾಲಕ ಕೆಂಚೇಶ್ ತಕ್ಷಣ...

Post
ಹಸಿಮೇವು ತಿಂದ ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ದಾರುಣ ಸಾವು, ಹುನಗುಂದದಲ್ಲಿ ಘಟನೆ..!

ಹಸಿಮೇವು ತಿಂದ ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ದಾರುಣ ಸಾವು, ಹುನಗುಂದದಲ್ಲಿ ಘಟನೆ..!

ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಹಸಿಮೇವು ತಿಂದು ಕೆಲವೇ ಹೊತ್ತಲ್ಲಿ ಆಕಳು ಮತ್ತು ಕರು ಸಾವನ್ನಪ್ಪಿರೋ ಘಟನೆ ನಡೆದಿದೆ. ಮೇವು ತಿಂದ ಕೆಲವೇ ಹೊತ್ತಲ್ಲಿ ಸಾವು ಕಂಡಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹುನಗುಂದ ಗ್ರಾಮದ ಬಸವರಾಜ್ ಗುರುಸಿದ್ದಪ್ಪ ಚಬ್ಬಿ ಎಂಬುವವರಿಗೆ ಸೇರಿದ ಸುಮಾರು 37 ಸಾವಿರ ರೂ. ಮೌಲ್ಯದ ಆಕಳು ಮತ್ತು ಕರು ದಾರುಣ ಸಾವು ಕಂಡಿದ್ದು ಆಘಾತ ತಂದಿದೆ. ಇನ್ನು ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಸಾವಿಗೆ ಕಾರಣವೇನು ಅಂತ ಪರಿಶೀಲನೆ ನಡೆಸಿದ್ದಾರೆ.

error: Content is protected !!